
ಬೆಂಗಳೂರು: ಮೈಸೂರು ರಸ್ತೆಯ ಬ್ಯಾಟರಾಯನಪುರದಲ್ಲಿ ಬಾಲಕಿಯೊಬ್ಬಳು ಆಲೋವೆರಾ ಜ್ಯೂಸ್ ಎಂದು ಕ್ರಿಮಿನಾಶಕ ಸೇವಿಸಿ ಪೋಷಕರ ನಿರ್ಲಕ್ಷ್ಯಕ್ಕೆ ಸಾವನ್ನಪ್ಪಿದ ಘಟನೆ ನಡೆದಿದೆ.
9ನೇ ತರಗತಿಯಲ್ಲಿ ಓದುತ್ತಿರುವ ನಿಧಿ ಕೃಷ್ಣ(14) ಎಂಬ ಬಾಲಕಿಯು ಆರೋಗ್ಯ ಕಾಪಾಡಿಕೊಳ್ಳಲು ಪ್ರತಿನಿತ್ಯ ಆಲೋವೆರಾ ಜ್ಯೂಸ್ ಕುಡಿಯುತ್ತಿದ್ದಳು. ಆದರೆ ಮನೆಯವರು ಆಲೋವೆರಾ ಡಬ್ಬದಲ್ಲಿ ಗಿಡಗಳಿಗೆ ಬಳಸುವ ಹರ್ಬಿಸೈಡ್ ಔಷಧವನ್ನು ತುಂಬಿಟ್ಟಿದ್ದರು. ಮಾ. 18ರಂದು ಬಾಲಕಿ ಜ್ಯೂಸ್ ಎಂದು ಕ್ರಿಮಿನಾಶಕ ಸೇವಿಸಿದ್ದು ಬಳಿಕ ಅನಾರೋಗ್ಯದ ಹಿನ್ನಲೆ ಆಕೆಯನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮಾ. 31ರಂದು ಬಾಲಕಿ ಕೊನೆಯುಸಿರೆಳೆದಿದ್ದಾಳೆ.




