# nammakarla.in > News As It Is ## Posts - [ಮನಸಿದ್ದಲ್ಲಿ ಮಾರ್ಗ…](https://news.nammakarla.in/%e0%b2%ae%e0%b2%a8%e0%b2%b8%e0%b2%bf%e0%b2%a6%e0%b3%8d%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%ae%e0%b2%be%e0%b2%b0%e0%b3%8d%e0%b2%97/): 37ನೇ ವಯಸ್ಸಿನಲ್ಲಿ, ಪಿಯು ಪರೀಕ್ಷೆ ಪಾಸಾದ ಅಂಗನವಾಡಿ ಸಹಾಯಕಿ ಸುಜಾತ ಶೆಟ್ಟಿ ವಯಸ್ಸು ಕೇವಲ ನಂಬರ್ ಅಷ್ಟೇ ಸಾಧನೆ ಗೆ ವಯಸ್ಸು ಅಡ್ಡಿಯಾಗುವುದಿಲ್ಲ ಸಾಧಿಸಿದರೆ ಸಬಲವನ್ನು ನುಂಗಬಹುದು ಎನ್ನುವದನ್ನು ಶ್ರೀಮತಿ ಸುಜಾತಾ ಶೆಟ್ಟಿ ಯವರು ತನ್ನ 37ನೇ ವಯಸ್ಸಿನಲ್ಲಿ ಪಿಯುಸಿ ಪರೀಕ್ಷೆ ಬರೆದು ಸಾಧಿಸಿ ತೋರಿಸಿದ್ದಾರೆ.ರೆಂಜಾಳ ಗ್ರಾಮದ ಕೊರ್ದೋಟ್ಟು ಪ್ರವೀಣ್ ಶೆಟ್ಟಿ ಯವರ ಪತ್ನಿ ಶ್ರೀಮತಿ ಸುಜಾತಾ ಶೆಟ್ಟಿ (37) ಅಂಗನವಾಡಿ ಸಹಾಯಕಿ ಯಾಗಿ ಇದ್ದು ಕೊಂಡು ಕೆಲಸ ಮಾಡುತಿದ್ದರು . ಬಾಲ್ಯದಲ್ಲಿ ಬಡತನದ ಕಾರಣ ದಿಂದ ವಿದ್ಯಾಭ್ಯಾಸ ಮುಂದುವರೆಸುವದು ಕಷ್ಟವಾಗಿತ್ತು.. ತಾನು ವಿದ್ಯಾವಂತೆಯಾಗಬೇಕು ಎಂದು ಕನಸು ಹೊಂದಿದ್ದ ಸುಜಾತಾ ಶೆಟ್ಟಿ ಯವರು ಛಲ ದಿಂದ ಓದಿ ಪಿ ಯು ಸಿ ಪರೀಕ್ಷೆ ಬರೆದು ಪಾಸಾಗಿದ್ದಾರೆ. ಕಾರ್ಕಳದ ಗುರುಕುಲ ಟ್ಯೂಟೋರಿಯಲ್ ನಲ್ಲಿ ಕೋಚಿಂಗ್ ಕಾರ್ಕಳ ಲಿಪಿ ಸೆಂಟರ್ ನಲ್ಲಿ ಪುಸ್ತಕ ಪಡೆದು ಕೊಂಡು ಮನೆಯಲ್ಲಿ ದಿನಾ ಬೆಳಿಗ್ಗೆ 4 ಗಂಟೆಗೆ ಎದ್ದು ಓದಿ ಅಭ್ಯಾಸ ಮಾಡಿಕೊಂಡು ಕಲಾ ವಿಭಾಗ ದಲ್ಲಿ 327 […] - [ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬೋಳ, ಪಿಲಿಯೂರು ಅಷ್ಟಬಂಧ ಪ್ರತಿಷ್ಠಾ ಪುರಸ್ಸರ ಬ್ರಹ್ಮಕಲಶೋತ್ಸವದ ಸಮಾರಂಭಕ್ಕೆ ರಾಷ್ಟ್ರಪ್ರಶಸ್ತಿ ವಿಜೇತ, ಬಿರ್ದುದ ಕಂಬಳ ಚಲನಚಿತ್ರ ನಿರ್ಮಾಪಕರು ಉದ್ಯಮಿಗಳಾದ ಅರುಣ್ ರೈ ತೋಡಾರು ಭೇಟಿ](https://news.nammakarla.in/%e0%b2%b6%e0%b3%8d%e0%b2%b0%e0%b3%80-%e0%b2%ae%e0%b2%b9%e0%b2%be%e0%b2%b2%e0%b2%bf%e0%b2%82%e0%b2%97%e0%b3%87%e0%b2%b6%e0%b3%8d%e0%b2%b5%e0%b2%b0-%e0%b2%a6%e0%b3%87%e0%b2%b5%e0%b2%b8%e0%b3%8d-6/): ಬೋಳ ಪಿಲಿಯೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಅಷ್ಟಬಂಧ ಪ್ರತಿಷ್ಠಾ ಪುರಸ್ಸರ ಬ್ರಹ್ಮಕಲಶೋತ್ಸವದ ಸಮಾರಂಭಕ್ಕೆ ರಾಷ್ಟ್ರಪ್ರಶಸ್ತಿ ವಿಜೇತ, ಬಿರ್ದುದ ಕಂಬಳ ಚಲನಚಿತ್ರ ನಿರ್ಮಾಪಕರು ಉದ್ಯಮಿಗಳಾದ ಅರುಣ್ ರೈ ತೋಡಾರು ಕ್ಷೇತ್ರಕ್ಕೆ ಆಗಮಿಸಿ ದೇವರ ದರ್ಶನ ಪಡೆದು ಅನುಗ್ರಹ ಪ್ರಸಾದವನ್ನು ಸ್ವೀಕರಿಸಿದರು - [ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬಂಗ್ಲೆಗುಡ್ಡೆ, ಕೆರ್ವಾಶೆ: ಸಮುದಾಯದತ್ತ ಶಾಲಾ ಕಾರ್ಯಕ್ರಮ](https://news.nammakarla.in/%e0%b2%b8%e0%b2%b0%e0%b2%95%e0%b2%be%e0%b2%b0%e0%b2%bf-%e0%b2%95%e0%b2%bf%e0%b2%b0%e0%b2%bf%e0%b2%af-%e0%b2%aa%e0%b3%8d%e0%b2%b0%e0%b2%be%e0%b2%a5%e0%b2%ae%e0%b2%bf%e0%b2%95-%e0%b2%b6%e0%b2%be-5/): ಸ. ಕಿ.ಪ್ರಾ.ಶಾಲೆ ಬಂಗ್ಲೆಗುಡ್ಡೆ, ಕೆರ್ವಾಶೆ ಇಲ್ಲಿ ದಿನಾಂಕ :10-04-2026 ರಂದು ಎರಡನೆಯ ಸಮುದಾಯದತ್ತ ಶಾಲಾ ಕಾರ್ಯಕ್ರಮವನ್ನು ಅಧ್ಯಕ್ಷತೆಯನ್ನು ವಹಿಸಿಕೊಂಡಿರುವ ಎಸ್‌ಡಿಎಂಸಿ ಯ ಅಧ್ಯಕ್ಷರಾದ ಶ್ರೀಯುತ ನಾರಾಯಣಗುಡಿಗಾರ್ ಇವರು ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿದರು. ಹಿರಿಯ ಸಹ ಶಿಕ್ಷಕಿ ಶ್ರೀಮತಿ ಸುನೀತಾ ನಾಯಕ್ ಇವರು ಎಲ್ಲರನ್ನೂ ಸ್ವಾಗತಿಸಿ ಸಮುದಾಯದತ್ತ ಶಾಲಾ ಕಾರ್ಯಕ್ರಮದ ಉದ್ದೇಶ ಹಾಗೂ ಇಲಾಖ ಮಾಹಿತಿಗಳೊಂದಿಗೆ ರಜಾ ಅವಧಿಯಲ್ಲಿ ಪೋಷಕರು ಮಕ್ಕಳ ಕುರಿತು ನಿರ್ವಹಿಸಬೇಕಾದ ಕರ್ತವ್ಯಗಳ ಬಗ್ಗೆ ತಿಳಿಸಿದರು. ಮುಖ್ಯ ಶಿಕ್ಷಕಿ ಶ್ರೀಮತಿ ಪ್ರಮೀಳಾ ಇವರು ಪ್ರಾಸ್ತಾವಿಕ ನುಡಿಗಳನ್ನು ಆಡುವುದರೊಂದಿಗೆ ಶಾಲೆಯ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಕೈಜೋಡಿಸಿದ SDMC, ಹಳೆ ವಿದ್ಯಾರ್ಥಿ ಸಂಘ, ದಾನಿಗಳು,ಪೋಷಕರು, ಶಿಕ್ಷಕರು ಹಾಗೂ ಅಡುಗೆ ಸಿಬ್ಬಂದಿಯವರಿಗೆ ಧನ್ಯವಾದಗಳನ್ನು ಸಮರ್ಪಿಸಿದರು. ರಜಾ ಅವಧಿಯಲ್ಲಿ ಮಕ್ಕಳ ಆರೋಗ್ಯ ಹಾಗೂ ಸುರಕ್ಷತೆಯ ಕಡೆ ಹೆಚ್ಚಿನ ಗಮನ ನೀಡುವಂತೆ ಪೋಷಕರಿಗೆ ತಿಳಿಸಲಾಯಿತು. ನಂತರ ಮಕ್ಕಳ ಉತ್ತರ ಪತ್ರಿಕೆಗಳ ಪ್ರಗತಿ ಪರಿಶೀಲನೆಯ ಕುರಿತು ಸಮಾಲೋಚನೆ ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಎಸ್ ಡಿ ಎಂ ಸಿ ಅಧ್ಯಕ್ಷರು […] - [ಗೃಹಲಕ್ಷ್ಮೀ ಹಣಕ್ಕೆ ಕೈ ಹಾಕಿದ ಫೈನಾನ್ಸ್ ಸಂಸ್ಥೆಗಳು: ಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಆದೇಶ](https://news.nammakarla.in/%e0%b2%97%e0%b3%83%e0%b2%b9%e0%b2%b2%e0%b2%95%e0%b3%8d%e0%b2%b7%e0%b3%8d%e0%b2%ae%e0%b3%80-%e0%b2%b9%e0%b2%a3%e0%b2%95%e0%b3%8d%e0%b2%95%e0%b3%86-%e0%b2%95%e0%b3%88-%e0%b2%b9%e0%b2%be%e0%b2%95/): ಬೆಂಗಳೂರು: ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಹಾಗೂ ಶಾಸಕ ದಿನೇಶ್ ಗೂಳಿಗೌಡ ಗೃಹಲಕ್ಷ್ಮೀ ಯೋಜನೆಯಡಿ ಮಹಿಳಾ ಫಲಾನುಭವಿಗಳ ಖಾತೆಗೆ ಜಮೆಯಾಗುವ ಸಹಾಯಧನವನ್ನು ಖಾಸಗಿ ಫೈನಾನ್ಸ್ ಹಾಗೂ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಹಳೆಯ ಸಾಲದ ಹೆಸರಿನಲ್ಲಿ ಬಲವಂತವಾಗಿ ಕಡಿತಗೊಳಿಸುತ್ತಿರುವ ಘಟನೆಗಳ ಬಗ್ಗೆ ಮನವಿ ಸಲ್ಲಿಸಿದ್ದು ಇದನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಇಂತಹ ಕ್ರಮಗಳನ್ನು ತಕ್ಷಣ ತಡೆಹಿಡಿಯಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಮುಖ್ಯಮಂತ್ರಿಗಳು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ತುರ್ತು ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದ್ದಾರೆ. ಈ ವಿಷಯವನ್ನು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೂ ತಿಳಿಸಲಾಗಿದೆ.ಮುಖ್ಯಮಂತ್ರಿಗಳ ಕಾರ್ಯದರ್ಶಿ ಮೂಲಕ ಗೃಹ ಇಲಾಖೆ ಮತ್ತು ನಗರಾಭಿವೃದ್ಧಿ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿಗಳು, ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಕೂಡ ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಮನವಿ ಪತ್ರದಲ್ಲಿ ದಿನೇಶ್ ಗೂಳಿಗೌಡ ಅವರು, ಗೃಹಲಕ್ಷ್ಮೀ ಯೋಜನೆ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಬಹುಮುಖ್ಯವಾದ ಯೋಜನೆಯಾಗಿದ್ದು, ಪ್ರತಿ ತಿಂಗಳು ₹2,000 […] - [1ನೇ ತರಗತಿ ಪ್ರವೇಶಕ್ಕೆ 60 ದಿನ ವಯೋಮಿತಿ ಸಡಿಲಿಕೆ: ಸರ್ಕಾರದ ಆದೇಶ](https://news.nammakarla.in/1%e0%b2%a8%e0%b3%87-%e0%b2%a4%e0%b2%b0%e0%b2%97%e0%b2%a4%e0%b2%bf-%e0%b2%aa%e0%b3%8d%e0%b2%b0%e0%b2%b5%e0%b3%87%e0%b2%b6%e0%b2%95%e0%b3%8d%e0%b2%95%e0%b3%86-60-%e0%b2%a6%e0%b2%bf%e0%b2%a8-%e0%b2%b5/): ಬೆಂಗಳೂರು: ಮೊದಲ ತರಗತಿ ಪ್ರವೇಶಕ್ಕೆ 6 ವರ್ಷ ವಯಸ್ಸು ಕಡ್ಡಾಯ ಮಾಡುವ ನಿರ್ಧಾರ ಪೋಷಕರಿಂದ ಭಾರಿ ವಿರೋಧಕ್ಕೆ ಗುರಿಯಾಗಿತ್ತು. ನಂತರ ಶಿಕ್ಷಣ ಇಲಾಖೆ ವಿನಾಯಿತಿ ನೀಡಿದರೂ ಅಸಮಾಧಾನ ಮುಂದುವರಿದಿತ್ತು. ಈಗ ಸರ್ಕಾರ 1ನೇ ತರಗತಿ ದಾಖಲಾತಿಗೆ 60 ದಿನಗಳ ವಯೋಮಿತಿ ಸಡಿಲಿಕೆ ಘೋಷಿಸಿದೆ. 2026-27ನೇ ಶೈಕ್ಷಣಿಕ ವರ್ಷಕ್ಕೆ ಮಾತ್ರ ಅನ್ವಯವಾಗುವಂತೆ, ಜೂನ್‌ 1 ಅನ್ನು ಆಧಾರವಾಗಿ ತೆಗೆದುಕೊಂಡು 60 ದಿನಗಳವರೆಗೆ ವಯಸ್ಸಿನಲ್ಲಿ ಸಡಿಲಿಕೆ ನೀಡಿ ಮಕ್ಕಳ ದಾಖಲಾತಿ ಪರಿಗಣಿಸಲು ಸರ್ಕಾರ ಸೂಚಿಸಿದೆ. ಅಂದರೆ, ಜೂನ್‌ 1 ನಂತರದಿಂದ ಜುಲೈ 30ರೊಳಗೆ ಜನಿಸಿದ ಮಕ್ಕಳಿಗೂ 1ನೇ ತರಗತಿಗೆ ಪ್ರವೇಶ ಅವಕಾಶ ದೊರೆಯಲಿದೆ. ಪೋಷಕರ ಮನವಿಗಳಿಗೆ ಸ್ಪಂದಿಸಿ, ಕರ್ನಾಟಕ ಶಿಕ್ಷಣ ಅಧಿನಿಯಮ 1983ರ ಕಲಂ 20ರಡಿ ಈ ವಿಶೇಷ ಸಡಿಲಿಕೆ ನೀಡಲಾಗಿದೆ. ಇದುವರೆಗೆ 6 ವರ್ಷ ಪೂರ್ಣಗೊಳ್ಳುವುದು ಕಡ್ಡಾಯವಾಗಿದ್ದರೆ, ಇದೀಗ 5 ವರ್ಷ 10 ತಿಂಗಳು ಪೂರೈಸಿದ ಮಕ್ಕಳಿಗೂ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. - [ಝೋಂಬಿ ಡ್ರಗ್ ಸುದ್ದಿ ನಕಲಿ](https://news.nammakarla.in/%e0%b2%9d%e0%b3%8b%e0%b2%82%e0%b2%ac%e0%b2%bf-%e0%b2%a1%e0%b3%8d%e0%b2%b0%e0%b2%97%e0%b3%8d-%e0%b2%b8%e0%b3%81%e0%b2%a6%e0%b3%8d%e0%b2%a6%e0%b2%bf-%e0%b2%a8%e0%b2%95%e0%b2%b2%e0%b2%bf/): ಬೆಂಗಳೂರು: ಇತ್ತೀಚೆಗೆ ನಗರದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಒಂದು ವಿಡಿಯೋ ಬಹಳ ಚರ್ಚೆಗೆ ಗ್ರಾಸವಾಗಿತ್ತು. ರಸ್ತೆಯ ಮಧ್ಯೆ ಒಬ್ಬ ವ್ಯಕ್ತಿ ಹಲವು ಗಂಟೆಗಳ ಕಾಲ ಅಚಲವಾಗಿ ನಿಂತಿರುವ ದೃಶ್ಯ ಅದರಲ್ಲಿ ಕಂಡುಬಂದಿದ್ದು, ಇದನ್ನು “ಝೋಂಬಿ ಡ್ರಗ್” ಸೇವನೆಯ ಪರಿಣಾಮ ಎಂದು ಹೇಳಲಾಗಿತ್ತು. ಆದರೆ ಈ ಘಟನೆ ಕುರಿತು ನಗರ ಪೊಲೀಸರು ತನಿಖೆ ನಡೆಸಿದ ಬಳಿಕ, ವಿಡಿಯೋಗೆ ಸಂಬಂಧಿಸಿದಂತೆ ಹರಡಲಾಗಿದ್ದ ಮಾಹಿತಿ ತಪ್ಪು ಎಂದು ಸ್ಪಷ್ಟಪಡಿಸಿದರು. ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು, ಈ ಪ್ರಕರಣದಲ್ಲಿ ಯಾವುದೇ ರೀತಿಯ “ಝೋಂಬಿ ಡ್ರಗ್” ಸಂಪರ್ಕ ಇಲ್ಲ ಎಂದು ತಿಳಿಸಿದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಜಿ ಪರಮೇಶ್ವರ್ ಅವರು ಕೂಡ ಪ್ರತಿಕ್ರಿಯೆ ನೀಡಿದ್ದು, “ಝೋಂಬಿ ಡ್ರಗ್” ಎಂಬುದು ನಿಜವಲ್ಲದ ಸಂಗತಿ. ಜನರಲ್ಲಿ ಅನಗತ್ಯ ಭಯ ಹುಟ್ಟಿಸುವ ರೀತಿಯಲ್ಲಿ ಸುಳ್ಳು ಸುದ್ದಿಗಳನ್ನು ಹರಡಬಾರದು ಎಂದು ಅವರು ಎಚ್ಚರಿಸಿದರು. ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಮಾಹಿತಿ ಹಂಚುವ ಮುನ್ನ ಅದರ ಸತ್ಯಾಸತ್ಯತೆ ಪರಿಶೀಲಿಸುವುದು ಅತ್ಯಂತ […] - [ಮಹಾಭಾರತ](https://news.nammakarla.in/%e0%b2%ae%e0%b2%b9%e0%b2%be%e0%b2%ad%e0%b2%be%e0%b2%b0%e0%b2%a4-485/): ಭಾಗ – 485 ಭರತೇಶ ಶೆಟ್ಟಿ,ಎಕ್ಕಾರು ಸಂಚಿಕೆ ೪೮೫ ಮಹಾಭಾರತ ಈ ತನಕ ದೇಹಕ್ಕಾಗುತ್ತಿದ್ದ ಹಸಿವೆಯಿಂದ, ಕೊರೆಯುವ ಚಳಿಯಿಂದ ಬಾಧಿತನಾಗಿದ್ದ ಬೇಟೆಗಾರನಿಗೆ ಒಮ್ಮೆಗೆ ಎಲ್ಲವೂ ಮರೆತು ಹೋದದಂತಾಯಿತು. ಕಪೋತ – ಕಪೋತಿಗಳ (ಪಾರಿವಾಳ) ಸಂಭಾಷಣೆ, ತಮಗೊದಗಿರುವ ಆಪತ್ತು, ಪ್ರಾಣ ಭಯವನ್ನೂ ಮರೆತು ನಿಸ್ವಾರ್ಥಿಯಾಗಿ ಪಾಲಿಸಿದ ಧರ್ಮಬುದ್ಧಿ, ಸೇವೆಗಾಗಿ ತೋರಿದ ಪರಿಶ್ರಮ ಎಲ್ಲವನ್ನೂ ನೋಡಿ, ಕೇಳಿ ಮನನ ಮಾಡಿ ಕುಬ್ಜನಾಗಿ ಹೋದಂತೆ ಭಾಸವಾಯಿತು. ಹೇಳುವುದಕ್ಕೆ ಲೋಕಮುಖದಲ್ಲಿ ಸಂಸ್ಕಾರವುಳ್ಳ ಜೀವಜಂತು ಮನುಷ್ಯ. ಆದರೆ ಮನುಷ್ಯನೇ ಈ ಸಮಯ ನನಗೊದಗಿ ಬರುತ್ತಿದ್ದರೂ ಈ ತೆರನಾದ ಚಾಕರಿ, ಸಮರ್ಪಣೆ ಖಂಡಿತಾ ಮಾಡುತ್ತಿರಲಿಲ್ಲ ಎಂಬ ಸತ್ಯ ಕಣ್ಮುಂದೆ ಮಿಂಚಿ ಹೋದಾಗ ಮನ ಕರಗಿತು. ಕೂಡಲೆ ಲುಬ್ಧಕನು (ಬೇಟೆಗಾರ) “ಹೇ ಪಾರಿವಾಳವೇ ತುಸು ಸೈರಿಸು. ನಿನ್ನ ಮಾಂಸ ಸುಟ್ಟು ತಿಂದರೆ ನನಗೆ ಈ ಜನ್ಮದಲ್ಲಿ ಬಿಡು, ಸತ್ತು ಆ ಲೋಕ ಸೇರಿದರೂ ಸದ್ಗತಿ ಪ್ರಾಪ್ತವಾಗದು. ನಿಮ್ಮ ಧರ್ಮಪೂರಿತವಾದ ನಡೆಯನ್ನು ಕಂಡು ನನ್ನ ಮನ, ಹೊಟ್ಟೆ ಎಲ್ಲವೂ ತುಂಬಿ ಹೋಗಿದೆ. ಮಾತ್ರವಲ್ಲ […] - [ಕಾರ್ಕಳ ಪುರಸಭಾ ಮಾಹಿತಿ ಹಕ್ಕು ಅಧಿಕಾರಿ ವಿರುದ್ಧ ಮಾಜಿ ಸದಸ್ಯನಿಂದ ಪ್ರತಿಭಟನೆ](https://news.nammakarla.in/%e0%b2%95%e0%b2%be%e0%b2%b0%e0%b3%8d%e0%b2%95%e0%b2%b3-%e0%b2%aa%e0%b3%81%e0%b2%b0%e0%b2%b8%e0%b2%ad%e0%b2%be-%e0%b2%ae%e0%b2%be%e0%b2%b9%e0%b2%bf%e0%b2%a4%e0%b2%bf-%e0%b2%b9%e0%b2%95%e0%b3%8d/): ಕಾರ್ಕಳ : ಕಾರ್ಕಳ ಪುರಸಭೆಯಲ್ಲಿ ಮಾಹಿತಿ ಹಕ್ಕು ಅಧಿಕಾರಿ ತಾನು ಕೇಳಿದ ದಾಖಲೆಗಳನ್ನು ನೀಡದೆ ಸತಾಯಿಸುತ್ತಿದ್ದಾರೆ ಮಾಹಿತಿ ಕೇಳಿದರೆ ಪೂರ್ಣ ಮಾಹಿತಿ ನೀಡದೆ ತಾವೇ ಮೇಲ್ಮಮನವಿ ಸಲ್ಲಿಸಿ ಉಡಾಪೆ ಉತ್ತರ ನೀಡುತ್ತಾರೆ ಎಂದು ಆರೋಪಿಸಿ ಮಾಹಿತಿ ಹಕ್ಕು ಅಧಿಕಾರಿ ವಿರುದ್ಧ ಮಾಜಿ ಸದಸ್ಯ ಸುನೀಲ್ ಕೋಟ್ಯಾನ್ ಪುರಸಭೆ ಕಛೇರಿಯೊಳಗೆ ಮಾಹಿತಿ ಹಕ್ಕು ಅಧಿಕಾರಿ ಟೇಬಲ್ ಮುಂಭಾಗದಲ್ಲಿ ಪ್ರತಿಭಟನೆ ಕುಳಿತ ಘಟನೆ ನಡೆದಿದೆ.ಕಾರ್ಕಳ ಪುರಸಭಾ ವ್ಯಾಪ್ತಿಯ ಕುಂಟಲ್ಪಾಡಿ ಅಂಬಾಭವಾನಿ ದೇವಸ್ಥಾನ ರಸ್ತೆಗೆ ಪುರಸಭಾ ವತಿಯಿಂದ 2011 – 2012 ಸಾಲಿನಲ್ಲಿ ಡಾಮಾರೀಕಣ ನಡೆಸಲಾಗಿತ್ತು ತದನಂತರ ಪುನಃ ಅದೇ ರಸ್ತೆಗೆ ಮರು ಡಾಮಾರಿಕರಣ ನಡೆಸಲಾಗಿದೆ ಆದರೆ ಈ ರಸ್ತೆಯನ್ನು ಹಾಗೂ ದೇವಸ್ಥಾನಕ್ಕೆ ಹೋಗುವ ರಸ್ತೆಯನ್ನು ಉದ್ಯಮಿಯೊಬ್ಬರು ಲೇಔಟ್ ಮಾಡಿ ಮುಚ್ಚಿ ಹಾಕಿದ್ದಾರೆ ಅಧಿಕಾರಿಗಳು ಉದ್ಯಮಿಗಳಿಗೆ ಸಹಕಾರ ನೀಡುತ್ತಿದ್ದು ಪುರಸಭೆ ಅಧಿಕಾರಿಗಳು ರಸ್ತೆ ಕೆಲಸನೇ ಮಾಡಿಸಿಲ್ಲ ಎಂದು ಹೇಳುತ್ತಿದ್ದು ಮಾಹಿತಿ ನೀಡುತ್ತಿಲ್ಲ ಕೇಳಿದರೆ ಮೆಲ್ಮನವಿ ಸಲ್ಲಿಸಿ ಎಂದು ಮಾಹಿತಿ ಹಕ್ಕು ಅಧಿಕಾರಿಗಳು ಉಡಾಫೆ ಉತ್ತರ ನೀಡುತ್ತಾರೆ […] - [ದ್ವಿತೀಯ ಪಿಯುಸಿ ಫಲಿತಾಂಶ,ರಾಜ್ಯಕ್ಕೆ ಪ್ರಥಮ ದ್ವಿತೀಯ ಸ್ಥಾನಿಯಾದ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ](https://news.nammakarla.in/%e0%b2%a6%e0%b3%8d%e0%b2%b5%e0%b2%bf%e0%b2%a4%e0%b3%80%e0%b2%af-%e0%b2%aa%e0%b2%bf%e0%b2%af%e0%b3%81%e0%b2%b8%e0%b2%bf-%e0%b2%ab%e0%b2%b2%e0%b2%bf%e0%b2%a4%e0%b2%be%e0%b2%82%e0%b2%b6%e0%b2%b0-2/): ಉದಯ ಶೆಟ್ಟಿ ಮುನಿಯಾಲು, ಅವರಿಂದ ಅಭಿನಂದನೆ ಉಡುಪಿ: ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ ಉಡುಪಿ ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನ ಗಳಿಸಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ, ಅದೇ ರೀತಿ ದಕ್ಷಿಣ ಕನ್ನಡ ಜಿಲ್ಲೆಯು ದ್ವಿತೀಯ ಸ್ಥಾನಿಯಾಗಿದೆ. ಈ ಸಾಧನೆಗೆ ಉಭಯ ಜಿಲ್ಲೆಯ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರ ಪರಿಶ್ರಮವೇ ಮುಖ್ಯ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಉದಯ ಶೆಟ್ಟಿ ಮುನಿಯಾಲು ಅವರು ಸಲ್ಲಿಸಿದ್ದಾರೆ. ಈ ಸಾಧನೆ ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಮಟ್ಟದ ಸಾಧನೆಗಳಿಗೆ ಪ್ರೇರಣೆಯಾಗಲಿ ಎಂದು ಅವರು ಆಶಿಸಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲೆಯು ಸದಾ ಮುಂಚೂಣಿಯಲ್ಲಿದ್ದು, ಈ ಫಲಿತಾಂಶವು ಉಭಯ ಜಿಲ್ಲೆಗಳ ಶೈಕ್ಷಣಿಕ ಗುಣಮಟ್ಟವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ವಿದ್ಯಾರ್ಥಿಗಳ ಶ್ರಮ, ಶಿಕ್ಷಕರ ಮತ್ತು ಶಿಕ್ಷಣ ಸಂಸ್ಥೆಗಳ ಮಾರ್ಗದರ್ಶನ ಹಾಗೂ ಪೋಷಕರ ಬೆಂಬಲದಿಂದ ಇಂತಹ ಯಶಸ್ಸು ಸಾಧ್ಯವಾಗಿದೆ ಎಂದು ಅವರು ಹೇಳಿದರು. ಭವಿಷ್ಯದಲ್ಲಿಯೂ ಇದೇ ರೀತಿಯ ಸಾಧನೆಗಳು […] - [ಸರ್ಕಾರಿ ಆಸ್ಪತ್ರೆಗಳಲ್ಲಿ ರೂಟ್ ಕೆನಾಲ್ ಚಿಕಿತ್ಸೆ ಸೇರಿಕೆ; ಬಡವರಿಗೆ ಸೌಲಭ್ಯ ಹೆಚ್ಚಳ](https://news.nammakarla.in/%e0%b2%b8%e0%b2%b0%e0%b3%8d%e0%b2%95%e0%b2%be%e0%b2%b0%e0%b2%bf-%e0%b2%86%e0%b2%b8%e0%b3%8d%e0%b2%aa%e0%b2%a4%e0%b3%8d%e0%b2%b0%e0%b3%86%e0%b2%97%e0%b2%b3%e0%b2%b2%e0%b3%8d%e0%b2%b2%e0%b2%bf-%e0%b2%b0/): ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ದಂತ ಚಿಕಿತ್ಸೆ ಸೇವೆಯನ್ನು ವಿಸ್ತರಿಸುವ ಉದ್ದೇಶದಿಂದ ‘ಆಯುಷ್ಮಾನ್ ಭಾರತ್–ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ’ ಹಾಗೂ ‘ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ’ ಯೋಜನೆಗಳಡಿ ರೂಟ್ ಕೆನಾಲ್ ಚಿಕಿತ್ಸೆಯನ್ನು ಸೇರಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹಲ್ಲಿನ ಸೋಂಕು ಮತ್ತು ಉರಿಯೂತಕ್ಕೆ ಪರಿಣಾಮಕಾರಿ ಚಿಕಿತ್ಸೆ ಆಗಿರುವ ಆರ್‌ಸಿಟಿ ವೆಚ್ಚ ಹೆಚ್ಚು ಇರುವುದರಿಂದ ಹಲವರು ಹಲ್ಲು ತೆಗೆಸಿಕೊಳ್ಳುವುದನ್ನೇ ಆಯ್ಕೆ ಮಾಡುತ್ತಿದ್ದರು. ಇದೀಗ ಯೋಜನೆಗೆ ಸೇರ್ಪಡೆಯಿಂದ ಬಡವರಿಗೆ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ಲಭ್ಯವಾಗಲಿದೆ. ಮುಂಭಾಗ ಹಾಗೂ ಹಿಂಭಾಗದ ಹಲ್ಲುಗಳಿಗೆ ಈ ಚಿಕಿತ್ಸೆಯನ್ನು ‘ಸಂಕೀರ್ಣ ದ್ವಿತೀಯ ಕಾರ್ಯವಿಧಾನ’ವಾಗಿ ವರ್ಗೀಕರಿಸಿದ್ದು, ಪ್ಯಾಕೇಜ್ ದರವನ್ನು ಕ್ರಮವಾಗಿ ₹1,360 ಮತ್ತು ₹2,040 ಎಂದು ನಿಗದಿ ಮಾಡಲಾಗಿದೆ. ಯೋಜನೆ ಜಾರಿಗೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ಗೆ ಜವಾಬ್ದಾರಿ ನೀಡಲಾಗಿದೆ. - [ಕ್ರೈಸ್ಟ್ ಕಿಂಗ್ : ದ್ವಿತೀಯ ಪಿಯುಸಿಯಲ್ಲಿ ಶೇ. 100 ಫಲಿತಾಂಶದೊಂದಿಗೆ,ರಾಜ್ಯದ ಅಗ್ರ ಹತ್ತರೊಳಗೆ 12 ವಿದ್ಯಾರ್ಥಿಗಳಿಗೆ ಸ್ಥಾನ](https://news.nammakarla.in/%e0%b2%95%e0%b3%8d%e0%b2%b0%e0%b3%88%e0%b2%b8%e0%b3%8d%e0%b2%9f%e0%b3%8d-%e0%b2%95%e0%b2%bf%e0%b2%82%e0%b2%97%e0%b3%8d-%e0%b2%a6%e0%b3%8d%e0%b2%b5%e0%b2%bf%e0%b2%a4%e0%b3%80%e0%b2%af-%e0%b2%aa-3/): ಕಾರ್ಕಳ: ಈ ಬಾರಿಯ ದ್ವಿತೀಯ ಪಿಯುಸಿ ವಾರ್ಷಿಕ ಫಲಿತಾಂಶ ಪ್ರಕಟಗೊಂಡಿದ್ದು ಕಾರ್ಕಳದ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಯಾದ ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜು ದಾಖಲಾತಿಗೆ ಅಂಕಗಳ ಮಿತಿ ಇಲ್ಲದೆಯೂ ಮತ್ತೊಮ್ಮೆ ನೂರು ಶೇಖಡಾ ಫಲಿತಾಂಶದೊಂದಿಗೆ ಅಭೂತಪೂರ್ವ ಸಾಧನೆಯನ್ನು ಮಾಡಿದೆ. ರಾಜ್ಯಮಟ್ಟದಲ್ಲಿ ಅಗ್ರ ಹತ್ತರೊಳಗೆ 12 ವಿದ್ಯಾರ್ಥಿಗಳು ಸ್ಥಾನ ಪಡೆದುಕೊಳ್ಳುವುದರ ಮೂಲಕ ಸಂಸ್ಥೆಯು ಅತ್ಯುತ್ತಮ ಫಲಿತಾಂಶ ದಾಖಲಿಸಿದೆ. ವಾಣಿಜ್ಯ ವಿಭಾಗದ ಪ್ರಜ್ವಲ್ ಶೆಟ್ಟಿ ಹಾಗೂ ಶ್ರೀಮಾ ದೇವಾಡಿಗ 596 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ರಾಜ್ಯಕ್ಕೆ ನಾಲ್ಕನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ. ಜೊತೆಗೆ ಮದಿಹಾ ಫಾತಿಮಾ 594, ಜಿತೇಶ್ ಪಿಂಟೊ 593, ಮಹಿಪಾಲ್ ಸಿಂಗ್ 589 ಹಾಗೂ ಮನೋಜ್ ಪೈ 589 ಅಂಕಗಳನ್ನು ಪಡೆದುಕೊಂಡು ರಾಜ್ಯದ ಅಗ್ರ ಹತ್ತರಲ್ಲಿ ಸ್ಥಾನ ಪಡೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಸ್ಮೃತಿ ಮರಾಠೆ 592 ಅಂಕಗಳನ್ನು ಪಡೆದುಕೊಂಡಿದ್ದಾರೆ. ಸಿಯಾ ವೆನಿಶಾ ಡಿ’ಸೋಜ 591, , ವಿಜೇತ್ ಆರ್ ಶೆಟ್ಟಿಗಾರ್ 591, ಮೊಹಮ್ಮದ್ ಮಾಶಿದ್590, ರೋಶನ್ ಥೋರಸ್ 590 ಹಾಗೂ ಅಪೇಕ್ಷಾ ಜೈನ್ 589 […] - [ಚಂದ್ರದ್ರೋಣ ಪರ್ವತ ಶ್ರೇಣಿಯ ಮಾಣಿಕ್ಯಧಾರಾ ಜಲಪಾತದ ಬಳಿ ನಾಪತ್ತೆಯಾಗಿದ್ದ ಬಾಲಕಿ ಶವ ಪತ್ತೆ](https://news.nammakarla.in/%e0%b2%9a%e0%b2%82%e0%b2%a6%e0%b3%8d%e0%b2%b0%e0%b2%a6%e0%b3%8d%e0%b2%b0%e0%b3%8b%e0%b2%a3-%e0%b2%aa%e0%b2%b0%e0%b3%8d%e0%b2%b5%e0%b2%a4-%e0%b2%b6%e0%b3%8d%e0%b2%b0%e0%b3%87%e0%b2%a3%e0%b2%bf%e0%b2%af/): ಚಿಕ್ಕಮಗಳೂರು: ಚಂದ್ರದ್ರೋಣ ಪರ್ವತ ಶ್ರೇಣಿಯ ಮಾಣಿಕ್ಯಧಾರಾ ಜಲಪಾತದ ಬಳಿ ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದ ಕೇರಳ ಮೂಲದ 14 ವರ್ಷದ ಬಾಲಕಿ ಶ್ರೀನಂದಾ ಅವರ ಮೃತದೇಹ ಇಂದು ಪತ್ತೆಯಾಗಿದೆ. ಸುಮಾರು 2 ಸಾವಿರ ಅಡಿ ಆಳದ ಕಂದಕದಲ್ಲಿ ಶವ ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಏಪ್ರಿಲ್ 7ರಂದು ಪ್ರವಾಸಿ ತಂಡದೊಂದಿಗೆ ಚಿಕ್ಕಮಗಳೂರಿಗೆ ಬಂದಿದ್ದ ಬಾಲಕಿ, ಇನಾಮು ದತ್ತಾತ್ರೇಯ ಪೀಠ ಮತ್ತು ಮಾಣಿಕ್ಯಧಾರಾ ಪ್ರದೇಶಕ್ಕೆ ಭೇಟಿ ನೀಡಿದ ವೇಳೆ ನಾಪತ್ತೆಯಾಗಿದ್ದರು. ಬಳಿಕ ಎಸ್‌ಡಿಆರ್‌ಎಫ್, ಅಗ್ನಿಶಾಮಕ ದಳ, ಪೊಲೀಸ್ ಹಾಗೂ ಎಎನ್ಎಫ್ ತಂಡಗಳು ಡ್ರೋನ್ ಮತ್ತು ಥರ್ಮಲ್ ಕ್ಯಾಮೆರಾ ಸಹಾಯದಿಂದ ಶೋಧ ಕಾರ್ಯ ನಡೆಸಿದ್ದವು. ಮೂರು ದಿನಗಳ ತೀವ್ರ ಶೋಧದ ನಂತರ ಇಂದು ಮೃತದೇಹ ಪತ್ತೆಯಾಗಿದ್ದು, ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ಸಾಧ್ಯತೆ ಕುರಿತು ಅನುಮಾನ ವ್ಯಕ್ತವಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. - [ದ್ವಿತೀಯ ಪಿಯುಸಿ ಫಲಿತಾಂಶ ಜ್ಞಾನಸುಧಾದ 49 ವಿದ್ಯಾರ್ಥಿಗಳಿಗೆ 590ಕ್ಕಿಂತ ಅಧಿಕ ಅಂಕ](https://news.nammakarla.in/%e0%b2%a6%e0%b3%8d%e0%b2%b5%e0%b2%bf%e0%b2%a4%e0%b3%80%e0%b2%af-%e0%b2%aa%e0%b2%bf%e0%b2%af%e0%b3%81%e0%b2%b8%e0%b2%bf-%e0%b2%ab%e0%b2%b2%e0%b2%bf%e0%b2%a4%e0%b2%be%e0%b2%82%e0%b2%b6-590-%e0%b2%85/): 🔴ವಿಜ್ಞಾನ ವಿಭಾಗದಲ್ಲಿ ಮೂವರು ತಲಾ 597 ಅಂಕದೊಂದಿಗೆ “ರಾಜ್ಯಕ್ಕೆ ತೃತೀಯ ಸ್ಥಾನ” 🔴ಜ್ಞಾನಸುಧಾದ ಮೂರು ಸಂಸ್ಥೆಗಳಲ್ಲೂ, ಶೇ.100 ಫಲಿತಾಂಶ 966 ವಿದ್ಯಾರ್ಥಿಗಳಲ್ಲಿ 888 ವಿದ್ಯಾರ್ಥಿಗಳಿಗೆ ವಿಶಿಷ್ಟ ಶ್ರೇಣಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ನಡೆಸಿದ 2026ರ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶದಲ್ಲಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ 49 ವಿದ್ಯಾರ್ಥಿಗಳು ಮೊದಲ ಹತ್ತು ರ‍್ಯಾಂಕ್ ಗಳಿಸಿದ್ದು, ಕಾರ್ಕಳ ಜ್ಞಾನಸುಧಾದ ವಿಜ್ಞಾನ ವಿಭಾಗದ ಚೈತ್ರಿಕಾ ಚೌದರಿ, ವೈಷ್ಣವಿ ಕುಲಕರ್ಣಿ ಹಾಗೂ ಉಡುಪಿ ಜ್ಞಾನಸುಧಾದ ಆರ್ನವಿ ತಲಾ 597 ಅಂಕ ಪಡೆದು ರಾಜ್ಯಕ್ಕೆ 3ನೇ ಸ್ಥಾನದೊಂದಿಗೆ ಉಡುಪಿ ಜಿಲ್ಲೆಗೆ ದ್ವಿತೀಯ ಸ್ಥಾನಿಗಳಾಗಿ ಹಾಗೂ ವಾಣಿಜ್ಯ ವಿಭಾಗದಲ್ಲಿ ಸಾನ್ವಿ ದಿನೇಶ್ 595 ಅಂಕ ಪಡೆದು ರಾಜ್ಯಕ್ಕೆ 6ನೇ ಸ್ಥಾನವನ್ನು ಪಡೆದಿರುತ್ತಾರೆ. ಕಾರ್ಕಳ ಜ್ಞಾನಸುಧಾ, ಉಡುಪಿ ಜ್ಞಾನಸುಧಾ ಹಾಗೂ ಮಣಿಪಾಲ ಜ್ಞಾನಸುಧಾವು ಶೇ.100 ಫಲಿತಾಂಶವನ್ನು ಪಡೆದಿದ್ದು, ಒಟ್ಟು 966 ವಿದ್ಯಾರ್ಥಿಗಳಲ್ಲಿ 888 (91.93%) ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಫಲಿತಾಂಶವನ್ನು ದಾಖಲಿಸಿಕೊಂಡಿದ್ದಾರೆ. ವಿಜ್ಞಾನ ವಿಭಾಗ […] - [ದ್ವಿತೀಯ ಪಿಯುಸಿ ಫಲಿತಾಂಶ, 590 ಅಂಕಗಳ ಮೇಲೆ ಜ್ಞಾನಸುಧಾದ 49 ವಿದ್ಯಾರ್ಥಿಗಳು,](https://news.nammakarla.in/%e0%b2%a6%e0%b3%8d%e0%b2%b5%e0%b2%bf%e0%b2%a4%e0%b3%80%e0%b2%af-%e0%b2%aa%e0%b2%bf%e0%b2%af%e0%b3%81%e0%b2%b8%e0%b2%bf-%e0%b2%ab%e0%b2%b2%e0%b2%bf%e0%b2%a4%e0%b2%be%e0%b2%82%e0%b2%b6%e0%b2%b0/): ವಿಜ್ಞಾನ ವಿಭಾಗದಲ್ಲಿ ಮೂವರು ತಲಾ 597 ಅಂಕದೊಂದಿಗೆ “ರಾಜ್ಯಕ್ಕೆ ತೃತೀಯ ಸ್ಥಾನ” ಜ್ಞಾನಸುಧಾದ ಮೂರು ಸಂಸ್ಥೆಗಳಲ್ಲೂ, ಶೇ.100 ಫಲಿತಾಂಶ, 966 ವಿದ್ಯಾರ್ಥಿಗಳಲ್ಲಿ 888 ವಿದ್ಯಾರ್ಥಿಗಳಿಗೆ ವಿಶಿಷ್ಟ ಶ್ರೇಣಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯಮಂಡಳಿ ನಡೆಸಿದ 2026ರ ಸಾಲಿನ ದ್ವಿತೀಯ ಪಿಯುಸಿಪರೀಕ್ಷೆ-1ರ ಫಲಿತಾಂಶದಲ್ಲಿ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ 49 ವಿದ್ಯಾರ್ಥಿಗಳು ಮೊದಲ ಹತ್ತು ರ‍್ಯಾಂಕ್ ಗಳಿಸಿದ್ದು, ಕಾರ್ಕಳ ಜ್ಞಾನಸುಧಾದ ವಿಜ್ಞಾನವಿಭಾಗದ ಚೈತ್ರಿಕಾ ಚೌದರಿ, ವೈಷ್ಣವಿ ಕುಲಕರ್ಣಿಹಾಗೂ ಉಡುಪಿ ಜ್ಞಾನಸುಧಾದ ಆರ್ನವಿ ತಲಾ 597 ಅಂಕಪಡೆದು ರಾಜ್ಯಕ್ಕೆ 3ನೇ ಸ್ಥಾನದೊಂದಿಗೆ ಉಡುಪಿ ಜಿಲ್ಲೆಗೆದ್ವಿತೀಯ ಸ್ಥಾನಿಗಳಾಗಿ ಹಾಗೂ ವಾಣಿಜ್ಯ ವಿಭಾಗದಲ್ಲಿ ಸಾನ್ವಿದಿನೇಶ್ 595 ಅಂಕ ಪಡೆದು ರಾಜ್ಯಕ್ಕೆ 6ನೇ ಸ್ಥಾನವನ್ನುಪಡೆದಿರುತ್ತಾರೆ. ಕಾರ್ಕಳ ಜ್ಞಾನಸುಧಾ, ಉಡುಪಿಜ್ಞಾನಸುಧಾ ಹಾಗೂ ಮಣಿಪಾಲ ಜ್ಞಾನಸುಧಾವುಶೇ.100 ಫಲಿತಾಂಶವನ್ನು ಪಡೆದಿದ್ದು, ಒಟ್ಟು 966ವಿದ್ಯಾರ್ಥಿಗಳಲ್ಲಿ 888 (91.93%) ವಿದ್ಯಾರ್ಥಿಗಳು ವಿಶಿಷ್ಟಶ್ರೇಣಿಯಲ್ಲಿ ಫಲಿತಾಂಶವನ್ನು ದಾಖಲಿಸಿಕೊಂಡಿದ್ದಾರೆ. ವಿಜ್ಞಾನ ವಿಭಾಗ ಈ ಎಲ್ಲಾ ವಿದ್ಯಾರ್ಥಿಗಳ ಸಾಧನೆಗೆ ಅಜೆಕಾರ್ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷರಾದಡಾ.ಸುಧಾಕರ್ ಶೆಟ್ಟಿಯವರು ಅಭಿನಂದಿಸಿದ್ದಾರೆ. - [ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬೋಳ, ಪಿಲಿಯೂರು ಅಷ್ಟಬಂಧ ಪ್ರತಿಷ್ಠಾ ಪುರಸ್ಸರ ಬ್ರಹ್ಮಕಲಶೋತ್ಸವಕ್ಕೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಭೇಟಿ](https://news.nammakarla.in/%e0%b2%b6%e0%b3%8d%e0%b2%b0%e0%b3%80-%e0%b2%ae%e0%b2%b9%e0%b2%be%e0%b2%b2%e0%b2%bf%e0%b2%82%e0%b2%97%e0%b3%87%e0%b2%b6%e0%b3%8d%e0%b2%b5%e0%b2%b0-%e0%b2%a6%e0%b3%87%e0%b2%b5%e0%b2%b8%e0%b3%8d-5/): ಬೋಳ ಪಿಲಿಯೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ಅಷ್ಟಬಂಧ ಪ್ರತಿಷ್ಠಾ ಪುರಸ್ಸರ ಬ್ರಹ್ಮಕಲಶೋತ್ಸವದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್ ರವರು ಭಾಗವಹಿಸಿ ದೇವರ ದರ್ಶನ ಪಡೆದು ಅನುಗ್ರಹ ಪ್ರಸಾದವನ್ನು ಸ್ವೀಕರಿಸಿದರು - [ಕೇಂದ್ರ ಸರಕಾರದ ಕಠಿಣ ಆರ್ಥಿಕ ನೀತಿಗಳೇ,ಬಡ ಜನರನ್ನು ಸರ್ಕಾರಿ ಯೋಜನೆಗಳಿಂದ ವಂಚಿತರನ್ನಾಗಿಸಿದೆ: ಅಜಿತ್ ಹೆಗ್ಡೆ,ಮಾಳ](https://news.nammakarla.in/%e0%b2%95%e0%b3%87%e0%b2%82%e0%b2%a6%e0%b3%8d%e0%b2%b0-%e0%b2%b8%e0%b2%b0%e0%b2%95%e0%b2%be%e0%b2%b0%e0%b2%a6-%e0%b2%95%e0%b2%a0%e0%b2%bf%e0%b2%a3-%e0%b2%86%e0%b2%b0%e0%b3%8d%e0%b2%a5%e0%b2%bf/): ಬಜೆಟ್ ಅಧಿವೇಶನದ ಸಂದರ್ಭದಲ್ಲಿ ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರು ಅಧಿವೇಶನದಲ್ಲಿ ಮಾತನಾಡುತ್ತಾ ಗ್ಯಾರಂಟಿ ಯೋಜನೆಗಳನ್ನು ನೀಡುವುದರಿಂದ ಸರ್ಕಾರ ದಿವಾಳಿಯಾಗುತ್ತದೆ ಸಬ್ಸಿಡಿ ಸಂಸ್ಕೃತಿಯನ್ನು ನಿಲ್ಲಿಸಿ ಎಂದು ರಾಜ್ಯ ಸರ್ಕಾರದ ಗ್ಯಾರೆಂಟಿ ಯೋಜನೆಗಳ ಬಗ್ಗೆ ತಮಗಿರುವ ಅಸಮಾಧಾನವನ್ನು ಸದನದಲ್ಲಿಯೇ ಬಹಿರಂಗವಾಗಿ ತೋರ್ಪಡಿಸಿದ್ದಾರೆ. ಈಗ ಕಾರ್ಕಳ ಬಿಜೆಪಿ ಅಧ್ಯಕ್ಷರು ಕೂಡ ಗ್ಯಾರಂಟಿ ಯೋಜನೆಗಳಿಂದ ಸರ್ಕಾರ ದಿವಾಳಿಯಾಗಿದೆ ಎನ್ನುವ ಅದೇ ಶಾಸಕರ ಮಾತನ್ನೇ ಪರೋಕ್ಷವಾಗಿ ಪುನರುಚ್ಚರಿಸಿದ್ದಾರೆ, ರಾಜ್ಯ ಸರ್ಕಾರವು ಬಡವರಿಗೆ ನೀಡುವ ಗ್ಯಾರಂಟಿ ಯೋಜನೆಗಳ ಮೇಲೆ ಕಾರ್ಕಳ ಶಾಸಕರು ಮತ್ತು ಬಿಜೆಪಿ ಅಧ್ಯಕ್ಷರಿಗೆ ಯಾಕೆ ಇಷ್ಟು ಹೊಟ್ಟೆ ಉರಿ..? ಅವಕಾಶ ಸಿಕ್ಕಾಗಲೆಲ್ಲ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ವಿರುದ್ಧ ಇವರು ಜನರಿಗೆ ತಪ್ಪು ಮಾಹಿತಿ ನೀಡುತ್ತಾ ಟೀಕಿಸುವುದರ ಹಿಂದೆ ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸಲು ಮಾಡುವ ಹುನ್ನಾರ ಅಡಗಿದೆ. ಕೇಂದ್ರ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜನರು ತಮ್ಮ ಮಕ್ಕಳ ಶಿಕ್ಷಣಕ್ಕೆ ಮನೆ ನಿರ್ಮಾಣಕ್ಕೆ, ವ್ಯಾಪಾರ ವಹಿವಾಟುವಿಗೆ ಬ್ಯಾಂಕುಗಳಲ್ಲಿ ಸಾಲವನ್ನು ಪಡೆಯುತ್ತಿದ್ದರು, ಜನರ ಈ ಎಲ್ಲಾ ವ್ಯವಹಾರಗಳಿಗೆ ಯಾವುದೇ […] - [ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ](https://news.nammakarla.in/%e0%b2%a6%e0%b3%8d%e0%b2%b5%e0%b2%bf%e0%b2%a4%e0%b3%80%e0%b2%af-%e0%b2%aa%e0%b2%bf%e0%b2%af%e0%b3%81%e0%b2%b8%e0%b2%bf-%e0%b2%aa%e0%b2%b0%e0%b3%80%e0%b2%95%e0%b3%8d%e0%b2%b7%e0%b3%86-%e0%b2%ab/): ಅನುತ್ತೀರ್ಣರಿಗೆ ಪರೀಕ್ಷೆ-2 ಅವಕಾಶ, ಪರೀಕ್ಷೆ -3 ರದ್ದು ಬೆಂಗಳೂರು: 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ–1ರ ಫಲಿತಾಂಶ ಪ್ರಕಟವಾದ ಬಳಿಕ, ಮುಂದಿನ ಪರೀಕ್ಷೆಗಳ ವೇಳಾಪಟ್ಟಿ ಹಾಗೂ ಮೌಲ್ಯಮಾಪನ ಪ್ರಕ್ರಿಯೆಗಳ ಕುರಿತು ಶಿಕ್ಷಣ ಇಲಾಖೆ ಪ್ರಮುಖ ಮಾಹಿತಿ ನೀಡಿದೆ. ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮತ್ತೆ ಪರೀಕ್ಷೆ ಬರೆಯುವ ಅವಕಾಶವಿದೆ ಎಂದು ತಿಳಿಸಿದೆ. ದ್ವಿತೀಯ ಪಿಯುಸಿ ಪರೀಕ್ಷೆ–2 ಏಪ್ರಿಲ್ 30ರಿಂದ ಆರಂಭವಾಗಿ ಮೇ 13ರವರೆಗೆ ನಡೆಯಲಿದೆ. ಈ ಬಾರಿ ಮೂರನೇ ಪರೀಕ್ಷೆಯನ್ನು ನಡೆಸುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಮುಂದಿನ ವರ್ಷದಿಂದ ಕೇವಲ ಎರಡು ಪರೀಕ್ಷೆಗಳ ವ್ಯವಸ್ಥೆ ಜಾರಿಗೆ ತರಲು ಯೋಚನೆ ನಡೆಸಲಾಗುತ್ತಿದೆ. ಉತ್ತರ ಪತ್ರಿಕೆಯ ಛಾಯ ಪ್ರತಿಗಾಗಿ ವಿದ್ಯಾರ್ಥಿಗಳು ಏಪ್ರಿಲ್ 10ರಿಂದ 15ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಪ್ರತಿ ವಿಷಯಕ್ಕೆ ₹530 ಶುಲ್ಕ ನಿಗದಿಯಾಗಿದೆ. ಮರುಮೌಲ್ಯಮಾಪನ ಮತ್ತು ಮರುಎಣಿಕೆಗಾಗಿ ಏಪ್ರಿಲ್ 13ರಿಂದ 19ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಮರುಮೌಲ್ಯಮಾಪನಕ್ಕೆ ₹1670 ಶುಲ್ಕ ವಿಧಿಸಲಾಗಿದೆ. ವಿದ್ಯಾರ್ಥಿಗಳು ಈ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ತಮ್ಮ ಅಂಕಗಳನ್ನು ಸುಧಾರಿಸಿಕೊಳ್ಳುವಂತೆ ಶಿಕ್ಷಣ […] - [ಮಹಾಭಾರತ](https://news.nammakarla.in/%e0%b2%ae%e0%b2%b9%e0%b2%be%e0%b2%ad%e0%b2%be%e0%b2%b0%e0%b2%a4-484/): ಭಾಗ – 484 ಭರತೇಶ್ ಶೆಟ್ಟಿ ,ಎಕ್ಕಾರು ಅತ್ತ ಗೂಡಿನಲ್ಲಿ ತಂದೆ ಪಾರಿವಾಳ ತನ್ನ ಮರಿಹಕ್ಕಿಗಳ ಜೊತೆಗಿದ್ದು, ತನ್ನ ಪತ್ನಿ ಪಾರಿವಾಳಕ್ಕೆ ಎಲ್ಲಿ ಏನು ಅಪಾಯವಾಗಿದೆಯೊ ಎಂಬಂತೆ ಕಣ್ಣೀರು ಸುರಿಸುತ್ತಾ, ಮರಿಗಳೊಂದಿಗೆ “ಕಂದಮ್ಮಗಳಿರಾ! ನಿಮ್ಮ ತಾಯಿ, ನನ್ನ ಪ್ರಿಯ ಪತ್ನಿ ಎಲ್ಲಿ ಏನು ಅಪಾಯಕ್ಕೆ ತುತ್ತಾಗಿದ್ದಾಳೋ! ದೇವರು ಕರುಣೆದೋರಿ ಒದಗಿರಬಹುದಾದ ಅಪಾಯದಿಂದ ಪಾರು ಮಾಡು” ಎಂದು ರೋದಿಸುತ್ತಾ ಅಳತೊಡಗಿತು. ಚೀಲದೊಳಗೆ ಬಂಧಿಯಾಗಿದ್ದ ತಾಯಿ ಪಾರಿವಾಳಕ್ಕೆ ಆ ಪ್ರಶಾಂತ ರಾತ್ರಿಯಲ್ಲಿ ತನ್ನ ಗಂಡ ಅಳುತ್ತಿರುವ ಆರ್ತ ಸ್ವರ ಕೇಳಿಸಿತು. ಆಗ ತಾನೆಲ್ಲಿದ್ದೇನೆ ಎಂದು ಅರಿತ ತಾಯಿ ಪಾರಿವಾಳ ಗಮನವಿಟ್ಟು ಹೊರಗಿನ ವಾತಾವರಣದ ಸ್ಥಿತಿಗತಿಗಳನ್ನು ಅವಲೋಕಿಸತೊಡಗಿತು. ಏಕಾಗ್ರತೆಯಿಂದ ಆಲಿಸುವಾಗ ಬೇಟೆಗಾರ ಚಳಿಯಿಂದ ನಡುಗುತ್ತಾ ಕಂಪಿಸುತ್ತಿರುವ ಉಸಿರು ಮತ್ತು ಸ್ವರ ಕೇಳತೊಡಗಿತು. ಅಷ್ಟರಿಂದಲೆ ಆ ತಾಯಿ ಪಾರಿವಾಳಕ್ಕೆ ಆತನ ಪರಿಸ್ಥಿತಿ ಅರ್ಥವಾಯಿತು. ತನ್ನ ಗಂಡನನ್ನು ಚೀಲದೊಳಗೆ ತಾನು ಬಂಧಿಯಾಗಿರುವ ಸ್ಥಿತಿಯಲ್ಲಿ ಕೂಗಿ ಕರೆಯಿತು “ಪುರುಷನಾಗಿ ನೀನು ಅಳುತ್ತಿರುವೆ. ನಿನ್ನ ಪತ್ನಿ, ಎಳೆ ಮಕ್ಕಳ ತಾಯಿಯೂ ಆದ, […] - [ಕೆ.ಎಂ.ಇ.ಎಸ್ ಪದವಿ ಪೂರ್ವ ಕಾಲೇಜಿಗೆ ಶೇಖಡಾ 98% ಫಲಿತಾಂಶ.](https://news.nammakarla.in/%e0%b2%95%e0%b3%86-%e0%b2%8e%e0%b2%82-%e0%b2%87-%e0%b2%8e%e0%b2%b8%e0%b3%8d-%e0%b2%aa%e0%b2%a6%e0%b2%b5%e0%b2%bf-%e0%b2%aa%e0%b3%82%e0%b2%b0%e0%b3%8d%e0%b2%b5-%e0%b2%95%e0%b2%be%e0%b2%b2%e0%b3%87/): ವಿಜ್ಞಾನ ವಿಬಾಗದಲ್ಲಿ ಶೇಖಡಾ 100% ಮತ್ತು ವಾಣಿಜ್ಯ ವಿಭಾಗದಲ್ಲಿ ಶೇಖಡಾ 98% 2025-26ನೇ ಮಾರ್ಚ್ ತಿಂಗಳಿನಲ್ಲಿ ನಡೆದ ದ್ವಿತೀಯ ಪಿಯುಸಿ ವಿಭಾಗಕ್ಕೆ ಉತ್ತಮ ಫಲಿತಾಂಶ ಲಭಿಸಿದ್ದು, ವಿಜ್ಞಾನ ವಿಭಾಗದಲ್ಲಿ 44 ವಿದ್ಯಾರ್ಥಿಗಳು ತೇರ್ಗಡೆ ಹೊಂದಿ, ಸಂಸ್ಥೆಗೆ 100% ಫಲಿತಾಂಶ ಲಭಿಸಿರುತ್ತದೆ. ವಾಣಿಜ್ಯ ವಿಭಾಗದಲ್ಲಿ 53 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 98% ಫಲಿತಾಂಶ ಬಂದಿರುತ್ತದೆ. ವಿಜ್ಞಾನ ವಿಭಾಗದ 44 ವಿದ್ಯಾರ್ಥಿಗಳಲ್ಲಿ 20 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ, ವಾಣಿಜ್ಯ ವಿಭಾಗದ 53 ವಿದ್ಯಾರ್ಥಿಗಳಲ್ಲಿ 23 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ, ಒಟ್ಟು 97 ವಿದ್ಯಾರ್ಥಿಗಳಲ್ಲಿ 43 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲಿ, 52 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿಯೂ, ಒಬ್ಬ ವಿದ್ಯಾರ್ಥಿ ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ.. ಗಣಿತದಲ್ಲಿ 4 ವಿದ್ಯಾರ್ಥಿಗಳು 100 ಅಂಕಗಳನ್ನು ಪಡೆದಿದ್ದರೆ, ವ್ಯವಹಾರ ಅಧ್ಯಾಯನದಲ್ಲಿ 3 ವಿದ್ಯಾರ್ಥಿಗಳು 100ಅಂಕಗಳನ್ನು ಪಡೆದಿದ್ದು, ಗಣಕ ವಿಜ್ಞಾನದಲ್ಲಿ 2,ಕನ್ನಡದಲ್ಲಿ 1, ಲೆಕ್ಕ ಶಾಸ್ತ್ರದಲ್ಲಿ 1 ಹಾಗೂ ಹಿಂದಿಯಲ್ಲಿ 1 ವಿದ್ಯಾರ್ಥಿ ಸೇರಿದಂತೆ ಒಟ್ಟು 12 ವಿದ್ಯಾರ್ಥಿಗಳು […] - [ದ್ವಿತೀಯ ಪಿಯುಸಿ ಫಲಿತಾಂಶ: ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜು ಸತತ ಐದನೇ ವರ್ಷವೂ ಶೇ. 100 ಫಲಿತಾಂಶ](https://news.nammakarla.in/%e0%b2%a6%e0%b3%8d%e0%b2%b5%e0%b2%bf%e0%b2%a4%e0%b3%80%e0%b2%af-%e0%b2%aa%e0%b2%bf%e0%b2%af%e0%b3%81%e0%b2%b8%e0%b2%bf-%e0%b2%ab%e0%b2%b2%e0%b2%bf%e0%b2%a4%e0%b2%be%e0%b2%82%e0%b2%b6-%e0%b2%95/): ರಾಜ್ಯಕ್ಕೆ ದ್ವಿತೀಯ ವಿಭಾಗದಲ್ಲಿ ಪ್ರಾರ್ಥನಾ ಶೆಟ್ಟಿ ದ್ವಿತೀಯ ಸ್ಥಾನ (597), ವಾಣಿಜ್ಯ ವಿಭಾಗದಲ್ಲಿ ಪ್ರೇರಣ ರಾಮಚಂದ್ರ ಹೆಗ್ಡೆ ತೃತೀಯ ಸ್ಥಾನ (598) ರಾಜ್ಯದ ಟಾಪ್ 10 ರ್‍ಯಾಂಕ್ ಒಳಗೆ, ಕ್ರಿಯೇಟಿವ್ ಕಾಲೇಜಿನ 56 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಫಲಿತಾಂಶ: ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜು ಸತತ 5ನೇ ವರ್ಷವೂ ಶೇ.100 ಫಲಿತಾಂಶ: ರಾಜ್ಯಕ್ಕೆ ವಿಜ್ಞಾನ ವಿಭಾಗದಲ್ಲಿ ಪ್ರಾರ್ಥನ ಶೆಟ್ಟಿ ದ್ವಿತೀಯ ಸ್ಥಾನ (597), ವಾಣಿಜ್ಯ ವಿಭಾಗದಲ್ಲಿ ಪ್ರೇರಣ ರಾಮಚಂದ್ರ ಹೆಗಡೆ ತೃತೀಯ ಸ್ಥಾನ (598) 2025-26 ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು ಕಾರ್ಕಳದ ಪ್ರತಿಷ್ಠಿತ ಕ್ರಿಯೇಟಿವ್ ಪದವಿಪೂರ್ವ ಕಾಲೇಜು ಸತತ ಐದನೇ ವರ್ಷವೂ ಶೇಕಡ 100 ಫಲಿತಾಂಶವನ್ನು ದಾಖಲಿಸಿಕೊಂಡಿದೆ. ವಿಜ್ಞಾನ ವಿಭಾಗದಲ್ಲಿ ಪ್ರಾರ್ಥನ ಶೆಟ್ಟಿ ರಾಜ್ಯಕ್ಕೆ ಎರಡನೇ ಸ್ಥಾನವನ್ನು ಹಾಗೂ ವಾಣಿಜ್ಯ ವಿಭಾಗದಲ್ಲಿ ಪ್ರೇರಣ ರಾಮಚಂದ್ರ ಹೆಗಡೆ ರಾಜ್ಯಕ್ಕೆ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ವಿಜ್ಞಾನ ವಿಭಾಗದಲ್ಲಿ 589ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳ ಫಲಿತಾಂಶ ಪಟ್ಟಿ: […] - [ಎಸ್ ವಿ ಟಿ ವಿದ್ಯಾಸಂಸ್ಥೆ, ಕಾರ್ಕಳ](https://news.nammakarla.in/%e0%b2%8e%e0%b2%b8%e0%b3%8d-%e0%b2%b5%e0%b2%bf-%e0%b2%9f%e0%b2%bf-%e0%b2%b5%e0%b2%bf%e0%b2%a6%e0%b3%8d%e0%b2%af%e0%b2%be%e0%b2%b8%e0%b2%82%e0%b2%b8%e0%b3%8d%e0%b2%a5%e0%b3%86-%e0%b2%95%e0%b2%be/): 96.12% ಪಿಯುಸಿ ಫಲಿತಾಂಶ,23 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಎಸ್ ವಿ ಟಿ ವನಿತಾ ಪದವಿ ಪೂರ್ವ ಕಾಲೇಜು ಕಾರ್ಕಳ ಇಲ್ಲಿ 2025 – 26 ನೇ ಸಾಲಿನಲ್ಲಿ103 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 23 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ 61 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಮತ್ತು 11 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ ಹಾಗೂ 4 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು , ಕಾಲೇಜಿನ ಫಲಿತಾಂಶವು 96.12% ದಾಖಲಾಗಿರುತ್ತದೆ. ಸಾಧನೆಗೈದ ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿ ಪ್ರಾಚಾರ್ಯರು, ಹಿರಿಯ ಸಹ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗ ಅಭಿನಂದಿಸಿರುತ್ತಾರೆ. - [ದ್ವಿತೀಯ ಪಿಯುಸಿ ಫಲಿತಾಂಶ, ಡಾ. ಏನ್ ಎಸ್. ಎ.ಎಮ್ ಪಿಯು ಕಾಲೇಜ್ ನಿಟ್ಟೆ,](https://news.nammakarla.in/%e0%b2%a6%e0%b3%8d%e0%b2%b5%e0%b2%bf%e0%b2%a4%e0%b3%80%e0%b2%af-%e0%b2%aa%e0%b2%bf%e0%b2%af%e0%b3%81%e0%b2%b8%e0%b2%bf-%e0%b2%ab%e0%b2%b2%e0%b2%bf%e0%b2%a4%e0%b2%be%e0%b2%82%e0%b2%b6-%e0%b2%a1/): ವಾಣಿಜ್ಯ ವಿಭಾಗದ ಭುವನ್ ಶೆಟ್ಟಿ 94.50% ದ್ವಿತೀಯ ಪಿ ಯು ಸಿ ಫಲಿತಾಂಶ Dr.N.S.A.M ಪಿಯು ಕಾಲೇಜ್ ನಿಟ್ಟೆ, ಇಲ್ಲಿನ ವಾಣಿಜ್ಯ ವಿಭಾಗದ ಭುವನ್ ಶೆಟ್ಟಿ 94.50% ಅತ್ತ್ಯುತ್ತಮ ಶ್ರೇಣಿ ಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ಇವರು ನಿಟ್ಟೆ ವಿದ್ಯಾ ಸಂಸ್ಥೆಯ ಪ್ರೌಢ ಶಾಲಾ ವಿಭಾಗ ದ ದೈಹಿಕ ಶಿಕ್ಷಣ ನಿರ್ದೇಶಕರು ಹಾಗು NCC Army ಅಧಿಕಾರಿಯಾದ ಉಷಾ ಶೆಟ್ಟಿ ಅವರ ಸುಪುತ್ರರಾಗಿರುತ್ತಾರೆ. - [ಕಾರ್ಕಳ ಎಸ್.ಎನ್‌.ವಿ ಪದವಿ ಪೂರ್ವ ಕಾಲೇಜಿಗೆ, ಶೇ.100 ಫಲಿತಾಂಶದ ಕಿರೀಟ](https://news.nammakarla.in/%e0%b2%95%e0%b2%be%e0%b2%b0%e0%b3%8d%e0%b2%95%e0%b2%b3-%e0%b2%8e%e0%b2%b8%e0%b3%8d-%e0%b2%8e%e0%b2%a8%e0%b3%8d-%e0%b2%b5%e0%b2%bf-%e0%b2%aa%e0%b2%a6%e0%b2%b5%e0%b2%bf-%e0%b2%aa%e0%b3%82/): ಕಾರ್ಕಳದ ಎಸ್.ಎನ್.ವಿ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಸಾಧಿಸಿ ಮತ್ತೊಮ್ಮೆ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನ ಮೇಲುಗೈ ಸಾಧಿಸಿದೆ. ಈ ವರ್ಷ ಒಟ್ಟು 131 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಎಲ್ಲ 131 ವಿದ್ಯಾರ್ಥಿಗಳೂ ಉತ್ತೀರ್ಣರಾಗಿರುವುದು ಕಾಲೇಜಿಗೆ ಹೆಮ್ಮೆಯ ವಿಷಯವಾಗಿದೆ. ಕಾಲೇಜಿನಲ್ಲಿ 83 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, 46 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿಗಳ ಸಾಧನೆ ಕಾಲೇಜಿನ ಶೈಕ್ಷಣಿಕ ಗುಣಮಟ್ಟವನ್ನು ಪ್ರತಿಬಿಂಬಿಸುತ್ತದೆ. ಈ ಸಾಲಿನ ಫಲಿತಾಂಶದಲ್ಲಿ ವಿದ್ಯಾರ್ಥಿನಿ ಅದ್ವಿತಿ ಜೈನ್ ಅವರು 594 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಆರನೇ ಸ್ಥಾನ ಹಾಗೂ ಕಾಲೇಜಿಗೆ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ವಿದ್ಯಾರ್ಥಿಗಳಾದ ವಿಕಾಸ್ ಜೈನ್ ಹಾಗೂ ಸುಪ್ರಜಾ 593 ಅಂಕಗಳೊಂದಿಗೆ ಕ್ರಮವಾಗಿ ರಾಜ್ಯಕ್ಕೆ 7ನೇಸ್ಥಾನ ಹಾಗೂ ಕಾಲೇಜಿಗೆ ದ್ವಿತೀಯ ಸ್ಥಾನವನ್ನು ಪಡೆದಕೊಂಡರೆ ಅಭಿಜ್ಞಾ 592 ಅಂಕಗಳೊಂದಿಗೆ ರಾಜ್ಯಕ್ಕೆ 8ನೇ ಸ್ಥಾನ ಹಾಗೂ ಕಾಲೇಜಿಗೆ ತೃತೀಯ ಸ್ಥಾನ ಪಡೆದು ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಶುಪಾಲರು, […] - [ಶ್ರೀರಾಮಪ್ಪ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಫುಲ್ಕೇರಿ](https://news.nammakarla.in/%e0%b2%b6%e0%b3%8d%e0%b2%b0%e0%b3%80%e0%b2%b0%e0%b2%be%e0%b2%ae%e0%b2%aa%e0%b3%8d%e0%b2%aa-%e0%b2%85%e0%b2%a8%e0%b3%81%e0%b2%a6%e0%b2%be%e0%b2%a8%e0%b2%bf%e0%b2%a4-%e0%b2%b9%e0%b2%bf%e0%b2%b0%e0%b2%bf/): ಅಮೃತ ಮಹೋತ್ಸವ ಸಂಭ್ರಮ ಹಾಗೂ ನೂತನ ಕಟ್ಟಡ ಲೋಕಾರ್ಪಣೆ ಅವಿಭಾಜಿತ ದ. ಕ, ಉಡುಪಿ ಹಾಗೂ ಉ. ಕ ಜಿಲ್ಲಾ ವ್ಯಾಪ್ತಿಯಲ್ಲಿ, ಕಾರ್ಕಳದ ರಾಮಪ್ಪ ಶಾಲೆಗೆ ಸೈನಿಕ ಶಾಲೆಯ ಗರಿ: ಶರತ್ ಕಲ್ಯಾ ಕಾರ್ಕಳ: ಪುಕ್ಕೇರಿ ರಾಮಪ್ಪ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಇದರ ಅಮೃತ ಮಹೋತ್ಸವ ಕಾರ್ಯಕ್ರಮ ಇತ್ತೀಚೆಗೆ ಜರುಗಿತು. ಇದೇ ಸಂದರ್ಭದಲ್ಲಿ ದಾನಿಗಳು ಹಾಗೂ ಹಳೆವಿದ್ಯಾರ್ಥಿಗಳಿಂದ ನೂತನವಾಗಿ ನಿರ್ಮಿಸಲಾದ ಶಿಶುಮಂದಿರ ಹಾಗೂ ಶಾಲಾ ಕಟ್ಟಡವನ್ನು ದೀಪ ಬೆಳಗಿಸುವುದರ ಮೂಲಕ ಲೋಕಾರ್ಪಣೆಗೊಳಿಸಿದ ವಿದ್ಯಾಭಾರತಿಯ ನಿಕಟಪೂರ್ವ ಮಧ್ಯಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿಯಾದ ಜಿ ಆರ್ ಜಗದೀಶ್ ಇವರು ಸಂಸ್ಥೆಗೆ ಶುಭ ಹಾರೈಸಿದರು. ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶಾಲೆಯ ಆಡಳಿತ ಮಂಡಳಿ ಸದಸ್ಯರಾದ ಶರತ್ ಡಿ ಕಲ್ಯಾ ಇವರು ಹಿರಿಯರಾದ ಕೀರ್ತಿಶೇಷ ರಾಮಪ್ಪರವರ ದೂರದೃಷ್ಟಿತ್ವದಿಂದ ಸ್ಥಾಪಿಸಿದ ಈ ವಿದ್ಯಾಸಂಸ್ಥೆಯನ್ನು ಮುಂದಿನ ದಿನಗಳಲ್ಲಿ ಸೈನಿಕ ಶಾಲೆಯಾಗಿ ಪರಿವರ್ತಿಸುವ ಬಗ್ಗೆ ಸಮಯೋಚಿತವಾಗಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಸುಧೀರ್ ಜೈನ್, ಮ್ಯಾನೇಜರ್ ಹೂಮನ್ ರಿಸೋರ್ಸ್ ಎಂಆ‌ರ್ ಪಿಎಲ್ ಮಂಗಳೂರು, […] - [ರ‍್ಯಾಪಿಡ್ ಇನ್ಸ್ಟಿಟ್ಯೂಟ್ ಆಫ್ ಅಬಾಕಸ್ ಹೆಬ್ರಿ, ಆಯೋಜಿಸಿರುವ ರಜಾ-ಮಜಾ(ಮಕ್ಕಳಿಗೆ ಜ್ಞಾನ ತಾಣವಾದ ಬೇಸಿಗೆ ಶಿಬಿರ)](https://news.nammakarla.in/%e0%b2%b0%e0%b3%8d%e0%b2%af%e0%b2%be%e0%b2%aa%e0%b2%bf%e0%b2%a1%e0%b3%8d-%e0%b2%87%e0%b2%a8%e0%b3%8d%e0%b2%b8%e0%b3%8d%e0%b2%9f%e0%b2%bf%e0%b2%9f%e0%b3%8d%e0%b2%af%e0%b3%82%e0%b2%9f%e0%b3%8d/): ರ‍್ಯಾಪಿಡ್ ಇನ್ಸ್ಟಿಟ್ಯೂಟ್ ಆಫ್ ಅಬಾಕಸ್ ಹೆಬ್ರಿ, ಆಯೋಜಿಸಿರುವ ರಜಾ-ಮಜಾ(ಮಕ್ಕಳಿಗೆ ಜ್ಞಾನ ತಾಣವಾದ ಬೇಸಿಗೆ ಶಿಬಿರ) ವಿಶೇಷ ತರಬೇತುದಾರರಿಂದ ವಿಶೇಷ ಚಟುವಟಿಕೆಗಳು, ಏಪ್ರಿಲ್ ಒಂದರಿಂದ ಏಪ್ರಿಲ್ 26ರವರೆಗೆ ಬೆಳಿಗ್ಗೆ 9:30 ರಿಂದ ಸಂಜೆ 4.30 ರವರೆಗೆ ಸ್ಥಳ ಸಮಾಜ ಮಂದಿರ ಹೆಬ್ರಿ ಇಲ್ಲಿ ನಡೆಯಲಿದೆ. ವಿಶೇಷ ಆಕರ್ಷಣೆಯಾಗಿ ನಮ್ಮ ಶಿಬಿರದ ಮಕ್ಕಳಿಗಾಗಿ “ಗಾಂಧಾರಿ ವಿದ್ಯೆ” ಪರಿಚಯಿಸುತಿದ್ದೇವೆ. ಮತ್ತು ನುರಿತ ಸಂಪನ್ಮೂಲ ವ್ಯಕ್ತಿಗಳ ಮಾರ್ಗದರ್ಶನದಲ್ಲಿ, ಭಗವದ್ಗೀತಾ ಪಠಣ ಕಲಿಕೆ, ಕರಾಟೆ ಆಕ್ಯುಪ್ರೆಶರ್, ವಾಟರ್ ಥೆರಪಿ, ಮೆಮೊರಿ ಪವರ್ ಹೆಚ್ಚಿಸುವ ಬಗ್ಗೆ ತರಬೇತಿ ಹಾಗೂ ವಿಶೇಷ ಚಟುವಟಿಕೆ ಭಾಗದಲ್ಲಿ, ಅಭಿನಯ ಗೀತೆಗಳು, ದೇಶಭಕ್ತಿ ಜಾನಪದ ಗೀತೆ, ವರ್ಲಿ ಚಿತ್ರಗಳು, ನವರಸ ಅಭಿನಯಗಳು, ಯೋಗ, ನೆನಪಿನ ಆಟಗಳು, ಕ್ರಾಫ್ಟ್, ನೃತ್ಯ ಗಾಯನ ಚಿತ್ರದಲ್ಲಿ ಮನೋರಂಜನ ಆಟಗಳು ,ಪಿಕ್ ನಿಕ್, ಗೂಡು ದೀಪ ತಯಾರಿ, ಕ್ಲೇ ಆರ್ಟ್, ಸುಬ್ರಹ್ಮಣ್ಯ ಪ್ರಸಾದ್ ಇವರಿಂದ ಯಕ್ಷಗಾನ ತರಬೇತಿ , ಕಲಿಕೆಯ ಭಾಗಗಳಾಗಲಿವೆ. ಮಧ್ಯಾಹ್ನದ ಊಟದ ವ್ಯವಸ್ಥೆ ಮಕ್ಕಳಿಗೆ ನೀಡಲಾಗುತ್ತದೆ. ವಯೋಮಿತಿ 5 […] - [ರಾ.ಹೆ. 169 : ಸಾಣೂರಿನಲ್ಲಿ ಕಳಪೆ ಪೈಪ್ ಲೈನ್ ಅಳವಡಿಕೆ _ ನಿರಂತರ ಕುಡಿಯುವ ನೀರು ಸೋರಿಕೆ.!?!?](https://news.nammakarla.in/%e0%b2%b0%e0%b2%be-%e0%b2%b9%e0%b3%86-169-%e0%b2%b8%e0%b2%be%e0%b2%a3%e0%b3%82%e0%b2%b0%e0%b2%bf%e0%b2%a8%e0%b2%b2%e0%b3%8d%e0%b2%b2%e0%b2%bf-%e0%b2%95%e0%b2%b3%e0%b2%aa%e0%b3%86-%e0%b2%aa%e0%b3%88/): ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿ ಯ ಸಾಣೂರು ಸೇತುವೆ ಬಳಿ NH ಅವರು ಹಾಕಿದ HD ಪೈಪ್ ಲೈನ್ ತೀರಾ ಕಳಪೆ ಗುಣ ಮಟ್ಟದ ಸಾಮಾಗ್ರಿಯಾಗಿದ್ದು, ಅಲ್ಲಲ್ಲಿ ಬಿರುಕು ಬಿಟ್ಟು ಗ್ರಾಮಸ್ತರಿಗೆ ನೀರೇ ಕೊಡಲಾಗದಂತ ಪರಿಸ್ಥಿತಿ ಬಂದಿದೆ. ಸಾಣೂರು ಸೇತುವೆ ಪರಿಸರದಿಂದ ಶೇಡಿಗುಡ್ಡೆ ಯೇರ್ನಡ್ಕ ರಸ್ತೆ ಯ ಜನರಿಗೆ ಸುಮಾರು ಎರಡು ವಾರ ದಿಂದ ನೀರಿಲ್ಲ, pdo ಅವರಿಗೆ ಮುಖತಾ ಅಥವಾ ಫೋನ್ ಮೂಲಕ ತಿಳಿಸಿದಾಗ ಅವರು NH ನವರಿಗೆ ತಿಳಿಸಿದ್ದೇನೆ ಎಂದು ಹೇಳುತ್ತಾರೆ. ಪಂಚಾಯತ್ ಅವಧಿ ಮುಗಿದಿದೆ. ಪಂಚಾಯತ್ ಸದಸ್ಯರ ಬಳಿ ತಿಳಿಸಿದರೆ ಪಿಡಿಒ ಗೆ ದೂರು ಕೊಡಿ ಎನ್ನುತ್ತಾರೆ. ಪಿಡಿಓ ರವರು ಹೆದ್ದಾರಿ ಗುತ್ತಿಗೆದಾರರಿಗೆ ಹೇಳಿದ್ದೇನೆ ಎಂದು ತಿಳಿಸುತ್ತಾರೆ. ಜವಾಬ್ದಾರಿಯನ್ನು ತೆಗೆದುಕೊಳ್ಳುವವರು ಯಾರು ಎನ್ನುವ ಪ್ರಶ್ನೆ ಗ್ರಾಮಸ್ಥರಿಗೆ ಕಾಡುತ್ತಿದೆ. ಕಡು ಬೇಸಿಗೆಯ ಕಾಲದಲ್ಲಿ ದಿನವಿಡಿ ಧಾರಾಕಾರವಾಗಿ ನೀರು ಸೋರಿಕೆಯಾಗುತ್ತಿದ್ದು, ಬೇಜವಾಬ್ದಾರಿಯ ನಡವಳಿಕೆಗೆ ಕಡಿವಾಳ ಹಾಕುವವರು ಯಾರು? ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿದೆ. - [ಹವಾಮಾನ ವರದಿ](https://news.nammakarla.in/%e0%b2%b9%e0%b2%b5%e0%b2%be%e0%b2%ae%e0%b2%be%e0%b2%a8-%e0%b2%b5%e0%b2%b0%e0%b2%a6%e0%b2%bf-603/): ಕರಾವಳಿ ಮತ್ತು ಒಳನಾಡಿನ ಜಿಲ್ಲೆಗಳಲ್ಲಿ ಉಷ್ಣಾಂಶ ಏರಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇಂದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಂಜೆಯ ವೇಳೆಗೆ ಸಣ್ಣಗೆ ಮಳೆಯ ಸಾಧ್ಯತೆ ಇದೆ. ಮೈಸೂರು, ಕೊಡಗು ,ಹಾಸನ ಮಂಡ್ಯ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ಮಂಗಳೂರು ,ಉಡುಪಿ ಮತ್ತು ಕಾರವಾರ ಭಾಗಗಳಲ್ಲಿ ಸೆಕೆಯ ಪ್ರಮಾಣ ಹೆಚ್ಚಾಗಲಿದೆ. ಧಾರವಾಡ ಬೆಳಗಾವಿ ಬಾಗಲಕೋಟೆ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಟುವ ಸಾಧ್ಯತೆ ಇದೆ ಎನ್ನಲಾಗಿದೆ. - [ಮಹಾಭಾರತ](https://news.nammakarla.in/%e0%b2%ae%e0%b2%b9%e0%b2%be%e0%b2%ad%e0%b2%be%e0%b2%b0%e0%b2%a4-483/): ಭಾಗ – 483 ಭರತೇಶ ಶೆಟ್ಟಿ, ಎಕ್ಕಾರು ಆಗ ಆ ಕಾಡ ಕಿರಾತನು ಋಷಿವರ್ಯನನ್ನು ಕಂಡು ವಂದಿಸಿ “ಓ ಮಹಾತ್ಮರೇ! ನೀವು ಉತ್ತಮರು ಮೇಲಾಗಿ ತಪೋನಿಧಿಗಳು. ನಾನು ಅಂತ್ಯಜನು, ನನ್ನ ಮನೆಯೊಳಗೆ ಬಂದು ಮೃಗ ಮಾಂಸವನ್ನು, ಅದೂ ಕದ್ದು ತಿಂದಿದ್ದೀರಿ. ಕೇಳುತ್ತಿದ್ದರೆ ಅಥವಾ ಹಸಿವಾಗಿದೆ ಎಂದು ಹೇಳುತ್ತಿದ್ದರೆ ಕಾಡಿನೊಳಗೆ ಹುಡುಕಾಡಿ ಗೆಡ್ಡೆಯನ್ನೋ ಇಲ್ಲಾ ಹೆಮ್ಮರದಲ್ಲೆಲ್ಲಾದರು ಉಳಿದ ಫಲವನ್ನೋ ತಂದು ನೀಡುವ ಪ್ರಯತ್ನ ಖಂಡಿತಾ ಮಾಡುತ್ತಿದ್ದೆ. ಏನು ಮಾಡಿಬಿಟ್ಟಿರಿ? ನಾಳೆಯ ಭವಿಷ್ಯತ್ತಿನಲ್ಲಿ ನಿಮ್ಮ ಉನ್ನತ ಕುಲದ ಪಾಲನೆಗೆ ತೊಡಕಾಗದೆ?” ಎಂದು ದೀನನಾಗಿ ಪ್ರಶ್ನಿಸಿದನು. ಆಗ ಪ್ರಾಜ್ಞರೂ ಜ್ಞಾನಿಯೂ ಆದ ವಿಶ್ವಾಮಿತ್ರರು “ಅಯ್ಯಾ ಈಗ ನನಗಾಗುತ್ತಿದ್ದ ಹಸಿವನ್ನು ನಿವಾರಿಸದೆ ಹೋಗಿದ್ದರೆ ಜೀವವೇ ಹೋಗಿ ಬಿಡುತ್ತಿತ್ತು. ಹಾಗಾಗಿ ಆಪದ್ಧರ್ಮ ಪಾಲಿಸಿ ಶರೀರಕ್ಕೆ ತೀರಾ ಅಗತ್ಯವಾಗಿದ್ದ ಆಹಾರವನ್ನು ಸ್ವೀಕರಿಸಿದೆ. ಈ ಕಾಲಕ್ಕೆ ಅದು ಪ್ರಮುಖವಾದ ಕಾರಣ ನನ್ನ ಜೀವ ಉಳಿಸಿಕೊಳ್ಳಲು ಹಾಗೆ ಮಾಡಿದೆ. ಮುಂದೆ ಒಳ್ಳೆಯ ಕಾಲ ಬಂದಾಗ ಎಲ್ಲವನ್ನೂ ಪರಿಹರಿಸಿಕೊಳ್ಳಬಹುದು” ಎಂದರು. ಅಜ್ಜ ಭೀಷ್ಮಾಚಾರ್ಯರು ಈ […] - [ದ್ವಿತೀಯ ಪಿಯುಸಿ ಪರೀಕ್ಷೆ-1 ಫಲಿತಾಂಶ ಏ.9, ಮಧ್ಯಾಹ್ನ ಪ್ರಕಟ; ಡಿಜಿಲಾಕರ್ ಮೂಲಕ ಅಂಕಪಟ್ಟಿ ಲಭ್ಯ](https://news.nammakarla.in/%e0%b2%a6%e0%b3%8d%e0%b2%b5%e0%b2%bf%e0%b2%a4%e0%b3%80%e0%b2%af-%e0%b2%aa%e0%b2%bf%e0%b2%af%e0%b3%81%e0%b2%b8%e0%b2%bf-%e0%b2%aa%e0%b2%b0%e0%b3%80%e0%b2%95%e0%b3%8d%e0%b2%b7%e0%b3%86-1-%e0%b2%ab/): ಉಡುಪಿ/ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷರು ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶವನ್ನು ಏಪ್ರಿಲ್ 9ರ ಗುರುವಾರ ಮಧ್ಯಾಹ್ನ 3 ಗಂಟೆಗೆ ಪ್ರಕಟಿಸುವುದಾಗಿ ಇಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು https://karresults.nic.in ಲಿಂಕ್ ಮೂಲಕ ಅಥವಾ KarnatakaOne Mobile App ಬಳಸಿ ಪರಿಶೀಲಿಸಬಹುದು ಎಂದು ತಿಳಿಸಲಾಗಿದೆ. ಇದಲ್ಲದೆ, ನೋಂದಾಯಿತ ಮೊಬೈಲ್ ಸಂಖ್ಯೆಗೆ ವಾಟ್ಸಾಪ್ ಹಾಗೂ ಎಸ್ಎಮ್ಎಸ್ (SMS) ಮೂಲಕವೂ ಫಲಿತಾಂಶದ ಮಾಹಿತಿ ಕಳುಹಿಸುವ ವ್ಯವಸ್ಥೆಯನ್ನು ಮಂಡಳಿ ಮಾಡಿದೆ ಎಂದು ತಿಳಿದುಬಂದಿದೆ. ಈ ಬಾರಿ ಮೊದಲ ಬಾರಿಗೆ ವಿದ್ಯಾರ್ಥಿಗಳ ಅಂಕಪಟ್ಟಿಯನ್ನು ಡಿಜಿಲಾಕರ್ ಮೂಲಕವೂ ಲಭ್ಯವಾಗುವಂತೆ ಮಾಡಲಾಗಿದೆ. ಏಪ್ರಿಲ್ 9ರ ಮಧ್ಯಾಹ್ನ 3 ಗಂಟೆಯಿಂದ https://www.digilocker.gov.in ವೆಬ್‌ಸೈಟ್‌ನಲ್ಲಿ ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಇದೇ ವೇಳೆ, ಫಲಿತಾಂಶ ಪಟ್ಟಿಯನ್ನು ಸಂಬಂಧಿತ ಕಾಲೇಜುಗಳಿಗೂ ಏಪ್ರಿಲ್ 9ರ ಮಧ್ಯಾಹ್ನ 3 ಗಂಟೆಯಿಂದ ಲಭ್ಯವಾಗಲಿದೆ ಎಂದು ಮಾಹಿತಿ ನೀಡಿದೆ. - [ಖಾಸಗಿ ಆಸ್ಪತ್ರೆಯ ದುರ್ಬಳಕೆ ಬಯಲಿಗೆಳೆದ ಯುವ ವೈದ್ಯೆ; ದೇಶಾದ್ಯಂತ ಚರ್ಚೆ](https://news.nammakarla.in/%e0%b2%96%e0%b2%be%e0%b2%b8%e0%b2%97%e0%b2%bf-%e0%b2%86%e0%b2%b8%e0%b3%8d%e0%b2%aa%e0%b2%a4%e0%b3%8d%e0%b2%b0%e0%b3%86%e0%b2%af-%e0%b2%a6%e0%b3%81%e0%b2%b0%e0%b3%8d%e0%b2%ac%e0%b2%b3%e0%b2%95%e0%b3%86/): ಚಂಡೀಗಢ: ವೈದ್ಯಕೀಯ ವೃತ್ತಿಯನ್ನು ಪವಿತ್ರ ಸೇವೆ ಎಂದು ಪರಿಗಣಿಸಲಾಗುತ್ತದೆ. ಆದರೆ ಇತ್ತೀಚೆಗೆ ಕೆಲವು ಖಾಸಗಿ ಆಸ್ಪತ್ರೆಗಳು ರೋಗಿಗಳನ್ನು ಹಣ ಗಳಿಸುವ ಸಾಧನಗಳಂತೆ ನೋಡುತ್ತಿರುವುದು ಚರ್ಚೆಗೆ ಕಾರಣವಾಗಿದೆ. ಚಂಡೀಗಢದ ಖಾಸಗಿ ಆಸ್ಪತ್ರೆಯೊಂದರ ಬಗ್ಗೆ ಯುವ ವೈದ್ಯೆಯೊಬ್ಬರು ಹೊರತಂದ ಆರೋಪ ಇದೀಗ ದೇಶಾದ್ಯಂತ ಗಮನ ಸೆಳೆದಿದೆ. ಡಾ. ಪ್ರಭ್ಲೀನ್ ತಮ್ಮ ಇನ್‌ಸ್ಟಾಗ್ರಾಂ ವಿಡಿಯೋದಲ್ಲಿ ಆಸ್ಪತ್ರೆಯಲ್ಲಿನ ಅನೈತಿಕ ಕ್ರಮಗಳನ್ನು ಬಹಿರಂಗಪಡಿಸಿದ್ದಾರೆ. ಸಾಮಾನ್ಯ ರೋಗಿಗಳನ್ನೂ ಅನಾವಶ್ಯಕವಾಗಿ ಐಸಿಯುಗೆ ದಾಖಲಿಸಿ, ದುಬಾರಿ ಪರೀಕ್ಷೆ ಮತ್ತು ಚಿಕಿತ್ಸೆಗಳನ್ನು ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಆಸ್ಪತ್ರೆಯ ಆದಾಯ ಹೆಚ್ಚಿಸಲು ವೈದ್ಯರ ಮೇಲೆ ಒತ್ತಡ ಹೇರಲಾಗುತ್ತಿದೆ ಎಂಬುದನ್ನೂ ಅವರು ತಿಳಿಸಿದ್ದಾರೆ. “ಹೆಚ್ಚಿನ ಸಂಬಳ ಅಥವಾ ಹುದ್ದೆಗಿಂತ ರೋಗಿಗಳ ಹಿತ ಮತ್ತು ವೃತ್ತಿ ನೈತಿಕತೆಯೇ ನನಗೆ ಮುಖ್ಯ. ಈ ರೀತಿಯ ವ್ಯವಸ್ಥೆಯಲ್ಲಿ ನಾನು ಕೆಲಸ ಮಾಡಲು ಸಾಧ್ಯವಿಲ್ಲ,” ಎಂದು ಡಾ. ಪ್ರಭ್ಲೀನ್ ಹೇಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅನೇಕರು ವೈದ್ಯೆಯ ಧೈರ್ಯವನ್ನು ಮೆಚ್ಚಿದ್ದಾರೆ. ಸಂಬಂಧಿತ ಆಸ್ಪತ್ರೆಯ ವಿರುದ್ಧ ಕ್ರಮ ಕೈಗೊಳ್ಳಬೇಕು […] - [ರಾಜ್ಯ ಸರಕಾರದಿಂದ ವೃದ್ಧಾಪ್ಯ,ವಿಧವಾ, ಅಂಗವಿಕಲ ವೇತನ ರದ್ದು, ಬಡವರ ಬಿಪಿಎಲ್ ಕಾರ್ಡ್ ರದ್ದು](https://news.nammakarla.in/%e0%b2%b0%e0%b2%be%e0%b2%9c%e0%b3%8d%e0%b2%af-%e0%b2%b8%e0%b2%b0%e0%b2%95%e0%b2%be%e0%b2%b0%e0%b2%a6%e0%b2%bf%e0%b2%82%e0%b2%a6-%e0%b2%b5%e0%b3%83%e0%b2%a6%e0%b3%8d%e0%b2%a7%e0%b2%be%e0%b2%aa%e0%b3%8d/): ಜನಸಾಮಾನ್ಯರ ಭಾಗ್ಯಗಳನ್ನು ಕಿತ್ತುಕೊಳ್ಳುವ ದುಷ್ಟ ಕೃತ್ಯ.. ಖಂಡನೀಯ, ನವೀನ್ ನಾಯಕ್ ಆಕ್ರೋಶ ರಾಜ್ಯ ಸರ್ಕಾರ ದಿವಾಳಿ ಎದ್ದಿದ್ದು ಅಭಿವೃದ್ಧಿಗೆ ಹಣ ನೀಡದ ಸ್ಥಿತಿಗೆ ತಲುಪಿದೆ. ಆರ್ಥಿಕ ಮುಗ್ಗಟ್ಟಿನಿಂದ ಸರ್ಕಾರ ನಡೆಸಲು ಆಗದ ಹಿನ್ನಲೆಯಲ್ಲಿ ಈ ಹಿಂದೆ ವಿವಿಧ ಸರ್ಕಾರಗಳು ನೀಡಿದ ಜನಪರ ಯೋಜನೆಗಳನ್ನು ನಿಧಾನವಾಗಿ ನಿಲ್ಲಿಸುವ ಸಂಚು ರೂಪಿಸಿದೆ.ಆರ್ಥಿಕ ಬಿಕ್ಕಟ್ಟನ್ನು ಸರಿದೂಗಿಸುವ ನೆಪದಲ್ಲಿ ಆದರ ಭಾಗವಾಗಿ ಇಂದಿರಾಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ, ಸಂದ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲ ವೇತನಗಳನ್ನು ಈಗಾಗಲೇ ಮನ ಬಂದಂತೆ ತಾಲ್ಲೂಕಿನಾದ್ಯಂತ ಸಾವಿರಾರು ಫಲಾನುಭವಿಗಳ ಪಟ್ಟಿಗಳನ್ನು ರದ್ದು ಪಡಿಸಿದೆ. ಜೊತೆಗೆ ಆರೋಗ್ಯ, ಮನೆ ನಿರ್ಮಾಣ, ಮಕ್ಕಳ ವಿದ್ಯಾಭ್ಯಾಸ ಸೇರಿದಂತೆ ಅಗತ್ಯ ಸೌಕರ್ಯಗಳನ್ನು ಸೃಷ್ಟಿಸಿಕೊಳ್ಳಲು ಬಡವರು ಮಾಡಿರುವ ಬ್ಯಾಂಕ್ ಸಾಲ ವರದಿಗಳನ್ನು ಪಡೆದು ಅವರ ಬಿಪಿಎಲ್ ಕಾರ್ಡುಗಳನ್ನು ರದ್ದು ಪಡಿಸಿದ್ದಾರೆ. ಬಡವರ ಸೌಲತ್ತುಗಳನ್ನು ಕಿತ್ತುಕೊಳ್ಳುವ ಮೂಲಕ ಅವರನ್ನು ಮತ್ತಷ್ಟು ಬಡತಕ್ಕೆ ತಳ್ಳುವ ಕೆಟ್ಟ ನಿರ್ಧಾರವನ್ನು ರಾಜ್ಯ ಸರ್ಕಾರ ಹೊಂದಿದೆ.ಸರ್ಕಾರದ ಕೆಟ್ಟ ಚಾಳಿಯಿಂದಾಗಿ ಕಾರ್ಕಳ ತಾಲ್ಲೂಕಿನಾದ್ಯಂತ ಸಾವಿರಾರು ಕುಟುಂಬಗಳು ಬೀದಿಗೆ […] - [ದೇಶಾದ್ಯಂತ ಟೋಲ್‌ಗಳಲ್ಲಿ ನಗದು ಪಾವತಿ ರದ್ದು; ಏ.10ರಿಂದ ಸಂಪೂರ್ಣ ಡಿಜಿಟಲ್ ವ್ಯವಸ್ಥೆ ಜಾರಿ](https://news.nammakarla.in/%e0%b2%a6%e0%b3%87%e0%b2%b6%e0%b2%be%e0%b2%a6%e0%b3%8d%e0%b2%af%e0%b2%82%e0%b2%a4-%e0%b2%9f%e0%b3%8b%e0%b2%b2%e0%b3%8d%e0%b2%97%e0%b2%b3%e0%b2%b2%e0%b3%8d%e0%b2%b2%e0%b2%bf-%e0%b2%a8%e0%b2%97/): ನವದೆಹಲಿ: ಏಪ್ರಿಲ್ 10ರಿಂದ ದೇಶಾದ್ಯಂತ ಎಲ್ಲಾ ಟೋಲ್ ಪ್ಲಾಜಾಗಳಲ್ಲಿ ನಗದು ಪಾವತಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ಟೋಲ್ ಸಂಗ್ರಹಣೆಯನ್ನು ಸಂಪೂರ್ಣ ಡಿಜಿಟಲ್ ಮಾಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ಮಹತ್ವದ ಕ್ರಮ ಕೈಗೊಂಡಿದೆ. ಫಾಸ್ಟ್‌ಟ್ಯಾಗ್ ಇಲ್ಲದ ವಾಹನಗಳಿಗೆ ಯುಪಿಐ ಮೂಲಕ ಪಾವತಿಸುವ ಅವಕಾಶ ಇರುತ್ತದೆ. ಆದರೆ ಈ ವಿಧಾನವನ್ನು ಬಳಸಿದರೆ ಸಾಮಾನ್ಯ ಶುಲ್ಕಕ್ಕಿಂತ 25 ಶೇಕಡಾ ಹೆಚ್ಚುವರಿ ಹಣ ಪಾವತಿಸಬೇಕಾಗುತ್ತದೆ. ಫಾಸ್ಟ್‌ಟ್ಯಾಗ್ ಹಾಗೂ ಯುಪಿಐ ಎರಡನ್ನೂ ನಿರಾಕರಿಸಿದರೆ ವಾಹನ ಪ್ರವೇಶಕ್ಕೆ ನಿರ್ಬಂಧ ಅಥವಾ ನೋಟಿಸ್ ನೀಡುವ ಕ್ರಮ ಕೈಗೊಳ್ಳಬಹುದು. ಮೂರು ದಿನಗಳೊಳಗೆ ದಂಡ ಪಾವತಿಸದಿದ್ದರೆ ದ್ವಿಗುಣ ದಂಡ ವಿಧಿಸುವ ಸಾಧ್ಯತೆ ಇದೆ. ಟೋಲ್ ಪ್ಲಾಜಾಗಳಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಿ ಕಾಯುವ ಸಮಯವನ್ನು ಇಳಿಸಲು ಈ ಕ್ರಮ ಜಾರಿಗೊಳಿಸಲಾಗುತ್ತಿದೆ. ಜೊತೆಗೆ ಖಾಸಗಿ ವಾಹನಗಳಿಗೆ ಗುರುತಿನ ಚೀಟಿ ಆಧಾರಿತ ವಿನಾಯಿತಿ ವ್ಯವಸ್ಥೆಯನ್ನು ರದ್ದುಪಡಿಸಲಾಗಿದೆ. ಇನ್ನು ಮುಂದೆ ವಿಶೇಷ ಫಾಸ್ಟ್‌ಟ್ಯಾಗ್ ಹೊಂದಿರುವ ಅಧಿಕೃತ ವಾಹನಗಳಿಗೆ ಮಾತ್ರ ಟೋಲ್ ವಿನಾಯಿತಿ ಲಭ್ಯವಾಗಲಿದೆ. - [ಹವಾಮಾನ ವರದಿ](https://news.nammakarla.in/%e0%b2%b9%e0%b2%b5%e0%b2%be%e0%b2%ae%e0%b2%be%e0%b2%a8-%e0%b2%b5%e0%b2%b0%e0%b2%a6%e0%b2%bf-602/): ರಾಜ್ಯದ ಹಲವು ಭಾಗಗಳಲ್ಲಿ ಮಳೆಯಾಗುತ್ತಿದ್ದು, ಇಂದು ಮಳೆಯ ಪ್ರಮಾಣ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಚಿಕ್ಕಬಳ್ಳಾಪುರ ,ಕೋಲಾರ ,ಚಾಮರಾಜನಗರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆಯಾಗಿದ್ದು, ಉಳಿದೆಡೆ ಒಣಹವೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಕರಾವಳಿ ಜಿಲ್ಲೆಗಳಾದ ಉಡುಪಿ ,ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ. - [ಕುಮಾರ್ ಪೆರ್ನಾಜೆ ಸೌಮ್ಯ ದಂಪತಿ, ಜನತಾ ನ್ಯೂಸ್ ಅವಾರ್ಡ್ - 2026 ಗೆ ಆಯ್ಕೆ](https://news.nammakarla.in/%e0%b2%95%e0%b3%81%e0%b2%ae%e0%b2%be%e0%b2%b0%e0%b3%8d-%e0%b2%aa%e0%b3%86%e0%b2%b0%e0%b3%8d%e0%b2%a8%e0%b2%be%e0%b2%9c%e0%b3%86-%e0%b2%b8%e0%b3%8c%e0%b2%ae%e0%b3%8d%e0%b2%af-%e0%b2%a6%e0%b2%82/): ಪೆರ್ನಾಜೆ: ಜನತಾ ನ್ಯೂಸ್ ಕನ್ನಡ ವತಿಯಿಂದ ಆಯೋಜಿಸಲಾಗಿರುವ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಗುರುತಿಸಿ ಗೌರವಿಸಿ ಸನ್ಮಾನಿಸಲು ಜನತಾ ಅವಾರ್ಡ್ಸ್ 2026 ಕಾರ್ಯಕ್ರಮವನ್ನು ಬೆಂಗಳೂರಿನ ನಾಗರಭಾವಿ KLE ಲಾ ಕಾಲೇಜಿನ ಸಮೀಪ ಅರಮನೆ ವೆನ್ಯೂವಿ ನಲ್ಲಿ ವೈವಿಧ್ಯಮಯ ಕಾರ್ಯಕ್ರಮ ಗಳೊಂದಿಗೆ ಏರ್ಪಡಿಸಲಾಗಿದ್ದು.ಅದರಲ್ಲಿ ಜೇನು ಗಡ್ಡದಾರಿ ,ಕೃಷಿ ಹವ್ಯಾಸೀ ಬರಹಗಾರ ,ಕೃಷಿ ಸಂಶೋಧನೆ ಕಲಾ ನಿರ್ದೇಶಕರು ಪೆರ್ನಾಜೆ ಪ್ರಶಸ್ತಿಯನ್ನು ನೀಡಿ ಕಲಾ ಸೇವೆಗೆ ಹಲವಾರು ಮಂದಿಯನ್ನು ಗೌರವಿಸಿದ್ದು. ಕುಮಾರ್ ಪೆರ್ನಾಜೆ ಸೌಮ್ಯ ದಂಪತಿಗಳ ತಮ್ಮ ವೃತ್ತಿ ಸೇವೆಯನ್ನು ನಮ್ಮ ಸಮಿತಿ ವತಿಯಿಂದ ಗುರುತಿಸಲಾಗಿತ್ತು ಅಂದು ತಮಗೆ ಗೌರವ ಸಲ್ಲಿಸಿ ಪ್ರಶಸ್ತಿ ನೀಡಿ ಸನ್ಮಾನಿಸಲಾಗುತ್ತದೆ ಎಂದು ಜನತಾ ಚಾನೆಲ್ ಆರ್ ಎನ್ ಭಾರದ್ವಾಜ್ ಮುಖ್ಯಸ್ಥರು ಹಾಗೂ ಗೋಪಾಲ್ ಸರ್ ಅಡ್ಮಿನ್ ಇಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. - [ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮಾಳ](https://news.nammakarla.in/%e0%b2%b6%e0%b3%8d%e0%b2%b0%e0%b3%80-%e0%b2%97%e0%b3%81%e0%b2%b0%e0%b3%81%e0%b2%95%e0%b3%81%e0%b2%b2-%e0%b2%85%e0%b2%a8%e0%b3%81%e0%b2%a6%e0%b2%be%e0%b2%a8%e0%b2%bf%e0%b2%a4-%e0%b2%b9%e0%b2%bf-16/): ಏಳನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮಾಳ ಇಲ್ಲಿ 2025-26 ಸಾಲಿನ 7ನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವು ಅಮೃತ ವೇದಿಕೆಯಲ್ಲಿ ಜರುಗಿತು. ಈ ಸಮಾರಂಭದಲ್ಲಿ 7ನೇ ತರಗತಿಯ ವಿದ್ಯಾರ್ಥಿಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದು ಕಲಿತ ಶಾಲೆಯಲ್ಲಿ ಪಡೆದ ಅನುಭವಗಳನ್ನು ತಮ್ಮ ಅನಿಸಿಕೆಯಲ್ಲಿ ತಿಳಿಸಿದರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯ ಶಿಕ್ಷಕಿ ಪೂರ್ಣಿಮಾ shenoy ವಹಿಸಿದ್ದು ವಿದ್ಯಾರ್ಥಿಗಳಿಗೆ ಶುಭಾಶಯಗಳು ನುಡಿಗಳನ್ನು ತಿಳಿಸಿದರು ಅಲ್ಲದೆ ಎಲ್ಲಾ ಶಿಕ್ಷಕರುಗಳು ತಾವು ಕಲಿಸಿದ ವಿದ್ಯಾರ್ಥಿಗಳ ಬಗ್ಗೆ ತಮ್ಮ ತಮ್ಮ ಅನುಭವಗಳನ್ನು ತಿಳಿಸಿದರು.ವಿದ್ಯಾರ್ಥಿಗಳ ನೆನಪಿಗಾಗಿ ಶಾಲೆಗೆ ಊಟದ ಬಟ್ಟಲು ಇಡುವ ಸ್ಟ್ಯಾಂಡನ್ನು ಕೊಡುಗೆಯಾಗಿ ನೀಡಿದರು ಕಾರ್ಯಕ್ರಮದ ಸಂಯೋಜನೆಯನ್ನು ಆರನೇ ತರಗತಿ ವಿದ್ಯಾರ್ಥಿಗಳು ನಡೆಸಿದರು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪೋಷಕರು ಅಡುಗೆಯವರು ಹಾಗೂ ಆಡಳಿತ ಮಂಡಳಿಯ ಸದಸ್ಯರು ಭಾಗವಹಿಸಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಆರನೇ ತರಗತಿ ವಿದ್ಯಾರ್ಥಿ ಅನುಷಾ ನಿರ್ವಹಿಸಿ ಸಹನಾ ಧನ್ಯವಾದ ನೀಡಿದರು. - [ಮಹಾಭಾರತ](https://news.nammakarla.in/%e0%b2%ae%e0%b2%b9%e0%b2%be%e0%b2%ad%e0%b2%be%e0%b2%b0%e0%b2%a4-482/): ಭಾಗ – 482 ಭರತೇಶ ಶೆಟ್ಟಿ,ಎಕ್ಕಾರು “ವತ್ಸಾ ಧರ್ಮರಾಯಾ! ರಾಜನಿಗೆ ಮುಖ್ಯವಾದ ಸಾಧನ ದಂಡ. ದೊಣ್ಣೆಯನ್ನೆತ್ತಿಕೊಂಡು ನಿಂತವನಿಗೆ ಜನ ಹೆದರುತ್ತಾರೆ. ವಿಪತ್ತು ಬಂದಾಗ ವಿಚಾರ ಮಾಡುತ್ತಾ ಕಾಲಕಳೆಯುವುದಲ್ಲ, ಬಾಯಿಯಲ್ಲಿ ವಿನಯವಿದ್ದರೂ, ಹೃದಯವು ಕತ್ತಿಯಂತಿರಬೇಕು. ಅಗತ್ಯ ಬಿದ್ದು ಸಂಧಿ ಮಾಡಿಕೊಂಡರೂ, ನಿಶ್ಚಿಂತೆಯಿಂದ ಇರಬಾರದು. ಮನೆಯಲ್ಲಿ ಹಾವು ಇದ್ದರೆ ಹೇಗೆ ಭಯವೋ? ಹಾಗೆಯೇ ಅಂತಹ ವೈರಿಗಳಿಂದ ಭಯವು ಇದ್ದೇ ಇರುತ್ತದೆ. ಆದುದರಿಂದ ಅಂತಹ ಶತ್ರುಗಳನ್ನು ನಯ ವಿನಯಗಳಿಂದಲೂ, ದುಃಖ ಪ್ರದರ್ಶನದಿಂದಲೂ, ಅಥವಾ ಏನನ್ನಾದರೂ ಕೊಟ್ಟು, ಉಪಕಾರ ಮಾಡಿಯಾದರೂ ಶಾಂತಗೊಳಿಸಬೇಕು. ಮತ್ತೆ ಅವಕಾಶ ಸಿಕ್ಕಿದಾಗ ಶತ್ರುವಿನಲ್ಲಿ ದಯ ದಾಕ್ಷಿಣ್ಯ ತೋರಬಾರದು. ಇದು ಸನ್ಮಾರ್ಗವೇ ಎಂಬ ಜಿಜ್ಞಾಸೆ ನಿನ್ನ ಮನ ಮಾಡಬಹುದು. ವೈಯಕ್ತಿಕವಾಗಿ ಓರ್ವ ವ್ಯಕ್ತಿಯಾಗಿ ಯೋಚಿಸುವುದಾದರೆ, ವೈಯಕ್ತಿಕ ಸಂಬಂಧದಲ್ಲಿ ಇದು ವಂಚನೆ ಎಂದಾಗುತ್ತದೆ. ಆದರೆ ರಾಜನಿಗೆ ಆತನ ಸಾಮ್ರಾಜ್ಯ ಮತ್ತು ಪ್ರಜೆಗಳ ರಕ್ಷಣೆಗಾಗಿ ಇಂತಹ ಮಾರ್ಗ ಅವಲಂಬಿಸುವುದು ರಾಜಕಾರಣ ಮಾರ್ಗವಾಗುತ್ತದೆ. ಹಾಗೆಂದು ಅರಸನಾದವ ಅಕಾರಣವಾಗಿ ಯಾರ ಜೊತೆಗೂ ವೈರ ಬೆಳೆಸಬಾರದು. ದೇಶದ ಹಿತಚಿಂತಕನಾಗಿ, ರಕ್ಷಕನಾಗಿದ್ದು ದೇಶಕ್ಕೆ […] - [ಕಾರ್ಕಳ: ಮಾದಕ ದ್ರವ್ಯ ಆರೋಪಿಗೆ ಪಿ.ಐ.ಟಿ.ಎನ್.ಡಿ.ಪಿ.ಎಸ್ ಅಡಿ ಬಂಧನ ಆದೇಶ](https://news.nammakarla.in/%e0%b2%95%e0%b2%be%e0%b2%b0%e0%b3%8d%e0%b2%95%e0%b2%b3-%e0%b2%ae%e0%b2%be%e0%b2%a6%e0%b2%95-%e0%b2%a6%e0%b3%8d%e0%b2%b0%e0%b2%b5%e0%b3%8d%e0%b2%af-%e0%b2%86%e0%b2%b0%e0%b3%8b%e0%b2%aa%e0%b2%bf/): ಕಾರ್ಕಳ: ಮಾದಕ ದ್ರವ್ಯ ಸಾಗಾಟ ಮತ್ತು ಮಾರಾಟ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಆರೋಪಿಯೊಬ್ಬನ ವಿರುದ್ಧ ಕಠಿಣ ಪಿ.ಐ.ಟಿ.ಎನ್.ಡಿ.ಪಿ.