31.4 C
Udupi
Wednesday, April 22, 2026
spot_img
spot_img
HomeBlog100 ಗ್ರಾಂ ