
ಕಾರ್ಕಳ: ಫೆ. 5ರಂದು ತಾಲೂಕಿನ ಅತ್ತೂರು ಚರ್ಚ್ ಬಳಿ ಬೆನ್ಜ್ ಕಾರು ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಪಾಯವಾಗದೆ ಇಬ್ಬರು ಬೈಕ್ ಸವಾರರು ಗಾಯಗೊಂಡ ಘಟನೆ ನಡೆದಿದೆ.
ನಿಟ್ಟೆ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳಾದ ರುದ್ರೇಶ್ ಹಾಗೂ ಹರೀಶ್ ಗಾಯಗೊಂಡವರಾಗಿದ್ದು
ದೂಪದಕಟ್ಟೆಯಿಂದ ಕಾರ್ಕಳದ ಕಡೆ ಬರುತ್ತಿದ್ದ ಬೆನ್ಜ್ ಕಾರಿಗೆ ಕಾರ್ಕಳದ ದೂಪದಕಟ್ಟೆಯತ್ತ ಸಾಗುತ್ತಿದ್ದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಡಿಕ್ಕಿಯ ತೀವ್ರತೆಗೆ ಕಾರಿನ ಮುಂಭಾಗ ಸಂಪೂರ್ಣವಾಗಿ ಜಖಂಗೊಂಡಿದ್ದು, ಬೈಕ್ ರಸ್ತೆಯಿಂದ ಪೊದೆಯತ್ತ ದೂಡಲ್ಪಟ್ಟಿದೆ. ಗಂಭೀರವಾಗಿ ಗಾಯಗೊಂಡಿದ್ದ ಸವಾರರನ್ನು ಕಾರ್ಕಳ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.



















