
ಕೃತಕ ಬುದ್ಧಿಮತ್ತೆ ನಮ್ಮ ಸಮಾಜವನ್ನು ಪರಿವರ್ತಿಸುತ್ತಿದ್ದು ಹಿಂದೆ ಮಾನವನ ಸಹಾಯವನ್ನು ಅವಲಂಬಿಸಿದ್ದ ಹಲವು ಕೆಲಸಗಳನ್ನು AI ಮಾಡಲು ಸಿದ್ಧವಾಗಿದೆ. ಇದು ಶೀಘ್ರದಲ್ಲೇ ಕೆಲಸದ ಸ್ಥಳದಲ್ಲಿ ಮನುಷ್ಯರನ್ನು ಬದಲಾಯಿಸಬಹುದು ಎಂಬ ಆತಂಕ ಸೃಷ್ಟಿ ಮಾಡಿದೆ. TCS ಮತ್ತು ಆಕ್ಸೆಂಚರ್ ನಂತಹ ಪ್ರಮುಖ ಕಂಪನಿಗಳು ಈಗಾಗಲೇ ಸಾವಿರಾರು ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಿದ್ದು ಇದೀಗ ತಂತ್ರಜ್ಞಾನ ಬಿಲಿಯನೇರ್ ಎಲೋನ್ ಮಸ್ಕ್ ಎಲ್ಲಾ ಉದ್ಯೋಗಗಳನ್ನು ಬದಲಾಯಿಸಲಾಗುವುದು ಎಂದು ಹೇಳಿದ್ದಾರೆ.
ದಿ ಅಮೆರಿಕನ್ ದೈತ್ಯ 2027ರ ವೇಳೆಗೆ ರೋಬೋಟ್ಗಳೊಂದಿಗೆ 1,60,000 ಕ್ಕೂ ಹೆಚ್ಚು ಉದ್ಯೋಗಗಳನ್ನು ಕಡಿತಗೊಳಿಸಲು ಯೋಜಿಸುತ್ತದೆ ಎಂಬ ಪೋಸ್ಟಿಗೆ ಪ್ರತಿಕ್ರಿಯೆ ನೀಡಿದ ಮಸ್ಕ್ ‘ಕತ್ತಲೆಯಾದ ಭವಿಷ್ಯದ ಬದಲು ಮಾನವೀಯತೆಯು ಪ್ರತಿದಿನ ಕೆಲಸ ಮಾಡಲು ಒತ್ತಾಯಿಸಲ್ಪಡುವುದರಿಂದ ಅದರಿಂದ ಮುಕ್ತವಾಗಲು ಇದು ಒಂದು ಅವಕಾಶ. ಪ್ರತಿಯೊಂದು ಕೆಲಸವನ್ನು AI ತೆಗೆದುಕೊಳ್ಳುತ್ತದೆ. ಮಾನವರು ತರಕಾರಿಗಳನ್ನು ಅಂಗಡಿಯಿಂದ ಖರೀದಿಸಿ ತರುವ ಬದಲು ಅದನ್ನು ತಾವೇ ಬೆಳೆಯಲು ಮುಕ್ತರಾಗುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ಎಐ, ರೋಬೋಟ್ಗಳು ಎಲ್ಲಾ ಉದ್ಯೋಗಗಳನ್ನು ಬದಲಿಸಿದರೆ ಮನುಷ್ಯರಿಗೆ ಕೆಲಸ ಮಾಡುವುದು ಒಂದು ಆಯ್ಕೆಯಾಗುತ್ತದೆ. ಆಗ ತರಕಾರಿಯನ್ನು ಅಂಗಡಿಯಿಂದ ಖರೀದಿಸುವ ಬದಲಿಗೆ ತಾವೇ ತರಕಾರಿಗಳನ್ನು ಬೆಳೆಸಿಕೊಳ್ಳುವಂತಾಗುತ್ತದೆ. ವ್ಯಕ್ತಿಗಳು ಬದುಕಲು ಕೆಲಸ ಮಾಡಬೇಕಾದ ಬಾಧ್ಯತೆ ಇನ್ನು ಉಳಿಯುವುದಿಲ್ಲ. ಬದಲಿಗೆ ಕೆಲಸ ಮಾಡುವುದು ವೈಯುಕ್ತಿಕ ಇಚ್ಛೆಯಿಂದ ಮಾತ್ರ ನಡೆಯಲಿದೆ ಎಂದು ಹೇಳಿದ್ದಾರೆ.



















































