ಅಧ್ಯಕ್ಷರಾಗಿ ರವಿರಾಜ್ ಶೆಟ್ಟಿ – ಉಪಾಧ್ಯಕ್ಸರಾಗಿ ಉದಯ್ ಎಸ್ ಕೋಟಿಯ್ಯಾನ್

ಉಡುಪಿ : ಪ್ರತಿಷ್ಠಿತ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ
ಒಕ್ಕೂಟಕ್ಕೆ ಎ. 26ರಂದು ನಡೆದ ಚುನಾವಣೆಯಲ್ಲಿ ಎಸ್‌ಸಿಡಿಸಿಸಿ ಅಧ್ಯಕ್ಷ ಎಂ. ಎನ್. ರಾಜೇಂದ್ರ ಕುಮಾರ್ ಬೆಂಬಲಿತ ಹೈನುಗಾರರ ಬಳಗವು ಭರ್ಜರಿ ಗೆಲುವು ದಾಖಲಿಸಿದೆ. ಅವಿಭಜಿತ ಜಿಲ್ಲೆಯ 16 ಸ್ಥಾನಗಳ ಪೈಕಿ ಹೈನುಗಾರರ ಬಳಗವು 10 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯು 6 ಸ್ಥಾನಗಳಿಗೆ ತೃಪ್ತಿ ಪಡುವಂತಾಗಿದೆ.
ಉಡುಪಿ ಜಿಲ್ಲೆಯ 8 ಸ್ಥಾನಗಳೂ ಹೈನುಗಾರರ ಬಳಗದ ಪಾಲಾಗಿದೆ. ದ.ಕ. ಜಿಲ್ಲೆಯ 8 ಸ್ಥಾನಗಳ ಪೈಕಿ 6 ಸ್ಥಾನಗಳು ಸಹಕಾರ ಭಾರತಿ ತೆಕ್ಕೆಗೆ ಒಲಿದಿದೆ.
ಪದಾಧಿಕಾರಿಗಳ ಆಯ್ಕೆಯು ಮೇ 6 ರಂದು ನಡೆದಿದು ಅಧ್ಯಕ್ಷರಾಗಿ ರವಿರಾಜ್ ಹೆಗ್ಡೆ ಹಾಗೂ ಉಪಾಧ್ಯಕ್ಷರಾಗಿ ಉದಯ್ ಎಸ್ ಕೋಟ್ಯಾನ್
ಆಯ್ಕೆಯಾಗಿದ್ದರೆ.