
ಅಜೆಕಾರಿನ ಗುಡ್ಡೆಯಂಗಡಿ ಸರಕಾರಿ ಶಾಲೆಯಲ್ಲಿ ನಡೆದ ಶಾಲಾ ಪ್ರಾರಂಭೋತ್ಸವಕ್ಕೆ ದಿನಾಂಕ 31ರಂದು ಆಗಮಿಸಿದ ಚಲನಚಿತ್ರ ಕಲಾವಿದ ಹಾಗೂ ನಮ್ಮ ತುಳುನಾಡು ಟ್ರಸ್ಟಿನ ರಾಜ್ಯ ಸಂಚಾಲಕರಾದ ತುಳುನಾಡ ತುಡರ್ ಖ್ಯಾತಿಯ ಕೀರ್ತಿ ಕಾರ್ಕಳ ಇವರು ಆಗಮಿಸಿ ಸರಕಾರಿ ಶಾಲೆಯ ಸವಲತ್ತುಗಳ ಬಗ್ಗೆ ವಿವರಿಸಿ ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಅತೀ ಹೆಚ್ಚು ಸೇರಿಸಿ ಸರಕಾರಿ ಸವಲತ್ತುಗಳ ಸದುಪಯೋಗ ಪಡೆದುಕೊಳ್ಳಿ ಎಂದು ಪೋಷಕರಿಗೆ ವಿನಂತಿಸಿದರು.
ಹಾಗೂ ಶಾಲಾ ಮಕ್ಕಳ ಮುಂದಿನ ಜೀವನಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ S.D.M.C ಅಧ್ಯಕ್ಷರಾದ ಬಸವರಾಜ್ ಶಾಲಾ ಮುಖ್ಯೋಪಾಧ್ಯಾಯನಿ ಜಯಂತಿ, S.D.M.C ಸದಸ್ಯರಾದ ಅನುಪ್ ಶೆಟ್ಟಿ ಹಾಗೂ ಸುದಿನ ನ್ಯೂಸ್ ಅರುಣ್ ಕುಮಾರ್ ಉಪಸ್ಥಿತರಿದ್ದರು. ಶಾಲಾ ಶಿಕ್ಷಕ ಶ್ರೀವತ್ಸ ಸ್ವಾಗತಿಸಿ ಗೌರವ ಶಿಕ್ಷಕಿ ರಕ್ಷಿತಾ ವಂದಿಸಿದರು.