ಎಸ್ ಕಾಯ್ದೆಯಡಿ ಬಂಧನ ಆದೇಶ ಹೊರಡಿಸಲಾಗಿದೆ. ಬಂಧನಕ್ಕೊಳಗಾದವನನ್ನು ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ಬಂಗ್ಲೆಗುಡ್ಡೆ ನಿವಾಸಿ ಮಹಮ್ಮದ್ ಪೈಝಲ್ (22) ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಒಟ್ಟು ಐದು ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ ಎರಡು ಪ್ರಕರಣಗಳಲ್ಲಿ ಶಿಕ್ಷೆ ವಿಧಿಸಲಾಗಿದೆ. ಉಳಿದ ಪ್ರಕರಣಗಳಲ್ಲಿ ಎರಡು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದು, ಒಂದು ಪ್ರಕರಣ ತನಿಖೆ ಹಂತದಲ್ಲಿದೆ. ಆರೋಪಿಯ ನಿರಂತರ ಅಪರಾಧ ಚಟುವಟಿಕೆಗಳನ್ನು ಗಮನಿಸಿದ ಕಾರ್ಕಳ ನಗರ ಠಾಣೆ ಪೊಲೀಸರು ವರದಿ ಸಲ್ಲಿಸಿದ್ದರು. ಇದರ ಆಧಾರದ ಮೇಲೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಶಿಫಾರಸ್ಸು ಮಾಡಿದ್ದು, ಮಂಗಳೂರು ಪಶ್ಚಿಮ ವಲಯ ಐಜಿಪಿ ಏಪ್ರಿಲ್ 7 ರಂದು ಬಂಧನ ಆದೇಶ ಹೊರಡಿಸಿದ್ದಾರೆ. ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿ, ಮುಂದಿನ ಕ್ರಮವಾಗಿ ಧಾರವಾಡದ ಕೇಂದ್ರ ಕಾರಾಗೃಹಕ್ಕೆ ಒಪ್ಪಿಸಲು ಸಿದ್ಧತೆ ನಡೆಸುತ್ತಿದ್ದಾರೆ. - [ರೆಂಜಾಳ:ಪೇರಲ್ಡಬೆಟ್ಟುವಿನ ಬಂಗಂದಬೆಟ್ಟು ತಿರುವಿನಲ್ಲಿ ಕ್ರೇನ್ ಪಲ್ಟಿ](https://news.nammakarla.in/%e0%b2%b0%e0%b3%86%e0%b2%82%e0%b2%9c%e0%b2%be%e0%b2%b3%e0%b2%aa%e0%b3%87%e0%b2%b0%e0%b2%b2%e0%b3%8d%e0%b2%a1%e0%b2%ac%e0%b3%86%e0%b2%9f%e0%b3%8d%e0%b2%9f%e0%b3%81%e0%b2%b5%e0%b2%bf%e0%b2%a8-%e0%b2%ac/): ರೆಂಜಾಳ:ಪೇರಲ್ಡಬೆಟ್ಟುವಿನ ಬಂಗಂದಬೆಟ್ಟು ತಿರುವಿನಲ್ಲಿ ಕಾರ್ಕಳದಿಂದ ರೆಂಜಾಳ ಕಡೆಗೆ ಚಲಿಸುತ್ತಿದ್ದ ಕ್ರೇನ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಸಂಜೆ 5 ಗಂಟೆಯ ಸುಮಾರಿಗೆ ನಡೆದಿದೆ.ಅದೃಷ್ಟವಶಾತ್ ಚಾಲಕ ಅಪಾಯದಿಂದ ಪಾರಾಗಿದ್ದಾನೆ. - [ಶಬರಿಮಲೆ ಮಹಿಳಾ ಪ್ರವೇಶ ಪ್ರಕರಣ: 9 ನ್ಯಾಯಾಧೀಶರ ಪೀಠದಲ್ಲಿ ಮಹತ್ವದ ವಿಚಾರಣೆ ಆರಂಭ](https://news.nammakarla.in/%e0%b2%b6%e0%b2%ac%e0%b2%b0%e0%b2%bf%e0%b2%ae%e0%b2%b2%e0%b3%86-%e0%b2%ae%e0%b2%b9%e0%b2%bf%e0%b2%b3%e0%b2%be-%e0%b2%aa%e0%b3%8d%e0%b2%b0%e0%b2%b5%e0%b3%87%e0%b2%b6-%e0%b2%aa%e0%b3%8d%e0%b2%b0/): ನವದೆಹಲಿ: ಕೇರಳದ ಪ್ರಸಿದ್ಧ ಶಬರಿಮಲೆ ದೇವಸ್ಥಾನಕ್ಕೆ ಎಲ್ಲಾ ವಯಸ್ಸಿನ ಮಹಿಳೆಯರಿಗೆ ಪ್ರವೇಶ ನೀಡುವ ವಿಷಯದಲ್ಲಿ ಮತ್ತೆ ಚರ್ಚೆ ತೀವ್ರಗೊಂಡಿದೆ. ಈ ಸಂಬಂಧ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಇಂದು ತನ್ನ ನಿಲುವು ತಿಳಿಸಿದ್ದು, ಇದು ಲಿಂಗ ಆಧಾರಿತ ತಾರತಮ್ಯವಲ್ಲ, ದೀರ್ಘಕಾಲದ ಧಾರ್ಮಿಕ ಸಂಪ್ರದಾಯಕ್ಕೆ ಸಂಬಂಧಿಸಿದ ವಿಷಯ ಎಂದು ಸ್ಪಷ್ಟಪಡಿಸಿದೆ. 2018ರಲ್ಲಿ ನೀಡಿದ್ದ ತೀರ್ಪಿನ ವಿರುದ್ಧ ಸಲ್ಲಿಸಲಾದ ಪರಿಶೀಲನಾ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್‌ನ 9 ನ್ಯಾಯಾಧೀಶರ ಸಂವಿಧಾನ ಪೀಠ ಇಂದು ಆರಂಭಿಸಿದೆ. ಈ ವಿಚಾರಣೆಗೆ ಮುನ್ನವೇ ಕೇಂದ್ರ ಸರ್ಕಾರ ತನ್ನ ಲಿಖಿತ ಪ್ರತಿಕ್ರಿಯೆಯನ್ನು ಸಲ್ಲಿಸಿದ್ದು, ವಿಷಯದ ಸೂಕ್ಷ್ಮತೆಯನ್ನು ಒತ್ತಿಹೇಳಿದೆ. ಪೂಜಾ ಸ್ಥಳ ಪ್ರವೇಶವನ್ನು ಲಿಂಗ ಸಮಾನತೆಯ ಪ್ರಶ್ನೆಯಾಗಿ ನೋಡುವುದಕ್ಕೆ ಅವಕಾಶವಿಲ್ಲ ಎಂದು ಕೇಂದ್ರ ಹೇಳಿದೆ. ಶಬರಿಮಲೆಯಲ್ಲಿ 10ರಿಂದ 50 ವರ್ಷ ವಯಸ್ಸಿನ ಮಹಿಳೆಯರ ಪ್ರವೇಶದ ನಿರ್ಬಂಧವು ಅಯ್ಯಪ್ಪ ಸ್ವಾಮಿಯ ನೈಷ್ಠಿಕ ಬ್ರಹ್ಮಚರ್ಯ ಧರ್ಮಕ್ಕೆ ಸಂಬಂಧಿಸಿದೆ, ಅದು ಮಹಿಳೆಯರ ವಿರುದ್ಧದ ಯಾವುದೇ ಹೀನಭಾವ ಅಥವಾ ಅಶುದ್ಧತೆಯ ಕಲ್ಪನೆಯಿಂದ ಉಂಟಾಗಿಲ್ಲ ಎಂದು ಸರ್ಕಾರ ವಿವರಿಸಿದೆ. […] - [ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರದಲ್ಲಿ, ಉನ್ನತ ಮಟ್ಟದ ಧ್ಯಾನ ತರಬೇತಿ ಕಾರ್ಯಕ್ರಮ](https://news.nammakarla.in/%e0%b2%b6%e0%b3%8d%e0%b2%b0%e0%b3%80-%e0%b2%b6%e0%b3%8d%e0%b2%b0%e0%b3%80-%e0%b2%b0%e0%b2%b5%e0%b2%bf%e0%b2%b6%e0%b2%82%e0%b2%95%e0%b2%b0-%e0%b2%b5%e0%b2%bf%e0%b2%a6%e0%b3%8d%e0%b2%af%e0%b2%be-35/) - [ಕಾರ್ಕಳದ ಸರ್ಕಾರಿ ಬಿ.ಎಸ್‌ಸಿ. ನರ್ಸಿಂಗ್ ಕಾಲೇಜಿನ ಮೊದಲ ಬ್ಯಾಚ್‌ ನ 04 ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದ ಟಾಪರ್ಸ್ ಪಟ್ಟಿಯಲ್ಲಿ ಸ್ಥಾನ. ಅಭಿನಂದನೀಯ-ವಿ ಸುನಿಲ್‌ ಕುಮಾರ್](https://news.nammakarla.in/%e0%b2%95%e0%b2%be%e0%b2%b0%e0%b3%8d%e0%b2%95%e0%b2%b3%e0%b2%a6-%e0%b2%b8%e0%b2%b0%e0%b3%8d%e0%b2%95%e0%b2%be%e0%b2%b0%e0%b2%bf-%e0%b2%ac%e0%b2%bf-%e0%b2%8e%e0%b2%b8%e0%b3%8d%e0%b2%b8/): ಕಾರ್ಕಳ: ಕಾರ್ಕಳದಲ್ಲಿ 2022ರಲ್ಲಿ ಪ್ರಾರಂಭವಾದ ಸರ್ಕಾರಿ ಬಿ.ಎಸ್‌ಸಿ. ನರ್ಸಿಂಗ್ ಕಾಲೇಜು, ಕಾರ್ಕಳದ ಮೊದಲ ತಂಡದ 32 ವಿದ್ಯಾರ್ಥಿಗಳು ನಾಲ್ಕು ವರ್ಷದ ನರ್ಸಿಂಗ್ ಕೋರ್ಸನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಅವರಲ್ಲಿ ನಾಲ್ವರು ವಿದ್ಯಾರ್ಥಿಗಳು ರ್ಯಾಂಕ್‌ ಪಡೆದು ವಿಶ್ವವಿದ್ಯಾಲಯದ ಟಾಪರ್ಸ್ ಪಟ್ಟಿಯಲ್ಲಿ ಸ್ಥಾನ ಗಳಿಸುವ ಮೂಲಕ ಕಾಲೇಜಿಗೆ ಜೊತೆಗೆ ನಮ್ಮ ಕಾರ್ಕಳಕ್ಕೆ ಕೀರ್ತಿ ತಂದಿರುವುದು ಅಭಿನಂದನೀಯ ಎಂದು ಶಾಸಕ ವಿ. ಸುನಿಲ್ ಕುಮಾರ್ ತಿಳಿಸಿದ್ದಾರೆ. ಮೈಕ್ರೋಬಯಾಲಜಿ ವಿಭಾಗದಲ್ಲಿ ಕು। ಕೃತಿ ಎ ಅವರು 5ನೇ ರ್ಯಾಂಕ್ ಹಾಗೂ ರಿಸರ್ಚ್ ಅಂಡ್ ಸ್ಪಾಟಿಸ್ಟಿಕ್ಸ್ ವಿಷಯದಲ್ಲಿ 9ನೇ ಕ್ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ. ಸಮುದಾಯ ಆರೋಗ್ಯ ಶುಶೂಷಾ ವಿಭಾಗದಲ್ಲಿ ಕು! ವಸಂತಿ ಬಾಲು ನಾಯಕ್ ಅವರು 7ನೇ ರಂಕ್ ಪಡೆದಿದ್ದಾರೆ. ಫಾರ್ಮಕಾಲಜಿ, ಪೆಥಾಲಜಿ ಮತ್ತು ಜೆನೆಟಿಕ್ಸ್ ವಿಷಯಗಳಲ್ಲಿ ಕು| ನಿಶಾ ಥಾಮಸ್ ಅವರು 8ನೇ ಯಾಂಕ್ ಗಳಿಸಿದ್ದಾರೆ. ನ್ಯೂಟ್ರಿಷನ್ ಮತ್ತು ಬಯೋಕೆಮಿಸ್ಟ್ರಿ ವಿಭಾಗದಲ್ಲಿ ಶ್ರೀ ವಿನೋದ್ ಶಿದ್ದಲಿಂಗಪ್ಪ ಶಿವನಗುಟ್ಟಿ ಅವರು 9ನೇ ಯಾಂಕ್ ಪಡೆದು ಮೆಚ್ಚುಗೆಗೆ ಪಾತ್ರರಾಗಿದ್ದಾರೆ. […] - [ಇಂದು ಕಾರ್ಕಳದ ಪೊಲೀಸ್ ಇಲಾಖಾ ವತಿಯಿಂದ ಗುಳಿಗ ದೈವಸ್ಥಾನದಲ್ಲಿ ಕಾಲಾವಧಿ ನೇಮೋತ್ಸವ](https://news.nammakarla.in/%e0%b2%87%e0%b2%82%e0%b2%a6%e0%b3%81-%e0%b2%95%e0%b2%be%e0%b2%b0%e0%b3%8d%e0%b2%95%e0%b2%b3%e0%b2%a6-%e0%b2%aa%e0%b3%8a%e0%b2%b2%e0%b3%80%e0%b2%b8%e0%b3%8d-%e0%b2%87%e0%b2%b2%e0%b2%be%e0%b2%96/): ಇಂದು ಏಪ್ರಿಲ್ 07 ಮಂಗಳವಾರದಂದು ಕಾರ್ಕಳ ನಗರ ಪೊಲೀಸ್ ಠಾಣೆ ಮತ್ತು ಕಾರ್ಕಳ ಗ್ರಾಮಾಂತರ ಪೋಲಿಸ್ ಠಾಣೆ ವತಿಯಿಂದ ಕಾರ್ಕಳದ ತಾಲೂಕು ಗುಡ್ಡೆ ಗುಳಿಗ ದೈವಸ್ಥಾನದಲ್ಲಿ ಕಾಲಾವಧಿ ನೇಮೋತ್ಸವ ನಡೆಯಲಿದೆ. ರಾತ್ರಿ ಗಂಟೆ ಎಂಟು ಮೂವತ್ತಕ್ಕೆ ಗಗ್ಗರಸೇವೆ ಹಾಗೂ 9:30ಕ್ಕೆ ಅನ್ನ ಸಂತರ್ಪಣೆ ನಡೆಯಲಿದೆ. ಈ ಧಾರ್ಮಿಕ ಕಾರ್ಯಕ್ರಮಕ್ಕೆ ಸ್ಥಳೀಯರು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪೊಲೀಸ್ ಠಾಣಾ ವತಿಯಿಂದ ಆಹ್ವಾನಿಸಲಾಗಿದೆ. - [ಏಪ್ರಿಲ್ 9ಕ್ಕೆ ದ್ವಿತೀಯ ಪಿಯುಸಿ ರಿಸಲ್ಟ್ ಪ್ರಕಟ ಸಾಧ್ಯತೆ](https://news.nammakarla.in/%e0%b2%8f%e0%b2%aa%e0%b3%8d%e0%b2%b0%e0%b2%bf%e0%b2%b2%e0%b3%8d-9%e0%b2%95%e0%b3%8d%e0%b2%95%e0%b3%86-%e0%b2%a6%e0%b3%8d%e0%b2%b5%e0%b2%bf%e0%b2%a4%e0%b3%80%e0%b2%af-%e0%b2%aa%e0%b2%bf%e0%b2%af/): ಬೆಂಗಳೂರು : ದ್ವಿತೀಯ ಪಿಯುಸಿ ಫಲಿತಾಂಶದ ದಿನಾಂಕದ ಬಗ್ಗೆ ಇದ್ದ ಗೊಂದಲಕ್ಕೆ ತೆರೆ ಬಿದ್ದಿದ್ದು, ಏಪ್ರಿಲ್ 9 ರಂದು ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಬಹುತೇಕ ಖಚಿತವಾಗಿದೆ. ಪರೀಕ್ಷಾ ಮಂಡಳಿ ಅಧಿಕಾರಿಗಳು ಈ ಮಾಹಿತಿ ನೀಡಿದ್ದು, ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸುದ್ದಿಗೋಷ್ಠಿಯಲ್ಲಿ ಫಲಿತಾಂಶ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಫಲಿತಾಂಶ ಪ್ರಕಟವಾದ ಬಳಿಕ ವಿದ್ಯಾರ್ಥಿಗಳು karresults.nic.in ಮತ್ತು kseab.karnataka.gov.in ವೆಬ್‌ಸೈಟ್‌ಗಳಲ್ಲಿ ಮಧ್ಯಾಹ್ನ 12 ಗಂಟೆಯಿಂದ ತಮ್ಮ ಫಲಿತಾಂಶ ಪರಿಶೀಲಿಸಬಹುದು. ಫೆಬ್ರವರಿ 28ರಿಂದ ಮಾರ್ಚ್ 17ರವರೆಗೆ ನಡೆದ ಪರೀಕ್ಷೆಗೆ ಸುಮಾರು 7.1 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿದ್ದರು.ಮೌಲ್ಯಮಾಪನ ಕಾರ್ಯಗಳು ಪೂರ್ಣಗೊಳ್ಳುವ ಹಂತದಲ್ಲಿರುವುದರಿಂದ ಫಲಿತಾಂಶ ಪ್ರಕಟಣೆ ತಡವಾಗಿತ್ತು. ಈಗ ಏಪ್ರಿಲ್ 9ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. - [ಉದಯೋತ್ಸವ ಸಂಭ್ರಮದ ನಡುವೆ ಮಾದರಿಯಾದ ಪ್ರಾಮಾಣಿಕತೆ: ಸಿಕ್ಕ ಚಿನ್ನದ ಬ್ರೇಸ್ ಲೆಟ್ ವಾರಸುದಾರರಿಗೆ ಹಸ್ತಾಂತರ](https://news.nammakarla.in/%e0%b2%89%e0%b2%a6%e0%b2%af%e0%b3%8b%e0%b2%a4%e0%b3%8d%e0%b2%b8%e0%b2%b5-%e0%b2%b8%e0%b2%82%e0%b2%ad%e0%b3%8d%e0%b2%b0%e0%b2%ae%e0%b2%a6-%e0%b2%a8%e0%b2%a1%e0%b3%81%e0%b2%b5%e0%b3%86-%e0%b2%ae/): ಇತ್ತೀಚೆಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಸ್ರಿಬೈಲೂರಿನಲ್ಲಿ ನಡೆದ ಅದ್ದೂರಿ ‘ಉದಯೋತ್ಸವ’ ಕಾರ್ಯಕ್ರಮವು ಸಮಾಜಕ್ಕೆ ಪ್ರಾಮಾಣಿಕತೆಯ ದೊಡ್ಡ ಸಂದೇಶವೊಂದನ್ನು ನೀಡಿದೆ. ​ದಿನಾಂಕ 03-04-2026 ರಂದು ನಡೆದ ಈ ಕಾರ್ಯಕ್ರಮದ ಸಂದರ್ಭದಲ್ಲಿ ಜೋಡುರಸ್ತೆಯ ನಿವಾಸಿ ಸದಾನಂದ ನಾಯಕ್ ಅವರಿಗೆ ಸೇರಿದ ಬೆಲೆಬಾಳುವ ಚಿನ್ನದ ಬ್ರೇಸ್‌ಲೆಟ್ ಕಳೆದುಹೋಗಿತ್ತು. ಈ ಆಭರಣವು ಶಾಲಾ ಮಕ್ಕಳಾದ ನಾಗೇಂದ್ರ ಮತ್ತು ಅಶ್ವಂತ್ ಅವರಿಗೆ ಸಿಕ್ಕಿದ್ದು, ಅವರು ತಕ್ಷಣವೇ ಇದನ್ನು ಶಾಲಾ ಪೋಷಕರಾದ ಜಾಕೀರ್ ಹುಸೇನ್ ಅವರ ಗಮನಕ್ಕೆ ತಂದರು. ಜಾಕೀರ್ ಹುಸೇನ್ ಅವರು ಕಿಂಚಿತ್ತೂ ತಡಮಾಡದೆ ಬ್ರೇಸ್‌ಲೆಟ್ ಅನ್ನು ಉದಯೋತ್ಸವ ಸಮಿತಿಗೆ ಹಸ್ತಾಂತರಿಸಿದರು. ​ಸಮಿತಿಯವರು ಈ ವಿಚಾರವನ್ನು ವಾಟ್ಸಾಪ್ ಗುಂಪುಗಳಲ್ಲಿ ಹಂಚಿಕೊಂಡು ವಾರಸುದಾರರನ್ನು ಹುಡುಕುವಲ್ಲಿ ಯಶಸ್ವಿಯಾದರು. ಅದರಂತೆ ದಿನಾಂಕ 07-04-2026 ರಂದು ಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಶಿಕ್ಷಕರ ಹಾಗೂ ಮಕ್ಕಳ ಸಮ್ಮುಖದಲ್ಲಿ ಉದಯೋತ್ಸವ ಸಮಿತಿಯವರು ಆಭರಣವನ್ನು ಅದರ ನಿಜವಾದ ವಾರಸುದಾರರಾದ ಸದಾನಂದ ನಾಯಕ್ ಅವರಿಗೆ ಹಸ್ತಾಂತರಿಸಿದರು. ​ಮಕ್ಕಳ ಈ ಅದ್ಭುತ ಪ್ರಾಮಾಣಿಕತೆ ಮತ್ತು ಪೋಷಕರಾದ ಜಾಕೀರ್ ಹುಸೇನ್ […] - [ಶ್ರೀ ದುರ್ಗಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಕುಕ್ಕುಂದೂರು](https://news.nammakarla.in/%e0%b2%b6%e0%b3%8d%e0%b2%b0%e0%b3%80-%e0%b2%a6%e0%b3%81%e0%b2%b0%e0%b3%8d%e0%b2%97%e0%b2%be-%e0%b2%85%e0%b2%a8%e0%b3%81%e0%b2%a6%e0%b2%be%e0%b2%a8%e0%b2%bf%e0%b2%a4-%e0%b2%b9%e0%b2%bf%e0%b2%b0-31/): ಏಳನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಶ್ರೀ ದುರ್ಗಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕುಕ್ಕುಂದೂರು ಇಲ್ಲಿ ಇಂದು 2025ನೇ 26 ನೇ ಸಾಲಿನ 7ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭವನ್ನು ಮುಖ್ಯ ಶಿಕ್ಷಕರದ ಜಗದೀಶ್ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಯಿತು. ಎಲ್ಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಏಳನೇ ತರಗತಿ ಹಾಗೂ ಇತರ ತರಗತಿಯ ಮಕ್ಕಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಗೀತಾ ಭಂಡಾರಿ ಹಾಗೂ ಮುಖ್ಯೋಪಾಧ್ಯಾಯರಾದ ಜಗದೀಶ್ ರವರು ಮಕ್ಕಳಿಗೆ ಹಿತನುಡಿಗಳನ್ನು ನೀಡಿದರು. ಏಳನೇ ತರಗತಿಯ ವಿದ್ಯಾರ್ಥಿಗಳು ಶಾಲೆಗೆ ಅಗತ್ಯ ವಸ್ತುಗಳ ಕೊಡುಗೆಯನ್ನು ನೀಡಿದರು. ನಂತರ ಸಿಹಿ ಊಟದ ವ್ಯವಸ್ಥೆಯನ್ನು ಗೀತಾ ಭಂಡಾರಿ ಇವರ ವತಿಯಿಂದ ಮಾಡಲಾಗಿತ್ತು. ನಿವೃತ್ತ ಶಿಕ್ಷಕರಾದ ರತ್ನ ಟೀಚರ್ ನಿವೃತ್ತ ಮುಖ್ಯ ಶಿಕ್ಷಕರಾದ ಸತೀಶ್ ಶೆಟ್ಟಿ , ದಯಾನಂದ್ ಕೆ ಸಂಚಾಲಕರಾದ ರಾಧಾಕೃಷ್ಣ ಶೆಟ್ಟಿ, ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ವೃಷಭ ರಾಜಕಡಂಬ ಹಾಗೂ ಶಾಲಾಭಿಮಾನಿಯಾದ ಡಾಕ್ಟರ್ ಭರತೇಶ್ ಹಾಗೂ ಸಹಶಿಕ್ಷಕಿ ಲತಾ ರವರು ಉಪಸ್ಥಿತರಿದ್ದರು. ಎಲ್ಲರನ್ನು ಸ್ವಾಗತಿಸಿ, […] - [ಹಿಂದಿ ಹೇರಿಕೆಗೆ ತಮಿಳುನಾಡು ವಿರೋಧ: ದ್ವಿಭಾಷಾ ನೀತಿ ಮುಂದುವರಿಕೆ ಎಂದ ಸ್ಟಾಲಿನ್](https://news.nammakarla.in/%e0%b2%b9%e0%b2%bf%e0%b2%82%e0%b2%a6%e0%b2%bf-%e0%b2%b9%e0%b3%87%e0%b2%b0%e0%b2%bf%e0%b2%95%e0%b3%86%e0%b2%97%e0%b3%86-%e0%b2%a4%e0%b2%ae%e0%b2%bf%e0%b2%b3%e0%b3%81%e0%b2%a8%e0%b2%be%e0%b2%a1%e0%b3%81/): ತಂಜಾವೂರು: ತಮಿಳುನಾಡು ಉಪ ಮುಖ್ಯಮಂತ್ರಿ ಉದಯ ನಿಧಿ ಸ್ಟಾಲಿನ್ “ತಮಿಳುನಾಡಿನಲ್ಲಿ ಹಿಂದಿ ಹೇರಿಕೆಯನ್ನು ಯಾವ ಸಂದರ್ಭದಲ್ಲೂ ಒಪ್ಪಿಕೊಳ್ಳುವುದಿಲ್ಲ. ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ ತ್ರಿಭಾಷಾ ಸೂತ್ರವನ್ನು ತಿರಸ್ಕರಿಸಿರುವ ನಾವು, ತಮಿಳು ಮತ್ತು ಇಂಗ್ಲಿಷ್ ಒಳಗೊಂಡ ದ್ವಿಭಾಷಾ ನೀತಿಯನ್ನೇ ಮುಂದುವರಿಸುವುದಾಗಿ” ಸ್ಪಷ್ಟವಾಗಿ ತಿಳಿಸಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಕೇಂದ್ರ ಸರ್ಕಾರ ತಮಿಳುನಾಡಿನ ಮೇಲೆ ಹಿಂದಿಯನ್ನು ಬಲವಂತವಾಗಿ ಹೇರಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ಅವರು ಎನ್ಇಪಿ ಅನುಮೋದನೆ ಎಂದರೆ ಹಿಂದಿ ಪ್ರಾಬಲ್ಯವನ್ನು ಒಪ್ಪಿಕೊಂಡಂತಾಗುತ್ತದೆ. ರಾಜ್ಯದ ಭಾಷಾ ಗೌರವಕ್ಕೆ ಧಕ್ಕೆಯಾಗುವ ಯಾವುದೇ ಕ್ರಮವನ್ನು ಒಪ್ಪುವುದಿಲ್ಲ. ಅಣ್ಣಾ ಕಾಲದಿಂದ ನಡೆದು ಬಂದಿರುವ ದ್ವಿಭಾಷಾ ನೀತಿಯನ್ನು ಮುಂದುವರಿಸುವಲ್ಲಿ ನಾವು ಕಟ್ಟುನಿಟ್ಟಾಗಿ ನಿಂತಿದ್ದೇವೆ” ಎಂದು ಪುನರುಚ್ಚರಿಸಿದರು. - [ಆರ್‌ಎಸ್‌ಎಸ್ ಎಂದರೆ ಅದು "ರಾಷ್ಟ್ರೀಯ ಸುಳ್ಳು ಸಂಘಟನೆ" : ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್](https://news.nammakarla.in/%e0%b2%86%e0%b2%b0%e0%b3%8d%e0%b2%8e%e0%b2%b8%e0%b3%8d%e0%b2%8e%e0%b2%b8%e0%b3%8d-%e0%b2%8e%e0%b2%82%e0%b2%a6%e0%b2%b0%e0%b3%86-%e0%b2%85%e0%b2%a6%e0%b3%81-%e0%b2%b0%e0%b2%be/): ದಾವಣಗೆರೆ: ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಆರ್‌ಎಸ್‌ಎಸ್ ಅನ್ನು “ರಾಷ್ಟ್ರೀಯ ಸುಳ್ಳು ಸಂಘಟನೆ” ಎಂದು ಕರೆಯುತ್ತಾ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕವು ಎಲ್ಲ ಸಮುದಾಯಗಳ ಸಹಜ ಸಹಬಾಳ್ವೆಯ ನೆಲೆಯಾಗಿದ್ದು, ಇಲ್ಲಿ ದ್ವೇಷದ ರಾಜಕೀಯ ಮಾಡಲು ಬಿಜೆಪಿ ಯತ್ನಿಸುತ್ತಿದೆ. ಜನರಿಗೆ ಶಿಕ್ಷಣ, ಆರೋಗ್ಯ ಮತ್ತು ಶಾಂತಿ ಮುಖ್ಯ ಎಂದು ಅವರು ಹೇಳಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಇನ್ನೂ ರಾಜಕೀಯದಲ್ಲಿ ಆರಂಭಿಕ ಹಂತದಲ್ಲಿದ್ದಾರೆ ಎಂದು ಟೀಕಿಸಿದ ಅವರು, ಅಲ್ಪಸಂಖ್ಯಾತರ ರಕ್ಷಣೆಯ ಬಗ್ಗೆ ಅವರ ಮಾತು ವಿಶ್ವಾಸಾರ್ಹವಲ್ಲ ಎಂದರು. ನೆಹರು ಕಾಲದ ಅಲಿಪ್ತ ನೀತಿಯನ್ನು ಕೇಂದ್ರ ಸರ್ಕಾರ ಬದಲಿಸಿರುವುದರಿಂದ ವಿದೇಶಾಂಗ ಸಂಬಂಧಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹೇಳಿದರು. ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ಹೇಳಿಕೆಗಳನ್ನೂ ತರಾಟೆಗೆ ತೆಗೆದುಕೊಂಡ ಹರಿಪ್ರಸಾದ್, ಅವರ ಕನ್ನಡದ ಪಾಂಡಿತ್ಯದ ಬಗ್ಗೆ ವ್ಯಂಗ್ಯವಾಡಿದರು. ಹಿಂದಿಯನ್ನು ಹೇರಿಕೆ ಮಾಡಬಾರದು ಎಂಬುದು ನಮ್ಮ ನಿಲುವು, ಆದರೆ ಯಾವುದೇ […] - [ವಿಚ್ಛೇದನ ಸಂಭ್ರಮಿಸಿದ ಕುಟುಂಬ: ಮಗಳಿಗೆ ಬೆಂಬಲವಾಗಿ ತಂದೆಯ ವಿಶಿಷ್ಟ ಸಂದೇಶ](https://news.nammakarla.in/%e0%b2%b5%e0%b2%bf%e0%b2%9a%e0%b3%8d%e0%b2%9b%e0%b3%87%e0%b2%a6%e0%b2%a8-%e0%b2%b8%e0%b2%82%e0%b2%ad%e0%b3%8d%e0%b2%b0%e0%b2%ae%e0%b2%bf%e0%b2%b8%e0%b2%bf%e0%b2%a6-%e0%b2%95%e0%b3%81%e0%b2%9f%e0%b3%81/): ಮೀರತ್: ಸಮಾಜದಲ್ಲಿ ವಿಚ್ಛೇದನವನ್ನು ಇನ್ನೂ ನಕಾರಾತ್ಮಕವಾಗಿ ನೋಡಲಾಗುತ್ತಿದ್ದು, ವಿಶೇಷವಾಗಿ ಮಹಿಳೆಯರಿಗೆ ಅದು ಮಾನಸಿಕ ಒತ್ತಡ ಹಾಗೂ ಸಾಮಾಜಿಕ ಟೀಕೆಗಳಿಗೆ ಕಾರಣವಾಗುತ್ತದೆ. ಆದರೆ ಕೆಲವು ಕುಟುಂಬಗಳು ಈ ಹಳೆಯ ಮನೋಭಾವವನ್ನು ಮುರಿದು, ಹೊಸದಾಗಿ ಯೋಚಿಸುವ ಉದಾಹರಣೆಗಳನ್ನು ಸೃಷ್ಟಿಸುತ್ತಿವೆ. ಅಂತಹವೇ ಒಂದು ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ಬೆಳಕಿಗೆ ಬಂದಿದೆ. ನಿವೃತ್ತ ನ್ಯಾಯಾಧೀಶರಾದ ಡಾ. ಜ್ಞಾನೇಂದ್ರ ಶರ್ಮಾ ಅವರ ಪುತ್ರಿ ಪ್ರಣಿತಾ ಅವರಿಗೆ ಮೀರತ್‌ನ ಕೌಟುಂಬಿಕ ನ್ಯಾಯಾಲಯ ವಿಚ್ಛೇದನ ಮಂಜೂರು ಮಾಡಿದ ಬಳಿಕ, ಕುಟುಂಬವು ಅದನ್ನು ಸಂಭ್ರಮದಿಂದ ಆಚರಿಸಿದೆ. ನ್ಯಾಯಾಲಯದ ಹೊರಗೆ ಡೋಲು-ನಾಗಾರಿಗಳನ್ನು ಬಾರಿಸಿ, ಸಿಹಿ ಹಂಚುವ ಮೂಲಕ ವಿಶೇಷ ರೀತಿಯಲ್ಲಿ ಮಗಳನ್ನು ಮನೆಗೆ ಬರಮಾಡಿಕೊಂಡಿದ್ದಾರೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಚರ್ಚೆಗೆ ಕಾರಣವಾಗಿವೆ. ಸಂಭ್ರಮಾಚರಣೆಯಲ್ಲಿ ಕುಟುಂಬದವರು ಪ್ರಣಿತಾ ಅವರ ಭಾವಚಿತ್ರವಿರುವ ಟೀ-ಶರ್ಟ್‌ಗಳನ್ನು ಧರಿಸಿದ್ದು ಗಮನಸೆಳೆಯಿತು. “ನಾನು ನನ್ನ ಮಗಳನ್ನು ಪ್ರೀತಿಸುತ್ತೇನೆ, ಅವಳು ನನ್ನ ಶಕ್ತಿ” ಎಂಬ ಸಂದೇಶದ ಮೂಲಕ ಕುಟುಂಬವು ತಮ್ಮ ಬೆಂಬಲವನ್ನು ಸ್ಪಷ್ಟಪಡಿಸಿದೆ. ಪ್ರಣಿತಾ ಕೂಡ ಕುಟುಂಬದ ಬೆಂಬಲಕ್ಕೆ ಕೃತಜ್ಞತೆ […] - [ಮಹಾಭಾರತ](https://news.nammakarla.in/%e0%b2%ae%e0%b2%b9%e0%b2%be%e0%b2%ad%e0%b2%be%e0%b2%b0%e0%b2%a4-481/): ಭಾಗ – 481 ಭರತೇಶ ಶೆಟ್ಟಿ, ಎಕ್ಕಾರು ಬ್ರಹ್ಮದತ್ತನ ಅರಮನೆಯಲ್ಲಿ ‘ಪೂಜಿನಿ’ ಎಂಬ ಒಂದು ವಿಶೇಷ ಹಕ್ಕಿ ಗೂಡು ಕಟ್ಟಿ ವಾಸವಾಗಿತ್ತು. ಅದು ತಿರುಗಾಟಕ್ಕೆ ಹೊರ ಹೋದರೂ ಮರಳಿ ಬಂದು ಅರಮನೆಯಲ್ಲಿರುವ ತನ್ನ ಗೂಡಿನಲ್ಲಿ ವಾಸವಾಗಿರುತ್ತಿತ್ತು. ಹೀಗಿರಲು ಬ್ರಹ್ಮದತ್ತನ ಮಡದಿ ಆ ರಾಜ್ಯದ ರಾಣಿ ಗರ್ಭಿಣಿಯಾದಳು. ಕಾಲ ಕಳೆದು ರಾಣಿ ಒಂದು ಗಂಡು ಮಗುವಿಗೆ ಜನ್ಮ ನೀಡಿದಳು.ಕೆಲ ಸಮಯ ಕಳೆಯಲು ಹಕ್ಕಿಯೂ ಗೂಡಿನಲ್ಲಿ ಮೊಟ್ಟೆ ಇಟ್ಟಿತು. ದಿನಗಳು ಕಳೆಯುತ್ತಿದ್ದಂತೆ ಕಾವು ಕೊಟ್ಟು ಮೊಟ್ಟೆಯೊಡೆದು ಮರಿಯೊಂದು ಹೊರ ಬಂತು. ಪೂಜಿನಿ ಹಕ್ಕಿ ಅರಸನ ಪ್ರೀತಿ ಪಾತ್ರವಾಗಿದ್ದ ಕಾರಣ ಅರಮನೆಯ ವಾಸಿಗಳ್ಯಾರೂ ಅದಕ್ಕೆ ತೊಂದರೆ ನೀಡದೆ ಗೌರವದಿಂದ ಕಾಣುತ್ತಿದ್ದರು. ಹೀಗಿರಲು ಒಂದು ದಿನ ಪೂಜಿನಿ ಮರಿಯನ್ನು ಗೂಡಿನಲ್ಲಿ ಬಿಟ್ಟು ಬಹುದೂರ ಹಾರಿ ಹೋಗಿ, ಅಮೃತದ ಸವಿಯುಳ್ಳ ವಿಶಿಷ್ಟವಾದ ಎರಡು ಹಣ್ಣುಗಳನ್ನು ತಂದಿತು. ಒಂದು ಹಣ್ಣನ್ನು ತನ್ನ ಮರಿಗೂ ಇನ್ನೊಂದನ್ನು ರಾಜನ ಮಗನಿಗೂ ನೀಡಿತು. ಪೂಜಿನಿ ತಂದ ಹಣ್ಣು ಅದ್ಬುತ ಶಕ್ತಿ ಹೊಂದಿದ್ದ ಕಾರಣ ರಾಜಕುಮಾರನೂ […] - [ಮುದ್ರಾಡಿ ಸೇವಾ ಸಂಗಮ, ಶಿಶು ಮಂದಿರ "ರಜತ ಮಹೋತ್ಸವ"](https://news.nammakarla.in/%e0%b2%ae%e0%b3%81%e0%b2%a6%e0%b3%8d%e0%b2%b0%e0%b2%be%e0%b2%a1%e0%b2%bf-%e0%b2%b8%e0%b3%87%e0%b2%b5%e0%b2%be-%e0%b2%b8%e0%b2%82%e0%b2%97%e0%b2%ae-%e0%b2%b6%e0%b2%bf%e0%b2%b6%e0%b3%81-%e0%b2%ae-2/): ಹೆಬ್ರಿ :ಮುದ್ರಾಡಿ ಸುಬ್ಬಣ್ಣಕಟ್ಟೆ ಸೇವಾ ಸಂಗಮ ಶಿಶುಮಂದಿರದ ರಜತಮಹೋತ್ಸವ ಕಾರ್ಯಕ್ರಮವು ಶಿಶುಮಂದಿರ ರಂಗ ಮಂದಿರದಲ್ಲಿ ಎ. 4 ರಂದು ನಡೆಯಿತು. ಶಿಶುಮಂದಿರದ ಪುಟಾಣಿ ಗಳಿಂದ ನೃತ್ಯ ಅಭಿನಯ, ಬಾಲಗೋಕುಲ ಮಕ್ಕಳಿಂದ ವಿವಿಧ ವಿನೋದಾವಳಿಗಳು ನಡೆದ ಬಳಿಕ ಭಾರತಮಾತೆ ಭಾವಚಿತ್ರಕ್ಕೆ ದೀಪ ಬೆಳಗಿಸಿ, ಪುಷ್ಪಾರ್ಚನೆ ಸಲ್ಲಿಸಿ ಅತಿಥಿಗಳು ರಜತ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಭಾ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಲು ಆಗಮಿಸಿದ ಸಂವೇದನ ಫೌಂಡೇಶನ್ ಉಡುಪಿ ಇದರ ಅಧ್ಯಕ್ಷರಾದ ಪ್ರಕಾಶ್ ಮಲ್ಪೆ ಮಾತನಾಡಿ ಬಾಲ್ಯದಿಂದಲೇ ಮಕ್ಕಳು ಸಂಸ್ಕಾರವನ್ನು ಮತ್ತು ಜೀವನ ಪಾಠವನ್ನು ಕಲಿಯಬೇಕೆಂಬ ದೃಷ್ಟಿಯಿಂದ ಹಾಗೂ ಭಾರತೀಯ ಶಿಕ್ಷಣ ಪದ್ಧತಿಯನ್ನು ಉಳಿಸಬೇಕೆಂಬ ಉದ್ದೇಶದಿಂದ ಶಿಶುಮಂದಿರಗಳು ಪ್ರಾರಂಭವಾಯಿತು.