
ಬೆಂಗಳೂರು: ಉಪಚುನಾವಣೆಯಲ್ಲಿ ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ಮೂರು ಕ್ಷೇತ್ರಗಳಲ್ಲೂ ಚುನಾವಣಾ ಫಲಿತಾಂಶದ ಕುರಿತು ಕಾಂಗ್ರೆಸ್ ಸಂತಸದಿಂದಿದ್ದು ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ಕಾಂಗ್ರೆಸ್, “ಅಭಿವೃದ್ಧಿಗೆ ಒಲವು, ಗ್ಯಾರಂಟಿಗೆ ಗೆಲುವು” ಎಂದು ಕ್ಯಾಪ್ಶನ್ ಹಾಕಿ ಜನ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಸಂಡೂರಲ್ಲಿ ಗೆಲುವು ಸಾಧಿಸಿದ್ದು ಇತ್ತ ಚನ್ನಪಟ್ಟಣದಲ್ಲಿ ‘ಕೈ’ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಭಾರೀ ಮುನ್ನಡೆ ಯೊಂದಿಗೆ ಗೆಲುವು ಸಾಧಿಸಿದ್ದು. ಶಿಗ್ಗಾಂವಿಯಲ್ಲೂ ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಖಾನ್ ಪಠಾಣ್ ಗಳಿಸಿದ್ದಾರೆ.



















