31.4 C
Udupi
Wednesday, April 22, 2026
spot_img
spot_img
HomeBlogಆಗಸ್ಟ್ 21, ಸಂಸ್ಥಾಪಕರ ಜನ್ಮದಿನದ ಅಂಗವಾಗಿ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನಿಂದ

ಆಗಸ್ಟ್ 21, ಸಂಸ್ಥಾಪಕರ ಜನ್ಮದಿನದ ಅಂಗವಾಗಿ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನಿಂದ

ಡಾ.ಟಿ.ಎಂ.ಎ.ಪೈ ರೋಟರಿ ಆಸ್ಪತ್ರೆಗೆ ರೂ.20 ಲಕ್ಷಗಳ ಸಹಾಯಧನ ಹಾಗೂ ಇತರ ಸಾಮಾಜಿಕ ನೆರವು

ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ವತಿಯಿಂದ ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ
ಆವರಣದಲ್ಲಿ ಸಂಸ್ಥಾಪಕರ ದಿನವಾದ ಆಗಸ್ಟ್ 21ರಂದು ಸಾಮಾಜಿಕ ನೆರವು ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಆ ದಿನ ಬೆಳಗ್ಗೆ ಕೆ.ಎಂ.ಸಿ. ಬ್ಲಡ್ ಸೆಂಟರ್‌ ನೆರವಿನೊಂದಿಗೆ ರಕ್ತದಾನ ಶಿಬಿರ ನೆರವೇರಲಿರುವುದು. ಮಧ್ಯಾಹ್ನ 3.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಸ್ಥಳೀಯ ಡಾ.ಟಿ.ಎಂ.ಎ ಪೈ ರೋಟರಿ ಆಸ್ಪತ್ರೆಯ ಕಣ್ಣಿನ ವಿಭಾಗಕ್ಕೆ ರೂ. 20ಲಕ್ಷಗಳ ಸಹಾಯಧನ, ಮಂಗಳೂರಿನ ಶಕ್ತಿ ಎಜ್ಯುಕೇಶನ್ ಟ್ರಸ್ಟ್ಗೆ 1ಲಕ್ಷ ರೂ.ಗಳ ವಿದ್ಯಾರ್ಥಿ ವೇತನವನ್ನು, ಮಣಿಪಾಲದ ಮೇಘ ಶೆಟ್ಟಿಗಾರ್ ಇವರಿಗೆ ಮನೆನಿರ್ಮಾಣದ ಪ್ರಯುಕ್ತ ರೂ. 10ಸಾವಿರ., ಸ.ಪ್ರೌ.ಶಾಲೆ ತೊರೆಹಡ್ಲುವಿಗೆ ರೂ. 10ಸಾವಿರಆರ್ಥಿಕ ನೆರವು ನೀಡಲಾಗುವುದು.

ಸನ್ಮಾನ ಕಾರ್ಯಕ್ರಮ : ಇದೇ ಸಂದರ್ಭ ಖ್ಯಾತ ಮುಳುಗು ತಜ್ಞ ಈಶ್ವರ ಮಲ್ಪೆ ಹಾಗೂ ಕಾರ್ಕಳ ಮೆಸ್ಕಾಂನ ಎ ಮತ್ತು ಬಿ ವಿಭಾಗದ ಪವರ್ ಮೆನ್‌ಗಳಿಗೆ ಸನ್ಮಾನ ಕಾರ್ಯಕ್ರಮ ಜರುಗಲಿರುವುದು. ರಕ್ತದಾನ ಶಿಬಿರವನ್ನು ಕೆ.ಎಂ.ಸಿ. ಬ್ಲಡ್ ಸೆಂಟರ್‌ನ ನಿರ್ದೇಶಕರಾದ ಡಾ.ಶಮಿ ಶಾಸ್ತ್ರಿ ಉದ್ಘಾಟಿಸಲಿದ್ದಾರೆ. ಮಧ್ಯಾಹ್ನದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರಿನ ಶಾರದಾ ವಿದ್ಯಾಲಯಗಳ ಅಧ್ಯಕ್ಷರಾದ ಪ್ರೊ.ಎಂ.ಬಿ.ಪುರಾಣಿಕ್‌ರವರು ವಹಿಸಲಿದ್ದಾರೆ. ಡಾ.ಟಿ.ಎಂ.ಎ ಪೈ ರೋಟರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಕೀರ್ತಿನಾಥ ಬಲ್ಲಾಳ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಎ.ಪಿ.ಜಿ.ಇ.ಟಿ ಪ್ರಕಟಣೆ ತಿಳಿಸಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page