ಶ್ರದ್ದೆ ಯಿಂದ ಮಕ್ಕಳು ಕಲಿತಾಗ ಮಾತ್ರ ಜೇವನ ಪರಿಪೂರ್ಣವಾಗಲು ಸಾಧ್ಯ.ಇಲ್ಲಿ ಮಕ್ಕಳಿಗೆ ನಮ್ಮ ಸಂಸ್ಕೃತಿ, ಸಂಸ್ಕಾರ, ಆಚಾರ, ವಿಚಾರಗಳನ್ನು ತಿಳಿಸುವ ಶಿಕ್ಷಣ ನೀಡಲಾಗುತ್ತಿದೆ.ಮುಂದಕ್ಕೆ ಮಕ್ಕಳು ದಾರಿ ತಪ್ಪದಂತೆ ನೋಡಿಕೊಳ್ಳುವ ಜವಾಬ್ದಾರಿ ಪೋಷಕರಿಗಿದೆ ಎಂದರು.ಕರ್ನಾಟಕ ಸರಕಾರ ಶ್ರೀ ನಾರಾಯಣಗುರು ಅಭಿವೃದ್ದಿ ನಿಗಮದ ರಾಜ್ಯಾಧ್ಯಕ್ಷರಾದ ಮಂಜುನಾಥ ಪೂಜಾರಿಯವರು ಮಾತನಾಡಿ […] - [ಕ್ರೈಸ್ಟ್ ಕಿಂಗ್ ಪದವಿ ಪೂರ್ವ ಕಾಲೇಜಿಗೆ ರಜತ ಸಂಭ್ರಮ, ಬೆಳ್ಳಿ ಹಬ್ಬದ ಸವಿ ನೆನಪಿಗಾಗಿ](https://news.nammakarla.in/%e0%b2%95%e0%b3%8d%e0%b2%b0%e0%b3%88%e0%b2%b8%e0%b3%8d%e0%b2%9f%e0%b3%8d-%e0%b2%95%e0%b2%bf%e0%b2%82%e0%b2%97%e0%b3%8d-%e0%b2%aa%e0%b2%a6%e0%b2%b5%e0%b2%bf-%e0%b2%aa%e0%b3%82%e0%b2%b0%e0%b3%8d/): *ಬಡ ಮತ್ತು ಗ್ರಾಮೀಣ ಭಾಗದ 25 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಘೋಷಣೆ* ಬೆಳ್ಳಿ ಹಬ್ಬದ ಸವಿ ನೆನಪಿಗಾಗಿ ಬಡ ಮತ್ತು ಗ್ರಾಮೀಣಭಾಗದ 25 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಘೋಷಣೆಕಾರ್ಕಳ: ಕಾರ್ಕಳ ನಗರ ಕೇಂದ್ರದಲ್ಲಿ ಕಾರ್ಯಾಚರಿಸುತ್ತಿದ್ದುಶಿಸ್ತು, ಗುಣಮಟ್ಟ, ಚಟುವಟಿಕಾ ಪೂರ್ಣ ಜ್ಞಾನಾಧಾರಿತ ಶಿಕ್ಷಣ ಹಾಗೂ ಅತ್ಯುತ್ತಮ ಫಲಿತಾಂಶಕ್ಕಾಗಿ ಉಡುಪಿ ಜಿಲ್ಲೆಯಲ್ಲಿಯೇಪ್ರಸಿದ್ಧಿಯಾಗಿರುವ ಸಂಸ್ಥೆ ಕ್ರೆöÊಸ್ಟ್ಕಿಂಗ್ ಪದವಿಪೂರ್ವ ಕಾಲೇಜು ಅತೀ ಕಡಿಮೆ ಶುಲ್ಕ ಹಾಗೂ ಅಂಕಗಳ ಮಿತಿ ಇಲ್ಲದೆ ದಾಖಲಾತಿಯನ್ನು ಅಳವಡಿಸಿಕೊಂಡಿರುವ ವಿದ್ಯಾರ್ಥಿಸ್ನೇಹಿಯಾಗಿರುವ ಕ್ರೈಸ್ಟ್ ಕಿಂಗ್ಪದವಿಪೂರ್ವ ಕಾಲೇಜು ತನ್ನ ಶೈಕ್ಷಣಿಕ ಸೇವಾ ಪಯಣದಲ್ಲಿ 25ವರ್ಷಗಳ ಸಾರ್ಥಕ ಮೈಲುಗಲ್ಲನ್ನು ತಲುಪಿದೆ. 25 ವರ್ಷಗಳಸಾರ್ಥಕ-ಸಾಧಕ ಪಯಣವನ್ನು ಪೂರ್ಣಗೊಳಿಸಿರುವ ಈಸಂದರ್ಭದಲ್ಲಿ ಸಂಸ್ಥೆಗೆ ಆಧುನಿಕ ಸೌಲಭ್ಯಗಳನ್ನುಒಳಗೊಂಡ ಸುಂದರ ಹಾಗೂ ಬೃಹತ್ ಕಾಲೇಜು ಕಟ್ಟಡನಿರ್ಮಾಣಗೊಂಡಿದೆ. ಈ ಸವಿನೆನಪನ್ನು ಇನ್ನಷ್ಟುಅವಿಸ್ಮರಣೀಯಗೊಳಿಸಲು ಸಂಸ್ಥೆಯು 2026-27ನೇ ಶೈಕ್ಷಣಿಕಸಾಲಿನಲ್ಲಿ ಗ್ರಾಮೀಣ ಹಾಗೂ ಬಡ ಕುಟುಂಬಗಳ 25 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ಘೋಷಣೆ ಮಾಡಿದೆ. ವಾಣಿಜ್ಯ ಹಾಗೂ ವಿಜ್ಞಾನ ವಿಭಾಗ ಸೇರಿಒಟ್ಟು 25 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ನೀಡಲು ಸಂಸ್ಥೆಯ […] - ["ಉಪಚುನಾವಣೆ ಫಲಿತಾಂಶಕ್ಕೂ ಸಿಎಂ ಬದಲಾವಣೆಗೆ ಸಂಬಂಧವಿಲ್ಲ" : ಗೃಹ ಸಚಿವ ಜಿ ಪರಮೇಶ್ವರ್](https://news.nammakarla.in/%e0%b2%89%e0%b2%aa%e0%b2%9a%e0%b3%81%e0%b2%a8%e0%b2%be%e0%b2%b5%e0%b2%a3%e0%b3%86-%e0%b2%ab%e0%b2%b2%e0%b2%bf%e0%b2%a4%e0%b2%be%e0%b2%82%e0%b2%b6%e0%b2%95%e0%b3%8d%e0%b2%95%e0%b3%82-%e0%b2%b8/): ಮೈಸೂರು : ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿ ಉಪಚುನಾವಣೆಯ ಫಲಿತಾಂಶವು ರಾಜ್ಯದ ಕಾಂಗ್ರೆಸ್ ನಾಯಕತ್ವದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಸಿಎಂ ಬದಲಾವಣೆಗೂ ಈ ಫಲಿತಾಂಶಕ್ಕೂ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು. ಸಿದ್ದರಾಮಯ್ಯ ಅವರು ಪೂರ್ಣ 5 ವರ್ಷಗಳ ಕಾಲ ಸಿಎಂ ಆಗಿ ಮುಂದುವರೆಯಲಿದ್ದಾರೆ. ಉಪಚುನಾವಣೆಯ ಫಲಿತಾಂಶವನ್ನು ಯಾವುದೇ ಮಾನದಂಡವಾಗಿ ಪರಿಗಣಿಸುವ ಅಗತ್ಯವಿಲ್ಲ. ಸಿಎಂ ಬದಲಾವಣೆ ವಿಚಾರ ಹೈಕಮಾಂಡ್ ವ್ಯಾಪ್ತಿಯದ್ದು ಎಂದು ಹೇಳಿದ ಅವರು, ರಾಜ್ಯದಲ್ಲಿ ಸದ್ಯಕ್ಕೆ ಅಂತಹ ಯಾವುದೇ ಚರ್ಚೆ ಇಲ್ಲ ಎಂದರು. ಡಿ.ಕೆ.ಶಿವಕುಮಾರ್ ಪಕ್ಷದ ನಾಯಕರು ಹಾಗೂ ಉಪಮುಖ್ಯಮಂತ್ರಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಸದ್ಯದಲ್ಲಿ ಪಕ್ಷದೊಳಗೆ ಯಾವುದೇ ಗೊಂದಲಗಳಿಲ್ಲ. ಕೆಲವರ ಹೇಳಿಕೆಗಳಿಂದ ಏನೂ ಬದಲಾವಣೆ ಆಗುವುದಿಲ್ಲ, ಎಲ್ಲ ವಿಚಾರಗಳನ್ನೂ ಹೈಕಮಾಂಡ್‌ಗೆ ಬಿಟ್ಟಿದ್ದೇವೆ ಎಂದು ತಿಳಿಸಿದರು. ತಾವು ಸಿಎಂ ಆಗುವ ಪ್ರಶ್ನೆಗೆ ಉತ್ತರಿಸಿದ ಅವರು, ಆ ಸ್ಥಾನ ಖಾಲಿ ಇಲ್ಲದ ಕಾರಣ ಆ ವಿಷಯ ಪ್ರಸ್ತುತವಲ್ಲ ಎಂದು ಹೇಳಿ, ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿರುತ್ತಾರೆ ಎಂದು ಪುನರುಚ್ಚರಿಸಿದರು. - [ಏಪ್ರಿಲ್ 8 ,9 ನಂತರ ಪಿಯುಸಿ ಫಲಿತಾಂಶ ಪ್ರಕಟವಾಗುವ ಸಾಧ್ಯತೆ…!](https://news.nammakarla.in/%e0%b2%8f%e0%b2%aa%e0%b3%8d%e0%b2%b0%e0%b2%bf%e0%b2%b2%e0%b3%8d-8-9-%e0%b2%a8%e0%b2%82%e0%b2%a4%e0%b2%b0-%e0%b2%aa%e0%b2%bf%e0%b2%af%e0%b3%81%e0%b2%b8%e0%b2%bf-%e0%b2%ab%e0%b2%b2%e0%b2%bf%e0%b2%a4/): ಬೆಂಗಳೂರು : ಈ ಹಿಂದೆ ನೀಡಿದ ಫಲಿತಾಂಶದ ದಿನಾಂಕಗಳ ಪ್ರಕಾರ, ದ್ವಿತೀಯ ಪಿಯುಸಿ ಫಲಿತಾಂಶ ಇಂದು ಪ್ರಕಟಗೊಳ್ಳುವ ಸಾಧ್ಯತೆ ಇತ್ತು. ಆದರೆ ಇದೀಗ ಏಪ್ರಿಲ್ 8 ಅಥವಾ ಏಪ್ರಿಲ್ 9 ರ ನಂತರ ಫಲಿತಾಂಶ ಪ್ರಕಟಗೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಏಪ್ರಿಲ್ 9ರಂದು ರಾಜ್ಯದ ದಾವಣಗೆರೆ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು ಈ ಕಾರಣದಿಂದಲೂ ಫಲಿತಾಂಶ ಪ್ರಕಟಣೆಯ ದಿನಾಂಕ ಮುಂದೂಡಿಕೆಯ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಕುರಿತು ಶಿಕ್ಷಣ ಇಲಾಖೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ . ವಿದ್ಯಾರ್ಥಿಗಳು ಯಾವುದೇ ವದಂತಿಗಳಿಗೆ ಕಿವಿಗೊಡದೆ ಶಿಕ್ಷಣ ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟವಾಗುವ ಮಾಹಿತಿಗಳನ್ನು ಮಾತ್ರ ಅನುಸರಿಸಬೇಕು ಎಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ. - [ಮಿಸ್ ಯೂನಿವರ್ಸ್ ಕರ್ನಾಟಕ -:2026 ಕಿರೀಟವನ್ನು ಮುಡಿಗೇರಿಸಿಕೊಂಡ ಲೇಖನ ಹೆಗ್ಡೆ](https://news.nammakarla.in/%e0%b2%ae%e0%b2%bf%e0%b2%b8%e0%b3%8d-%e0%b2%af%e0%b3%82%e0%b2%a8%e0%b2%bf%e0%b2%b5%e0%b2%b0%e0%b3%8d%e0%b2%b8%e0%b3%8d-%e0%b2%95%e0%b2%b0%e0%b3%8d%e0%b2%a8%e0%b2%be%e0%b2%9f%e0%b2%95-2026-%e0%b2%95/): ಮಿಸ್ ಯೂನಿವರ್ಸ್ ಕರ್ನಾಟಕ – 2026 ಸೌಂದರ್ಯ ಸ್ಪರ್ಧೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದಿದ್ದು, ಸ್ಪರ್ಧೆಯ ವಿಜೇತರಾಗಿ ಲೇಖನ ಹೆಗ್ಡೆ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ. ಅರಮನೆ ಮೈದಾನದ ಗಾಯತ್ರಿ ವಿಹಾರ್ ನಲ್ಲಿ ಸ್ಪರ್ಧೆ ನಡೆದಿದ್ದು, ಬೆಂಗಳೂರು ಬಂಟರ ಸಂಘದ ಉಪಾಧ್ಯಕ್ಷೆ ಉದ್ಯಮಿ ಸಮಾಜಸೇವಕಿ ಮಹಿಳಾ ರತ್ನ ಪ್ರಶಸ್ತಿ ವಿಜೇತ ಕಾಂತಿ ಶೆಟ್ಟಿ ಅವರ ಪುತ್ರಿ ಲೇಖನ ಹೆಗ್ಡೆ ಮಿಸ್ ಯುನಿವರ್ಸ್ ಕರ್ನಾಟಕ – 2026 ವಿಜೇತೆಯಾಗಿ ಹೊರಹೊಮ್ಮಿದ್ದಾರೆ. - [ಏಪ್ರಿಲ್ 9 ರಂದು ವಿಜೇತ ವಿಶೇಷ ಶಾಲಾ ದಶಕ ವಿಜೇತೋತ್ಸವ](https://news.nammakarla.in/%e0%b2%8f%e0%b2%aa%e0%b3%8d%e0%b2%b0%e0%b2%bf%e0%b2%b2%e0%b3%8d-9-%e0%b2%b0%e0%b2%82%e0%b2%a6%e0%b3%81-%e0%b2%b5%e0%b2%bf%e0%b2%9c%e0%b3%87%e0%b2%a4-%e0%b2%b5%e0%b2%bf%e0%b2%b6%e0%b3%87%e0%b2%b7/): ಏಪ್ರಿಲ್ 9 ರಂದು ವಿಜೇತ ವಿಶೇಷ ಶಾಲಾ ದಶಕ ವಿಜೇತೋತ್ಸವ ಕಾರ್ಯಕ್ರಮ. ಬೆಳಿಗ್ಗೆ 9.30 ಕ್ಕೆ ದ್ವಜಾರೋಹಣ ಹಾಗೂ ಬಹುಮಾನ ವಿತರಣೆ. ಸಂಜೆ ಘಂಟೆ 5 ರಿಂದ ಮಕ್ಕಳ ಸಾoಸ್ಕೃತಿಕ ಕಾರ್ಯಕ್ರಮ ಹಾಗೂ ಸತ್ಯಾನಪುರದ ಸಿರಿ ನೃತ್ಯ ರೂಪಕ 6:30ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ, ಸಭಾಧ್ಯಕ್ಷರಾದ ಯು.ಟಿ.ಖಾದರ್ ಫರೀದ್ ಅವರು ಆಗಮಿಸಿ ಗಣ್ಯರ ಸಮ್ಮುಖದಲ್ಲಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. 6.45 ರಿಂದ ಸಭಾ ಕಾರ್ಯಕ್ರಮ. ಹಾಗೂ ಅನ್ನಪೂರ್ಣ ಪಾಕ ಶಾಲಾ ಉದ್ಘಾಟನೆ. 9 ಘಂಟೆಯಿಂದಶ್ರೀ ದುರ್ಗಾ ಯಕ್ಷಗಾನ ಕೇಂದ್ರದ ವಿದ್ಯಾರ್ಥಿಗಳಿಂದ ವೀರಮಣಿ ಕಾಳಗ ಯಕ್ಷಗಾನ 10.30 ರಿಂದ ಡೆನ್ನಾನ ನಾಟಕ.ಬಿಗ್ ಬಾಸ್ ಖ್ಯಾತಿಯ ರಕ್ಷಿತಾ ಶೆಟ್ಟಿ ಕಾರ್ಯಕ್ರಮಕ್ಕೆ ಆಗಮಿಸಿ ವಿಶೇಷ ಮೆರುಗನ್ನು ನೀಡಲಿದ್ದಾರೆ. - [“ಸಾಲ ಮಿತಿ ಮೀರಿಲ್ಲ, ಆರ್ಥಿಕ ಶಿಸ್ತು ಕಾಪಾಡಿದ್ದೇವೆ" : ಸಿಎಂ ಸಿದ್ದರಾಮಯ್ಯ](https://news.nammakarla.in/%e0%b2%b8%e0%b2%be%e0%b2%b2-%e0%b2%ae%e0%b2%bf%e0%b2%a4%e0%b2%bf-%e0%b2%ae%e0%b3%80%e0%b2%b0%e0%b2%bf%e0%b2%b2%e0%b3%8d%e0%b2%b2-%e0%b2%86%e0%b2%b0%e0%b3%8d%e0%b2%a5%e0%b2%bf%e0%b2%95/): ಬಾಗಲಕೋಟೆ: ರಾಜ್ಯದ ಬಡ ಮತ್ತು ಹಿಂದುಳಿದ ಸಮುದಾಯಗಳ ಆರ್ಥಿಕ–ಸಾಮಾಜಿಕ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಕೈಗೊಂಡಿರುವ ಕಾರ್ಯಗಳನ್ನು ಮುಂದಿಟ್ಟುಕೊಂಡು ಮತ ಕೇಳುತ್ತಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಬಿಜೆಪಿ ಜನರಿಗೆ ತಪ್ಪು ಮಾಹಿತಿ ನೀಡಿ ಮತ ಕೇಳುತ್ತಿದೆ ಎಂದು ಆರೋಪಿಸಿದ ಅವರು, ರಾಜ್ಯದಲ್ಲಿ 9 ವರ್ಷ ಮತ್ತು ಕೇಂದ್ರದಲ್ಲಿ 12 ವರ್ಷ ಆಡಳಿತ ನಡೆಸಿರುವ ಬಿಜೆಪಿ ತನ್ನ ಸಾಧನೆಗಳನ್ನು ವಿವರಿಸಲಿ ಎಂದು ಸವಾಲು ಹಾಕಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಜಾರಿಗೆ ತಂದ ಸಾಮಾಜಿಕ ಯೋಜನೆಗಳಿಗೆ ಬಿಜೆಪಿ ಆರಂಭದಿಂದಲೇ ವಿರೋಧ ವ್ಯಕ್ತಪಡಿಸುತ್ತಿದ್ದು, ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂಬ ಆರೋಪಗಳನ್ನು ತಳ್ಳಿಹಾಕಿದರು. ಕಳೆದ ಮೂರು ವರ್ಷಗಳಲ್ಲಿ ಗ್ಯಾರಂಟಿ ಯೋಜನೆಗಳಿಗೆ 1.31 ಲಕ್ಷ ಕೋಟಿ ರೂಪಾಯಿ ಖರ್ಚು ಮಾಡಿದ್ದು, ನೀರಾವರಿ, ಗ್ರಾಮೀಣಾಭಿವೃದ್ಧಿ, ಕುಡಿಯುವ ನೀರು ಸೇರಿದಂತೆ ಹಲವು ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ನೀಡಲಾಗಿದೆ ಎಂದರು. ಸಾಲದ ವಿಷಯದಲ್ಲಿ ಬಿಜೆಪಿ ಮಾಡುತ್ತಿರುವ ಟೀಕೆಗೆ ಪ್ರತಿಕ್ರಿಯಿಸಿದ ಸಿಎಂ, ಆರ್ಥಿಕ ಹೊಣೆಗಾರಿಕೆ ಕಾಯ್ದೆಯ ನಿಯಮಗಳನ್ನು ಸರ್ಕಾರ ಮೀರಿಲ್ಲ. ರಾಜ್ಯದ ಸಾಲ ಜಿಡಿಪಿಯ […] - [ಮಹಾಭಾರತ](https://news.nammakarla.in/%e0%b2%ae%e0%b2%b9%e0%b2%be%e0%b2%ad%e0%b2%be%e0%b2%b0%e0%b2%a4-480/): ಭಾಗ – 480 ಭರತೇಶ ಶೆಟ್ಟಿ, ಎಕ್ಕಾರು ಮರುದಿನ ನಿತ್ಯಕರ್ಮಗಳನ್ನು ಪೂರೈಸಿ ಶ್ರೀಕೃಷ್ಣನ ಜೊತೆ ಧರ್ಮರಾಯ ಕುರುಕ್ಷೇತ್ರದಲ್ಲಿ ಸರಳಮಂಚದಲ್ಲಿ ಮಲಗಿದ್ದ ಭೀಷ್ಮಾಚಾರ್ಯರ ಬಳಿ ಬಂದರು. ಪಿತಾಮಹರಿಗೆ ವಂದಿಸಿ ಧರ್ಮರಾಯ ನಿಂತನು. ಆಚಾರ್ಯ ಭೀಷ್ಮರು “ಮಗೂ ನಿನ್ನೆ ಸಾಕಷ್ಟು ವಿಚಾರಗಳ ಬಗ್ಗೆ ನಾವು ತಿಳಿದುಕೊಂಡೆವು. ಇಂದು ಸೂಕ್ತ ಸಮಯದಲ್ಲಿ ನಿರ್ಧಾರ ಕೈಗೊಳ್ಳುವ ಅಗತ್ಯದ ಬಗ್ಗೆ ಹೇಳುತ್ತೇನೆ ಕೇಳು. ನಿರ್ಧಾರದ ಮಹತ್ವವನ್ನು ಒಂದು ಕಿರು ಕಥೆಯ ಮೂಲಕ ತಿಳಿಸುತ್ತೇನೆ. ಒಂದು ಸರೋವರದಲ್ಲಿ ಬಹಳಷ್ಟು ಮೀನುಗಳು ಆಶ್ರಿತವಾಗಿದ್ದವು. ಸೆಖೆಗಾಲದಲ್ಲಿ ನೀರು ಕಡಿಮೆಯಾಗುತ್ತಾ ಬಂದಾಗ ಬೆಸ್ತರು ಈ ಕೆರೆಯಲ್ಲಿ ಬಲೆ ಬೀಸಿ ಮೀನು ಹಿಡಿಯಲು ಮುಂದಾದರು. ಹೆಚ್ಚಾಗಿದ್ದ ನೀರನ್ನು ಕಾಲುವೆ ತೋಡಿ ಹೊರಗೆ ಇನ್ನೊಂದು ಸರೋವರದತ್ತ ಹರಿಯಲು ಬಿಟ್ಟರು. ನೀರು ಕಡಿಮೆಯಾಗುತ್ತಿದ್ದಂತೆ ಒಂದು ಮೀನು ಎದುರಾಗಲಿರುವ ಆಪತ್ತಿನ ಬಗ್ಗೆ ಯೋಚಿಸಿ ಹೊರ ಹರಿಯುತ್ತಿದ್ದ ನೀರಿನ ಜೊತೆ ಈಜಿ ಹೊರ ಹೋಗಿ ದೊಡ್ಡ ಸರೋವರ ಸೇರಿಕೊಂಡಿತು. ಕಡಿಮೆಯಾದ ನೀರಿನಲ್ಲಿ ಇಳಿದು ಬೆಸ್ತರು ಬಲೆ ಬೀಸಿದರು. ಸುಲಭವಾಗಿ ಮೀನುಗಳನ್ನು ಹಿಡಿದು […] - [ವಿಲಾಸ್ ಕುಮಾರ್ ನಿಟ್ಟೆ ಅವರಿಗೆ ಧರ್ಮಸ್ಥಳ ರತ್ನವರ್ಮ ಹೆಗ್ಡೆ ಪ್ರಶಸ್ತಿ](https://news.nammakarla.in/%e0%b2%b5%e0%b2%bf%e0%b2%b2%e0%b2%be%e0%b2%b8%e0%b3%8d-%e0%b2%95%e0%b3%81%e0%b2%ae%e0%b2%be%e0%b2%b0%e0%b3%8d-%e0%b2%a8%e0%b2%bf%e0%b2%9f%e0%b3%8d%e0%b2%9f%e0%b3%86-%e0%b2%85%e0%b2%b5%e0%b2%b0-2/): ಕಾರ್ಕಳ: ವಿಲಾಸ್ ಕುಮಾರ್ ನಿಟ್ಟೆ ಅವರ “ಆಯೆ ಆನ್‌ಮಗೆ” ತುಳು ನಾಟಕಕ್ಕೆ ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ಪ್ರಶಸ್ತಿ ಲಭಿಸಿದೆ. ತುಳು ಕೂಟ ಕುಡ್ಲದ ವತಿಯಿಂದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಪ್ರಾಯೋಜಕತ್ವದಲ್ಲಿ ಕೊಡಮಾಡುವ ಈ ನಾಟಕ ಪ್ರಶಸ್ತಿ ಸ್ಪರ್ಧೆಯಲ್ಲಿ “ಆಯೆ ಆನ್ ಮಗೆ” ಎಂಬ ತುಳು ನಾಟಕ ಪ್ರತಿಯು ದ್ವಿತೀಯ ಪ್ರಶಸ್ತಿ ಮತ್ತು ನಗದು ಬಹುಮಾನವನ್ನು ಗೆದ್ದುಕೊಂಡಿದೆ. ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿರುವ ವಿಲಾಸ್ ಕುಮಾರ್ ನಿಟ್ಟೆ ಅವರು, ಗುತ್ತುದ ಗುರ್ಕಾರೆ, ಮುತೈಸಿ ಮದ್ಮಲ್, ತೆಲಿಕೆದ ನಲಿಕೆ, ಗಗ್ಗರ, ಅಲೆಗೇಪ ಮದ್ಮೆ ?, ಮಾತೆರ್ಲ ಬರೋಡು, ಕಂಬುಳದ ನಡುಟೊಂಜಿ ಕಥೆ, ತಮ್ಮನ, ಪನರೆ ಧೈರ್ಯಜ್ಜಿ, ಪನಂದೆ ಪೊಯೆರ್, ಬರೆಪುನಾಯೆ ಬರೆತ್‌ಜೆ ಮುಂತಾದ ಒಟ್ಟು ೨೦ಕ್ಕೂ ಹೆಚ್ಚು ತುಳು ನಾಟಕ ಕೃತಿಗಳನ್ನು ರಚಿಸಿದ್ದಾರೆ. ಈಗಾಗಲೇ ಅವರ ಒಟ್ಟು ನಾಲ್ಕು ತುಳು ನಾಟಕಗಳು ಈ ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ಪ್ರಶಸ್ತಿಗೆ ಬಾಜನವಾಗಿದೆ. ನಿಟ್ಟೆ ಗ್ರಾಮದ ಅತ್ತೂರು ಬಲಿಪಗುತ್ತು ಪ್ರೇಮ ಶೆಟ್ಟಿ ಮತ್ತು […] - [ಸ್ವಚ್ಛ ಕಾರ್ಕಳ ಬ್ರಿಗೇಡ್ ವತಿಯಿಂದ, ಫಲಕಗಳ ಸ್ವಚ್ಛತಾ ಅಭಿಯಾನ](https://news.nammakarla.in/%e0%b2%b8%e0%b3%8d%e0%b2%b5%e0%b2%9a%e0%b3%8d%e0%b2%9b-%e0%b2%95%e0%b2%be%e0%b2%b0%e0%b3%8d%e0%b2%95%e0%b2%b3-%e0%b2%ac%e0%b3%8d%e0%b2%b0%e0%b2%bf%e0%b2%97%e0%b3%87%e0%b2%a1%e0%b3%8d-%e0%b2%b5-5/): ಕಾರ್ಕಳ: ಸ್ವಚ್ಛ ಕಾರ್ಕಳ ಬ್ರಿಗೇಡ್‌ನ ವಿನೂತನ ಪ್ರಯತ್ನವಾಗಿ ಫಲಕಗಳ ಸ್ವಚ್ಛತಾ ಅಭಿಯಾನದ ಮೊದಲ ಹಂತ ಇಂದು ಭಾನುವಾರ, ದಿನಾಂಕ 05 ಏಪ್ರಿಲ್ 2026 ರಂದು ಬೆಳಿಗ್ಗೆ 6:30 ರಿಂದ 8:30 ರವರೆಗೆ ನಡೆಯಿತು. ಈ ಕಾರ್ಯಕ್ರಮದಲ್ಲಿ ಬ್ರಿಗೇಡ್‌ನ ಸದಸ್ಯರು ಸಕ್ರಿಯವಾಗಿ ಭಾಗವಹಿಸಿ, ನಗರದ ದಾನಶಾಲೆಯಿಂದ ಕಾಳಿಕಾಂಬ ರಸ್ತೆಯ ವಿವಿಧ ಪ್ರದೇಶಗಳಲ್ಲಿ ಸುಮಾರು 15 ರಿಂದ 20 ನಾಮಫಲಕಗಳ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು. ಈ ಅಭಿಯಾನದ ಮೂಲಕ ಸಾರ್ವಜನಿಕರಲ್ಲಿ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುವುದರೊಂದಿಗೆ, ರಸ್ತೆ ಮತ್ತು ಪರಿಸರದ ಜೊತೆಗೆ ಸಾರ್ವಜನಿಕ ಫಲಕಗಳ ಸ್ವಚ್ಛತೆಯೂ ಅಷ್ಟೇ ಮುಖ್ಯ ಎಂಬ ಸಂದೇಶವನ್ನು ನೀಡಲಾಯಿತು. ಸ್ವಚ್ಛ ಕಾರ್ಕಳ ಬ್ರಿಗೇಡ್ ಮುಂದಿನ 4 ಭಾನುವಾರ ಈ ಸಮಾಜಮುಖಿ ಕಾರ್ಯಕ್ರಮವನ್ನು ಇನ್ನಷ್ಟು ವ್ಯಾಪಕವಾಗಿ ನಡೆಸಲು ನಿರ್ಧರಿಸಿದೆ. ಆರಾಮ್ ಇಂಡಸ್ಟ್ರೀಸ್ ನ ಮಾಲಕರಾದ ಶ್ರೀಯೋಗೀಶ್ ನಾಯಕ್ ರವರು ಸ್ವಚ್ಛತಾ ಪರಿಕರಗಳನ್ನು ಕೊಟ್ಟು ಸಹಕರಿಸಿದರು. - [ಮಹಾಭಾರತ](https://news.nammakarla.in/%e0%b2%ae%e0%b2%b9%e0%b2%be%e0%b2%ad%e0%b2%be%e0%b2%b0%e0%b2%a4-479/): ಭಾಗ – 478 ಭರತೇಶ ಶೆಟ್ಟಿ, ಎಕ್ಕಾರು ಭೀಷ್ಮಾಚಾರ್ಯರು ಶರಶಯ್ಯೆಯಲ್ಲಿದ್ದು ಕೊಂಡು ಧರ್ಮರಾಯನಿಗೆ ಉಪದೇಶ ಮುಂದುವರಿಸಿದರು. “ವತ್ಸಾ! ಮನುಷ್ಯನಿಗೆ ಶೀಲ ಅತಿ ಪ್ರಾಮುಖ್ಯವಾದುದು. ಅದರಲ್ಲೂ ರಾಜನಾದವನು ಯಾವ ಕಾರಣಕ್ಕೂ ಶೀಲವಂತಿಕೆಯ ಜೊತೆ ರಾಜಿ ಮಾಡಬಾರದು. ಶೀಲವಂತನಾಗಿ ವ್ಯವಹರಿಸಿದಾಗ ಧರ್ಮ, ಸತ್ಯ, ನಡತೆ, ಸಂಪತ್ತು, ಬಲ ಎಲ್ಲವೂ ಪ್ರಾಪ್ತವಾಗುತ್ತದೆ. ಹಿಂದೆ ಪ್ರಹ್ಲಾದನು ತನ್ನ ಶೀಲದಿಂದ ಸಂಪನ್ನವಾದ ದಿವ್ಯಬಲದಿಂದ ಮೂರು ಲೋಕಗಳನ್ನು ಗೆದ್ದುಕೊಂಡಿದ್ದನು. ತ್ರೈಲೋಕಗಳನ್ನು ಆಳ್ವಿಕೆ ಮಾಡುತ್ತಿದ್ದ ಕಾಲದಲ್ಲಿ ಇಂದ್ರನು ಬ್ರಾಹ್ಮಣ ವೇಷದಲ್ಲಿ ಬಂದು ಅವನ ಶೀಲವನ್ನು ದಾನ ರೂಪದಲ್ಲಿ ಬೇಡಿದನು. ನೀಡಲು ಒಪ್ಪಿದ ಪ್ರಹ್ಲಾದನ ದೇಹದಿಂದ ಒಂದು ತೇಜೋಮೂರ್ತಿಯು ಹೊರಟು ಇಂದ್ರನನ್ನು ಸೇರಿಕೊಂಡಿತಂತೆ. ಆಗ ಅದೇನೆಂದು ಪ್ತಹ್ಲಾದ ವಿವೇಚಿಸಿದಾಗ ಅದು ” ನಾನು ನಿನ್ನ ಶೀಲ, ನನ್ನನ್ನು ನೀನು ದಾನ ಮಾಡಿರುವುದರಿಂದಾಗಿ, ಬೇಡಿ ಪಡೆದ ಇಂದ್ರನಲ್ಲಿಗೆ ಹೋಗುತ್ತಿದ್ದೇನೆ” ಎಂದು ಹೇಳಿತಂತೆ. ಇಷ್ಟಾಗುತ್ತಲೆ ಶೀಲವನ್ನು ಅನುಸರಿಸಿ ಕ್ರಮವಾಗಿ ಸತ್ಯವೂ, ಧರ್ಮವೂ, ನಡತೆಯೂ, ಬಲವೂ ಒಂದೊಂದಾಗಿ ರೂಪುವಡೆದು ಇಂದ್ರನನ್ನು ಸೇರಿಕೊಂಡವಂತೆ. ಪ್ರಹ್ಲಾದನು ಶೀಲದ ಬಲಹೀನನಾಗಿ ನಿಸ್ತೇಜನಾದನು. […] - [ಕಾರ್ಕಳ: ಕಾಮಗಾರಿ ಸ್ಥಳದಲ್ಲಿ ನಿರ್ಲಕ್ಷ್ಯ; ಮೋರಿಗೆ ಡಿಕ್ಕಿಯಾದ ಕಾರು](https://news.nammakarla.in/%e0%b2%95%e0%b2%be%e0%b2%b0%e0%b3%8d%e0%b2%95%e0%b2%b3-%e0%b2%95%e0%b2%be%e0%b2%ae%e0%b2%97%e0%b2%be%e0%b2%b0%e0%b2%bf-%e0%b2%b8%e0%b3%8d%e0%b2%a5%e0%b2%b3%e0%b2%a6%e0%b2%b2%e0%b3%8d%e0%b2%b2/): ಕಾರ್ಕಳ: ನಗರದ ಆನೆಕೆರೆ–ಪುಲ್ಕೇರಿ ಬೈಪಾಸ್ ಸಂಪರ್ಕ ರಸ್ತೆಯಲ್ಲಿ ಅಭಿವೃದ್ಧಿ ಕಾಮಗಾರಿ ಮುಂದುವರಿಯುತ್ತಿದ್ದು, ಮೋರಿಯ ನಿರ್ಮಾಣ ಕಾರ್ಯ ನಡೆಯುತ್ತಿದೆ. ಆದರೆ ಈ ಸ್ಥಳದಲ್ಲಿ ಯಾವುದೇ ಮುನ್ನೆಚ್ಚರಿಕಾ ಫಲಕಗಳನ್ನು ಅಳವಡಿಸದಿರುವುದರಿಂದ ಅಪಘಾತಗಳು ಮರುಮರು ಸಂಭವಿಸುತ್ತಿರುವುದು ಗಮನಕ್ಕೆ ಬಂದಿದೆ. ಶನಿವಾರ ಮುಂಜಾನೆ ಕಾರ್ಕಳದಿಂದ ಬೈಪಾಸ್ ದಿಕ್ಕಿಗೆ ಸಾಗುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಮೋರಿಗೆ ಡಿಕ್ಕಿಯಾಗಿದೆ.