33 C
Udupi
Wednesday, April 22, 2026
spot_img
spot_img
HomeBlogಬೆಳ್ಮಣ್‌ ಟೋಲ್‌ ವಿರುದ್ಧ ಕಾಂಗ್ರೆಸ್ಸಿಗರ ಪ್ರತಿಭಟನೆ ಯಾರ ವಿರುದ್ಧ ಎಂದು ಸ್ಪಷ್ಟಪಡಿಸಲಿ

ಬೆಳ್ಮಣ್‌ ಟೋಲ್‌ ವಿರುದ್ಧ ಕಾಂಗ್ರೆಸ್ಸಿಗರ ಪ್ರತಿಭಟನೆ ಯಾರ ವಿರುದ್ಧ ಎಂದು ಸ್ಪಷ್ಟಪಡಿಸಲಿ

ದೇವೇಂದ್ರ ಶೆಟ್ಟಿ ಬೆಳ್ಮಣ್‌

ಕಾರ್ಕಳ ಆ 21: ಕಾರ್ಕಳ-ಬೆಳ್ಮಣ್-ಪಡುಬಿದ್ರಿ ರಸ್ತೆಯಲ್ಲಿ ರಾಜ್ಯ ಆಡಳಿತಾರೂಢ ಕಾಂಗ್ರೆಸ್‌ ಸರ್ಕಾರ, ರಸ್ತೆ ನಿರ್ಮಾಣ ಆಗಿಬರೋಬ್ಬರಿ 12 ವರ್ಷಗಳ ನಂತರ ಮತ್ತೆ ಟೋಲ್‌ ಸಂಗ್ರಹಕ್ಕೆ ಮುಂದಾಗಿದ್ದು, ಕಾಂಗ್ರೆಸ್‌ನ ಜನ ವಿರೋಧಿ ನೀತಿಗೆ ಇನ್ನೊಂದುಉದಾಹರಣೆ. ಬಾಯಿ ಎತ್ತಿದರೆ ಜನರ ಉದ್ಧಾರದ ಬಗ್ಗೆ ಮಾತನಾಡುವ ಕಾಂಗ್ರೆಸ್‌ ನಾಯಕರು ಅಧಿಕಾರ ಸಿಕ್ಕಾಗ ಮಾಡುವುದೇಬೇರೆ. ಆಡುವುದು ಒಂದಾದರೆ ಮಾಡುವುದು ಇನ್ನೊಂದು ಎಂಬ ಗಾದೆ ಮಾತು ಕಾಂಗ್ರೆಸ್‌ ನಾಯಕರಿಗೆ ಸರಿಯಾಗಿ ಅನ್ವಯಿಸುತ್ತದೆ.

ಒಂದು ಕಡೆ ತಮ್ಮದೇ ಕಾಂಗ್ರೆಸ್‌ ಸರ್ಕಾರ ಟೋಲ್‌ ಸಂಗ್ರಹಕ್ಕೆ ಕಾರ್ಯಾದೇಶ ಮಾಡಿದ್ದರೆ ಇನ್ನೊಂದು ಕಡೆ ಸ್ಥಳೀಯಕಾಂಗ್ರೆಸ್‌ ನಾಯಕರು ಟೋಲ್‌ ಸಂಗ್ರಹ ಮಾಡದಂತೆ ಪ್ರತಿಭಟನೆಗೆ ಇಳಿದಿರುವುದು ನಾಚಿಕೆಗೇಡಿತನ. ಇವರು ಮಾಡುವ ಪ್ರತಿಭಟನೆಯಾರ ವಿರುದ್ಧ…? ಆಡಳಿತದಲ್ಲಿರುವ ತಮ್ಮದೇ ಪಕ್ಷದ ವಿರುದ್ಧವೋ…? ಎಂಬುದನ್ನು ಸಾರ್ವಜನಿಕರಿಗೆ ಸ್ಪಷ್ಟಪಡಿಸಬೇಕು.ಆಡಳಿತ ನಡೆಸುವವರೇ ಪ್ರತಿಭಟನೆಗೆ ಇಳಿದರೆ ಇನ್ನು ಜನಸಾಮಾನ್ಯರ ಪಾಡೇನು…? ಇವರ ಪ್ರತಿಭಟನೆ ಬಗ್ಗೆ ಜನರ ಮುಂದೆಹಲವಾರು ಸಂಶಯಗಳಿದ್ದು, ಅದಕ್ಕೆ ಸ್ಥಳೀಯ ಕಾಂಗ್ರೆಸ್ಸಿಗರು ಉತ್ತರ ನೀಡಬೇಕಾಗುತ್ತದೆ.ಕಾಂಗ್ರೆಸ್‌ ಪಕ್ಷ ರಾಜ್ಯದಲ್ಲಿ ಆಡಳಿತ ಮಾಡುತ್ತಿದ್ದರೂ ಸ್ಥಳೀಯ ನಾಯಕರು ಟೋಲ್‌ ಸಂಗ್ರಹವನ್ನು ನಿಲ್ಲಿಸುವಷ್ಟುಶಕ್ತರಿಲ್ಲವೇ…? ಸ್ಥಳೀಯ ನಾಯಕರ ಮಾತನ್ನು ಅವರದೇ ಪಕ್ಷದ ಸಚಿವರು ಕೇಳುತ್ತಿಲ್ಲವೇ…? ನಿಮ್ಮ ಮಾತಿಗೆ ಬೆಲೆಇಲ್ಲವೇ…? ಅಥವಾ ಜನರ ದಿಕ್ಕು ತಪ್ಪಿಸುವದಕ್ಕೋಸ್ಕರ ಈ ಪ್ರತಿಭಟನೆಯೇ…? ಈ ಎಲ್ಲಾ ಪ್ರಶ್ನೆಗಳಿಗೆ ಸ್ಥಳೀಯಕಾಂಗ್ರೆಸಿಗರು ಉತ್ತರಿಸಿ ಆಮೇಲೆ ಪ್ರತಿಭಟನೆ ಮಾಡಲಿ ಎಂದು ಭಾರತೀಯ ಜನತಾ ಪಾರ್ಟಿ ಬೆಳ್ಮಣ್‌ ಇದರ ಅಧ್ಯಕ್ಷರಾದದೇವೇಂದ್ರ ಶೆಟ್ಟಿಯವರು ಹೇಳಿಕೆ ಮೂಲಕ ಆಗ್ರಹಿಸಿರುತ್ತಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page