
ಬೆಂಗಳೂರು: ರಾಜ್ಯ ಸರ್ಕಾರವು ಶಾಲಾ ಶಿಕ್ಷಣ ಕ್ಷೇತ್ರದಲ್ಲಿ ಪ್ರಮುಖ ಬದಲಾವಣೆ ತರಲು ಮುಂದಾಗಿದ್ದು ಅದೇನೆಂದರೆ ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿ SSLC ಪರೀಕ್ಷೆಯ ಪ್ರಸ್ತುತ 125 ಅಂಕಗಳನ್ನು ಹೊಂದಿರುವ ಪ್ರಥಮ ಭಾಷಾ ವಿಷಯಗಳನ್ನು 100 ಅಂಕಗಳಿಗೆ ತಗ್ಗಿಸುವ ಕುರಿತಾಗಿ ಅಂಕ ಕಡಿತ ಮಾಡಲು ಸರ್ಕಾರಕ್ಕೆ ಅಧಿಕೃತವಾಗಿ ಪ್ರಸ್ತಾವನೆ ಸಲ್ಲಿಸಿದೆ.
ಇದರಿಂದ ಎಲ್ಲಾ ವಿಷಯಗಳಂತೆ ಪ್ರಥಮ ಭಾಷೆಯೂ 100 ಅಂಕದ ಪರೀಕ್ಷೆಯಾಗಿ ಪರಿವರ್ತನೆಯಾಗಲಿದೆ. ಇದೀಗ ಬೋರ್ಡ್ ನೀಡಿದ ಪ್ರಸ್ತಾವನೆಯಂತೆ, 100 ಅಂಕಗಳಲ್ಲಿ 80 ಅಂಕಗಳನ್ನು ಬರವಣಿಗೆಯ ಪರೀಕ್ಷೆಗಾಗಿ ಮೀಸಲಾಗಿಡಲಾಗುವುದು. ಉಳಿದ 20 ಅಂಕಗಳನ್ನು ಆಂತರಿಕ ಮೌಲ್ಯಮಾಪನದ ಮೂಲಕ ನಿರ್ಧರಿಸಲಾಗುವುದು. ಇದನ್ನು ಶಾಲಾ ಮಟ್ಟದಲ್ಲಿ ಶಿಕ್ಷಕರ ಮೂಲಕ ನಿರ್ವಹಿಸಲಾಗುವುದು.
ಈ ಪ್ರಸ್ತಾವನೆಯನ್ನು ಬೋರ್ಡ್ ಮಾಜಿ ಅಧ್ಯಕ್ಷ ಬಸವರಾಜೇಂದ್ರ ಅವರ ನೇತೃತ್ವದಲ್ಲಿ ಸರ್ಕಾರದ ಗಮನ ಸೆಳೆಯಲಾಗಿದ್ದು ಈ ಪ್ರಸ್ತಾವನೆಗೆ ಸರ್ಕಾರ ಹಸಿರು ನಿಶಾನೆ ತೋರಿಸಿದರೆ, ಈಗಾಗಲೇ ಪ್ರಾರಂಭವಾಗಿರುವ 2025-26ನೇ ಸಾಲಿನ SSLC ವಿದ್ಯಾರ್ಥಿಗಳಿಗೆ ಈ ಹೊಸ ಮಾದರಿ ಜಾರಿಯಾಗುವ ಸಾಧ್ಯತೆ ಇದೆ. ಈ ಸಂಬಂಧದ ತೀರ್ಮಾನವನ್ನು ಸರ್ಕಾರ ಶೀಘ್ರದಲ್ಲಿ ಪ್ರಕಟಿಸುವ ಸಾಧ್ಯತೆ ಇದೆ.