ನಿರ್ಮಾಣ ಕಾಮಗಾರಿ ನಡೆಯುತ್ತಿರುವುದರ ಬಗ್ಗೆ ತಿಳಿಯದೇ ವೇಗವಾಗಿ ಬಂದ ಕಾರು ಚಾಲಕ ವಾಹನದ ಮೇಲಿನ ನಿಯಂತ್ರಣ ಕಳೆದುಕೊಂಡು, ನಿರ್ಮಾಣ ಹಂತದಲ್ಲಿದ್ದ ಮೋರಿಗೆ ಹೊಡೆದಿದೆ. ಪರಿಣಾಮವಾಗಿ ಕಾರಿನ ಮುಂಭಾಗಕ್ಕೆ ಹಾನಿಯಾಗಿದೆ. ಈ ಪ್ರದೇಶದಲ್ಲಿ ವಾಹನ ಸಂಚಾರ ಹೆಚ್ಚು ವೇಗದಲ್ಲಿ ನಡೆಯುತ್ತಿರುವುದರಿಂದ, ತಕ್ಷಣ ಬ್ಯಾರಿಕೇಡ್‌ಗಳು ಮತ್ತು ಎಚ್ಚರಿಕೆ ಫಲಕಗಳನ್ನು ಅಳವಡಿಸಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. - [ಕ್ರಿಯೇಟಿವ್ ಸಂಸ್ಥೆಯ ಪ್ರಥಮ ಪಿಯು ವಾಣಿಜ್ಯ ವಿಭಾಗದಲ್ಲಿ, ಉಚಿತ ಶಿಕ್ಷಣಕ್ಕೆ ಅವಕಾಶ](https://news.nammakarla.in/%e0%b2%95%e0%b3%8d%e0%b2%b0%e0%b2%bf%e0%b2%af%e0%b3%87%e0%b2%9f%e0%b2%bf%e0%b2%b5%e0%b3%8d-%e0%b2%b8%e0%b2%82%e0%b2%b8%e0%b3%8d%e0%b2%a5%e0%b3%86%e0%b2%af-%e0%b2%aa%e0%b3%8d%e0%b2%b0%e0%b2%a5-3/) - [ಕ್ರಿಯೇಟಿವ್ ಸಂಸ್ಥೆಯ ಪ್ರಥಮ ಪಿಯು ವಾಣಿಜ್ಯ ವಿಭಾಗದಲ್ಲಿ, ಉಚಿತ ಶಿಕ್ಷಣಕ್ಕೆ ಅವಕಾಶ](https://news.nammakarla.in/%e0%b2%95%e0%b3%8d%e0%b2%b0%e0%b2%bf%e0%b2%af%e0%b3%87%e0%b2%9f%e0%b2%bf%e0%b2%b5%e0%b3%8d-%e0%b2%b8%e0%b2%82%e0%b2%b8%e0%b3%8d%e0%b2%a5%e0%b3%86%e0%b2%af-%e0%b2%aa%e0%b3%8d%e0%b2%b0%e0%b2%a5-2/) - [ಮತದಾನ ದಿನ ವೇತನ ಸಹಿತ ರಜೆ ಕಡ್ಡಾಯ: ಚುನಾವಣಾ ಆಯೋಗದ ಕಟ್ಟುನಿಟ್ಟಿನ ಆದೇಶ](https://news.nammakarla.in/%e0%b2%ae%e0%b2%a4%e0%b2%a6%e0%b2%be%e0%b2%a8-%e0%b2%a6%e0%b2%bf%e0%b2%a8-%e0%b2%b5%e0%b3%87%e0%b2%a4%e0%b2%a8-%e0%b2%b8%e0%b2%b9%e0%b2%bf%e0%b2%a4-%e0%b2%b0%e0%b2%9c%e0%b3%86-%e0%b2%95%e0%b2%a1/): ನವದೆಹಲಿ: ಮುಂಬರುವ ವಿಧಾನಸಭೆ ಹಾಗೂ ಉಪ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಚುನಾವಣಾ ಆಯೋಗ ಮಹತ್ವದ ನಿರ್ಧಾರ ಪ್ರಕಟಿಸಿದೆ. ಮತದಾನ ದಿನ ಎಲ್ಲಾ ಉದ್ಯೋಗಿಗಳು, ದಿನಗೂಲಿ ಕಾರ್ಮಿಕರು ಸೇರಿದಂತೆ ಸರ್ಕಾರಿ ಮತ್ತು ಖಾಸಗಿ ವಲಯದ ನೌಕರರಿಗೆ ವೇತನ ಸಹಿತ ರಜೆ ನೀಡುವುದು ಕಡ್ಡಾಯವೆಂದು ಘೋಷಿಸಲಾಗಿದೆ. ಪೀಪಲ್ ಆ್ಯಕ್ಟ್ 1951ರ 135ಬಿ ವಿಧಾನದಡಿ ಈ ಆದೇಶ ಜಾರಿಯಾಗಿದೆ. ಮತದಾನದ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಆಯೋಗ ಈ ಕ್ರಮ ಕೈಗೊಂಡಿದ್ದು, ಹಿಂದೆ ಹಲವೆಡೆ ಮತದಾನ ದಿನ ರಜೆ ಇರದ ಕಾರಣ ಉದ್ಯೋಗಿಗಳು ಮತಚಲಾಯಿಸಲು ಸಾಧ್ಯವಾಗದ ಪರಿಸ್ಥಿತಿ ಉಂಟಾಗುತ್ತಿತ್ತು. ಇನ್ನು ಮುಂದೆ ಯಾವುದೇ ಸಂಸ್ಥೆ ರಜೆ ನೀಡುವುದನ್ನು ನಿರ್ಲಕ್ಷ್ಯ ಮಾಡುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಕರ್ನಾಟಕದಲ್ಲೂ ಈ ನಿಯಮ ಅನ್ವಯವಾಗಲಿದೆ. ದಾವಣೆಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರಗಳಲ್ಲಿ ಏಪ್ರಿಲ್ 9ರಂದು ನಡೆಯಲಿರುವ ಉಪ ಚುನಾವಣೆಯ ಹಿನ್ನೆಲೆಯಲ್ಲಿ ಆ ದಿನ ಮತದಾನಕ್ಕೆ ಸಂಬಂಧಿಸಿದವರಿಗೆ ವೇತನ ಸಹಿತ ರಜೆ ಲಭ್ಯವಾಗಲಿದೆ. ಇದೇ ವೇಳೆ ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ, ತಮಿಳುನಾಡು ಹಾಗೂ […] - [ಚುನಾವಣಾ ಸ್ಪರ್ಧೆ ತ್ಯಜಿಸಿದ ಅಣ್ಣಾಮಲೈ: ಟಿಕೆಟ್ ನಿರಾಕರಣೆ ಅಲ್ಲ, ಸ್ವಯಂ ನಿರ್ಧಾರ](https://news.nammakarla.in/%e0%b2%9a%e0%b3%81%e0%b2%a8%e0%b2%be%e0%b2%b5%e0%b2%a3%e0%b2%be-%e0%b2%b8%e0%b3%8d%e0%b2%aa%e0%b2%b0%e0%b3%8d%e0%b2%a7%e0%b3%86-%e0%b2%a4%e0%b3%8d%e0%b2%af%e0%b2%9c%e0%b2%bf%e0%b2%b8%e0%b2%bf%e0%b2%a6/): ಬೆಂಗಳೂರು: ಬಿಜೆಪಿ ನಾಯಕ ಕೆ. ಅಣ್ಣಾಮಲೈ ಸುದ್ದಿಗಾರರೊಂದಿಗೆ ಮಾತನಾಡಿ “ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಬಾರದೆಂಬ ನಿರ್ಧಾರವನ್ನು ತಾನು ಈಗಾಗಲೇ ಪಕ್ಷದ ಕೋರ್ ಕಮಿಟಿಗೆ ಲಿಖಿತವಾಗಿ ತಿಳಿಸಿದ್ದೇನೆ” ಎಂದು ತಿಳಿಸಿದ್ದಾರೆ. ತಮಗೆ ಟಿಕೆಟ್ ನಿರಾಕರಣೆ ಆಗಿಲ್ಲ. ತಾನೇ ಸ್ಪರ್ಧಿಸದಿರಲು ತೀರ್ಮಾನಿಸಿದ್ದು, ಅದನ್ನು ಈಗಾಗಲೇ ಪಕ್ಷಕ್ಕೆ ತಿಳಿಸಿದ್ದೇನೆ. ಈ ವಿಷಯ ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾಗಿರುವ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡುತ್ತಿರುವುದಾಗಿ ಹೇಳಿದರು. ಜೊತೆಗೆ, ತಮ್ಮ ನಿರ್ಧಾರವನ್ನು ಗೌರವಿಸಿ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಗಳಿಗೆ ಬೆಂಬಲವಾಗಿ ಪ್ರಚಾರ ಮಾಡಲು ಅವಕಾಶ ನೀಡಿದ ಪಕ್ಷದ ನಾಯಕತ್ವಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು. ಇದಕ್ಕೂ ನಡುವೆ, ಬಿಜೆಪಿ ಶುಕ್ರವಾರ ತನ್ನ 27 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ ನಂತರ ಅಣ್ಣಾಮಲೈ ಅವರನ್ನು ಪಟ್ಟಿಯಿಂದ ಹೊರಗಿಟ್ಟಿರುವುದು ಗಮನಸೆಳೆದಿತ್ತು. ಸೀಟು ಹಂಚಿಕೆ ಮತ್ತು ಅಭ್ಯರ್ಥಿ ಆಯ್ಕೆ ಕುರಿತು ಉಂಟಾದ ಭಿನ್ನಾಭಿಪ್ರಾಯಗಳ ಕಾರಣದಿಂದ ಅವರಿಗೆ ಅವಕಾಶ ನೀಡಲಾಗಿಲ್ಲ ಎಂಬ ಮಾತು ರಾಷ್ಟ್ರೀಯ ಸೇರಿದಂತೆ ಹಲವು ಮಾಧ್ಯಮಗಳಲ್ಲಿ ವ್ಯಾಪಕವಾಗಿ ಚರ್ಚೆಗೆ ಕಾರಣವಾಗಿತ್ತು. - [ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬೋಳ, ಪಿಲಿಯೂರುಅಷ್ಟಬಂಧ ಪ್ರತಿಷ್ಠಾ ಪುರಸ್ಸರ ಬ್ರಹ್ಮಕಲಶೋತ್ಸವ](https://news.nammakarla.in/%e0%b2%b6%e0%b3%8d%e0%b2%b0%e0%b3%80-%e0%b2%ae%e0%b2%b9%e0%b2%be%e0%b2%b2%e0%b2%bf%e0%b2%82%e0%b2%97%e0%b3%87%e0%b2%b6%e0%b3%8d%e0%b2%b5%e0%b2%b0-%e0%b2%a6%e0%b3%87%e0%b2%b5%e0%b2%b8%e0%b3%8d-4/): ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬೋಳ, ಪಿಲಿಯೂರು ಅಷ್ಟಬಂಧ ಪ್ರತಿಷ್ಠಾ ಪುರಸ್ಸರಬ್ರಹ್ಮಕಲಶೋತ್ಸವವು ದಿನಾಂಕ 03-04-2026 ಶುಕ್ರವಾರದಿಂದದಿನಾಂಕ 14-04-2026 ಮಂಗಳವಾರದವರೆಗೆ ವೇದಮೂರ್ತಿ ಕಡಂದಲೆ ಕೆ.ವಿ. ಕೃಷ್ಣ ಭಟ್ಟರ ಆಚಾರ್ಯತ್ವದಲ್ಲಿ ನೆರವೇರಲಿದೆ. - [ಮಹಾಭಾರತ](https://news.nammakarla.in/%e0%b2%ae%e0%b2%b9%e0%b2%be%e0%b2%ad%e0%b2%be%e0%b2%b0%e0%b2%a4-478/): ಭಾಗ – 477 ಭರತೇಶ ಶೆಟ್ಟಿ, ಎಕ್ಕಾರು ಭೀಷ್ಮಾಚಾರ್ಯರು ರಾಜನು ಪಾಲಿಸಬೇಕಾದ ರಾಜಧರ್ಮ ಮತ್ತು ರಾಜನೀತಿಯನ್ನು ವಿವರಿಸುತ್ತಾ “ಮಗೂ! ದೇವಗುರು ಬೃಹಸ್ಪತಿ ಆಚಾರ್ಯರು ಸೂಚ್ಯವಾಗಿ ‘ಕಾರ್ಯಶೀಲತೆಯೆ ರಾಜಧರ್ಮಕ್ಕೆ ಮೂಲವಾಗಿದೆ. ಕಾರ್ಯಧೀರನು ಮಾತಿನ ಧೀರನಿಗಿಂತ ಮೇಲು. ಮಾತಿನ ವೀರರು ಕಾರ್ಯವೀರರನ್ನು ಸಂತೋಷಗೊಳಿಸುತ್ತಾ ಸೇವಿಸುತ್ತಿರುತ್ತಾರೆ’ ಎಂದಿದ್ದಾರೆ. ರಾಜನು ಶ್ರೇಷ್ಟನಾಗಿದ್ದು ಪುರದ ಹಿತ ಬಯಸುವಪುರೋಹಿತನನ್ನು ಜೊತೆಗೆ ಇರಿಸಿಕೊಂಡಿರಬೇಕು. ರಾಜನು ರಾಷ್ಟ್ರದ ಹಿತ ಚಿಂತಕನಾದರೆ, ಪುರೋಹಿತನಾದವ ರಾಜನಿಗೆ ಜ್ಞಾನದ, ಯೋಜನೆಯ, ದೈವಬಲದ ಶಕ್ತಿ ತುಂಬುತ್ತಿರಬೇಕು. ಇವರಿಬ್ಬರ ಹೊಂದಾಣಿಕೆ ಸಮಗ್ರ ಸಾಮ್ರಾಜ್ಯಕ್ಕೆ ಅತ್ಯಗತ್ಯ.” “ಇನ್ನು ರಾಜನಾದವ ದೇಶದ ಜೊತೆಗೆ ಕೋಶದ ಸುವ್ಯವಸ್ಥೆಯನ್ನು ಕಾಪಾಡಿಕೊಂಡಿರಬೇಕು. ರಾಜ್ಯದ ಭಂಡಾರವನ್ನು ನಿಸ್ವಾರ್ಥಿಯೂ ಸಂತೃಪ್ತನೂ ಆದ ನಿಷ್ಟಾವಂತನಿಗೆ ವಹಿಸಿಕೊಡಬೇಕು. ಯಾವ ಕಾಲಕ್ಕೂ ಕೋಶ ಬರಿದಾಗದಂತೆಯೂ, ಸದಾ ತುಂಬಿ ಸಮೃದ್ಧವಾಗಿರುವಂತೆಯೂ ನೋಡಿಕೊಳ್ಳಬೇಕು. ರಾಜನಾದವ ಸ್ವಯಂ ತಾನು ಎಲ್ಲಾ ಪ್ರಗತಿ ಕಾರ್ಯಗಳನ್ನೂ ಮೇಲ್ವಿಚಾರಣೆ ಮಾಡುತ್ತಾ ತನ್ನ ಸೇವಕರ ಕ್ಷಮತೆ ಗಮನಿಸುತ್ತಿರಬೇಕು. ಕುಲ, ಶೀಲ ಸಂಪನ್ನರೂ, ಆತ್ಮಸ್ತುತಿ ವಿಮುಖರೂ, ಕ್ಷಮಾವಂತರೂ, ಬುದ್ಧಿವಂತರೂ, ಸಂವೇದನಾಶೀಲರೂ ಆದವರನ್ನು ಅಮಾತ್ಯರನ್ನಾಗಿ ನೇಮಿಸಬೇಕು. ಶತ್ರು, […] - [ಸಂಸತ್ತಿನ ನಡೆಗೆ ಟೀಕೆ: ಚಡ್ಡಾ ವಿರುದ್ಧ ಎಎಪಿ ಗರಂ ಪ್ರತಿಕ್ರಿಯೆ](https://news.nammakarla.in/%e0%b2%b8%e0%b2%82%e0%b2%b8%e0%b2%a4%e0%b3%8d%e0%b2%a4%e0%b2%bf%e0%b2%a8-%e0%b2%a8%e0%b2%a1%e0%b3%86%e0%b2%97%e0%b3%86-%e0%b2%9f%e0%b3%80%e0%b2%95%e0%b3%86-%e0%b2%9a%e0%b2%a1%e0%b3%8d%e0%b2%a1/): ನವದೆಹಲಿ: ರಾಘವ ಛಡ್ಡ ಅವರನ್ನು ರಾಜ್ಯಸಭೆಯ ಎಎಪಿ ಉಪನಾಯಕ ಸ್ಥಾನದಿಂದ ತೆಗೆದುಹಾಕಿದ ಬೆನ್ನಲ್ಲೇ ಪಕ್ಷದ ಒಳರಾಜಕೀಯ ತೀವ್ರಗೊಂಡಿದೆ. ಈ ಹಿನ್ನೆಲೆಯಲ್ಲಿ ಚಡ್ಡಾ ಬಿಡುಗಡೆ ಮಾಡಿದ ವಿಡಿಯೋ ಸಂದೇಶಕ್ಕೆ ಆಮ್ ಆದ್ಮಿ ಪಕ್ಷ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಪಕ್ಷದ ರಾಷ್ಟ್ರೀಯ ಮಾಧ್ಯಮ ಮುಖ್ಯಸ್ಥ ಅನುರಾಗ್ ಧಾಂಡಾ, ಚಡ್ಡಾ ಅವರು ಕಳೆದ ಕೆಲವು ವರ್ಷಗಳಲ್ಲಿ ಬದಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾತನಾಡಲು ಹೆದರುತ್ತಿದ್ದಾರೆ ಎಂದು ಆರೋಪಿಸಿದರು. ದೇಶದ ಪ್ರಮುಖ ಸಮಸ್ಯೆಗಳನ್ನು ಧೈರ್ಯವಾಗಿ ಎತ್ತಿಹಿಡಿಯುವುದೇ ಪಕ್ಷದ ಧ್ಯೇಯವಾಗಿದ್ದು, ಅದರಿಂದ ದೂರವಾಗಿರುವುದು ವಿಷಾದನೀಯ ಎಂದು ಹೇಳಿದರು. “ನಾವು ಅರವಿಂದ್ ಕೇಜ್ರಿವಾಲ್ ಅವರ ಸೈನಿಕರು. ನಿರ್ಭೀತವಾಗಿ ಮಾತನಾಡುವುದು ನಮ್ಮ ಗುರುತು. ಮೋದಿ ವಿರುದ್ಧ ಮಾತನಾಡಲು ಭಯಪಟ್ಟರೆ ದೇಶಕ್ಕಾಗಿ ಹೇಗೆ ಹೋರಾಡುತ್ತೀರಿ?” ಎಂದು ಧಾಂಡಾ ಪ್ರಶ್ನಿಸಿದರು. ಸಂಸತ್ತಿನಲ್ಲಿ ಸಿಗುವ ಸಮಯವನ್ನು ಗಂಭೀರ ವಿಷಯಗಳಿಗೆ ಬಳಸಬೇಕೇ ಹೊರತು “ವಿಮಾನ ನಿಲ್ದಾಣದ ಕ್ಯಾಂಟೀನ್‌ಗಳಲ್ಲಿ ಸಮೋಸಾ ಬೆಲೆ ಕಡಿಮೆ ಮಾಡುವ ಬಗ್ಗೆ ಚರ್ಚಿಸಲು ಅಲ್ಲ” ಎಂದು ವ್ಯಂಗ್ಯವಾಡಿದ್ದಾರೆ. ಇದಲ್ಲದೆ, ಗುಜರಾತ್‌ನಲ್ಲಿ ಕಾರ್ಯಕರ್ತರ ಬಂಧನ, ಮುಖ್ಯ […] - [ಭಾಷಣ ಮಧ್ಯೆ ಅಸ್ವಸ್ಥ: ವೇದಿಕೆಯಲ್ಲಿ ಕುಸಿದ ಬಿದ್ದ ಮಾಜಿ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್ ಸಂತೋಷ್ ಹೆಗ್ಡೆ](https://news.nammakarla.in/%e0%b2%ad%e0%b2%be%e0%b2%b7%e0%b2%a3-%e0%b2%ae%e0%b2%a7%e0%b3%8d%e0%b2%af%e0%b3%86-%e0%b2%85%e0%b2%b8%e0%b3%8d%e0%b2%b5%e0%b2%b8%e0%b3%8d%e0%b2%a5-%e0%b2%b5%e0%b3%87%e0%b2%a6%e0%b2%bf%e0%b2%95/): ಬೆಂಗಳೂರು: ರಾಜ್ಯದ ಖ್ಯಾತ ಮಾಜಿ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಅವರು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದ ವೇಳೆ ದಿಢೀರ್ ಅಸ್ವಸ್ಥಗೊಂಡು ವೇದಿಕೆಯ ಮೇಲೆಯೇ ಕುಸಿದುಬಿದ್ದ ಘಟನೆ ನಡೆದಿದೆ. ತಕ್ಷಣವೇ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಮಹಾರಾಣಿ ಕಾಲೇಜು ಸಮೀಪದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಸ್ಕೌಟ್ಸ್ ಅಂಡ್ ಗೈಡ್ಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹೆಗ್ಡೆ ಅವರು ಭಾಷಣ ಮಾಡುವಾಗಲೇ ತತ್ತರಿಸಿ ಬಿದ್ದಿದ್ದಾರೆ. ಘಟನೆ ನಡೆದ ತಕ್ಷಣವೇ ಸ್ಥಳದಲ್ಲಿದ್ದವರು ಅವರನ್ನು ನೆರವಿಗೆ ಧಾವಿಸಿದ್ದಾರೆ. ವೈದ್ಯರ ಪ್ರಾಥಮಿಕ ಪರಿಶೀಲನೆಯಲ್ಲಿ ರಕ್ತದಲ್ಲಿನ ಸಕ್ಕರೆ ಪ್ರಮಾಣ ತೀವ್ರವಾಗಿ ಕುಸಿದಿರುವುದು ಪತ್ತೆಯಾಗಿದ್ದು, ಲಘು ಹೃದಯಾಘಾತದ ಶಂಕೆಯೂ ವ್ಯಕ್ತವಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ. ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಿದ್ದ ಹೆಗ್ಡೆ ಅವರ ಆರೋಗ್ಯದಲ್ಲಿ ಏಕಾಏಕಿ ಸಮಸ್ಯೆ ಉಂಟಾದ ಸುದ್ದಿ ಕೇಳಿ ಅಭಿಮಾನಿಗಳು ಆತಂಕಗೊಂಡಿದ್ದಾರೆ. ಶೀಘ್ರ ಗುಣಮುಖರಾಗಲೆಂದು ಹಲವರು ಪ್ರಾರ್ಥಿಸುತ್ತಿದ್ದಾರೆ. - [“ನನ್ನನ್ನು ಮೌನಗೊಳಿಸಲಾಗಿದೆಯೇ ಹೊರತು ಸೋಲಿಸಲಾಗಲಿಲ್ಲ” – ರಾಘವ್ ಛಡ್ಡಾ ಆಕ್ರೋಶ](https://news.nammakarla.in/%e0%b2%a8%e0%b2%a8%e0%b3%8d%e0%b2%a8%e0%b2%a8%e0%b3%8d%e0%b2%a8%e0%b3%81-%e0%b2%ae%e0%b3%8c%e0%b2%a8%e0%b2%97%e0%b3%8a%e0%b2%b3%e0%b2%bf%e0%b2%b8%e0%b2%b2%e0%b2%be%e0%b2%97%e0%b2%bf%e0%b2%a6/): ಹೊಸದಲ್ಲಿ: ರಾಜ್ಯಸಭೆಯ ಉಪ ನಾಯಕರ ಹುದ್ದೆಯಿಂದ ಆಪ್ ರಾಜ್ಯಸಭಾ ಸಂಸದ ರಾಘವ್ ಛಡ್ಡಾ ಅವರನ್ನು ತೆರವುಗೊಳಿಸಿದ್ದು ಈ ಕುರಿತು ಪ್ರತಿಕ್ರಿಯಿಸಿದ ರಾಘವ್ ಛಡ್ಡಾ “ನನ್ನನ್ನು ಮೌನಗೊಳಿಸಲಾಗಿದೆಯೇ ಹೊರತು ಸೋಲಿಸಲಾಗಿಲ್ಲ” ಎಂದು ತಮ್ಮ ಪಕ್ಷದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮದೇ ಪಕ್ಷವು ಸಂಸದೀಯ ಕಲಾಪಗಳಲ್ಲಿ ಮಾತನಾಡಲು ಅವಕಾಶ ನೀಡದೆ ತಡೆಹಿಡಿದಿದೆ ಎಂದು ಆರೋಪಿಸಿದ ಅವರು ರಾಜ್ಯಸಭಾ ಕಾರ್ಯಾಲಯಕ್ಕೂ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಎಕ್ಸ್‌ನಲ್ಲಿ ವಿಡಿಯೋ ಹಂಚಿಕೊಂಡ ಅವರು, ತಮಗೆ ಅವಕಾಶ ಸಿಕ್ಕಾಗಲೆಲ್ಲ ಜನಸಾಮಾನ್ಯರ ಸಮಸ್ಯೆಗಳನ್ನೇ ಸದಾ ಮುಂದಿಟ್ಟಿದ್ದೇನೆ. ಜನರ ಪರವಾಗಿ ಮಾತನಾಡುವುದು ತಪ್ಪೇ ಎಂಬ ಪ್ರಶ್ನೆಯನ್ನು ಅವರು ಎತ್ತಿ, ಇದನ್ನು ಅಪರಾಧದಂತೆ ಕಾಣುವುದು ನ್ಯಾಯಸಮ್ಮತವೇ ಎಂದು ಪ್ರಶ್ನಿಸಿದ್ದಾರೆ. “ಆಪ್ ಪಕ್ಷವು ನನಗೆ ಮಾತನಾಡಲು ಅವಕಾಶ ನೀಡದಂತೆ ಸಂಸತ್ತಿಗೆ ತಿಳಿಸಿದೆ. ನನ್ನ ಮೌನವನ್ನು ನನ್ನ ಸೋಲು ಎಂದು ಭಾವಿಸದಿರಿ ಎಂದು ನಾನು ಅವರಿಗೆ ಹೇಳಲು ಬಯಸುತ್ತೇನೆ” ಎಂದು ಕಿಡಿಕಾರಿದ್ದಾರೆ. ತಮ್ಮ ಮಾತುಗಳಿಂದ ಯಾರಿಗೂ ಹಾನಿಯಾಗಿಲ್ಲ ಎಂದು ಹೇಳಿದ […] - ['ಧೈರ್ಯ ಇದ್ದರೆ ಭವಿಷ್ಯದಲ್ಲಿ ಅಧಿಕಾರಕ್ಕೆ ಬಂದಾಗ ದ್ವಿಭಾಷಾ ನೀತಿಯನ್ನು ರದ್ದು ಪಡಿಸುವುದಾಗಿ ಬಿಜೆಪಿ ಘೋಷಿಸಲಿ' : ಸರ್ಕಾರದ ಸವಾಲು](https://news.nammakarla.in/%e0%b2%a7%e0%b3%88%e0%b2%b0%e0%b3%8d%e0%b2%af-%e0%b2%87%e0%b2%a6%e0%b3%8d%e0%b2%a6%e0%b2%b0%e0%b3%86-%e0%b2%ad%e0%b2%b5%e0%b2%bf%e0%b2%b7%e0%b3%8d%e0%b2%af%e0%b2%a6%e0%b2%b2%e0%b3%8d%e0%b2%b2/): ಬೆಂಗಳೂರು: ದ್ವಿಭಾಷಾ ನೀತಿ ಕುರಿತು ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಮಧು ಬಂಗಾರಪ್ಪ, ಧೈರ್ಯ ಇದ್ದರೆ ಭವಿಷ್ಯದಲ್ಲಿ ಅಧಿಕಾರಕ್ಕೆ ಬಂದಾಗ ಈ ನೀತಿಯನ್ನು ರದ್ದುಪಡಿಸುವುದಾಗಿ ಬಿಜೆಪಿ ಬಹಿರಂಗವಾಗಿ ಘೋಷಿಸಲಿ ಎಂದು ಸವಾಲೆಸೆದಿದ್ದಾರೆ. ಬಿಜೆಪಿ ಆರೋಪಗಳಿಗೆ ತಿರುಗೇಟು ನೀಡುತ್ತಾ, ಯಾವುದೇ ವ್ಯಕ್ತಿಯನ್ನು ಗುರಿಯಾಗಿಸಿಕೊಂಡು ಕಾನೂನು ತರುವ ಉದ್ದೇಶ ನಮ್ಮದಲ್ಲ. ಈ ನೀತಿಯನ್ನು ತೆಗೆದುಹಾಕುವ ಬಗ್ಗೆ ಯಡಿಯೂರಪ್ಪ ಅವರು ಸ್ಪಷ್ಟವಾಗಿ ಹೇಳಬೇಕು ಎಂದು ಸವಾಲು ಹಾಕಿ, ಹಿಂದಿ ವಿಚಾರವನ್ನು ರಾಜಕೀಯವಾಗಿ ಬಳಸಲಾಗುತ್ತಿದೆ ಎಂದು ಆರೋಪಿಸಿದರು. ಈ ನಿರ್ಧಾರವನ್ನು ಯಾರೊಬ್ಬರ ಒತ್ತಡದಿಂದ ತೆಗೆದುಕೊಳ್ಳಲಾಗಿಲ್ಲ. ಸುಮಾರು ಏಳು-ಎಂಟು ತಿಂಗಳ ಚರ್ಚೆಗಳ ನಂತರವೇ ಈ ತೀರ್ಮಾನ ಕೈಗೊಳ್ಳಲಾಗಿದೆ. ಪೋಷಕರ ಬಹುಮತವೂ ಮಕ್ಕಳ ಮೇಲೆ ಅನಗತ್ಯ ಒತ್ತಡ ಬೇಡವೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದು ಈ ನೀತಿಯಿಂದ ಬಡವರಿಗೆ ಪ್ರಯೋಜನವಾಗುತ್ತದೆ. ಆದರೆ ಖಾಸಗಿ ಸಂಸ್ಥೆಗಳು ಇದನ್ನು ತುಚ್ಛವಾಗಿ ತೆಗೆದುಕೊಂಡಿದ್ದು, ಅವಶ್ಯಕತೆ ಇದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಪ್ರಧಾನಿ ಮೋದಿ ಅವರನ್ನು ಸಂತೋಷಪಡಿಸಲು ಬಿಜೆಪಿ ಹಿಂದಿಯನ್ನು ಉತ್ತೇಜಿಸುತ್ತಿದೆ. ಇದು ಸರಿಯಾದ […] - [ಏಕಾಏಕಿ ಎಲ್ಲರನ್ನೂ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ](https://news.nammakarla.in/%e0%b2%8f%e0%b2%95%e0%b2%be%e0%b2%8f%e0%b2%95%e0%b2%bf-%e0%b2%8e%e0%b2%b2%e0%b3%8d%e0%b2%b2%e0%b2%b0%e0%b2%a8%e0%b3%8d%e0%b2%a8%e0%b3%82-%e0%b2%85%e0%b2%a8%e0%b3%8d%e0%b2%ab%e0%b2%be%e0%b2%b2%e0%b3%8b/): ಪ್ರಮೋದ್ ಶೆಟ್ಟಿ ಹೇಳಿದ್ದೇನು? ಸೋಷಿಯಲ್ ಮೀಡಿಯಾದಲ್ಲಿ ಕಳೆದ ಕೆಲ ದಿನಗಳಿಂದ ನಟ ರಿಷಭ್ ಶೆಟ್ಟಿ ಅವರ ಇನ್‌ಸ್ಟಾಗ್ರಾಮ್ ಚಟುವಟಿಕೆ ಭಾರಿ ಚರ್ಚೆಗೆ ಗ್ರಾಸವಾಗಿದೆ. ಕಾಂತಾರ ಚಿತ್ರದ ಬಳಿಕ ಹಂತ ಹಂತವಾಗಿ ಅನ್ಫಾಲೋ ಮಾಡುತ್ತಿದ್ದ ಅವರು, ಇದೀಗ ಮೂವರನ್ನು ಹೊರತುಪಡಿಸಿ ಉಳಿದ ಎಲ್ಲರನ್ನೂ ಅನ್ಫಾಲೋ ಮಾಡಿರುವುದು ಗಮನಸೆಳೆದಿದೆ. ಪತ್ನಿ ಪ್ರಗತಿ ಶೆಟ್ಟಿ, ರಿಷಬ್ ಶೆಟ್ಟಿ ಫಿಲ್ಮ್ಸ್ ಹಾಗೂ ರಿಷಬ್ ಶೆಟ್ಟಿ ಫೌಂಡೇಷನ್ ಖಾತೆಗಳನ್ನು ಮಾತ್ರ ಉಳಿಸಿಕೊಂಡಿರುವುದು ನೆಟ್ಟಿಗರಲ್ಲಿ ಕುತೂಹಲ ಹುಟ್ಟಿಸಿದೆ. ಯಾವುದೇ ಸ್ಪಷ್ಟನೆ ನೀಡದೇ ಏಕಾಏಕಿ ತೆಗೆದುಕೊಂಡ ಈ ನಿರ್ಧಾರ ಹಲವು ಊಹಾಪೋಹಗಳಿಗೆ ಕಾರಣವಾಗಿದೆ. ಈ ಬಗ್ಗೆ ನಟ ಪ್ರಮೋದ್ ಶೆಟ್ಟಿ ಪ್ರತಿಕ್ರಿಯೆ ನೀಡಿ, ಈ ವಿಚಾರವನ್ನು ತಾನೂ ನಂತರವೇ ಗಮನಿಸಿದ್ದಾಗಿ ಹೇಳಿದ್ದಾರೆ. ರಿಷಬ್ ಶೆಟ್ಟಿ ಯಾಕೆ ಹೀಗೆ ಮಾಡಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ, ಆದರೆ ವೃತ್ತಿಜೀವನದಲ್ಲಿ ಬೆಳವಣಿಗೆ ಆಗುತ್ತಿದ್ದಂತೆ ಸೋಷಿಯಲ್ ಮೀಡಿಯಾ ನಿರ್ವಹಣೆಯಲ್ಲೂ ಬದಲಾವಣೆಗಳು ಸಹಜ ಎಂದು ತಿಳಿಸಿದ್ದಾರೆ. ಮುಂದೆ ಏಜೆನ್ಸಿಗಳು ಅಥವಾ ತಂಡಗಳು ಸಾಮಾಜಿಕ ಜಾಲತಾಣಗಳನ್ನು ಹ್ಯಾಂಡಲ್ ಮಾಡುವ ಸಂದರ್ಭಗಳಲ್ಲಿ ಇಂತಹ […] - [ರೈಲು ಟಿಕೆಟ್ ರದ್ದತಿ ನಿಯಮಗಳಲ್ಲಿ ಬದಲಾವಣೆ: ಬೋರ್ಡಿಂಗ್ ಪಾಯಿಂಟ್ ಬದಲಾಯಿಸಲು ಹೊಸ ಅವಕಾಶ](https://news.nammakarla.in/%e0%b2%b0%e0%b3%88%e0%b2%b2%e0%b3%81-%e0%b2%9f%e0%b2%bf%e0%b2%95%e0%b3%86%e0%b2%9f%e0%b3%8d-%e0%b2%b0%e0%b2%a6%e0%b3%8d%e0%b2%a6%e0%b2%a4%e0%b2%bf-%e0%b2%a8%e0%b2%bf%e0%b2%af%e0%b2%ae%e0%b2%97/): ರೈಲ್ವೆ ಟಿಕೆಟ್ ರದ್ದತಿ ನಿಯಮಗಳಲ್ಲಿ ಏಪ್ರಿಲ್ 1ರಿಂದ ಮಹತ್ವದ ಬದಲಾವಣೆ ಜಾರಿಯಾಗಿದೆ. ಈಗ ಕನ್ಫರ್ಮ್ ಮತ್ತು RAC ಟಿಕೆಟ್ ಹೊಂದಿರುವ ಪ್ರಯಾಣಿಕರು ರೈಲು ಹೊರಡುವ 30 ನಿಮಿಷಗಳ ಮೊದಲು ಒಂದೇ ಬಾರಿ ತಮ್ಮ ಬೋರ್ಡಿಂಗ್ ಪಾಯಿಂಟ್ ಬದಲಾಯಿಸಲು ಅವಕಾಶ ಪಡೆಯುತ್ತಿದ್ದಾರೆ. ಟಿಕೆಟ್ ರದ್ದತಿ ನಿಯಮಗಳ ಪ್ರಕಾರ, ಪ್ರಯಾಣಕ್ಕೆ 8 ಗಂಟೆಗಳೊಳಗೆ ರದ್ದುಗೊಳಿಸಿದರೆ ಯಾವುದೇ ಮರುಪಾವತಿ ಸಿಗುವುದಿಲ್ಲ. 24ರಿಂದ 8 ಗಂಟೆಗಳ ನಡುವೆ ರದ್ದುಗೊಳಿಸಿದರೆ 50% ಕಡಿತ, 72ರಿಂದ 24 ಗಂಟೆಗಳ ನಡುವೆ 25% ಕಡಿತ ವಿಧಿಸಲಾಗುತ್ತದೆ. 72 ಗಂಟೆಗಳಿಗಿಂತ ಮುಂಚಿತವಾಗಿ ರದ್ದುಗೊಳಿಸಿದರೆ ಪೂರ್ಣ ಮರುಪಾವತಿ ಲಭ್ಯವಾಗುತ್ತದೆ. ಜೊತೆಗೆ, ಈಗ ದೇಶದ ಯಾವುದೇ ರೈಲು ನಿಲ್ದಾಣದಿಂದ ಕೌಂಟರ್ ಟಿಕೆಟ್‌ಗಳನ್ನು ರದ್ದುಗೊಳಿಸಲು ಅವಕಾಶ ನೀಡಲಾಗಿದೆ. ಇನ್ನೊಂದೆಡೆ, ದೀರ್ಘ ದೂರದ ರಾತ್ರಿ ಪ್ರಯಾಣಕ್ಕೆ ರೈಲ್ವೆ ವಂದೇ ಭಾರತ್ ಸ್ಲೀಪರ್ ರೈಲುಗಳನ್ನು ಪರಿಚಯಿಸಿದ್ದು, ಹೌರಾ-ಕಾಮಾಖ್ಯ ಮಾರ್ಗದಲ್ಲಿ ಸೇವೆ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ರೈಲುಗಳನ್ನು ಪರಿಚಯಿಸುವ ಯೋಜನೆ ಇದೆ. 16 ಕೋಚ್‌ಗಳನ್ನು ಹೊಂದಿರುವ ಈ ರೈಲುಗಳು 1,000 […] - [ಮಹಾಭಾರತ](https://news.nammakarla.in/%e0%b2%ae%e0%b2%b9%e0%b2%be%e0%b2%ad%e0%b2%be%e0%b2%b0%e0%b2%a4-477/): ಭಾಗ – 476 ಭರತೇಶ ಶೆಟ್ಟಿ ಎಕ್ಕಾರು “ಮಗಾ ಧರ್ಮರಾಯಾ! ಪೂರ್ವದಲ್ಲಿ ಅಯೋಧ್ಯಾನಗರಿಯಲ್ಲಿ ಸಗರನೆಂಬ ಚಕ್ರವರ್ತಿ ಇದ್ದನು. ಅವನಿಗೆ ಇಬ್ಬರು ಹೆಂಡತಿಯರು. ಹಿರಿಯಳಾದ ಕೇಶಿನಿ ಧರ್ಮಿಷ್ಠೆ. ಕಿರಿಯವಳಾದ ಸುಮತಿಗೆ ಆಸೆ ಹೆಚ್ಚು. ಸಗರ ತನ್ನ ಪತ್ನಿಯರೊಂದಿಗೆ ತಪಸ್ಸು ಮಾಡಿದ್ದನು. ಭಗುಮುನಿಗಳು ತೃಪ್ತರಾಗಿ ವರ ನೀಡಿದರು. ರಾಜಾ ನಿನ್ನ ಪತ್ನಿಯರಲ್ಲಿ ಒಬ್ಬಳಿಗೆ ವಂಶವನ್ನು ನಡೆಸುವ ಒಬ್ಬ ಮಗನಾಗುತ್ತಾನೆ, ಇನ್ನೊಬ್ಬಳಿಗೆ ಅರವತ್ತು ಸಾವಿರ ಪುತ್ರರು ಹುಟ್ಟುತ್ತಾರೆ ಎಂದರು. ಕೇಶಿನಿ ಒಬ್ಬ ಮಗ ಸಾಕು ಎಂದಳು, ಸುಮತಿ ಅರವತ್ತು ಸಾವಿರ ಮಕ್ಕಳನ್ನು ಬೇಡಿದಳು. ಕೇಶಿನಿಯ ಮಗ ಅಸಮಂಜ ವಿಕ್ಷಿಪ್ತ ಸ್ವಭಾವದವನು, ದುಃಖಪ್ರೇಮಿ, ಬೇರೆಯವರ ತೊಂದರೆಗಳಿಗೆ ಸಂತೋಷಪಡುವವನು. ಅಸಮಂಜಸ ಎಲ್ಲಿಯವರೆಗೆ ದುಷ್ಟನಾಗಿ ಮೆರೆದನೆಂದರೆ ಪ್ರಜೆಗಳನ್ನು ಹಿಂಸಿಸುವುದು – ಅವರ ಯಾತನೆಯನ್ನು ಕಂಡು ವಿಕೃತ ಆನಂದ ಪಡುವುದು, ಮಕ್ಕಳನ್ನು ಎತ್ತಿ ನದಿಗೆಸೆದು ಅವರು ಮುಳುಗುವಾಗ ಏಳುವ ಶ್ವಾಸದ ಗುಳ್ಳೆಗಳನ್ನು ಕಂಡು ವಿಕಟ ನಗೆ ಬೀರುತ್ತಾ ಸಂಭ್ರಮಿಸುವುದು ಇತ್ಯಾದಿ ವಿಪರೀತ ಎನ್ನುವ ರೀತಿಯ ತೊಂದರೆ ನೀಡುತ್ತಿದ್ದನು. ಮಹಾರಾಜ ಸಗರನಿಗೆ ಮಗನ […] - ["ಕ್ರಿಯೇಟಿವ್ ಗ್ಲೋಬಲ್ ಸ್ಕೂಲ್"](https://news.nammakarla.in/%e0%b2%95%e0%b3%8d%e0%b2%b0%e0%b2%bf%e0%b2%af%e0%b3%87%e0%b2%9f%e0%b2%bf%e0%b2%b5%e0%b3%8d-%e0%b2%97%e0%b3%8d%e0%b2%b2%e0%b3%8b%e0%b2%ac%e0%b2%b2%e0%b3%8d-%e0%b2%b8%e0%b3%8d%e0%b2%95%e0%b3%82/): ಕಾರ್ಕಳದಲ್ಲಿ ಕ್ರಿಯೇಟಿವ್ ಚಿಲಿಪಿಲಿ- 2026, ಬೇಸಿಗೆ ಶಿಬಿರ ಉದ್ಘಾಟನೆ. ರಾಷ್ಟ್ರಮಟ್ಟದಲ್ಲಿ ಶಿಕ್ಷಣ, ಕಲೆ, ಸಾಹಿತ್ಯ ಕ್ಷೇತ್ರಗಳಲ್ಲಿ ತನ್ನದೇ ಛಾಪನ್ನು ಮೂಡಿಸಿರುವ ಕಾರ್ಕಳದ ಪ್ರತಿಷ್ಠಿತ ಕ್ರಿಯೇಟಿವ್ಶಿಕ್ಷಣ ಸಂಸ್ಥೆಯ ಹೊಸ ಮೈಲುಗಲ್ಲು ಕ್ರಿಯೇಟಿವ್ ಗ್ಲೋಬಲ್ ಸ್ಕೂಲ್ನ ಆಶ್ರಯದಲ್ಲಿ ಎಳೆಯ ಮನಸ್ಸುಗಳನ್ನು ಒಗ್ಗೂಡಿಸುವ‘ಕ್ರಿಯೇಟಿವ್ ಚಿಲಿಪಿಲಿ-2026’ ಮೂರು ದಿನಗಳ ಬೇಸಿಗೆ ಶಿಬಿರವು ಉದ್ಘಾಟನೆಗೊಂಡಿತು. ಕಾರ್ಯಕ್ರಮವನ್ನು ಉದ್ಘಾಟಿಸುತ್ತಾ ಸಂಸ್ಥೆಯ ಸಹ ಸಂಸ್ಥಾಪಕರಾದ ಶ್ರೀ ಅಶ್ವತ್ ಎಸ್ .ಎಲ್. ರವರು, ನಾಲ್ಕು ಗೋಡೆಗಳ ಮಧ್ಯೆ ನಡೆಯುವ ಪಾಠ ಪ್ರವಚನಗಳ ಜೊತೆಗೆ ಬದುಕಿನ ಮೌಲ್ಯಗಳನ್ನು ಕಲಿಯಬೇಕು. ಮಕ್ಕಳು ತಮ್ಮ ಸುಂದರ ಬಾಲ್ಯವನ್ನು ಮೊಬೈಲ್ ನಿಂದ ದೂರವಿದ್ದು ತಮ್ಮ ಬದುಕನ್ನು ಸವಿಯಬೇಕೆಂಬ ಸದಾಶಯವನ್ನಿಟ್ಟುಕೊಂಡು ಈ ಚಿಲಿಪಿಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತೇವೆ. ಮಾತ್ರವಲ್ಲದೆ ಕ್ರಿಯೇಟಿವ್ ಸಂಸ್ಥೆಯ ಹೊಸ ಪರಿಕಲ್ಪನೆಯಾದ ಎಳೆಯ ಮನಸ್ಸುಗಳಿಗೆ ಮುಂದೆ ಜಾಗತಿಕ ಮಟ್ಟದಲ್ಲಿ ಸ್ಪರ್ಧೆಯನ್ನು ಎದುರಿಸಲು ಮತ್ತು ನಮ್ಮ ಸಂಸ್ಕೃತಿ, ದೇಶಾಭಿಮಾನವನ್ನು ಹೊಂದಲು ಕ್ರಿಯೇಟಿವ್ ಗ್ಲೋಬಲ್ಸ್ಕೂಲನ್ನು ಪ್ರಾರಂಭಿಸುತ್ತಿದ್ದೇವೆ. ಇದರ ಮೊದಲ ಹೆಜ್ಜೆಯಾಗಿ ಇಂದು ಬೇಸಿಗೆ ಶಿಬಿರವನ್ನು ಹಮ್ಮಿಕೊಂಡಿದ್ದೇವೆ ಎಂದು ನುಡಿದರು. ಸಹ ಸಂಸ್ಥಾಪಕರಲ್ಲಿ […] - [ಕಾರ್ಕಳ ಜ್ಞಾನಸುಧಾ ವಿದ್ಯಾ ಸಂಸ್ಥೆಯ ಸಮಾಜಮುಖಿ ಕಾರ್ಯ,ಬಡ ಅರ್ಹ ಮಕ್ಕಳಿಗೆ ಉಚಿತ ಶಿಕ್ಷಣ,](https://news.nammakarla.in/%e0%b2%95%e0%b2%be%e0%b2%b0%e0%b3%8d%e0%b2%95%e0%b2%b3-%e0%b2%9c%e0%b3%8d%e0%b2%9e%e0%b2%be%e0%b2%a8%e0%b2%b8%e0%b3%81%e0%b2%a7%e0%b2%be-%e0%b2%b5%e0%b2%bf%e0%b2%a6%e0%b3%8d%e0%b2%af%e0%b2%be-4/): 2026-27 ನೇ ಸಾಲಿನ ಪ್ರೌಢಶಾಲೆ ಮತ್ತು ವಾಣಿಜ್ಯ ವಿಭಾಗದ ಅರ್ಜಿ ಆಹ್ವಾನ ಗಣಿತನಗರ : ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ಟ್ರಸ್ಟ್(ರಿ.) ಇದರ ಆಡಳಿತಕ್ಕೆ ಒಳಪಟ್ಟ ಕಾರ್ಕಳಜ್ಞಾನಸುಧಾ ಶಿಕ್ಷಣ ಸಂಸ್ಥೆಗಳಲ್ಲಿ ಟ್ರಸ್ಟಿನ ಸಮಾಜಮುಖಿಕಾರ್ಯಕ್ರಮದ ಒಂದು ಭಾಗವಾಗಿ ಹಲವಾರು ವರ್ಷಗಳಿಂದಕಾರ್ಕಳ ತಾಲೂಕಿನ ಬಡ ಅರ್ಹ ಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡಲಾಗುತ್ತಿದ್ದು, ಈ ಬಾರಿಯೂ 2026-27ನೇ ಶೈಕ್ಷಣಿಕ ಸಾಲಿನಲ್ಲಿ ,ಕಾರ್ಕಳ ಜ್ಞಾನಸುಧಾ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ 6 ರಿಂದ 10ನೇ ತರಗತಿಯವರೆಗೆ ಪ್ರತೀ ತರಗತಿಗೆ 5 ವಿದ್ಯಾರ್ಥಿಗಳಂತೆ ಉಚಿತ ಶಿಕ್ಷಣವನ್ನು ಮತ್ತು ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗಕ್ಕೆ ದಾಖಲಾತಿ ಬಯಸುವ ಹತ್ತನೇ ತರಗತಿಯಲ್ಲಿ ಶೇ 95ಕ್ಕಿಂತ ಅಧಿಕ ಅಂಕ ಗಳಿಸುವ ವಿದ್ಯಾರ್ಥಿಗಳಿಗೆ ಕಾಲೇಜು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಸಂಪೂರ್ಣ ಉಚಿತ ಶಿಕ್ಷಣ, ಶೇ90ಕ್ಕಿಂತ ಅಧಿಕ ಅಂಕ ಗಳಿಸುವ ವಿದ್ಯಾರ್ಥಿಗಳಿಗೆ ಕಾಲೇಜು ಶುಲ್ಕದಲ್ಲಿ ಸಂಪೂರ್ಣ ವಿನಾಯಿತಿ, ಶೇ 85ಕ್ಕಿಂತ ಅಧಿಕ ಅಂಕ ಗಳಿಸುವ ವಿದ್ಯಾರ್ಥಿಗಳಿಗೆ ಶೇ.25ರಷ್ಟು ಕಾಲೇಜು ಶುಲ್ಕದಲ್ಲಿ ವಿನಾಯಿತಿ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಆಸಕ್ತ […] - [ವಿದ್ಯುತ್ ದರ ಹೆಚ್ಚಳ…!](https://news.nammakarla.in/%e0%b2%b5%e0%b2%bf%e0%b2%a6%e0%b3%8d%e0%b2%af%e0%b3%81%e0%b2%a4%e0%b3%8d-%e0%b2%a6%e0%b2%b0-%e0%b2%b9%e0%b3%86%e0%b2%9a%e0%b3%8d%e0%b2%9a%e0%b2%b3/): ಬೆಂಗಳೂರು: ಬಹುವಾರ್ಷಿಕ ದರ ಪರಿಷ್ಕರಣೆ ಕ್ರಮದಡಿ ವಿದ್ಯುತ್ ದರದಲ್ಲಿ ಕಡಿತ ಘೋಷಿಸಿದ್ದರೂ, ಗ್ರಾಹಕರಿಗೆ ಒಟ್ಟಾರೆ ಹೆಚ್ಚಳದ ಭಾರ ತಪ್ಪಿಲ್ಲ. ಕೆಇಆರ್‌ಸಿ ಆದೇಶದಂತೆ ವಾಣಿಜ್ಯ ಮತ್ತು ಕೈಗಾರಿಕಾ ಬಳಕೆದಾರರಿಗೆ ಯೂನಿಟ್‌ಗೆ 10 ರಿಂದ 20 ಪೈಸೆವರೆಗೆ ಕಡಿತ ನೀಡಲಾಗಿದೆ. ಆದರೆ, ವಿದ್ಯುತ್ ನೌಕರರ ಪಿಂಚಣಿ ಹಾಗೂ ಗ್ರಾಚುಟಿ ಬಾಕಿ ಭಾರವನ್ನು ಗ್ರಾಹಕರ ಮೇಲೆ ಹಾಕಲಾಗಿದ್ದು, ಏಪ್ರಿಲ್ 1ರಿಂದ ಎಲ್ಲಾ ವರ್ಗಗಳಿಗೂ ಯೂನಿಟ್‌ಗೆ 35 ಪೈಸೆ ಹೆಚ್ಚುವರಿ ಶುಲ್ಕ ವಿಧಿಸಲಾಗಿದೆ. ಇದರಿಂದ ಒಟ್ಟಾರೆ ಲೆಕ್ಕದಲ್ಲಿ ಗ್ರಾಹಕರಿಗೆ 35 ರಿಂದ 45 ಪೈಸೆಯವರೆಗೆ ಹೆಚ್ಚಳವಾಗಲಿದೆ. ಪ್ರಸ್ತುತ ಗೃಹ ಬಳಕೆದಾರರಿಗೆ ಯೂನಿಟ್‌ಗೆ ₹5.80, ವಾಣಿಜ್ಯಕ್ಕೆ ₹7, ಕೈಗಾರಿಕೆಗಳಿಗೆ ₹4.50 ಮತ್ತು ಎಚ್‌ಟಿ-1 ಬಳಕೆದಾರರಿಗೆ ₹6.60 ದರ ಇದೆ. ಎಸ್ಕಾಂಗಳ ಆರ್ಥಿಕ ಕೊರತೆಯನ್ನು ಸಮತೋಲನಗೊಳಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. - [ನವಚೇತನ ಸೇವಾ ಬಳಗ ® ತೋಡಾರು ಸಂಸ್ಥೆಯ ಸೇವಾ ಪಯಣ](https://news.nammakarla.in/%e0%b2%a8%e0%b2%b5%e0%b2%9a%e0%b3%87%e0%b2%a4%e0%b2%a8-%e0%b2%b8%e0%b3%87%e0%b2%b5%e0%b2%be-%e0%b2%ac%e0%b2%b3%e0%b2%97-%e0%b2%a4%e0%b3%8b%e0%b2%a1%e0%b2%be%e0%b2%b0%e0%b3%81-%e0%b2%b8%e0%b2%82/): ಫೆಬ್ರವರಿ 23 ರಂದು 12 ಬಡ ಕುಟುಂಬದ ಸಹಾಯರ್ಥವಾಗಿ ನಡೆದ ಆಂಟಿ ಅಂಕಲ್ ನಾಟಕದ ಪ್ರದರ್ಶನದ ಸಂದರ್ಭದಲ್ಲಿ ಬಡವರ ವೈದ್ಯಕೀಯ ಚಿಕಿತ್ಸೆಗಾಗಿ 1,23’0000/- ರೂ ಧನ ಸಹಾಯವನ್ನು ಗಣ್ಯರ ಸಮಾಗಮದಲ್ಲಿ ಫಲಾನುಭವಿಗಳ ಕೈಗೆ ಹಸ್ತಾಂತರಿಸಲಾಯಿತು. ಒಟ್ಟು ಸೇವಾ ಪಯಣ :-193 ಒಟ್ಟು ಸೇವಾ ಪಯಣದ ಮೊತ್ತ :-55,22,480/- - [ಗ್ಯಾಸ್ ಕೊರತೆ ಬೆನ್ನಲ್ಲೇ ಔಷಧ ದರ ಏರಿಕೆ ಭೀತಿ](https://news.nammakarla.in/%e0%b2%97%e0%b3%8d%e0%b2%af%e0%b2%be%e0%b2%b8%e0%b3%8d-%e0%b2%95%e0%b3%8a%e0%b2%b0%e0%b2%a4%e0%b3%86-%e0%b2%ac%e0%b3%86%e0%b2%a8%e0%b3%8d%e0%b2%a8%e0%b2%b2%e0%b3%8d%e0%b2%b2%e0%b3%87-%e0%b2%94/): ಬೆಂಗಳೂರು: ಅಮೆರಿಕಾ–ಇಸ್ರೇಲ್–ಇರಾನ್ ಸಂಘರ್ಷದ ಪರಿಣಾಮ ಜಾಗತಿಕ ಪೂರೈಕೆ ಸರಪಳಿ ಅಸ್ತವ್ಯಸ್ತಗೊಂಡಿದ್ದು, ಬೆಂಗಳೂರಿನಲ್ಲಿ ಕಳೆದ ಮೂರು ವಾರಗಳಿಂದ ವಾಣಿಜ್ಯ LPG ಸಿಲಿಂಡರ್‌ಗಳ ಕೊರತೆ ಉಂಟಾಗಿದೆ. ಇದರಿಂದ ಹೋಟೆಲ್ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ. ಇದೀಗ ಕಚ್ಚಾ ತೈಲ ಹಾಗೂ ಪೆಟ್ರೋಕೆಮಿಕಲ್ಸ್ ಬೆಲೆ ಏರಿಕೆಯಿಂದ ಔಷಧ ಪ್ಯಾಕೇಜಿಂಗ್ ವೆಚ್ಚ ಹೆಚ್ಚಾಗಿ, ಏಪ್ರಿಲ್ ಮೊದಲ ವಾರದಿಂದ ಔಷಧ ದರಗಳು ಶೇ.15–20ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಪ್ಯಾರಸಿಟಮಾಲ್ ಸೇರಿದಂತೆ ಹೃದಯ, ಮಧುಮೇಹ, ಗ್ಯಾಸ್ಟ್ರಿಕ್ ಹಾಗೂ ಕೆಮ್ಮಿನ ಔಷಧಗಳು ಸೇರಿದಂತೆ 600ಕ್ಕೂ ಹೆಚ್ಚು ಅವಶ್ಯಕ ಔಷಧಗಳ ಬೆಲೆ ಏರಿಕೆಯಾಗಲಿದ್ದು, ಸೌಂದರ್ಯವರ್ಧಕ ಮತ್ತು ಮಕ್ಕಳ ಉತ್ಪನ್ನಗಳ ದರಗಳೂ ಹೆಚ್ಚಾಗಲಿವೆ ಎಂದು ಸಂಘಟನೆ ತಿಳಿಸಿದೆ. ಇದಕ್ಕೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ‘ಔಷಧ ದರ ನಿಗದಿ ಮಾಡುವುದು ಕೇಂದ್ರ ಸರ್ಕಾರದ ಪಾಲಿಸಿಯ ಮೇಲೆ ಅವಲಂಬಿತವಾಗಿದೆ. ಯುದ್ಧದ ಎಫೆಕ್ಟ್‌ನಿಂದ ದರ ಏರಿಕೆಯಾದರೆ ಅದು ನಮ್ಮ ಕೈಯಲ್ಲಿ ಇಲ್ಲ. ಆದರೆ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಔಷಧದ ಕೊರತೆಯಾಗದಂತೆ ನಾವು ಕ್ರಮ ಕೈಗೊಳ್ಳುವುದಾಗಿ” ಭರವಸೆ […] - ["ಸಾಲರಾಮಯ್ಯ ಅಲ್ಲ,ನಾನು ಅನ್ನದ ರಾಮಯ್ಯ](https://news.nammakarla.in/%e0%b2%b8%e0%b2%be%e0%b2%b2%e0%b2%b0%e0%b2%be%e0%b2%ae%e0%b2%af%e0%b3%8d%e0%b2%af-%e0%b2%85%e0%b2%b2%e0%b3%8d%e0%b2%b2%e0%b2%a8%e0%b2%be%e0%b2%a8%e0%b3%81-%e0%b2%85%e0%b2%a8%e0%b3%8d%e0%b2%a8/): ಬಿಜೆಪಿ ಟೀಕೆಗೆ, ಸಿಎಂ ತಿರುಗೇಟು ರಾಜ್ಯದ ಆರ್ಥಿಕ ಸ್ಥಿತಿ ಸುಭದ್ರವಾಗಿದೆ, ಗ್ಯಾರಂಟಿ ಯೋಜನೆಗಳು ರಾಜ್ಯದ ಬಡಜನರ ಪರವಾಗಿ ಕೆಲಸ ಮಾಡಿದೆ. ಮೋದಿಯವರ ಅಚ್ಚೆ ದಿನ್ ಇಂದಿಗೂ ಬರಲೇ ಇಲ್ಲ. ಅವರ ಆಳ್ವಿಕೆಯಲ್ಲಿ, ರೂಪಾಯಿ ಮೌಲ್ಯ ಕುಸಿತದ ಬಗ್ಗೆ ರಾಜ್ಯ ಬಿಜೆಪಿ ಮಾತನಾಡುತ್ತಿಲ್ಲ. ರಾಜ್ಯ ಬಿಜೆಪಿ ನಾಯಕರು ಮೋದಿ ಮುಂದೆ ನಿಲ್ಲಲು ಹೆದರುತ್ತಾರೆ. ನಮ್ಮ ಸರಕಾರದ ಬಗ್ಗೆ ಟೀಕೆ ಮಾಡುತ್ತಾರೆ ನಾನು ಸಾಲ ರಾಮಯ್ಯ ಅಲ್ಲ ಅನ್ನದ ರಾಮಯ್ಯ ಎಂದು ಸಿಎಂ ಬಿಜೆಪಿ ಟೀಕೆಗೆ ತಿರುಗೇಟು ನೀಡಿದ್ದಾರೆ. ದಾವಣಗೆರೆ ದಕ್ಷಿಣ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಪರ ರೋಡ್ ಶೋ ನಡೆಸಿ ಸಿಎಂ ಮಾತನಾಡಿದರು. ನಮ್ಮ ಪಕ್ಷ ಎಲ್ಲಾ ವರ್ಗದ ಜನರ ಜೊತೆ ನಿಲ್ಲುತ್ತದೆ. ಅನ್ಯ ರಾಜ್ಯಗಳ ಬೆಲೆ ಏರಿಕೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಗಣನೀಯವಾಗಿ ಬೆಲೆಗಳು ಕಡಿಮೆ. ಕೇಂದ್ರ ಬಜೆಟ್ ಗಿಂತ ರಾಜ್ಯದ ಬಜೆಟ್ ಉತ್ತಮವಾಗಿದೆ. ಬಂಡವಾಳ ಹುಡುಗಿಯಲ್ಲೂ ನಮ್ಮ ರಾಜ್ಯ ಎರಡನೇ ಸ್ಥಾನದಲ್ಲಿದೆ. ಆದರೂ ರಾಜಕೀಯ ಲಾಭಕ್ಕಾಗಿ ಬಿಜೆಪಿಯವರು […] - [ಕಾರ್ಕಳ: ಯಕ್ಷ ರಂಗಾಯಣ ವತಿಯಿಂದ "ಆಟ-ಪಾಠ: ಮಕ್ಕಳ ರಂಗ ಶಿಬಿರ" ಕಾರ್ಯಕ್ರಮ](https://news.nammakarla.in/%e0%b2%95%e0%b2%be%e0%b2%b0%e0%b3%8d%e0%b2%95%e0%b2%b3-%e0%b2%af%e0%b2%95%e0%b3%8d%e0%b2%b7-%e0%b2%b0%e0%b2%82%e0%b2%97%e0%b2%be%e0%b2%af%e0%b2%a3-%e0%b2%b5%e0%b2%a4%e0%b2%bf%e0%b2%af%e0%b2%bf/): ಮಂಗಳೂರು: ಯಕ್ಷ ರಂಗಾಯಣ ಕಾರ್ಕಳ ವತಿಯಿಂದ ಏಪ್ರಿಲ್ 11ರಿಂದ ಏಪ್ರಿಲ್ 20, ರವರೆಗೆ ಕೋಟಿ ಚೆನ್ನಯ್ಯ ಥೀಂ ಪಾರ್ಕ್ ಆವರಣ ಕಾರ್ಕಳದಲ್ಲಿ ನಡೆಯಲಿರುವ “ಆಟ-ಪಾಠ: ಮಕ್ಕಳ ರಂಗ ಶಿಬಿರ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. 8 ರಿಂದ 14 ವರ್ಷ ವಯಸ್ಸಿನ ಮಕ್ಕಳಿಗೆ ಈ ಶಿಬಿರದಲ್ಲಿ ಭಾಗವಹಿಸುವ ಅವಕಾಶವಿದ್ದು, ಮೊದಲು ನೋಂದಾಯಿಸಿದ 60 ಮಂದಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ. ಆಸಕ್ತರು ಏಪ್ರಿಲ್ 1ರಿಂದ 6, 2026ರೊಳಗಾಗಿ ಅರ್ಜಿ ಸಲ್ಲಿಸಬೇಕಾಗಿದ್ದು, ನೋಂದಣಿ ಶುಲ್ಕ ರೂ.1,000/- ಆಗಿದೆ. ನೋಂದಾವಣಿಗೆ ಬರುವಾಗ ಮಕ್ಕಳ ಆಧಾರ್ ಪ್ರತಿ ಹಾಗೂ ಪಾಸ್ಪೋರ್ಟ್ ಸೈಜ್ ಫೋಟೋ ಕಡ್ಡಾಯವಾಗಿ ತರಬೇಕಿದ್ದು ಹೆಚ್ಚಿನ ಮಾಹಿತಿಗಾಗಿ 7676501443, 9900987866, 9980358653, 8123471121 ಸಂಖ್ಯೆಗಳ ಸಂಪರ್ಕಿಸಬಹುದು ಎಂದು ಯಕ್ಷ ರಂಗಾಯಣ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ. - [ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಸ್ರಿ ಬೈಲೂರು](https://news.nammakarla.in/%e0%b2%b8%e0%b2%b0%e0%b2%95%e0%b2%be%e0%b2%b0%e0%b2%bf-%e0%b2%b9%e0%b2%bf%e0%b2%b0%e0%b2%bf%e0%b2%af-%e0%b2%aa%e0%b3%8d%e0%b2%b0%e0%b2%be%e0%b2%a5%e0%b2%ae%e0%b2%bf%e0%b2%95-%e0%b2%b6%e0%b2%be-6/): “ಉದಯೋತ್ಸವ” ಏ. 3 ಶುಕ್ರವಾರ ಕಾರ್ಕಳ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಸ್ರಿ ಬೈಲೂರು ಇಲ್ಲಿ, ಕನಸುಗಳು ನನಸಾಗುವ ಕಲಾ ಹಬ್ಬ ಹೊಸ ಚೈತನ್ಯದ “ಉದಯೋತ್ಸವ” ಏ. 3 ಶುಕ್ರವಾರ ನಡೆಯಲಿದೆ. ಬೆಳಿಗ್ಗೆ 8.30 ಕ್ಕೆ, ಸಾರ್ಥಕ ಸೇವೆಯ ಸತ್ಕಾರದ ನಡಿಗೆ, ನಾಲ್ಕು ದಶಕಗಳ ಕಾಲ ಕ್ರೀಡಾ ಜ್ಯೋತಿ ಬೆಳಗಿದ ಮಹಾಗುರುವಿಗೆ ಅಭಿಮಾನಿಗಳ ಅಭಿಮಾನದ ನಮನ, ಧ್ವಜ ನಮನ ಹಾಗೂ ಬೆಳಿಗ್ಗೆ 10.30 ಕ್ಕೆ ಪ್ರತಿಭೆ ಪತಾಕೆ – ಚಿಂತನ -ಮಂಥನದ ವೇದಿಕೆ(ಪರಿಶ್ರಮಕ್ಕೆ ಸಿಕ್ಕಫಲ ಶಾಲೆಯ ಅಭಿವೃದ್ಧಿಯ ದೂರ ದೃಷ್ಟಿಯ ಅನಾವರಣ) ನಂತರ ಸಭಾ ಕಾರ್ಯಕ್ರಮ, ಮಧ್ಯಾಹ್ನ 3 ಗಂಟೆಗೆ, ಪ್ರತಿಭಾ ಸೌರಭ- ಮಕ್ಕಳ ಫಲ ಪ್ರಪಂಚ ನಡೆಯಲಿದೆ. ಬಾಲ ಕಲಾವಿದರ “ವೀರ ಅಭಿಮನ್ಯು” ಯಕ್ಷಗಾನ ನಡೆಯಲಿದ್ದು ರಾತ್ರಿ 9:30ಕ್ಕೆ ಚಾ ಪರ್ಕ ಕಲಾವಿದರು ಕುಡ್ಲ ಅಭಿನಯಿಸುವ, “ಯಾನೊರಿ ಬಾರೊಲಿಯ” ತುಳು ಹಾಸ್ಯಮಯ ನಾಟಕ ನಡೆಯಲಿದೆ. - [ಇನ್ಸ್‌ಪೆಕ್ಟರ್ ಸಂದೇಶ್‌ಗೆ ಹೈಕೋರ್ಟ್ ತರಾಟೆ: ಮಧ್ಯಂತರ ತಡೆ ನಿರಾಕರಣೆ](https://news.nammakarla.in/%e0%b2%87%e0%b2%a8%e0%b3%8d%e0%b2%b8%e0%b3%8d%e0%b2%aa%e0%b3%86%e0%b2%95%e0%b3%8d%e0%b2%9f%e0%b2%b0%e0%b3%8d-%e0%b2%b8%e0%b2%82%e0%b2%a6%e0%b3%87%e0%b2%b6%e0%b3%8d%e0%b2%97%e0%b3%86/): ಬೆಂಗಳೂರು: ಮೂಡಬಿದಿರೆ ಅಮಾನತುಗೊಂಡ ಇನ್ಸ್‌ಪೆಕ್ಟರ್ ಸಂದೇಶ್ ವಿರುದ್ಧ ಶಿಕ್ಷಕಿ ನೀಡಿದ ಅತ್ಯಾಚಾರ ಆರೋಪ ಪ್ರಕರಣ ರಾಜ್ಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು ಈ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಸಂದೇಶ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯ ಮಧ್ಯಂತರ ತಡೆ ನೀಡಲು ನಿರಾಕರಿಸಿ ವಿಚಾರಣೆಯನ್ನು ಏಪ್ರಿಲ್ 6ಕ್ಕೆ ಮುಂದೂಡಿದೆ. ವಿಚಾರಣೆ ವೇಳೆ ಇನ್ಸ್‌ಪೆಕ್ಟರ್ ಪರ ವಕೀಲರು, ಮಹಿಳೆಯೊಂದಿಗೆ ಒಪ್ಪಿತ ಸಂಬಂಧವಿತ್ತು ಹಾಗೂ ಅತ್ಯಾಚಾರ ಆರೋಪಕ್ಕೆ ಸಾಕ್ಷ್ಯಾಧಾರಗಳಿಲ್ಲ ಎಂದು ವಾದಿಸಿದರು. ಆದರೆ ಈ ವಾದವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಪೀಠ, ದೂರು ನೀಡಲು ಬಂದ ಮಹಿಳೆಯೊಂದಿಗೆ ಸಂಬಂಧ ಬೆಳೆಸಿರುವುದು ಅಧಿಕಾರದ ದುರುಪಯೋಗವಲ್ಲವೇ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿತು. ಸಂತ್ರಸ್ತೆ ಶಿಕ್ಷಕಿ ನೀಡಿದ ದೂರಿನ ಮೇರೆಗೆ ಬೆಳ್ತಂಗಡಿ ತಾಲೂಕಿನ ವೇಣೂರು ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್‌ನ ವಿವಿಧ ಕಲಂಗಳಡಿ ಎಫ್ಐಆರ್ ದಾಖಲಾಗಿದೆ. ಇನ್ಸ್‌ಪೆಕ್ಟರ್ ಸಂದೇಶ್ ಮೇಲೆ ಇದಕ್ಕೂ ಮೊದಲು ಮಹಿಳೆಯರನ್ನು ಲೈಂಗಿಕವಾಗಿ ಪೀಡಿಸಿದ ಆರೋಪಗಳು ಕೇಳಿಬಂದಿದ್ದು, ಇತ್ತೀಚೆಗೆ ಕೆಲವು ಪ್ರಕರಣಗಳು ಸಾಕಷ್ಟು ಚರ್ಚೆಗೆ ಕಾರಣವಾಗಿದ್ದವು. ಶಿಕ್ಷಕಿ ದೂರಿನಲ್ಲಿ, […] - [ರಾಜ್ಯದಲ್ಲಿ ಬಿಸಿ ಗಾಳಿಯ ಎಚ್ಚರಿಕೆ….!](https://news.nammakarla.in/%e0%b2%b0%e0%b2%be%e0%b2%9c%e0%b3%8d%e0%b2%af%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%ac%e0%b2%bf%e0%b2%b8%e0%b2%bf-%e0%b2%97%e0%b2%be%e0%b2%b3%e0%b2%bf%e0%b2%af-%e0%b2%8e%e0%b2%9a/): ಏಪ್ರಿಲ್ 2ರಿಂದ ರಾಜ್ಯದಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕಲಬುರಗಿ ಸೇರಿದಂತೆ ,ಉತ್ತರ ಕರ್ನಾಟಕದ ಭಾಗದಲ್ಲಿ ತಾಪಮಾನ 42 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಾಧ್ಯತೆ ಇದೆ. ಮಲೆನಾಡು ಭಾಗಗಳಲ್ಲಿ ಸಣ್ಣಗೆ ಮಳೆಯಾಗಲಿದೆ. ಮಂಗಳೂರು ಉಡುಪಿ ಸೇರಿದಂತೆ, ಕರಾವಳಿ ಜಿಲ್ಲೆಗಳಲ್ಲಿ ಸೆಕೆ ಹೆಚ್ಚಾಗಲಿದೆ. ಶಿವಮೊಗ್ಗ ,ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮೋಡಕವಿದ ವಾತಾವರಣವಿರಲಿದೆ. ತಾಪಮಾನ ಹೆಚ್ಚಿರುವ ಕಾರಣ, ಉತ್ತರ ಕರ್ನಾಟಕದ ಜನರು ಮಧ್ಯಾಹ್ನ 12 ಗಂಟೆಯಿಂದ ಸಂಜೆ 4 ವರೆಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. - [ರಾಜ್ಯದಲ್ಲಿ ಬಿಸಿಗಾಲಿಯ ಎಚ್ಚರಿಕೆ….!](https://news.nammakarla.in/%e0%b2%b0%e0%b2%be%e0%b2%9c%e0%b3%8d%e0%b2%af%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%ac%e0%b2%bf%e0%b2%b8%e0%b2%bf%e0%b2%97%e0%b2%be%e0%b2%b2%e0%b2%bf%e0%b2%af-%e0%b2%8e%e0%b2%9a%e0%b3%8d/): ಏಪ್ರಿಲ್ 2ರಿಂದ ರಾಜ್ಯದಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕಲಬುರುಗಿ ಸೇರಿದಂತೆ ಉತ್ತರ ಕರ್ನಾಟಕದ ಭಾಗದಲ್ಲಿ ತಾಪಮಾನ 42 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಾಧ್ಯತೆ ಇದೆ. ಮಲೆನಾಡು ಭಾಗಗಳಲ್ಲಿ ಸಣ್ಣಗೆ ಮಳೆಯಾಗಲಿದೆ. ಮಂಗಳೂರು ಉಡುಪಿ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಸೆಕೆ ಹೆಚ್ಚಾಗಲಿದೆ. ಶಿವಮೊಗ್ಗ ,ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮೋಡಕವಿದ ವಾತಾವರಣವಿರಲಿದೆ. ತಾಪಮಾನ ಹೆಚ್ಚಿರುವ ಕಾರಣ ,ಉತ್ತರ ಕರ್ನಾಟಕದ ಜನರು ಮಧ್ಯಾಹ್ನ 12 ಗಂಟೆಯಿಂದ ಸಂಜೆ 4 ವರೆಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. - [ಮಹಾಭಾರತ](https://news.nammakarla.in/%e0%b2%ae%e0%b2%b9%e0%b2%be%e0%b2%ad%e0%b2%be%e0%b2%b0%e0%b2%a4-476/): ಭಾಗ – 475 ಭರತೇಶ ಶೆಟ್ಟಿ,ಎಕ್ಕಾರು ಸಂಚಿಕೆ ೪೭೫ ಮಹಾಭಾರತ ಧರ್ಮರಾಯನಿಗೆ ಧರ್ಮೋಪದೇಶ ಮಾಡಲು ಭೀಷ್ಮರು ಸನ್ನದ್ಧರಾಗುತ್ತಿದ್ದಂತೆಯೆ ಅವರ ಸುತ್ತ ಸಮಸ್ತ ವೇದಗಳನ್ನು ಸಂಪೂರ್ಣವಾಗಿ ತಿಳಿದಿದ್ದ ವೇದವ್ಯಾಸರು, ದೇವರ್ಷಿ ನಾರದರು, ವಾತ್ಸ್ಯರು, ಆಶ್ಮಕರು, ಸುಮಂತುಗಳು, ಜೈಮಿನಿ ಮಹರ್ಷಿ, ಮಹಾತ್ಮರಾದ ಪೈಲರು, ಶಾಂಡಿಲ್ಯರು, ದೇವಲರು, ಬುದ್ಧಿವಂತರಾದ ಮೈತ್ರೇಯ ಮಹರ್ಷಿ, ಅಸಿತ, ವಸಿಷ್ಠ, ವಿಶ್ವಾಮಿತ್ರ, ಬ್ರಹಸ್ಪತಿ, ಶುಕ್ರಾಚಾರ್ಯರು, ಮಹಾಮುನಿಗಳಾದ ಚ್ಯವನರು, ಸನತ್ಕುಮಾರರು, ಕಪಿಲರು, ವಾಲ್ಮೀಕಿ, ತುಂಬುರ, ಕುರು, ಮೌದ್ಗಲರು, ಪರಶುರಾಮರು, ತೃಣಬಿಂದು, ಪಿಪ್ಪಲಾದರು, ವಾಯು, ದಕ್ಷರು, ಪರಾಶರರು, ಮರೀಚಿ, ಕಚರು, ಕಶ್ಯಪರು, ಪುಲಸ್ತ್ಯರು, ಕ್ರತುಗಳು, ಅಂಗೀರಸರು, ಕಾಶ್ಯರು, ಗೌತಮರು, ಗಾಲವಮುನಿಗಳು, ಧೌಮ್ಯರು, ವಿಭಾಂಡರು, ಮಾಂಡವ್ಯರು, ಧೌಮ್ರರು, ಮಾರ್ಕಂಡೇಯರು, ಭಾಸ್ಕರಿಗಳು, ಕೃಷ್ಣಾನುಭೌತಿಕರು, ಪೂರಣರು ಹೀಗೆ ತಪೋನಿಧಿಗಳೂ, ಮಹಾತ್ಮರೂ ಆದ ಋಷಿ ಸಮೂಹಗಳೆಲ್ಲ ಸುತ್ತುವರಿದು ಸೂರ್ಯನನ್ನು ಸುತ್ತುವರಿದ ಗ್ರಹಗಳಂತೆ ನಿಂತರು. ಭೀಷ್ಮಾಚಾರ್ಯರು ಬದ್ಧಾಂಜಲಿಯಾಗಿ ಶ್ರೀಕೃಷ್ಣನನ್ನು ಧ್ಯಾನಿಸುತ್ತಿದ್ದಾರೆ. ಬಹುವಿಧವಾಗಿ ಶ್ರೀಹರಿಯನ್ನು ಸ್ತುತಿಸಿ ಮಹಿಮಾತಿಶಯಗಳನ್ನು ಹೇಳುತ್ತಾ ವರ್ಣಿಸಿ ಸ್ತೋತ್ರ ಮಾಡತೊಡಗಿದರು. ಸ್ತುತಿ ಮಾಡುತ್ತಾ ಕೃಷ್ಣನ ಮಹಿಮೆಯನ್ನು ಹೇಳತೊಡಗಿದರು “ಶ್ರೀಕೃಷ್ಣನನ್ನು ಅನನ್ಯ […] - [ಕ್ರಿಯೇಟಿವ್ ಕಾಲೇಜಿನಲ್ಲಿ "ಡಿಟೆಕ್ಟಿವ್ ದಿವಾಕರ್" ತುಳು ಚಲನಚಿತ್ರದ ಟೀಸರ್ ಲಾಂಚ್ ಮತ್ತು ಎರಡನೇ ಪೋಸ್ಟರ್ ಬಿಡುಗಡೆ ಸಮಾರಂಭ](https://news.nammakarla.in/%e0%b2%95%e0%b3%8d%e0%b2%b0%e0%b2%bf%e0%b2%af%e0%b3%87%e0%b2%9f%e0%b2%bf%e0%b2%b5%e0%b3%8d-%e0%b2%95%e0%b2%be%e0%b2%b2%e0%b3%87%e0%b2%9c%e0%b2%bf%e0%b2%a8%e0%b2%b2%e0%b3%8d%e0%b2%b2%e0%b2%bf-7/): ಕರ್ನಾಟಕದ ಸುಂದರ ಕರಾವಳಿ ಪ್ರದೇಶವಾದ ಕಾರ್ಕಳವು ಸಾಂಸ್ಕೃತಿಕ ವೈಭವ, ಪ್ರಕೃತಿ ಸೌಂದರ್ಯ ಮತ್ತು ಶಾಂತವಾತಾವರಣಕ್ಕೆ ಪ್ರಸಿದ್ಧಿ. ಇದೇ ಊರಲ್ಲಿ ರಹಸ್ಯ ಸಂಚು ಮತ್ತು ಸತ್ಯದ ಹುಡುಕಾಟದಿಂದ ತುಂಬಿರುವ ಒಂದು ವಿಭಿನ್ನ ಕಥೆಮೂಡಿಬರುತ್ತದೆ ಅದೇ “ಡಿಟೆಕ್ಟಿವ್ ದಿವಾಕರ್”ಈ ತುಳು ಚಲನಚಿತ್ರದ ಟೀಸರ್ ಲಾಂಚ್ ಮತ್ತು ಎರಡನೇ ಪೋಸ್ಟರ್ ಬಿಡುಗಡೆ ಸಮಾರಂಭವು ಕ್ರಿಯೇಟಿವ್ ಕಾಲೇಜು ಕಾರ್ಕಳದಲ್ಲಿ ದಿನಾಂಕ: 28- 03- 2026 ಶನಿವಾರ ನೆರವೇರಿತು. ಕಾರ್ಯಕ್ರಮ ಅತಿಥಿಗಳಿಂದ ಜ್ಯೋತಿ ಬೆಳಗುವುದರ ಮುಖೇನ ವಿದ್ಯುಕ್ತವಾಗಿ ಉದ್ಘಾಟನೆಗೊಂಡಿತು. ಕಾರ್ಯಕ್ರಮವನ್ನುಉದ್ಘಾಟಿಸಿದ ಅತಿಥಿಗಳಲ್ಲಿ ಓರ್ವರಾದ ಡಾ ರವೀಂದ್ರ ಶೆಟ್ಟಿ ಬಜಗೋಳಿಯವರು “ನಮ್ಮ ನೆಲದ ಕಥೆಯನ್ನು ಹೇಳುವ ಈಚಲನಚಿತ್ರವು ಮುಂದಿನ ತಲೆಮಾರಿಗೆ ಒಂದು ಉತ್ತಮ ಸಂದೇಶವನ್ನು ನೀಡಲಿದೆ “ಎಂದು ತಿಳಿಸುತ್ತಾ ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದರು. ಈ ಚಲನಚಿತ್ರದ ಸಹ ನಿರ್ಮಾಪಕರಾದ ವಿಭಾ ಪ್ರೊಡಕ್ಷನ್ ನ ಶ್ರೀ ಅಶ್ವತ್ ಎಸ್.ಎಲ್ .ರವರು “ಈ ಚಲನಚಿತ್ರವುಒಂದು ಹೊಸ ಕಥಾಹಂದರವನಿಟ್ಟುಕೊಂಡು ನಿರ್ಮಾಣವಾಗಿದ್ದು ಕಾರ್ಕಳದ ಗತಿಸಿ ಹೋದ ಘಟನೆಗಳನ್ನು ಮತ್ತೆ ನೆನಪಿಸುವ,ರಹಸ್ಯಗಳನ್ನು ಅನಾವರಣಗೊಳಿಸುವ ಈ ಕಥೆ […] - [2027ರ ಕಾರ್ಕಳ ಮಹಾಮಸ್ತಕಾಭಿಷೇಕದ ಪ್ರಯುಕ್ತ ಬಾಹುಬಲಿ ಬೆಟ್ಟದ ಪರಿಸರದ ಸ್ವಚ್ಛತಾ ಕಾರ್ಯಕ್ರಮ](https://news.nammakarla.in/2027%e0%b2%b0-%e0%b2%95%e0%b2%be%e0%b2%b0%e0%b3%8d%e0%b2%95%e0%b2%b3-%e0%b2%ae%e0%b2%b9%e0%b2%be%e0%b2%ae%e0%b2%b8%e0%b3%8d%e0%b2%a4%e0%b2%95%e0%b2%be%e0%b2%ad%e0%b2%bf%e0%b2%b7%e0%b3%87%e0%b2%95/): ಕಾರ್ಕಳ,: 26.3.2026 ನೇ ಆದಿತ್ಯವಾರದಂದು, ಕಾರ್ಕಳ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಪ್ರಯುಕ್ತ ಬಾಹುಬಲಿ ಸ್ವಾಮಿ ಬೆಟ್ಟದ ಪರಿಸರದಲ್ಲಿ ಸ್ವಚ್ಛತ ಕಾರ್ಯವನ್ನು ಶ್ರಾವಕ ಬಂಧುಗಳು ಮೊದಲನೇ ಹಂತದಲ್ಲಿನಿರ್ವಹಿಸಿರುವರು. ಈ ಕಾರ್ಯಕ್ರಮಗಳಿಗೆ ಕಾರ್ಕಳ ಶ್ರಾವಕ ಬಂಧುಗಳಲ್ಲದೇಮೂಡಬಿದ್ರೆಯ ಬಸದಿಯ ಸ್ವಚ್ಚತಾ ತಂಡದ ಅನೇಕ ಶ್ರಾವಕ-ಶ್ರಾವಕಿಯರು ಅಲ್ಲದೇ ಇರ್ವತ್ತೂರು, ಬಜಗೋಳಿ, ನೆಲ್ಲಿಕಾರು, ನಿಟ್ಟೆ, ನಲ್ಲೂರು, ಪರಿಸರದ ಶ್ರಾವಕ ಬಂಧುಗಳುಅತ್ಯಂತ ಒಳ್ಳೆಯ ರೀತಿಯಿಂದ ಈ ಕೆಲಸಗಳಲ್ಲಿ ಪಾಲ್ಗೊಂಡಿದ್ದರು. ಈ ಸ್ವಚ್ಛತ ಕಾರ್ಯಕ್ರಮವು ಮಹಾ ಮಸ್ತಕಾಭಿಷೇಕ ಸಮಿತಿಯ ಕಾರ್ಯಾಧ್ಯಕ್ಷರಾದ ಎಂ.