ಚಿನ್ನದ ಸಾಧನೆ ಮಾಡಿದ ಬೋಳ ಆಯುಷ್ ಎಸ್. ಪೂಜಾರಿ

ಕಾರ್ಕಳ : ಹುಬ್ಬಳ್ಳಿಯ ವಾಸವಿ ಮಹಲ್ನಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ಶಿಪ್ ನಲ್ಲಿ ಬಾಲಕರ ೮ವರ್ಷ ವಯೋಮಿತಿಯ ಕಟಾ ವಿಭಾಗದಲ್ಲಿ ಚಿನ್ನದ ಪದಕವನ್ನು ಬೋಳ ಆಯುಷ್ ಎಸ್. ಪೂಜಾರಿ ಪಡೆದಿದ್ದಾರೆ.
ಇವರು ಕಾರ್ಕಳ ತಾಲೂಕು ಪಂಚಾಯತ್ ನಿಕಟ ಪೂರ್ವ ಸದಸ್ಯೆ ಬೋಳ ಪುಷ್ಪ ಪೂಜಾರಿ ಮತ್ತು ಬೋಳ ಪಂಚಾಯತ್ ಮಾಜಿ ಅಧ್ಯಕ್ಷ ಸತೀಶ್ ಪೂಜಾರಿ ಬೋಳ ದಂಪತಿಗಳ ಪುತ್ರಿ. ಶಿಕ್ಷಕ ಸತೀಶ್ ಪೂಜಾರಿ ಬೆಳ್ಮಣ್ರವರಿಂದ ತರಬೇತಿ ಪಡೆದಿದ್ದಾರೆ.









