
ಬೆಳ್ತಂಗಡಿ : ಆಮಂತ್ರಣ ಪರಿವಾರ ಇಡೀ ಕರ್ನಾಟಕದಾದ್ಯಂತ ಕಲಾ ಸೇವೆ ಹಾಗೂ ಸಾಮಾಜಿಕ ಚಟುವಟಿಕೆ, ಸಾಹಿತ್ಯ ಇನ್ನಿತರ ನೂರಾರು ಕಾರ್ಯಕ್ರಮ ಸದ್ದಿಲ್ಲದೆ ಮಾಡಿ ಸುದ್ದಿಯಾಗಿದೆ.
ಅದುವೇ 10 ವರ್ಷಗಳ ಹೆಜ್ಜೆ.
ಇದರ ಯಶಸ್ವಿಗೆ ಆಮಂತ್ರಣ ದಶಮಾನೋತ್ಸವ ಸಮಿತಿ ಅಧ್ಯಕ್ಷರನ್ನಾಗಿ ಬೆಳ್ತಂಗಡಿ ತಾಲೂಕಿನ ಜನಪ್ರಿಯ ಶಾಸಕರಾಗಿರುವ ಹರೀಶ್ ಪೂಂಜ ಇವರನ್ನು ಆಮಂತ್ರಣ ಸೇವಾ ಪ್ರತಿಷ್ಠಾನ ಆಯ್ಕೆ ಮಾಡಿ
ಇಂದು ಅವರನ್ನು ಭೇಟಿಯಾಗಿ ಅಭಿಮಾನದ ಒಪ್ಪಿಗೆ ಪಡೆದುಕೊಳ್ಳಲಾಯಿತು.
ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ್ ಅಜಿಲರವರ ಮಾರ್ಗದರ್ಶನದೊಂದಿಗೆ
ಆಮಂತ್ರಣ ಪರಿವಾರದ ವಿಜೃಂಭಣೆಯ ದಶಮಾನೋತ್ಸವ ಸಮಾರಂಭ ಜನವರಿ 17 ರಂದು ಅಳದಂಗಡಿ ಸತ್ಯ ದೇವತಾ ದೇವಸ್ಥಾನ ಎದುರು ಮೈದಾನದಲ್ಲಿ ನಡೆಯಲಿದೆ.
ಅಳದಂಗಡಿ ಶ್ರೀ ಸೋಮನಾಥೇಶ್ವರೀ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ ಸಂದರ್ಭದಲ್ಲಿ ನಡೆಯುವ ಈ ಸಮಾರಂಭ ಹತ್ತು ವರ್ಷಗಳ ಸೇವಾ ಚಟುವಟಿಕೆ ಹಾಗೂ ಅನಿತಾ ಶೆಟ್ಟಿ ಮೂಡುಬಿದಿರೆ, ಪ್ರಜ್ಞಾ ವಾಣಿಗೋರೆ ಮಾಳ, ಶಾಲಿನಿ ಕೆಮ್ಮಣ್ಣು, ದೇವರ ಮಕ್ಕಳು, ಆಮಂತ್ರಣ ಸ್ಮರಣ ಸಂಚಿಕೆ ಪುಸ್ತಕ ಬಿಡುಗಡೆ ಮತ್ತು ಅರುವಶ್ರೀ, ಸತ್ಯಶ್ರೀ ಪುರಸ್ಕಾರ, ಚಿತ್ರಕಲೆ, ಸನ್ಮಾನ, ಸಾಂಸ್ಕೃತಿಕ, ಸಾಹಿತ್ಯ, ಭಜನೆ , ದೋಸೆ ಕ್ಯಾಂಪ್ ಇನ್ನಿತರ ಕಾರ್ಯಕ್ರಮಗಳು ನಡೆಯಲಿರುವುದು.
ಎಂದು ಆಮಂತ್ರಣ ಪರಿವಾರದ ವಿಜಯ ಕುಮಾರ್ ಜೈನ್ ತಿಳಿಸಿದ್ದಾರೆ. ಆಮಂತ್ರಣ ಸೇವಾ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಶಿವಪ್ರಸಾದ್ ಅಜಿಲರು, ಹಿರಿಯರಾದ ಬಿ.ಭುಜಬಲಿ ಧರ್ಮಸ್ಥಳ, ಟ್ರಸ್ಟಿಗಳಾದ ಅರುಣ್ ಅರುವ, ಸದಾನಂದ ಬಿ.ಕುದ್ಯಾಡಿ, ಹಾಗೂ ಸದಾನಂದ ಪೂಜಾರಿ ಉಂಗಿಲಬೈಲು ಸುಪ್ರೀತ್ ಜೈನ್ ಅಳದಂಗಡಿ, ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಕರ್ನಾಟಕದ ರಾಜ್ಯ ಪ್ರತಿನಿಧಿಗಳು, ಉಡುಪಿ , ದ.ಕ ಜಿಲ್ಲಾ ಪದಾಧಿಕಾರಿಗಳು ಆಯ್ಕೆಯಲ್ಲಿ ಒಮ್ಮತ ಸೂಚಿಸಿದ್ದಾರೆ.





