
ಹೊಸದಿಲ್ಲಿ : ಆದಾಯ ತೆರಿಗೆ ಇಲಾಖೆಯು ಐಟಿಆರ್ ಸಲ್ಲಿಕೆಗೆ ಸೆಪ್ಟೆಂಬರ್ 15 ಕೊನೆಯ ದಿನವಾಗಿದ್ದು ಗಡುವನ್ನು ವಿಸ್ತರಿಸುವ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಸ್ಪಷ್ಟನೆ ನೀಡಿದೆ.
ಈ ಕುರಿತು ತನ್ನ ಎಕ್ಸ್ ಖಾತೆಯಲ್ಲಿ ಪ್ರಕಟಣೆ ನೀಡಿದ ಇಲಾಖೆಯು ‘ಐಟಿ ವಿವರ ಸಲ್ಲಿಕೆ ಗಡುವು ಸೆಪ್ಟೆಂಬರ್ 30ರವರೆಗೆ ವಿಸ್ತರಿಸಲಾಗಿದೆ ಎಂಬ ಮಾಹಿತಿ ಸುಳ್ಳು. ತೆರಿಗೆ ವಿವರ ಸಲ್ಲಿಕೆಗೆ ಸಪ್ಟೆಂಬರ್ 15 ಅಂತಿಮ ದಿನವಾಗಿದ್ದು ತೆರಿಗೆ ಪಾವತಿ ಹಾಗೂ ಇತರ ಸೇವೆಗಳಿಗಾಗಿ ನಮ್ಮ ಸಹಾಯವಾಣಿ 24*7 ಲಭ್ಯವಿದೆ. ಸುಳ್ಳು ಸುದ್ದಿಗಳನ್ನು ನಂಬಬೇಡಿ’ ಎಂದು ಸ್ಪಷ್ಟನೆ ನೀಡಿದೆ.













