
ಮಧುರ ಕಂಠದಿಂದ ಜನಮನ ಗೆದ್ದಿದ್ದ ʻಕನ್ನಡ ಕೋಗಿಲೆʼ ರಿಯಾಲಿಟಿ ಶೋನ ಗಾಯಕಿ ಅಖಿಲಾ ಪಜಿಮಣ್ಣು ಅವರ ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಗಿದ್ದು ಇದೀಗ ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ.
ಮೂರು ವರ್ಷಗಳ ಹಿಂದೆ ಅಮೆರಿಕದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಧನಂಜಯ್ ಶರ್ಮಾ ಅವರೊಂದಿಗೆ ವಿವಾಹವಾಗಿದ್ದ ಅಖಿಲಾ ಅವರ ದಾಂಪತ್ಯದಲ್ಲಿ ಇದೀಗ ಬಿರುಕು ಮೂಡಿದ್ದು ಇಬ್ಬರು ಪರಸ್ಪರ ಒಪ್ಪಿ ವಿಚ್ಛೇದನಕ್ಕೆ ಮುಂದಾಗಿದ್ದಾರೆ.
ಇದೇ ಜೂನ್ 12 ರಂದು ಗಾಯಕಿ ಅಖಿಲಾ ಪಜಿಮಣ್ಣು ಮತ್ತು ಪತಿ ಟಿ.ಆರ್ ಧನರಾಜ್ ಶರ್ಮಾ ಪರಸ್ಪರ ಒಪ್ಪಿ ಪುತ್ತೂರು ಕೋರ್ಟ್‌ನಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.
2022ರಲ್ಲಿ ಕನ್ನಡ ಕೋಗಿಲೆ ಗಾಯಕಿ ಅಖಿಲಾ ಪಜಿಮಣ್ಣು ಹಾಗೂ ಧನಂಜಯ್ ಶರ್ಮಾ ಇಬ್ಬರೂ ಗುರು ಹಿರಿಯರ ಆಸೆಯಂತೆಯೇ ವಿವಾಹವಾಗಿದ್ದು ಆದರೆ ಇದೀಗ ಪರಸ್ಪರ ಒಪ್ಪಿಗೆ ಮೇಲೆ ಡಿವೋರ್ಸ್ ಪಡೆಯುವುದಕ್ಕೆ ಮುಂದಾಗಿರುವುದು ಗಾಯಕಿಯ ಅಭಿಮಾನಿಗಳಿಗೆ ಈ ಸುದ್ದಿ ಬೇಸರ ಮೂಡಿಸಿದೆ.