ಕಾರ್ಕಳ ವೃತ್ತ ಮಟ್ಟದ ಖೋ- ಖೋ ಪಂದ್ಯಾಟದ ಉದ್ಘಾಟನಾ ಕಾರ್ಯಕ್ರಮ…

ಶ್ರೀ ದುರ್ಗ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕುಕ್ಕುಂದೂರು ಇಲ್ಲಿ ದಿನಾಂಕ ಆ. 24 ಕಾರ್ಕಳ ವೃತ್ತ ಮಟ್ಟದ ಖೋ ಖೋ ನಡೆಯಿತು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕುಕ್ಕುಂದೂರು ಗ್ರಾಮ ಪಂಚಾಯತ್ ಅಧ್ಯಕ್ಷೆಯರಾದ ಶ್ರೀಮತಿ ಉಷಾ ಕೆ ಹಾಗೂ ಅತಿಥಿಗಳಾದ ಶಾಲಾ ಸಂಚಾಲಕರಾದ ರಾಧಾಕೃಷ್ಣ ಶೆಟ್ಟಿ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾದ ರವಿಚಂದ್ರ ಕಾರಂತ್, ಇಸಿಓ ಬಾಲಕೃಷ್ಣ ನಾಯಕ್, ಜಯಂತಿ ನಗರ ಕ್ಲಾಸ್ಟರ್ crpಯವರಾದ ಶ್ರೀಮತಿ ಪ್ರೇಮ, ಅನುದಾನಿತ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಪೃಥ್ವಿರಾಜ್, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಪಾಂಡುರಂಗ ಆಚಾರ್ಯ, ಶಾಲಾದಾನಿಗಳಾದ ಕಮಲಾಕ್ಷ ಕಾಮತ್, ನಿವೃತ್ತ ಮುಖ್ಯ ಶಿಕ್ಷಕರಾದ ಸತೀಶ್ ಶೆಟ್ಟಿ, ಹಾ.ವಿ ಸಂಘದ ಅಧ್ಯಕ್ಷರಾದ ವೃಷಭ ರಾಜ ಕಡಂಬ, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಅರುಣ್ ನಾಯಕ್ ಹಾಗೂ ಮುಖ್ಯ ಶಿಕ್ಷಕರಾದ ಜಗದೀಶ್ ಹೆಗ್ಡೆಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇವರೆಲ್ಲರನ್ನು ನಮ್ಮ ಮುಖ್ಯ ಶಿಕ್ಷಕರು ಪ್ರೀತಿಪೂರ್ವಕವಾಗಿ ಸ್ವಾಗತಿಸಿದರು. ಹಾಗೂ ಕಮಲಾಕ್ಷ ಕಾಮತರು ಜ್ಯೋತಿ ಬೆಳಗಿಸಿ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದರು. ಈ ಸಂದರ್ಭದಲ್ಲಿ ನಮ್ಮ ದೈಹಿಕ ಶಿಕ್ಷಕರಾದ ಸುದರ್ಶನ್ ಹಾಗೂ ಖೋ ಖೋ ತರಬೇತಿದಾರರಾದ ಸಾಧಿಕ್, ಸುದರ್ಶನ್ ಅಕ್ಷಯ ಹಾಗೂ ನಾಗೇಶ್ ಅದೇ ರೀತಿ ಇಂದಿನ ಭೋಜನದ ಪ್ರಾಯೋಜಕರಾದ ಶ್ರೀಮತಿ ಯಮುನಾ ಎಲ್ ಇವರನ್ನು ಸನ್ಮಾನಿಸಲಾಯಿತು. ಎಲ್ಲಾ ದೈಹಿಕ ಶಿಕ್ಷಕರನ್ನು ಪೆನ್ನು ಹಾಗೂ ಕ್ಯಾಪ್ ನೀಡಿ ಗುರುತಿಸಲಾಯಿತು. ನಂತರ ನಡೆದ ಪಂದ್ಯಾಟದಲ್ಲಿ ಬಾಲಕಿಯರ ವಿಭಾಗದಲ್ಲಿ ಪಿಎಂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಮೂರೂರು ದ್ವಿತೀಯ ಸ್ಥಾನ ಹಾಗೂ ಶ್ರೀ ದುರ್ಗ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕುಕ್ಕುಂದೂರು ಪ್ರಥಮ ಸ್ಥಾನವನ್ನು ಅದೇ ರೀತಿ ಬಾಲಕರ ವಿಭಾಗದಲ್ಲಿ ಬಿಎಂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಮೂರೂರು ದ್ವಿತೀಯ ಸ್ಥಾನ ಹಾಗೂ ಶ್ರೀ ದುರ್ಗಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕುಕ್ಕುಂದೂರು ಪ್ರಥಮ ಸ್ಥಾನವನ್ನು ಪಡೆಯಿತು. ರಾಜಪುರ ಸರಸ್ವತ ಬ್ಯಾಂಕಿನ ಅಧ್ಯಕ್ಷರಾದ ರವೀಂದ್ರ ಪ್ರಭು ರವರ ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಫಲಕ ವಿತರಿಸಲಾಯಿತು.

ಈ ಸಂದರ್ಭದಲ್ಲಿ ರಮಾನಂದ ಶೆಟ್ಟಿ ಸರಕಾರಿ ನೌಕರ ಸಂಘದ ಅಧ್ಯಕ್ಷರು ಉಪಸ್ಥಿತರಿದ್ದರು. ಶ್ರೀಮತಿ ಗೀತಾ ಭಂಡಾರಿ ಅವರು ಧನ್ಯವಾದ ಸಲ್ಲಿಸಿದರು. ಸಹ ಶಿಕ್ಷಕರಾದ ಉಮೇಶ್ ರವರು ಕಾರ್ಯಕ್ರಮ ಸಂಯೋಜನೆಗೊಳಿಸಿದರು..













