
ಬೆಂಗಳೂರು: ಸರ್ಕಾರ ವರ್ಸಸ್ ವಿಪಕ್ಷಗಳ ನಡುವೆ ಮಹಾಕದನಕ್ಕೆ ಅಧಿವೇಶನ ವೇದಿಕೆಯಾಗುವ ವಿಧಾನಮಂಡಲ ಅಧಿವೇಶನವು ಇಂದಿನಿಂದ ಪ್ರಾರಂಭವಾಗಲಿದ್ದು ಆಗಸ್ಟ್ 22 ರವರೆಗೂ ಅಧಿವೇಶನ ನಡೆಯಲಿದೆ.
ಸರ್ಕಾರದ ವೈಫಲ್ಯಗಳನ್ನ ಬಿಚ್ಚಿಟ್ಟು ಸರ್ಕಾರವನ್ನ ಕಟ್ಟಿ ಹಾಕಲು ವಿಪಕ್ಷಗಳು ಸಿದ್ಧತೆ ನಡೆಸಿದ್ದು ಭಾನುವಾರ ಬಿಜೆಪಿ-ಜೆಡಿಎಸ್ ಪ್ರಮುಖ ನಾಯಕರಿಂದ ಸದನದಲ್ಲಿ ಹೋರಾಟದ ಬಗ್ಗೆ ಚರ್ಚೆಯ ವಿಷಯಗಳ ಪ್ರಸ್ತಾಪವಾಗಿದೆ. ಸರ್ಕಾರದ ವಿರುದ್ಧ ಒಟ್ಟಾಗಿ ಹೋರಾಟ ನಡೆಸಲು ಎರಡು ಪಕ್ಷಗಳಿಂದ ಚರ್ಚೆ ನಡೆದಿದ್ದು ವಿಪಕ್ಷಗಳ ಅಸ್ತ್ರಕ್ಕೆ ಪ್ರತಿ ಅಸ್ತ್ರ ಹೂಡಲು ಸರ್ಕಾರದಿಂದಲೂ ಸಿದ್ಧತೆ ನಡೆದಿದೆ.
ಸರ್ಕಾರವನ್ನು ಕಟ್ಟುಹಾಕಲು ವಿಪಕ್ಷಗಳ ಅಸ್ತ್ರ :
- ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣದಲ್ಲಿ 11 ಅಮಾಯಕ ಜೀವಗಳ ಸಾವು ವಿಷಯ.
- ರಾಜ್ಯದಲ್ಲಿ ರಸಗೊಬ್ಬರದ ಕೊರತೆಯಿಂದ ರೈತರಿಗೆ ಸಮಸ್ಯೆ ವಿಷಯ.
- ಧರ್ಮಸ್ಥಳದ ಕೊಲೆಗಳ ಪ್ರಕರಣ.
- SCSP-TSP ಹಣವನ್ನ ಗ್ಯಾರಂಟಿ ಬಳಕೆ ಮಾಡಿಕೊಂಡಿರೋ ವಿಷಯ ಪ್ರಸ್ತಾಪ.
- ವಿಪಕ್ಷಗಳ ಶಾಸಕರಿಗೆ ಅನುದಾನ ಕೊಡದೇ ಕೇವಲ ಆಡಳಿತ ಪಕ್ಷದ ಶಾಸಕರಿಗೆ ಮಾತ್ರ ಅನುದಾನ ಕೊಟ್ಟಿರೋ ವಿಚಾರ.
- ಮೈಸೂರಿನಲ್ಲಿ ಡ್ರಗ್ಸ್ ಫ್ಯಾಕ್ಟರಿ ಪತ್ತೆ, ಮಂಗಳೂರು ದ್ವೇಷದ ಕೊಲೆ ಸೇರಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರೋ ವಿಚಾರ.
- ಕಾಂಗ್ರೆಸ್ನಲ್ಲಿ ಸಿಎಂ ಕುರ್ಚಿಯ ಕಿತ್ತಾಟದ ವಿಷಯ.
- ರಾಹುಲ್ ಗಾಂಧಿಯ ಮತಗಳ್ಳತನ ಆರೋಪಕ್ಕೆ ಸಚಿವ ರಾಜಣ್ಣ, ಇಬ್ರಾಹಿಂ ಮಾತುಗಳ ಪ್ರಸ್ತಾಪ.