ಎನ್. ರಾಜೇಂದ್ರ ಕುಮಾರ್‌ರವರ ಸಲಹೆಯ ಮೇರೆಗೆ ನೆರವೇರಿಸಲಾಯಿತು. ಅಲ್ಲದೇ ಈ ಮೊದಲು ಪುರಾತತ್ವ ಇಲಾಖೆಯ ವತಿಯಿಂದ ಗೊಮ್ಮಟೇಶ್ವರ ಮೂರ್ತಿಯ ಮತ್ತು ಬ್ರಹ್ಮ ದೇವರ ಸ್ತಂಭ ಹಾಗೂ ಬ್ರಹ್ಮದೇವರ ಮೂರ್ತಿಯನ್ನು ಹಾಗೂ ಯಜ್ಞ ಮಂಟಪ, ಗೋಪುರಗಳನ್ನು ಇಲಾಖೆಯವರು ಸ್ವಚ್ಛಗೊಳಿಸಿದರು. - [ತಿರುಮಲದಲ್ಲಿ ಭಕ್ತರ ರಕ್ಷಣೆಗೆ ಎಐ ಕ್ಯಾಮೆರಾ-ಡ್ರೋನ್ ಕಣ್ಗಾವಲು](https://news.nammakarla.in/%e0%b2%a4%e0%b2%bf%e0%b2%b0%e0%b3%81%e0%b2%ae%e0%b2%b2%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%ad%e0%b2%95%e0%b3%8d%e0%b2%a4%e0%b2%b0-%e0%b2%b0%e0%b2%95%e0%b3%8d%e0%b2%b7%e0%b2%a3%e0%b3%86/): ತಿರುಪತಿ: ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ಅಲಿಪಿರಿ ಕಾಲ್ನಡಿಗೆ ಮಾರ್ಗದಲ್ಲಿ ಸಾಗುವ ಭಕ್ತರ ಸುರಕ್ಷತೆಗಾಗಿ ಟಿಟಿಡಿ ಆಧುನಿಕ ಎಐ ತಂತ್ರಜ್ಞಾನವನ್ನು ಅಳವಡಿಸಿದೆ. ಕಾಡಿನ ಮಧ್ಯೆ ಇರುವ ಈ ದಾರಿಯಲ್ಲಿ ವನ್ಯಜೀವಿಗಳ ಚಲನವಲನವನ್ನು ಗಮನಿಸಲು ಸೌರಶಕ್ತಿಯಿಂದ ಕಾರ್ಯನಿರ್ವಹಿಸುವ 360 ಡಿಗ್ರಿ ಎಐ ಕ್ಯಾಮೆರಾಗಳನ್ನು ಸ್ಥಾಪಿಸಲಾಗಿದೆ. ಸುಮಾರು 400 ಮೀಟರ್ ದೂರದಲ್ಲಿನ ಚಲನವಲನವನ್ನು ಗುರುತಿಸುವ ಈ ಕ್ಯಾಮೆರಾಗಳು ಚಿರತೆ, ಕರಡಿ ಮುಂತಾದ ಪ್ರಾಣಿಗಳನ್ನು ಪತ್ತೆಹಚ್ಚಿದ ತಕ್ಷಣ ಕಂಟ್ರೋಲ್ ಸೆಂಟರ್ ಹಾಗೂ ಮೊಬೈಲ್ ಆ್ಯಪ್‌ಗೆ ಅಲರ್ಟ್ ಕಳುಹಿಸುತ್ತವೆ. ಜೊತೆಗೆ ಅಲಾರಂ ಸೈರನ್ ಮೊಳಗಿಸಿ ಪ್ರಾಣಿಗಳನ್ನು ಹಿಮ್ಮೆಟ್ಟಿಸುವ ವ್ಯವಸ್ಥೆಯೂ ಇದೆ. ಒಟ್ಟು 110-125 ಕ್ಯಾಮೆರಾಗಳನ್ನು ಹಂತ ಹಂತವಾಗಿ ಅಳವಡಿಸುವ ಯೋಜನೆಯಿದ್ದು, ಈಗಾಗಲೇ ಕೆಲವು ಪ್ರದೇಶಗಳಲ್ಲಿ ಕಾರ್ಯಾರಂಭವಾಗಿದೆ. ಇದಕ್ಕೆ ಜೊತೆಯಾಗಿ ‘ಜೇರಾ’ ಡ್ರೋನ್‌ಗಳನ್ನೂ ಬಳಸಲಾಗುತ್ತಿದ್ದು, ಸಂಜೆ ವೇಳೆಯಲ್ಲಿ 5 ಕಿ.ಮೀ ವ್ಯಾಪ್ತಿಯಲ್ಲಿ ಗಸ್ತು ತಿರುಗಿ ವನ್ಯಜೀವಿಗಳ ಚಲನವಲನವನ್ನು ಗಮನಿಸುತ್ತವೆ. ಇದೇ ವೇಳೆ, ದೇವಸ್ಥಾನ ಪ್ರದೇಶದಲ್ಲೂ ಎಐ ವ್ಯವಸ್ಥೆಯನ್ನು ಬಳಸಿ ಭಕ್ತರ ದಟ್ಟಣೆಯನ್ನು ನಿಯಂತ್ರಿಸಲಾಗುತ್ತಿದೆ. ಕ್ಯೂ ವ್ಯವಸ್ಥೆ ಸುಧಾರಿಸಿ […] - [ಟೋಲ್ ಬೂತ್‌ಗಳಲ್ಲಿ ನಗದು ಪಾವತಿಗೆ ತೆರೆ: ಏಪ್ರಿಲ್ 1ರಿಂದ ಸಂಪೂರ್ಣ ಡಿಜಿಟಲ್ ವ್ಯವಸ್ಥೆ](https://news.nammakarla.in/%e0%b2%9f%e0%b3%8b%e0%b2%b2%e0%b3%8d-%e0%b2%ac%e0%b3%82%e0%b2%a4%e0%b3%8d%e0%b2%97%e0%b2%b3%e0%b2%b2%e0%b3%8d%e0%b2%b2%e0%b2%bf-%e0%b2%a8%e0%b2%97%e0%b2%a6%e0%b3%81-%e0%b2%aa%e0%b2%be/): ಹೋಸದಲ್ಲಿ, ಮಾ. 31: ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಬೂತ್‌ಗಳಲ್ಲಿ ನಗದು ಪಾವತಿಗೆ ತೆರೆ ಬೀಳಲಿದ್ದು, ಏಪ್ರಿಲ್ 1ರಿಂದ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಂಪೂರ್ಣ ಡಿಜಿಟಲ್ ಟೋಲ್ ಸಂಗ್ರಹಣೆಗೆ ಮುಂದಾಗಿದೆ. ಇನ್ನು ಮುಂದೆ ಫಾಸ್ಟ್ಯಾಗ್ ಅಥವಾ ಯುಪಿಐ ಮೂಲಕವೇ ಶುಲ್ಕ ಪಾವತಿ ಕಡ್ಡಾಯವಾಗಲಿದೆ. ಈ ಕ್ರಮದಿಂದ ಪಾರದರ್ಶಕತೆ ಹೆಚ್ಚಿಸುವುದು ಹಾಗೂ ಸಂಚಾರ ದಟ್ಟತೆಯನ್ನು ಕಡಿಮೆ ಮಾಡುವುದು ಉದ್ದೇಶವಾಗಿದೆ. ಡಿಜಿಟಲ್ ವ್ಯವಸ್ಥೆಯಿಂದ ಕಾಯುವ ಸಮಯ ಮತ್ತು ಇಂಧನ ಬಳಕೆ ಕಡಿಮೆಯಾಗುವ ಸಾಧ್ಯತೆ ಇದ್ದರೂ, ಟೋಲ್ ಬೂತ್ ಉದ್ಯೋಗಗಳ ಮೇಲೆ ಪರಿಣಾಮ ಬೀಳಬಹುದು ಎಂದು ಸಂಘಗಳು ಅಭಿಪ್ರಾಯಪಟ್ಟಿವೆ. ಫಾಸ್ಟ್ಯಾಗ್ ಇಲ್ಲದವರು ಕ್ಯೂಆರ್ ಕೋಡ್ ಮೂಲಕ ಪಾವತಿಸಬೇಕಾಗಿದ್ದು, ಇಲ್ಲವಾದರೆ ದಂಡದ ಸಾಧ್ಯತೆ ಇದೆ. ಮೊಬೈಲ್ ನೆಟ್‌ವರ್ಕ್ ಸಮಸ್ಯೆಗಳೂ ಆತಂಕ ಮೂಡಿಸಿವೆ. - [ಹವಾಮಾನ ವರದಿ](https://news.nammakarla.in/%e0%b2%b9%e0%b2%b5%e0%b2%be%e0%b2%ae%e0%b2%be%e0%b2%a8-%e0%b2%b5%e0%b2%b0%e0%b2%a6%e0%b2%bf-601/): ರಾಜ್ಯದ ಹಲವೆಡೆ ಇಂದು ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆಯಾಗಿದೆ. ಬೆಂಗಳೂರು ನಗರದಲ್ಲಿ ಮೋಡಕವಿದ ವಾತಾವರಣವಿರಲಿದೆ. ಉಡುಪಿ,ಬೀದರ್, ಕಲಬುರಗಿ, ಯಾದಗಿರಿ, ವಿಜಯಪುರ, ದಕ್ಷಿಣ ಕನ್ನಡ ,ಮಂಡ್ಯ, ಚಿಕ್ಕಬಳ್ಳಾಪುರ ,ತುಮಕೂರು, ಕೋಲಾರ, ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಆಗುವ ಸಾಧ್ಯತೆ ಇದೆ - [ಮತ್ತೆ ವಾಣಿಜ್ಯ LPG ಸಿಲಿಂಡರ್ ಬೆಲೆ ಏರಿಕೆ](https://news.nammakarla.in/%e0%b2%ae%e0%b2%a4%e0%b3%8d%e0%b2%a4%e0%b3%86-%e0%b2%b5%e0%b2%be%e0%b2%a3%e0%b2%bf%e0%b2%9c%e0%b3%8d%e0%b2%af-lpg-%e0%b2%b8%e0%b2%bf%e0%b2%b2%e0%b2%bf%e0%b2%82%e0%b2%a1%e0%b2%b0%e0%b3%8d-%e0%b2%ac/): ಮಧ್ಯಪ್ರಾಚ್ಯದ ಯುದ್ಧದ ಪರಿಣಾಮ ತೈಲ ಮಾರುಕಟ್ಟೆಯಲ್ಲಿ ಅಸ್ಥಿರತೆ ಉಂಟಾಗಿದ್ದು, ಇದೀಗ ವಾಣಿಜ್ಯ ಬಳಕೆಯ ಸಿಲಿಂಡರ್ ನ ಬೆಲೆ ರೂ. 218 ರಷ್ಟು ಏರಿಕೆಯಾಗಿದೆ. ಈಗಾಗಲೇ ಹೋಟೆಲ್ ವ್ಯವಹಾರ ಮತ್ತು ಇತರ ವ್ಯಾಪಾರಿಗಳು ತೊಂದರೆ ಅನುಭವಿಸುತ್ತಿದ್ದು, ಬೆಲೆ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಮಾರ್ಚ್ ನಲ್ಲಿ ಎಲ್ಪಿಜಿ ಸಿಲಿಂಡರ್ ಬೆಲೆ ಏರಿಕೆಯಾಗಿದ್ದು, ಇಂದು ಮತ್ತೆ ಬೆಲೆ ಏರಿಕೆ ಗ್ರಾಹಕರಿಗೆ ಬಿಗ್ ಶಾಕ್ ನೀಡಿದೆ. ಏಪ್ರಿಲ್ 1ರಿಂದಲೇ ಹೊಸದರ ಅನ್ವಯವಾಗಲಿದ್ದು ,ಗೃಹ ಬಳಕೆಯ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. - [ಸರ್ಕಾರಿ ವೈದ್ಯರಿಗೆ ಖಾಸಗಿ ಸೇವೆ ನಿಯಂತ್ರಣ: ಮಾಹಿತಿ ಸಲ್ಲಿಕೆ ಕಡ್ಡಾಯ, ಉಲ್ಲಂಘನೆಗೆ ಕಠಿಣ ಕ್ರಮ](https://news.nammakarla.in/%e0%b2%b8%e0%b2%b0%e0%b3%8d%e0%b2%95%e0%b2%be%e0%b2%b0%e0%b2%bf-%e0%b2%b5%e0%b3%88%e0%b2%a6%e0%b3%8d%e0%b2%af%e0%b2%b0%e0%b2%bf%e0%b2%97%e0%b3%86-%e0%b2%96%e0%b2%be%e0%b2%b8%e0%b2%97%e0%b2%bf/): ಬೆಂಗಳೂರು: ಸರ್ಕಾರಿ ವೈದ್ಯರು ತಮ್ಮ ಕರ್ತವ್ಯದ ನಂತರ ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿದ್ದರೆ, ಅದರ ವಿವರಗಳನ್ನು ಸರ್ಕಾರಕ್ಕೆ ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಆರೋಗ್ಯ ಇಲಾಖೆ ಆದೇಶಿಸಿದೆ. ಖಾಸಗಿ ಆಸ್ಪತ್ರೆಗಳು ಕೂಡ ತಮ್ಮಲ್ಲಿ ಕೆಲಸ ಮಾಡುವ ಸರ್ಕಾರಿ ವೈದ್ಯರ ಮಾಹಿತಿಯನ್ನು ಜಿಲ್ಲಾ ಅಧಿಕಾರಿಗಳಿಗೆ ನೀಡಬೇಕು. ಸರ್ಕಾರಿ ವೈದ್ಯರಿಗೆ ಹೊರರೋಗಿಗಳಿಗೆ ಮಾತ್ರ ಚಿಕಿತ್ಸೆ ನೀಡಲು ಅವಕಾಶವಿದ್ದು, ಒಳರೋಗಿಗಳಿಗೆ ಸೇವೆ ನೀಡುವುದನ್ನು ನಿಷೇಧಿಸಲಾಗಿದೆ. ಈ ನಿಯಮ ಜಾರಿಯಾದ 60 ದಿನಗಳಲ್ಲಿ ವಿವರ ನೋಂದಾಯಿಸಿದವರಿಗೆ ಮಾತ್ರ ಖಾಸಗಿ ಸೇವೆ ಮುಂದುವರಿಸಲು ಅವಕಾಶ. ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಇತ್ತೀಚೆಗೆ ಹೂವಿನಹಡಗಲಿ ತಾಲೂಕಿನಲ್ಲಿ ಮಾಹಿತಿ ಮುಚ್ಚಿಟ್ಟ ಪ್ರಕರಣದಲ್ಲಿ ವೈದ್ಯರಿಗೆ 50,000 ರೂ. ದಂಡ ವಿಧಿಸಲಾಗಿತ್ತು. ಇದನ್ನು ತಪ್ಪಿಸಲು ರಾಜ್ಯಾದ್ಯಂತ ಏಕರೂಪದ ನಿಯಮ ಜಾರಿಗೆ ತರಲಾಗಿದೆ. - [EVಗಳಿಗೆ ತೆರಿಗೆ ಶಾಕ್: ಕರ್ನಾಟಕದಲ್ಲಿ ವಿನಾಯಿತಿ ರದ್ದು, ಬೆಲೆ ಏರಿಕೆ ಸಾಧ್ಯತೆ](https://news.nammakarla.in/ev%e0%b2%97%e0%b2%b3%e0%b2%bf%e0%b2%97%e0%b3%86-%e0%b2%a4%e0%b3%86%e0%b2%b0%e0%b2%bf%e0%b2%97%e0%b3%86-%e0%b2%b6%e0%b2%be%e0%b2%95%e0%b3%8d-%e0%b2%95%e0%b2%b0%e0%b3%8d%e0%b2%a8%e0%b2%be%e0%b2%9f/): ಬೆಂಗಳೂರು: ಕರ್ನಾಟಕದಲ್ಲಿ ಎಲೆಕ್ಟ್ರಿಕ್ ವಾಹನಗಳ ಬೆಲೆ ಹೆಚ್ಚಾಗುವ ಸಾಧ್ಯತೆ ಎದುರಾಗಿದೆ. ರಾಜ್ಯ ಸರ್ಕಾರ EVಗಳಿಗೆ ನೀಡಲಾಗುತ್ತಿದ್ದ 100% ರಸ್ತೆ ತೆರಿಗೆ ವಿನಾಯಿತಿಯನ್ನು ರದ್ದುಪಡಿಸಿ, ಹೊಸ ತೆರಿಗೆ ವ್ಯವಸ್ಥೆ ಜಾರಿಗೆ ತರುವ ನಿರ್ಧಾರ ಕೈಗೊಂಡಿದೆ. ‘ಕರ್ನಾಟಕ ಮೋಟಾರು ವಾಹನಗಳ ತೆರಿಗೆ (ತಿದ್ದುಪಡಿ) ವಿಧೇಯಕ, 2026’ ಪ್ರಕಾರ, ವಾಹನದ ಬೆಲೆಯ ಆಧಾರದ ಮೇಲೆ ಜೀವಿತಾವಧಿ ತೆರಿಗೆ ವಿಧಿಸಲಾಗುತ್ತದೆ. 10 ಲಕ್ಷ ರೂ.ವರೆಗಿನ ವಾಹನಗಳಿಗೆ 5%, 10–25 ಲಕ್ಷ ರೂ.ವರೆಗೆ 8% ಮತ್ತು 25 ಲಕ್ಷ ರೂ. ಮೇಲ್ಪಟ್ಟ ವಾಹನಗಳಿಗೆ 10% ತೆರಿಗೆ ವಿಧಿಸಲಾಗುತ್ತದೆ. 2016ರಿಂದ EVಗಳಿಗೆ ಸಂಪೂರ್ಣ ತೆರಿಗೆ ವಿನಾಯಿತಿ ನೀಡಲಾಗುತ್ತಿತ್ತು. ಆದರೆ ಈಗ ಎಲ್ಲಾ ದರದ EVಗಳಿಗೆ ತೆರಿಗೆ ಅನ್ವಯವಾಗಲಿದೆ. EV ಮಾರಾಟವು ಸ್ಥಿರ ಹಂತ ತಲುಪಿರುವುದರಿಂದ ವಿನಾಯಿತಿ ಮುಂದುವರಿಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ಖಾಸಗಿ ಬಸ್ ಮಾಲೀಕರಿಗೆ ತೆರಿಗೆ ಇಳಿಕೆ ಘೋಷಿಸಲಾಗಿದೆ. ಕಾಂಟ್ರಾಕ್ಟ್ ಕ್ಯಾರೇಜ್ ಬಸ್‌ಗಳಿಗೆ ಪ್ರತಿ ಸೀಟಿಗೆ 3,500 ರೂ.ಯಿಂದ 2,500 ರೂ.ಗೆ ಹಾಗೂ ಸ್ಲೀಪರ್ […] - [ಮಹಾಭಾರತ](https://news.nammakarla.in/%e0%b2%ae%e0%b2%b9%e0%b2%be%e0%b2%ad%e0%b2%be%e0%b2%b0%e0%b2%a4-475/): ಭಾಗ 474 ಭರತೇಶ್ ಶೆಟ್ಟಿ ,ಎಕ್ಕಾರು ತನ್ನ ಪೂರ್ವಾಪರ ಸತ್ಯವನ್ನು ಮುಂದೆ ಆಗಲಿರುವುದನ್ನು ಸ್ವಗತ ಅಂದರೆ ಅಂತರಂಗದಲ್ಲಿ ವಿವೇಚಿಸಿದ ಆಚಾರ್ಯ ಭೀಷ್ಮರು ಶ್ರೀ ಕೃಷ್ಣನನ್ನು ಪ್ರಶ್ನಿಸತೊಡಗಿದರು “ಹೇ ವಾಸುದೇವಾ! ಮಹಾಯುದ್ದ ಸಮಾಪ್ತವಾಗಿ ಧರ್ಮಾತ್ಮರೂ, ನಿನ್ನಿಂದ ರಕ್ಷಿತರೂ ಆದ ಪಾಂಡವರಿಗೆ ಜಯವಾಗಿದೆಯಲ್ಲವೆ? ಆ ಬಳಿಕ ಧರ್ಮರಾಯನ ಪಟ್ಟಾಭಿಷೇಕ ನಡೆಯಿತೆ? ನನಗೊಂದು ಉಪಾಂಶು ವ್ರತವಿತ್ತು. ಏನೆಂದರೆ ಯಾವ ಕಾಲದಲ್ಲಿ ಹಸ್ತಿನೆಯ ಸಿಂಹಾಸನವನ್ನು ಸರ್ವ ಸಮರ್ಥನೂ, ಧರ್ಮಾತ್ಮನೂ, ನ್ಯಾಯಪರನೂ, ಪ್ರಜಾಪರಿಪಾಲಕನೂ ಆದ ಮಹಾರಾಜ ಏರಿ ರಾಜದಂಡಧರನಾಗುತ್ತಾನೋ ಆ ತನಕ ನಾನು ಈ ಸಾಮ್ರಾಜ್ಯದ ರಕ್ಷಕನಾಗಿದ್ದು, ಆ ಸಮಯದ ಬಳಿಕ ಮುಕ್ತನಾಗಿ ನನ್ನ ಮರಣದ ಇಚ್ಚೆಯ ಬಗ್ಗೆ ನಿರ್ಣಯ ಕೈಗೊಳ್ಳಬೇಕೆಂದು ಬಯಸಿದ್ದೆನು. ಧರ್ಮರಾಯ ಚಂದ್ರವಂಶದ ಮಹಾರಾಜನಾದರೆ ನನ್ನ ಅಪೇಕ್ಷೆ ಕೈಗೂಡಿದಂತೆ ಆಗಲಿದೆ. ಯುಧಿಷ್ಟಿರನ ಜೊತೆ ಭೀಮಾರ್ಜುನರು ಮತ್ತು ನಕುಲ ಸಹದೇವಾದಿಗಳು ಆಡಳಿತ ಯಂತ್ರದ ಭಾಗವಾದರೆ ಎಲ್ಲವೂ ಸುಸೂತ್ರವಾಗಿ ಸಾಗುವುದರಲ್ಲಿ ಯಾವುದೆ ಅನುಮಾನವಿಲ್ಲ. ಹಾಗಾಗಿ ನಿನ್ನಲ್ಲಿ ಕೇಳುತ್ತಿದ್ದೇನೆ. ಹಸ್ತಿನಾವತಿಯ ಸಿಂಹಾಸನದಲ್ಲಿ ಧರ್ಮರಾಯ ಮಹಾರಾಜನಾಗಿ ಅಭಿಷಿಕ್ತನಾದನೆ? ಆಗ ಶ್ರೀಕೃಷ್ಣ ” […] - [ಶ್ರೀರಾಮ ಹನುಮಜ್ಯೋತಿ ರಥಯಾತ್ರೆಗೆ ಕಾರ್ಕಳದಲ್ಲಿ ಚಾಲನೆ ಬುಧವಾರ ಸಂಜೆ 4 ಗಂಟೆಗೆ ವಾಹನ ಜಾಥಾ](https://news.nammakarla.in/%e0%b2%b6%e0%b3%8d%e0%b2%b0%e0%b3%80%e0%b2%b0%e0%b2%be%e0%b2%ae-%e0%b2%b9%e0%b2%a8%e0%b3%81%e0%b2%ae%e0%b2%9c%e0%b3%8d%e0%b2%af%e0%b3%8b%e0%b2%a4%e0%b2%bf-%e0%b2%b0%e0%b2%a5%e0%b2%af%e0%b2%be-2/): ಪುತ್ತೂರು ಹನುಮಗಿರಿಗೆ ಕಾರ್ಕಳದಿಂದ ಚಾಲನೆಗೊಳ್ಳಲಿರುವ ಶ್ರೀರಾಮ ಹನುಮಜ್ಯೋತಿ ರಥಯಾತ್ರೆಯು ಏಪ್ರಿಲ್ 01 ಬುಧವಾರ ಸಂಜೆ 4:00 ಗಂಟೆಗೆ ಬಂಡೀಮಠ ಮೂಡುಗಣಪತಿ ದೇವಸ್ಥಾನದಿಂದ ಕಾರ್ಕಳ ಶ್ರೀ ಮಾರಿಯಮ್ಮ ದೇವಸ್ಥಾನ ವರೆಗೆ ವಾಹನಜಾಥಾದ ಮೂಲಕ ನಡೆಯಲಿದೆ - [ಶ್ರೀರಾಮ ಹನುಮಜ್ಯೋತಿ ರಥಯಾತ್ರೆಗೆ ಕಾರ್ಕಳದಲ್ಲಿ ಚಾಲನೆ ಬುಧವಾರ ಸಂಜೆ 4 ಗಂಟೆಗೆ ವಾಹನ ಜಾಥಾ](https://news.nammakarla.in/%e0%b2%b6%e0%b3%8d%e0%b2%b0%e0%b3%80%e0%b2%b0%e0%b2%be%e0%b2%ae-%e0%b2%b9%e0%b2%a8%e0%b3%81%e0%b2%ae%e0%b2%9c%e0%b3%8d%e0%b2%af%e0%b3%8b%e0%b2%a4%e0%b2%bf-%e0%b2%b0%e0%b2%a5%e0%b2%af%e0%b2%be%e0%b2%a4/): ಪುತ್ತೂರು ಹನುಮಗಿರಿಗೆ ಕಾರ್ಕಳದಿಂದ ಚಾಲನೆಗೊಳ್ಳಲಿರುವ ಶ್ರೀರಾಮ ಹನುಮಜ್ಯೋತಿ ರಥಯಾತ್ರೆಯು ಏಪ್ರಿಲ್ 01 ಬುಧವಾರ ಸಂಜೆ 4:00 ಗಂಟೆಗೆ ಬಂಡೀಮಠ ಮೂಡುಗಣಪತಿ ದೇವಸ್ಥಾನದಿಂದ ಕಾರ್ಕಳ ಶ್ರೀ ಮಾರಿಯಮ್ಮ ದೇವಸ್ಥಾನ ವರೆಗೆ ವಾಹನಜಾಥಾದ ಮೂಲಕ ನಡೆಯಲಿದೆ - [ಪತ್ನಿ ಹೆಚ್ಚಿನ ಜೀವನಾಂಶ ಪಡೆಯಲು ಪತಿಯ ಆದಾಯ ಹೆಚ್ಚಾಗಿ ಹೇಳಿದರೂ ‘Perjury’ ಪ್ರಕರಣ ಸಾಧ್ಯವಿಲ್ಲ: ಅಲಹಾಬಾದ್ ಹೈಕೋರ್ಟ್](https://news.nammakarla.in/%e0%b2%aa%e0%b2%a4%e0%b3%8d%e0%b2%a8%e0%b2%bf-%e0%b2%b9%e0%b3%86%e0%b2%9a%e0%b3%8d%e0%b2%9a%e0%b2%bf%e0%b2%a8-%e0%b2%9c%e0%b3%80%e0%b2%b5%e0%b2%a8%e0%b2%be%e0%b2%82%e0%b2%b6-%e0%b2%aa%e0%b2%a1/): ಪತ್ನಿಯು ಜೀವನಾಂಶಕ್ಕಾಗಿ ಪತಿಯ ಆದಾಯವನ್ನು ಹೆಚ್ಚಾಗಿ ಹೇಳಿದರೂ, ಅದನ್ನು ಆಧರಿಸಿ ‘ಸುಳ್ಳು ಸಾಕ್ಷ್ಯ’ ಆರೋಪದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಸ್ಪಷ್ಟಪಡಿಸಿದೆ. ಈ ಪ್ರಕರಣದಲ್ಲಿ ಪತಿ, ಪತ್ನಿ ತನ್ನ ಆದಾಯದ ಬಗ್ಗೆ ತಪ್ಪು ಮಾಹಿತಿ ನೀಡಿದ್ದಾಳೆ ಎಂದು ಆರೋಪಿಸಿ ಕ್ರಮ ಕೈಗೊಳ್ಳಲು ಮನವಿ ಸಲ್ಲಿಸಿದ್ದರೂ, ಫ್ಯಾಮಿಲಿ ಕೋರ್ಟ್ ಅದನ್ನು ತಳ್ಳಿ ಹಾಕಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಪತ್ನಿಯು ವಿವಿಧ ಅಂಕಿ-ಅಂಶಗಳನ್ನು ನೀಡಿದರೂ, ಪತಿಯ ನಿಜವಾದ ಆದಾಯವನ್ನು ಫ್ಯಾಮಿಲಿ ಕೋರ್ಟ್ ಸಾಕ್ಷ್ಯಾಧಾರಗಳ ಆಧಾರದ ಮೇಲೆ ನಿರ್ಧರಿಸಬೇಕಾಗಿದೆ ಎಂದು ಕೋರ್ಟ್ ತಿಳಿಸಿದೆ. ಉದ್ದೇಶಪೂರ್ವಕವಾಗಿ ಕಾನೂನು ದುರುಪಯೋಗ ಮಾಡಿದ ಸಂದರ್ಭದಲ್ಲೇ Perjury ಕ್ರಮ ಕೈಗೊಳ್ಳಬೇಕು ಎಂದು ಕೂಡ ಹೇಳಿದೆ. ಈ ಹಿನ್ನೆಲೆಯಲ್ಲಿ ಪತ್ನಿಯ ವಿರುದ್ಧ ಕ್ರಿಮಿನಲ್ ಕ್ರಮ ಅಗತ್ಯವಿಲ್ಲ ಎಂದು ಹೇಳಿದ ಹೈಕೋರ್ಟ್, ಪತಿಯ ಮೇಲ್ಮನವಿಯನ್ನು ವಜಾಗೊಳಿಸಿದೆ. - [ಮಂಗಳೂರು: ಚಲಿಸುತ್ತಿದ್ದ ಬಸ್ಸಿನಿಂದ ಎಸೆಯಲ್ ಪಟ್ಟ ವಿದ್ಯಾರ್ಥಿನಿಯರು, ಇಬ್ಬರಿಗೆ ಗಾಯ](https://news.nammakarla.in/%e0%b2%ae%e0%b2%82%e0%b2%97%e0%b2%b3%e0%b3%82%e0%b2%b0%e0%b3%81-%e0%b2%9a%e0%b2%b2%e0%b2%bf%e0%b2%b8%e0%b3%81%e0%b2%a4%e0%b3%8d%e0%b2%a4%e0%b2%bf%e0%b2%a6%e0%b3%8d%e0%b2%a6-%e0%b2%ac%e0%b2%b8/): ಮಂಗಳೂರು: ಕೆಎಸ್ಆರ್ಟಿಸಿ ಬಸ್ ನ ಬಾಗಿಲು ಏಕಾಏಕಿ ತೆರೆದುಕೊಂಡ ಪರಿಣಾಮ ಇಬ್ಬರು ವಿದ್ಯಾರ್ಥಿಗಳು ರಸ್ತೆಗೆ ಎಸೆಯಲ್ ಪಟ್ಟು, ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದಲ್ಲಿ ನಡೆದಿದೆ. ಪುತ್ತೂರಿನಿಂದ ಧರ್ಮಸ್ಥಳದ ಕಡೆಗೆ ತೆರಳುತ್ತಿದ್ದ ಕೆ ಎಸ್ ಆರ್ ಟಿಸಿಬಸ್ ಗೆ ಗೇರುಕಟ್ಟೆ ಎಂಬಲ್ಲಿ ಅಕ್ಕ ತಂಗಿ ಹತ್ತಿದ್ದು, ಕಳಿಯ ಗ್ರಾಮದ ರೇಷ್ಮೆರೋಡ್ ಎಂಬಲ್ಲಿ ರಸ್ತೆ ತಿರುವಿನಲ್ಲಿ ಬಸ್ಸಿನ ಬಾಗಿಲು ಏಕಾಏಕಿ ತೆರೆದುಕೊಂಡಿದೆ. ಈ ಸಂದರ್ಭದಲ್ಲಿ ಬಾಗಿಲ ಬಳಿಯ ನಿಂತಿದ್ದ ಅಕ್ಕ ತಂಗಿ ನಿಯಂತ್ರಣ ತಪ್ಪಿ ಬಸ್ಸಿನಿಂದ ಹೊರಗೆ ಎಸೆಯಲ್ಪಟ್ಟಿದ್ದಾರೆ. ಈ ದೃಶ್ಯ ರಸ್ತೆಯ ಪಕ್ಕದಲ್ಲಿದ್ದ ಸಿಸಿಟಿವಿ ಕ್ಯಾಮೆರದಲ್ಲಿ ಸೆರೆಯಾಗಿದೆ. ವಿದ್ಯಾರ್ಥಿಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಬಸ್ಸಿನ ನಿರ್ವಹಣೆ ಮತ್ತು ಚಾಲಕನ ನಿರ್ಲಕ್ಷದ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. - [ಶ್ರೀ ಸತ್ಯದೆಕ್ಕಿ ಧರ್ಮರಸು ಕೊಡಮಣಿತ್ತಾಯ ಕುಕ್ಕಿನಂತಾಯ ಬ್ರಹ್ಮ ಬೈದರ್ಕಳ ಹಾಗೂ ಮಾಯಂದಾಲೆ ದೇವಿ ಜೋಡುಗರಡಿ](https://news.nammakarla.in/%e0%b2%b6%e0%b3%8d%e0%b2%b0%e0%b3%80-%e0%b2%b8%e0%b2%a4%e0%b3%8d%e0%b2%af%e0%b2%a6%e0%b3%86%e0%b2%95%e0%b3%8d%e0%b2%95%e0%b2%bf-%e0%b2%a7%e0%b2%b0%e0%b3%8d%e0%b2%ae%e0%b2%b0%e0%b2%b8%e0%b3%81/): ವರ್ಷಾವಧಿ ನೇಮೋತ್ಸವ ಏಪ್ರಿಲ್ 1ರಿಂದ ಏ.4 ರವರಿಗೆ ಕಾರ್ಕಳ: ತಾಲೂಕಿನ ಸಾಣೂರು ಪ್ರದೇಶದಲ್ಲಿರುವ ಶ್ರೀ ಸತ್ಯದೆಕ್ಕಿ ಧರ್ಮರಸು ಕೊಡಮಣಿತ್ತಾಯ, ಕುಕ್ಕಿನಂತಾಯ, ಬ್ರಹ್ಮ ಬೈದರ್ಕಳ ಹಾಗೂ ಮಾಯಂದಾಲೆ ದೇವಿ ಜೋಡುಗರಡಿ ವರ್ಷಾವಧಿ ನೇಮೋತ್ಸವವು ಏಪ್ರಿಲ್ 1ರಿಂದ ಏಪ್ರಿಲ್ 4ರವರೆಗೆ ನಡೆಯಲಿದೆ. ಧಾರ್ಮಿಕ ವಿಧಿವಿಧಾನಗಳು, ಹೋಮ-ಹವನಗಳು ಮತ್ತು ವಿಶೇಷ ಪೂಜೆಗಳೊಂದಿಗೆ ಈ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಸಮಿತಿ ಸಿದ್ಧತೆ ನಡೆಸಿದ್ದು ,ಏಪ್ರಿಲ್ 1ರಂದು ಸಂಜೆ 5 ಗಂಟೆಗೆ ಶ್ರೀ ಕ್ಷೇತ್ರದ ಧರ್ಮದೈವಗಳ ಭಂಡಾರ ಇಳಿದು, ಭಂಡಾರ ಪ್ರತಿಷ್ಠೆ ಮೂಲಕ ಉತ್ಸವಕ್ಕೆ ಚಾಲನೆ ದೊರೆಯಲಿದೆ.8 ಗಂಟೆಗೆ ಸಾರ್ವಜನಿಕ ಅನ್ನ ಸಂತರ್ಪಣೆ. ಏಪ್ರಿಲ್ 2ರಂದು ಬೆಳಿಗ್ಗೆ 10 ಗಂಟೆಯಿಂದ ಶ್ರೀ ಧರ್ಮರಸು ಉಲ್ಲಾಯ ದೈವದ ನೇಮೋತ್ಸವ ಪಲ್ಲಪೂಜೆ, ಒಂದು ಗಂಟೆಗೆ ಸಾರ್ವಜನಿಕ ಅನ್ನ ಸಂರ್ಪಣೆ, ರಾತ್ರಿ 10 ಗಂಟೆಗೆ ಉತ್ಸವ ಬಲಿ,ರಾತ್ರಿ 12 ಶ್ರೀ ಕುಕ್ಕಿನಂತಾಯ ದೈವ ಮತ್ತು ಶ್ರೀ ಕೊಡಮಣಿತ್ತಾಯ ಧರ್ಮ ದೈವದ ನೇಮೋತ್ಸವ ನಡೆಯಲಿದೆ. ಎಪ್ರಿಲ್ 3ರಂದು ಬೆಳಿಗ್ಗೆ 7 ಗಂಟೆಗೆ ಫಲಹಾರ ನಂತರ […] ## Pages - [ಕಾರ್ಕಳ ವಿಧಾನಸಭಾ ಕ್ಷೇತ್ರ, ಅತಿಯಾದ ಮಳೆಯಿಂದಾಗಿ ಆದ ಹಾನಿಗೆ](https://news.nammakarla.in/%e0%b2%95%e0%b2%be%e0%b2%b0%e0%b3%8d%e0%b2%95%e0%b2%b3-%e0%b2%b5%e0%b2%bf%e0%b2%a7%e0%b2%be%e0%b2%a8%e0%b2%b8%e0%b2%ad%e0%b2%be-%e0%b2%95%e0%b3%8d%e0%b2%b7%e0%b3%87%e0%b2%a4%e0%b3%8d%e0%b2%b0/): ತುರ್ತು ಪರಿಹಾರ ಒದಗಿಸುವಂತೆ ಸರಕಾರಕ್ಕೆ ಮನವಿ ಸಲ್ಲಿಸಿದ ವಿ.ಸುನಿಲ್ ಕುಮಾರ್ ಕಾರ್ಕಳ ವಿಧಾನಸಭಾ ಕ್ಷೇತ್ರದ ಕಾರ್ಕಳ ಹಾಗೂ ಹೆಬ್ರಿ ತಾಲೂಕು ವ್ಯಾಪ್ತಿಯಲ್ಲಿ ನಿನ್ನೆ ದಿನಾಂಕ ಆ. 18 ರಂದು ಅತಿಯಾದ ಮಳೆ ಹಾಗೂ ಸುಂಟರ ಗಾಳಿಯಿಂದಾಗಿ ಸುಮಾರು ನೂರಕ್ಕೂ ಹೆಚ್ಚಿನ ವಾಸದ ಮನೆಗಳಿಗೆ ಹಾನಿಯಾಗಿದ್ದು, ಜೊತೆಗೆ ಬೆಳೆ ಹಾನಿ ಸೇರಿದಂತೆ ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಅಪಾರ ಹಾನಿ ಉಂಟಾಗಿರುತ್ತದೆ. ಕಾರ್ಕಳ ತಾಲೂಕಿನ ಬೆಳ್ಮಣ್‌, ಸೂಡ, ನಂದಳಿಕೆ, ರೆಂಜಾಳ, ಬೈಲೂರು, ಕಡ್ತಲ ಹಾಗೂ ಯರ್ಲಪಾಡಿ ಗ್ರಾಮಗಳ ಪರಿಸರದಲ್ಲಿ ಮತ್ತು ಹೆಬ್ರಿ ತಾಲೂಕಿನ ಚಾರ, ಕುಚ್ಚೂರು ಮತ್ತು ಮುದ್ರಾಡಿ ಗ್ರಾಮಗಳ ಪರಿಸರದಲ್ಲಿ ನಿನ್ನೆಯ ಸಂಜೆಯ ಹೊತ್ತಿಗೆ ಒಮ್ಮೆಲೆ ಬಂದ ಸುಂಟರಗಾಳಿ ಹಾಗೂ ಅತಿಯಾದ ಮಳೆ ಗಾಳಿಯಿಂದ ಆ ಪ್ರದೇಶದ ಹಲವು ಕಡೆಗಳಲ್ಲಿ ವಾಸದ ಮನೆಗಳು, ಕೃಷಿ ಸೇರಿದಂತೆ ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಹಾನಿ ಉಂಟಾಗಿದ್ದು, ತುರ್ತು ಪರಿಹಾರೋಪಾಯಗಳನ್ನು ಒದಗಿಸುವುದು ತುಂಬಾ ಅವಶ್ಯಕವಾಗಿರುವುದನ್ನು ಮನಗಂಡ ಕಾರ್ಕಳ ಶಾಸಕರಾದ ವಿ ಸುನಿಲ್‌ ಕುಮಾರ್‌ ರವರು ವಿಧಾನ ಸಭಾ […] - ["ಗೆಳತಿ" ಒಂದು ಅತ್ಯುತ್ತಮ ವೇದಿಕೆ: ಶ್ಯಾಮಲಾ ಕುಮಾರಿ ಬೇವಿಂಜೆ](https://news.nammakarla.in/%e0%b2%97%e0%b3%86%e0%b2%b3%e0%b2%a4%e0%b2%bf-%e0%b2%92%e0%b2%82%e0%b2%a6%e0%b3%81-%e0%b2%85%e0%b2%a4%e0%b3%8d%e0%b2%af%e0%b3%81%e0%b2%a4%e0%b3%8d%e0%b2%a4%e0%b2%ae-%e0%b2%b5%e0%b3%87%e0%b2%a6/): ಕಾರ್ಕಳ ಎಸ್.ವಿ.ಟಿ ವನಿತಾ ಪದವಿ ಪೂರ್ವ ಕಾಲೇಜಿನಲ್ಲಿ “ಗೆಳತಿ” ಸಂಘಟನೆ ಉದ್ಘಾಟನೆ ಕಾರ್ಕಳ: ಹದಿಹರೆಯದ ವಯಸ್ಸಿನಲ್ಲಿ ವಿದ್ಯಾರ್ಥಿಗಳಲ್ಲಿ ಅತ್ಯಂತ ಗೊಂದಲಗಳು ಉಂಟಾಗುತ್ತದೆ. ಶಾರೀರಿಕವಾಗಿ, ಮಾನಸಿಕವಾಗಿ ಬದಲಾವಣೆಗಳು ಆಗುವಂತಹ ಸಮಯವಿದು. ಅದರಲ್ಲಿಯೂ ವಿದ್ಯಾರ್ಥಿನಿಯರಲ್ಲಿ ಅವರದ್ದೇ ಆದ ಗೊಂದಲಗಳು ಇರುತ್ತವೆ. ತಮ್ಮ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಮತ್ತು ಗೊಂದಲಗಳಿಗೆ ಪರಿಹಾರವನ್ನು ಕಂಡುಕೊಳ್ಳಲು “ಗೆಳತಿ” ಒಂದು ಅತ್ಯುತ್ತಮ ವೇದಿಕೆಯಾಗಿದೆ ಎಂದು ಎಸ್.ವಿ.ಟಿ ವನಿತಾ ಪದವಿಪೂರ್ವ ಕಾಲೇಜು ಕಾರ್ಕಳದ ನಿವೃತ್ತ ಪ್ರಾಂಶುಪಾಲೆ ಶ್ಯಾಮಲಾ ಕುಮಾರಿ ಬೇವಿಂಜೆ ಹೇಳಿದರು. ಅವರು ಎಸ್.ವಿ‌.ಟಿ ವನಿತಾ ಪದವಿಪೂರ್ವ ಕಾಲೇಜಿನಲ್ಲಿ “ಗೆಳತಿ” ಎಂಬ ಸಂಘಟನೆಯನ್ನು ಉದ್ಘಾಟಿಸಿ ಮಾತನಾಡಿದರು.ಹದಿಹರೆಯದ ವಯಸ್ಸಿನಲ್ಲಿ ವಿದ್ಯಾರ್ಥಿಗಳು ದುಶ್ಚಟಗಳಿಗೆ ಒಳಗಾಗದೆ ಜೀವನವನ್ನು ರೂಪಿಸುವ, ಬದುಕನ್ನು ಕಟ್ಟಿಕೊಳ್ಳುವ ಮೌಲ್ಯಯುತ ಶಿಕ್ಷಣವನ್ನು ಪಡೆಯಬೇಕು ಎಂದರು.ಕಾರ್ಯಕ್ರಮದಲ್ಲಿ ಕಾಲೇಜಿನ ನಿಕಟ ಪೂರ್ವ ಪ್ರಾಚಾರ್ಯರಾದ ರಾಮದಾಸ್ ಪ್ರಭು, ಮುಖ್ಯೋಪಾಧ್ಯಾಯರಾದ ಯೋಗೇಂದ್ರ ನಾಯಕ್, ಗೆಳತಿ ಸಂಘದ ಕಾರ್ಯದರ್ಶಿ ಕು. ಪ್ರತೀಕ್ಷಾ, ಸಹ ಕಾರ್ಯದರ್ಶಿ ಭಾಗ್ಯಶ್ರೀ ಕುಡ್ವ ಉಪಸ್ಥಿತರಿದ್ದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ನೇಮಿರಾಜ ಶೆಟ್ಟಿ ವಹಿಸಿದ್ದರು. ಗೆಳತಿಯ ಸಂಯೋಜಕಿ […] - [Home](https://news.nammakarla.in/) [comment]: # (Generated by Hostinger Tools Plugin)