ಕಾರ್ಕಳ ಜ್ಞಾನಸುಧಾದ ಅನ್ವಿ.ಹೆಚ್ ಅಂಚನ್ ಪ್ರಥಮ ಸ್ಥಾನ ಪಡೆದು, ವಲಯ ಮಟ್ಟಕ್ಕೆ ಆಯ್ಕೆ

ವಿಜಯ ಮಕ್ಕಳ ಕೂಟ ಆಂಗ್ಲ ಮಾಧ್ಯಮ ಶಾಲೆ ಆತ್ರಾಡಿ ವಂಡ್ಸೆ ಇಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ U – 17 ಬಾಲಕ ಬಾಲಕಿಯರ ರಿದಮಿಕ್ ಯೋಗಾಸನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಿಯಾಗಿ ಮೈಸೂರು ವಿಭಾಗೀಯ ಮಟ್ಟಕ್ಕೆ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಅನ್ವಿ ಹೆಚ್ ಅಂಚನ್ ಆಯ್ಕೆಯಾಗಿರುತ್ತಾರೆ. ಇವರು ಕಾರ್ಕಳದ ಹರೀಶ್ ಹಾಗೂ ಶೋಭಾ ದಂಪತಿಯ ಸುಪುತ್ರಿಯಾಗಿರುತ್ತಾರೆ.
ವಿಜೇತ ವಿಧ್ಯಾರ್ಥಿಯನ್ನು ಸಂಸ್ಥೆಯ ಅಧ್ಯಕ್ಷರಾದ ಡಾ. ಸುಧಾಕರ ಶೆಟ್ಟಿಯವರು ಅಭಿನಂಧಿಸಿದರು.













