ಶ್ರೀ ಭುವನೇಂದ್ರ ರೆಸಿಡೆನ್ಶಿಯಲ್ ಸ್ಕೂಲ್ ವಿದ್ಯಾರ್ಥಿಗಳು,ಸಮೂಹ ನೃತ್ಯ ಹಾಗೂ ಸಂಗೀತ ಪರಿಕರಗಳ ಜುಗಲ್ಬಂಧಿಯಲ್ಲಿ ಪ್ರಥಮ ಸ್ಥಾನ

Association of CBSE and ICSE Schools – AICS ಇದರ ವತಿಯಿಂದ ನಡೆದ ಸಾಂಸ್ಕೃತಿಕ ಸ್ಪರ್ಧೆ RAAGRANG- 2025ಯಲ್ಲಿ ಶ್ರೀ ಭುವನೇಂದ್ರ ರೆಸಿಡೆನ್ಶಿಯಲ್ ಸ್ಕೂಲ್ ನ ವಿದ್ಯಾರ್ಥಿಗಳು ಸಮೂಹ ನೃತ್ಯ ಹಾಗೂ ಸಂಗೀತ ಪರಿಕರಗಳ ಜುಗಲ್ಬಂಧಿ ವಿಭಾಗಗಳಲ್ಲಿ ಪ್ರಥಮ ಬಹುಮಾನವನ್ನು ಪಡೆಯುವ ಮೂಲಕ ಸಂಸ್ಥೆಯು ಪಠ್ಯೇತರ ಚಟುವಟಿಕೆಗಳಿಗೆ ನೀಡುವ ಪ್ರಾಮುಖ್ಯತೆಯನ್ನು ಎತ್ತಿ ಹಿಡಿದಿದ್ದಾರೆ.

ಸೀನಿಯರ್ಸ್ ವಿಭಾಗದಲ್ಲಿ ನಡೆದ ಸಮೂಹ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಬಹುಮಾನವನ್ನು ಗಳಿಸಿದ ಒಂಬತ್ತನೆಯ ತರಗತಿಯ ವಿದ್ಯಾರ್ಥಿನಿಯರು ಸಾನ್ವಿ ಮೆಂಡನ್, ಶ್ರಾಘ್ವಿ ಅಮೀನ್, ರಿಷಿತ, ಪ್ರಿಯಾಂಕಾ ಕುಲಕರ್ಣಿ, ಸಿರಿಜ ಮತ್ತು ಸಾನ್ವಿ ಹರೀಶ್.ಜೂನಿಯರ್ಸ್ ವಿಭಾಗದಲ್ಲಿ ಸಂಗೀತ ಪರಿಕರಗಳ ಜುಗಲ್ಬಂಧಿ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಬಹುಮಾನ ಪಡೆದವರು ಎಂಟನೇಯ ತರಗತಿಯ ವಿದ್ಯಾರ್ಥಿಗಳಾದ ಶ್ರೀರಾಮ್ ಕಾಮತ್ ಮತ್ತು ತೇಜಸ್ ಶೆಣೈ .

ಇವರ ಈ ಸಾಧನೆಗೆ ಸಂಸ್ಥೆಯ ಆಡಳಿತ ವರ್ಗ, ಪ್ರಾಂಶುಪಾಲರು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಸಂತಸವನ್ನು ವ್ಯಕ್ತಪಡಿಸಿದ್ದಾರೆ.
