15 ದಿನದ ಕಲಾಪದಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಸಜ್ಜಾದ ವಿಪಕ್ಷಗಳು

ನವದೆಹಲಿ: ಇಂದಿನಿಂದ ಡಿಸೆಂಬರ್ 19 ರವರೆಗೆ ಸಂಸತ್ ನ ಚಳಿಗಾಲದ ಅಧಿವೇಶನ ನಡೆಯಲಿದ್ದು ಇಲ್ಲಿ ದೆಹಲಿ ಸ್ಫೋಟ ಸೇರಿದಂತೆ ಒಟ್ಟು 15 ಕಲಾಪಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ವಿಪಕ್ಷಗಳು ಸಜ್ಜಾಗಿದೆ.
ಭಾನುವಾರ ಸರ್ಕಾರ ಕರೆದಿದ್ದ ಸರ್ವಪಕ್ಷ ಸಭೆಯಲ್ಲಿ ಮಾತನಾಡಿದ ಸಮಾಜವಾದಿ ಪಕ್ಷದ ನಾಯಕ ರಾಮ್ ಗೋಪಾಲ್ ಯಾದವ್ ವಿಶೇಷ ಮತ ಪಟ್ಟಿ ಪರಿಷ್ಕರಣೆ ಬಗ್ಗೆ ಅಧಿವೇಶನದಲ್ಲಿ ಚರ್ಚೆ ನಡೆಸದಿದ್ದರೆ ಸಂಸತ್ ಕಲಾಪವನ್ನು ಸುಗಮವಾಗಿ ನಡೆಸಲು ಬಿಡದೆ ಅಡ್ಡಿಪಡಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಅಧಿವೇಶನದಲ್ಲಿ ಚರ್ಚೆಗೆ ಒಳಪಡುವ ಪ್ರಸ್ತಾಪಗಳು :
- ವಿವಿಧ ರಾಜ್ಯಗಳಲ್ಲಿ ನಡೆಯುತ್ತಿರುವ ಸಮಗ್ರ ಮತ ಪಟ್ಟಿ ಪರಿಷ್ಕರಣೆ ವಿಷಯದ ಬಗ್ಗೆ ಪ್ರಸ್ತಾಪ
- ದಿಲ್ಲಿ ಸ್ಫೋಟದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಭದ್ರತಾ ಲೋಕದ ಬಗ್ಗೆ ಚರ್ಚೆ
- ಹೊಸ ಕಾರ್ಮಿಕ ಸಂಹಿತೆಯ ಕುರಿತು ವಿಪಕ್ಷಗಳಿಂದ ಚರ್ಚೆಗೆ ಆಗ್ರಹ
- ಒಕ್ಕೂಟ ವ್ಯವಸ್ಥೆ ವಿಧೇಯಕಗಳಿಗೆ ರಾಜ್ಯಪಾಲರ ಅಂಗೀಕಾರ ಕುರಿತು ಚರ್ಚೆ
- ದೆಹಲಿ ವಾಯುಮಾಲಿನ್ಯ, ವಿದೇಶಾಂಗ ನೀತಿ, ರೈತರ ಸಮಸ್ಯೆ ಬಗ್ಗೆ ಚರ್ಚೆ
- ಕೇಂದ್ರ ಸರ್ಕಾರದಿಂದ ಪರಮಾಣು ಕ್ಷೇತ್ರದಲ್ಲಿ ಖಾಸಗಿ ಪಾಲುದಾರಿಕೆ, ಉನ್ನತ ಶಿಕ್ಷಣ ಆಯೋಗ ಸೇರಿದಂತೆ ಒಟ್ಟು 14 ಮಸೂದೆಗಳ ಮಂಡನೆ ಸಾಧ್ಯತೆ



















