
ಹಿರಿಯಡ್ಕ: ಸ್ಥಳೀಯ ಜನರ ಬಹುದಿನಗಳ ಬೇಡಿಕೆಯಾಗಿದ್ದ ಅಂಗಾರಕಟ್ಟೆ-ಉಡುಪಿ ಸರಕಾರಿ ಬಸ್ ಕನಸು ಈಡೇರಿದ್ದು ಗ್ರಾಮೀಣ ಜನರಿಗೆ ಸರಕಾರದ ‘ಶಕ್ತಿ’ ಯೋಜನೆಯು ತಲುಪಿದಂತಾಗಿದೆ.
“ಕಳೆದ ಡಿಸೆಂಬರ್ ತಿಂಗಳಲ್ಲಿ ಸರಕಾರಿ ಬಸ್ ಕುರಿತಾಗಿ ಸ್ಥಳೀಯ ಶಾಸಕರಿಗೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದ್ದೆ. ಇದೀಗ ಬಸ್ ಸಂಚಾರ ಆರಂಭವಾಗಿದ್ದು ಖುಷಿ ತಂದಿದೆ. ಮುಂದಿನ ದಿನಗಳಲ್ಲಿ ಬಹುಜನರ ಓಡಾಟವಿರುವ ಪೆರ್ಣಂಕಿಲ – ಓಂತಿಬೆಟ್ಟು- ಉಡುಪಿ ಮಾರ್ಗವಾಗಿ ಸರಕಾರಿ ಬಸ್ ಸಂಚರಿಸಲು ಮನವಿ ಸಲ್ಲಿಸಲಾಗುವುದು”. ಜನರ ಮನವಿಗೆ ಸ್ಪಂದಿಸಿದ ಶಾಸಕರಿಗೆ, ಸುದ್ದಿಯನ್ನು ಬಿತ್ತರಿಸಿದ ‘ನಮ್ಮ ಕಾರ್ಲ ನ್ಯೂಸ್’ ಮಾಧ್ಯಮ ಮಿತ್ರರಿಗೂ ಸಾಮಾಜಿಕ ಕಾರ್ಯಕರ್ತ ವಿಷ್ಣುಪ್ರಸಾದ್ ಕೊಡಿಬೆಟ್ಟು ಅಭಿನಂದನೆ ತಿಳಿಸಿದ್ದಾರೆ.