ಶ್ರೀ ಶ್ರೀ ರವಿಶಂಕರ್ ವಿದ್ಯಾಮಂದಿರದ ವಿದ್ಯಾರ್ಥಿಗಳ ಸಾಧನೆ

ಸಿಲ್ವರ್ ಝೋನ್ ಫೌಂಡೇಶನ್ ನ್ಯೂ ದೆಹಲಿ,ಇಂಡಿಯಾ ವತಿಯಿಂದ ವಿಶ್ವದ ಅತಿದೊಡ್ಡ ಅಂತರಾಷ್ಟ್ರೀಯ ಒಲಿಂಪಿಯಾಡ್ ಆಯೋಜಿಸಿದ ಒಲಿಂಪಿಯಯಾಡ್ ವಿಜ್ಞಾನ ಪರೀಕ್ಷೆಯಲ್ಲಿ ಶ್ರೀ ಶ್ರೀ ರವಿಶಂಕರ ವಿದ್ಯಾ ಮಂದಿರದ ವಿದ್ಯಾರ್ಥಿಗಳಾದ ಸಾನಿಕ ಕಿಣಿ, ಭುವಿ ಪೈ,ಸುಬೋಧ್ ಶೆಟ್ಟಿಗಾರ್, ಶಾಲ್ಮಲಿ, ಯು.ಶ್ರೀವತ್ಸ ಎಸ್.ಕಾಮತ್, ಪ್ರಗ್ಯ ಪುತ್ರನ್, ಪರೀಕ್ಷಿತ್ ಬಿ .ಶೆಟ್ಟಿಗಾರ್ , ಆರ್ ಶ್ರೀಯಾ ಪ್ರಭು ಚಿನ್ನದ ಪದಕವನ್ನು,ಆಯುಷ್ ಪ್ರಭು, ಈತನ್ ಅದ್ರಿತ್,ಈಶನ್ ಹೆಗ್ಡೆ, ತೇಜಸ್ ವಿ .ಶೇರಿಗಾರ್ , ಎಸ್ ಹರ್ಷಿಣಿ ಬೆಳ್ಳಿಯ ಪದಕವನ್ನು, ಶ್ರದ್ಧ ಶ್ರೀನಿವಾಸ್, ಅದ್ರಿತ್ ಹೆಗ್ಡೆ,ಬೋಳ ಶ್ರೇಯಾಂಶ ಹೆಗ್ಡೆ, ಸಾನ್ಯೋರ ಲೋಬೋ, ಅಮೋಘ್ ಪ್ರಭು ಕಂಚಿನ ಪದಕವನ್ನು ಪಡೆದಿರುತ್ತಾರೆ. ಒಲಂಪಿಯಾಡ್ ಇಂಗ್ಲಿಷ್ ಪರೀಕ್ಷೆಯಲ್ಲಿ ಶ್ರದ್ಧಾ ಶ್ರೀನಿವಾಸ್, ಶಾಲ್ಮಲಿ,ಬೋಳ ಶ್ರೇಯಾಂಶ ಹೆಗ್ಡೆ, ಸಾನ್ಯೋರ ಲೋಬೊ,ಅವಿಕ ವಿ.ಶೆಟ್ಟಿ,ಎಸ್ ಹರ್ಷಿಣಿ ಚಿನ್ನದ ಪದಕವನ್ನು, ಸುಭೋದ್ ಶೆಟ್ಟಿಗಾರ್, ಈಶಾನ್ ಹೆಗ್ಡೆ, ಪ್ರಗ್ಯಪುತ್ರನ್,ಬೆಳ್ಳಿಯ ಪದಕವನ್ನು,ಶಾನ್ವಿ ದೇವಾಡಿಗ ಕಂಚಿನ ಪದಕವನ್ನು ಪಡೆದಿರುತ್ತಾರೆ.
ಒಲಿಂಪಿಯಾಡ್ ಗಣಿತ ಪರೀಕ್ಷೆಯಲ್ಲಿ ನಾಲ್ಕನೇ ತರಗತಿ ವಿದ್ಯಾರ್ಥಿ ಅದ್ವೈತ್ ಶೆಣೈ ಚಿನ್ನದ ಪದಕವನ್ನು ಪಡೆದಿರುತ್ತಾರೆ. ಒಲಂಪಿಯಾಡ್ ಸಾಮಾನ್ಯ ಜ್ಞಾನ ಪರೀಕ್ಷೆಯಲ್ಲಿ ಸುಭೋದ್ ಶೆಟ್ಟಿಗಾರ್,ಮೌಲ್ಯ ಎಸ್.ಪೂಜಾರಿ ಚಿನ್ನದ ಪದಕವನ್ನು ಪಡೆದಿರುತ್ತಾರೆ. ಇವರಿಗೆ ಶಾಲಾ ಪ್ರಾಂಶುಪಾಲರಾದ ಶ್ರೀಮತಿ ಸೋನಲ್ ಆರ್ .ಕಾಮತ್, ಶಿಕ್ಷಕ ವೃಂದ ಶುಭ ಹಾರೈಸಿರುತ್ತಾರೆ. ಒಲಿಂಪಿಯಾಡ್ ವಿಜ್ಞಾನ ಪರೀಕ್ಷೆಯಲ್ಲಿ ಏಳನೇ ತರಗತಿ ವಿದ್ಯಾರ್ಥಿ ಯು ಶ್ರೀವತ್ಸ ಎಸ್.ಕಾಮತ್ ಮೊದಲನೇ ಹಂತದ ಪರೀಕ್ಷೆಯಲ್ಲಿ ಚಿನ್ನದ ಪದಕವನ್ನು ಪಡೆದು ಎರಡನೇ ಹಂತದ ಪರೀಕ್ಷೆಯನ್ನು ಪೂರ್ಣಗೊಳಿಸಿರುತ್ತಾರೆ.



















