
ದಿ. 10.11.2025 ರಂದು ಜೀವನ್ ವೆಲ್ಫೇರ್ ಟ್ರಸ್ಟ್, ಅರುಣೋದಯ ವಿಶೇಷ ಶಾಲೆಯಲ್ಲಿ 25 ವರ್ಷದ ಬೆಳ್ಳಿ ಹಬ್ಬದ ಪ್ರಯುಕ್ತ “ಅರುಣ ಸಂಭ್ರಮ” ಕಾರ್ಯಕ್ರಮವು ವಿಜೃಂಭಣೆಯಿಂದ ನಡೆಯಿತು. ಈ ಕಾರ್ಯಕ್ರಮದ ಪ್ರಯುಕ್ತ ಧ್ವಜಾರೋಹಣವನ್ನು ಪೂ. 9.30 ಕ್ಕೆ ಜೆಸಿಂತಾ ಸುನಿಲ್ ಪಾಯ್ಸ್ರವರು ನೆರವೇರಿಸಿದರು.

ಅಪರಾಹ್ನ 2:30 ಗಂಟೆಗೆ ನಡೆದ ಸಭಾ ಕಾರ್ಯಕ್ರಮದಲ್ಲಿ ಕ್ರೈಸ್ಟ್ ಕಿಂಗ್ ಚರ್ಚ್ನ ಸಹಾಯಕ ಧರ್ಮಗುರುಗಳಾದ ಫಾ. ಅವಿನಾಶ್ ರವರು ಆಶೀರ್ವಚನ ಮಾಡಿದರು. 25 ವರ್ಷವನ್ನು ಪೂರೈಸಿರುವ “ಅರುಣ ಸಂಭ್ರಮ” ಎಂಬ ಸ್ಮರಣ ಸಂಚಿಕೆಯನ್ನು ಕಾರ್ಕಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಧ್ಯಕ್ಷರಾಗಿರುವ ಉದಯ್ ಕುಮಾರ್ ಶೆಟ್ಟಿ ಇವರು ಬಿಡುಗಡೆ ಮಾಡಿದರು.
ರತ್ನ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಯವರು ಉಡುಪಿ ಜಿಲ್ಲೆ, ಕಿರಣ್ ಮಾಳ, ಉದ್ಯಮಿ ಶಾಲೂಮ್ ಎಂಟರ್ ಪ್ರೈಸಸ್ ಸುರತ್ಕಲ್ ಹಾಗೂ ಇತರ ಅತಿಥಿ ಗಣ್ಯರೆಲ್ಲರೂ ಸೇರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕರಾವಳಿ ಪ್ರಾಧಿಕಾರದ ಮಂಡಳಿಯ ಅಧಕ್ಷರಾದ ಎಮ್.ಎ. ಗಫೂರ್ರವರು ಈ ಕಾರ್ಯಕ್ರಮಕ್ಕೆ ಶೋಭೆಯನ್ನು ತಂದರು. ಜೀವನ್ ವೆಲ್ಫೇರ್ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿಯಾದ ಜೆಸಿಂತಾ ಡಿಮೆಲ್ಲೋ ರವರು ಸ್ವಾಗತ ಭಾಷಣ ಮಾಡಿದರು. ಮುಖ್ಯೋಪಾಧ್ಯಾಯರಾದ ಹನುಮಂತಪ್ಪನವರು ಶಾಲಾ ವರದಿಯನ್ನು ಓದಿದರು.
ವಿಕಲಚೇತನರ ಕ್ಷೇತ್ರದಲ್ಲಿ ಸೇವೆಗೈದ ನಿರಂಜನ್ ಭಟ್ ರವರಿಗೆ, ವಿಶೇಷ ಚೇತನರಾಗಿ ಕೆಲಸ ಮಾಡುತ್ತಿರುವ ಕು. ಅನಿಲ್ ಕಾಮತ್ ರವರಿಗೆ, ಸಮಾಜ ಸೇವೆಯಲ್ಲಿ ಸಾಧನೆ ಮಾಡಿರುವ ಶರೀಫ್ ರವರಿಗೆ, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಅರುಣೋದಯ ವಿಶೇಷ ಶಾಲೆಯ ವಿದ್ಯಾರ್ಥಿ ನಿಶಾಂತ್ ರವರಿಗೆ ಈ ಸಂದರ್ಭದಲ್ಲಿ ಸನ್ಮಾನ ಮಾಡಲಾಯಿತು. ಬೆಳ್ಳಿ ಹಬ್ಬದ ಪ್ರಯುಕ್ತ ಶಾಲಾ ಮಕ್ಕಳಿಗೆ ನಡೆಸಲಾದ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

25 ವರ್ಷದಲ್ಲಿ ಅರುಣೋದಯ ವಿಶೇಷ ಶಾಲೆಯಲ್ಲಿ ಕಲಿತು ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಬರೆದು ಉತ್ತೀರ್ಣರಾದ ಮಕ್ಕಳಿಗೆ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಈ ಕಾರ್ಯಕ್ರಮದ ನಿರೂಪಣೆಯನ್ನು ಅಲ್ವಿರಾ ರೇಷ್ಮಾ ಡಿ’ಸೋಜಾ ರವರು ಮಾಡಿದರು. ಅನಿತಾ ಸಿರಿಲ್ ಲಸ್ಮಾದೋ ರವರು ಕಾರ್ಯಕ್ರಮದ ವಂದನೆಯನ್ನು ಸಲ್ಲಿಸಿದರು.ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆದಿದ್ದು, ಶಾಲಾ ಮಕ್ಕಳಿಂದ ಅಮ್ಮನ ಪ್ರೀತಿಯ ನೃತ್ಯ, ಕವಾಯತು ಮತ್ತು ಜೈ ಹೋ ನೃತ್ಯಗಳನ್ನು, ಆಡಳಿತ ಮಂಡಳಿ ಮತ್ತು ಸಿಬ್ಬಂದಿಯವರಿಂದ ಅರುಣೋದಯ ಬೆಳೆದು ಬಂದ ಕಿರು ನಾಟಕವನ್ನು, ಡಿ.ಪಿ ತಂಡದವರಿಂದ 2 ನೃತ್ಯಗಳನ್ನು ಪ್ರದರ್ಶಿಸಲಾಯಿತು. ಕೊನೆಗೆ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.
ಜೀವನ್ ವೆಲ್ಫೇರ್ ಟ್ರಸ್ಟ್ ನ ಆಡಳಿತ ಮಂಡಳಿಯ ಕಾರ್ಯದರ್ಶಿಯಾದ ಪ್ರೆಸಿಲ್ಲಾ ಪಿರೇರಾ, ಖಜಾಂಚಿಯಾದ ನೋವೆಲ್ ಡಿಸಿಲ್ವಾ, ಸದಸ್ಯರುಗಳಾದ ಜಾನ್ ಅಜಯ್ ಪಾಯ್ಸ್, ಸುನಿಲ್ ಪಾಯ್ಸ್, ಶ್ರೀಮತಿ ಅನಿತಾ ಸಿರಿಲ್ ಲಸ್ರಾದೋ, ಗ್ಲಾಡಿಸ್ ಸಲ್ದಾನ್ಹಾ, ಸಿಬ್ಬಂದಿವರ್ಗದವರು ಹಾಗೂ ಮಕ್ಕಳು ಈ ಕಾರ್ಯಕ್ರಮಕ್ಕೆ ಶುಭಾಶಯಗಳನ್ನು ಕೋರಿದರು.




















































