26.1 C
Udupi
Wednesday, April 22, 2026
spot_img
spot_img
HomeBlogಅಪರಾಧಿಗಳೊಂದಿಗೆ ಕೈಜೋಡಿಸಿ, ಕಳ್ಳತನಗಳಿಗೆ ನೆರವಾಗಿ ಸಸ್ಪೆಂಡ್‌ ಆದ ಪೇದೆಗೆ ಸಿಎಂ ಪದಕ: ಆಕ್ರೋಶ ವ್ಯಕ್ತಪಡಿಸಿದ ವಿಜಯೇಂದ್ರ

ಅಪರಾಧಿಗಳೊಂದಿಗೆ ಕೈಜೋಡಿಸಿ, ಕಳ್ಳತನಗಳಿಗೆ ನೆರವಾಗಿ ಸಸ್ಪೆಂಡ್‌ ಆದ ಪೇದೆಗೆ ಸಿಎಂ ಪದಕ: ಆಕ್ರೋಶ ವ್ಯಕ್ತಪಡಿಸಿದ ವಿಜಯೇಂದ್ರ

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸ್ವಾತಂತ್ರೋತ್ಸವದ ವೇಳೆ ಕೊಡಮಾಡುವ ‘ಸಿಎಂ ಪದಕ’ ಪಟ್ಟಿಯಲ್ಲಿ ಮೈಸೂರಿನ ಅಮಾನತ್ತಾದ ಪೊಲೀಸ್ ಪೇದೆಯ ಹೆಸರು ಪ್ರಕಟವಾಗಿರುವುದು ಗೃಹ ಇಲಾಖೆಯ ಅಧಃಪತನಕ್ಕೆ ನಿದರ್ಶನವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ,ಪೊಲೀಸ್ ಪೇದೆ ಅಮಾನತು ಆದೇಶದ ಪ್ರತಿಯನ್ನು ಹಂಚಿಕೊಂಡು ಪೋಸ್ಟ್ ಹಾಕಿರುವ ವಿಜಯೇಂದ್ರ, ಕೆಲ ನಾಮಧೇಯಗಳನ್ನು ಕಂಡರೆ ಕಾಂಗ್ರೆಸ್ ಸರ್ಕಾರ ಕಣ್ಣು ಮುಚ್ಚಿಕೊಳ್ಳುತ್ತದೆ. ಅಪರಾಧಿಯಾಗಿದ್ದರೂ ಸರಿ, ಕೊನೆಗೆ ಭಯೋತ್ಪಾದಕರಾದರೂ ಸರಿ, ಅವರ ಬಗೆಗಿನ ಕಾಳಜಿಯಲ್ಲಿ ರಾಜೀಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎನ್ನುವುದನ್ನು ಸಾಬೀತುಪಡಿಸುವ ರೀತಿಯಲ್ಲಿ ಸ್ವಾತಂತ್ರೋತ್ಸವದ ವೇಳೆ ಕೊಡಮಾಡುವ ಸಿಎಂ ಪದಕ ಪಟ್ಟಿಯಲ್ಲಿ ಮೈಸೂರಿನ ಅಮಾನತ್ತಿಗೊಳಗಾದ ಪೊಲೀಸ್‌ ಪೇದೆಯೊಬ್ಬರ ಹೆಸರು ಪ್ರಕಟವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page