ಹೈಕೋರ್ಟ್ ಮಹತ್ವದ ತೀರ್ಪು

ಚೆನ್ನೈ :ಲೈಂಗಿಕ ಅಪರಾಧದಿಂದ ತನ್ನನ್ನು ಅಥವಾ ಇತರರನ್ನು ರಕ್ಷಣೆ ಮಾಡುವ ಉದ್ದೇಶದಿಂದ ಕೊಲೆ ನಡೆದರೆ ಅವರಿಗೆ ಐಪಿಎಸ್ ಸೆಕ್ಷನ್ 97ರ ಅಡಿಯಲ್ಲಿ ವಿನಾಯಿತಿ ನೀಡಲಾಗುವುದು ಹಾಗೂ ಶಿಕ್ಷೆಯಾಗುವುದಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪನ್ನು ನೀಡಿದೆ.
21ರ ಅರಿಯದ ಮಗಳ ಮೇಲೆ ಹಲ್ಲೆ ನಡೆಸಿದ ಪತಿಯನ್ನು ಕೊಂದ ಆರೋಪದ ಹೊತ್ತಿರುವ ಮಹಿಳೆ ಕೊಲೆ ಪ್ರಕರಣವನ್ನು ರದ್ದುಗೊಳಿಸುವಂತೆ ಸಲ್ಲಿಸಿರುವ ಅರ್ಜಿಯ ವಿಚಾರಣೆಯ ವೇಳೆ ನ್ಯಾಯಮೂರ್ತಿ ಜಿ ಚಂದ್ರನ್ ಅವರ ಪೀಠವು ಈ ಮಹತ್ವದ ತೀರ್ಪನ್ನು ನೀಡಿದೆ.
ತನ್ನ ಮಗಳನ್ನು ಉಳಿಸಿಕೊಳ್ಳಲು ತನ್ನ ಪತಿಯನ್ನು ಕೊಲ್ಲಬೇಕಾಯಿತು ಎಂದು ಮಹಿಳೆ ನೀಡಿದ ಹೇಳಿಕೆ, ಮಗಳ ಹೇಳಿಕೆ ಮತ್ತು ಮೃತ ವ್ಯಕ್ತಿಯ ಛಾಯಾಚಿತ್ರಗಳು ಆತನ ಹಿಂಬಾಗದಲ್ಲಿ ಆಗಿರುವ ಗಾಯ ಇದು ಆತ್ಮ ರಕ್ಷಣೆಗೆ ಆದ ಪ್ರಕರಣ ಎಂದು ಮಹಿಳೆಯ ಪರ ವಕೀಲರು ವಾದ ಮಂಡಿಸಿದ್ದರು. ಮೃತನ ವಿರುದ್ಧ ಇದ್ದ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ಕೊನೆಗೂ ಮಹಿಳೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಪುರಸ್ಕಾರ ಮಾಡಿ ,ಆಕೆಯ ಮೇಲಿದ್ದ ಕೊಲೆ ಆರೋಪದ ಪ್ರಕರಣವನ್ನು ರದ್ದುಗೊಳಿಸಿದೆ.













