
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಜೊತೆ ನಡೆಯುತ್ತಿರುವ ಸಂಘರ್ಷ ಮುಂದಿನ ನಾಲ್ಕು ವಾರಗಳವರೆಗೆ ಮುಂದುವರೆಯಬಹುದು ಅಥವಾ ಅದಕ್ಕಿಂತ ಮುಂಚೆಯೂ ಅಂತ್ಯಗೊಳ್ಳಬಹುದು ಎಂದು ಅವರು ಹೇಳಿದ್ದಾರೆ.
ಭಾನುವಾರ ಪ್ರತಿಷ್ಠಿತ ಡೈಲಿ ಮೇಲ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿ ಯುದ್ಧದಲ್ಲಿ ಪ್ರಾಣ ಕಳೆದುಕೊಂಡ ಅಮೇರಿಕದ ಸೈನಿಕರಿಗೆ ಗೌರವ ಸಲ್ಲಿಸಿದರು. ಇರಾನ್ ವಿರುದ್ಧದ ಯುಎಸ್ ಮಿಲಿಟರಿ ಕಾರ್ಯಾಚರಣೆ ಇನ್ನೂ ನಾಲ್ಕು ವಾರಗಳವರೆಗೆ ಇರುತ್ತದೆ ಎಂದರು.
ಕಳೆದ ವಾರ ಇರಾನ್ ಕಡೆಯವರು ಮಾತನಾಡಲು ಪ್ರಯತ್ನ ಮಾಡಬೇಕಿತ್ತು. ಅವರು ಪ್ರಸ್ತುತ ಜನರಲ್ಗಳನ್ನು ಭೇಟಿ ಮಾಡುತ್ತಿದ್ದಾರೆ. 48 ಉನ್ನತ ಇರಾನಿನ ಅಧಿಕಾರಿಗಳು ಸಾವನ್ನಪ್ಪಿದ್ದಾರೆ ಮತ್ತು ಒಂಬತ್ತು ಯುದ್ಧನೌಕೆಗಳು ನಾಶವಾಗಿವೆ ಎಂದು ತಿಳಿಸಿದರು.






