33 C
Udupi
Wednesday, April 22, 2026
spot_img
spot_img
HomeBlogಸರಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ, ಜಾಗೃತಿ ಸಾಹಿತ್ಯಸಕ್ತ ಮಹಿಳಾ ಸಂಘಟನೆ ತಿಂಗಳ ಕಾರ್ಯಕ್ರಮ

ಸರಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ, ಜಾಗೃತಿ ಸಾಹಿತ್ಯಸಕ್ತ ಮಹಿಳಾ ಸಂಘಟನೆ ತಿಂಗಳ ಕಾರ್ಯಕ್ರಮ

ಜೀವನದ ಪ್ರತಿ ಕ್ಷಣವನ್ನು ಸಂಭ್ರಮಿಸಬೇಕು: ರಾಮ ಭಟ್

ದೈನಂದಿನ ಬದುಕಿನಲ್ಲಿ ಹಾಸ್ಯ ಜೀವನೋತ್ಸಾಹವನ್ನು ಹೆಚ್ಚಿಸುತ್ತದೆ. ಬದುಕಿನ ಭಾರ ಕಡಿಮೆಯಾಗಬೇಕಾದರೆ ನಮ್ಮ ಜೀವನದ ಜೇಬಿನೊಳಗೆ ಹಾಸ್ಯ ನಿತ್ಯ ತುಂಬಿರಬೇಕು. ಜೀವನದ ಪ್ರತಿಕ್ಷಣವನ್ನು ಸಂಭ್ರಮಿಸುವುದರ ಮುಖೇನ ಬದುಕನ್ನು ಹಸನುಗೊಳಿಸಬಹುದು ಎಂದು ಎಸ್. ವಿ. ಟಿ. ಪದವಿಪೂರ್ವ ಕಾಲೇಜಿನ ನಿವೃತ್ತ ಕನ್ನಡ ಉಪನ್ಯಾಸಕರಾದ ಶ್ರೀ ರಾಮ ಭಟ್ ಇವರು ಅಭಿಪ್ರಾಯಪಟ್ಟರು.

ಅಗಸ್ಟ್ 21ರಂದು ಸರಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆದ ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆ, ಕಾರ್ಕಳ. ಇದರ ತಿಂಗಳ ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ದೈನಂದಿನ ಬದುಕಿನಲ್ಲಿ ಹಾಸ್ಯ ಎಂಬ ವಿಷಯದ ಕುರಿತಾಗಿ ವಿಶೇಷ ಉಪನ್ಯಾಸವನ್ನು ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆಯ ಅಧ್ಯಕ್ಷೆ ಶ್ರೀಮತಿ ಮಿತ್ರಪ್ರಭ ಹೆಗ್ಡೆ ಅವರು ಸ್ವಾಗತಿಸಿದರು. ಅನುಪಮಾ ಚಿಪ್ಲುಂಕರ್ ಪ್ರಾರ್ಥಿಸಿ, ಡಾ.ಸುಮತಿ. ಪಿ ಉಪನ್ಯಾಸಕಾರರನ್ನು ಪರಿಚಯಿಸಿದ ಕಾರ್ಯಕ್ರಮವನ್ನು ಕಾರ್ಯದರ್ಶಿ ಮಾಲತಿ. ಜಿ. ಪೈ, ಯವರು ನಿರ್ವಹಿಸಿದರು. ಬಿ. ವಿ. ಸುಲೋಚನಾ ಧನ್ಯವಾದವನ್ನಿತ್ತರು. ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆಯ ಸದಸ್ಯೆಯರು ಉಪಸ್ಥಿತರಿದ್ದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page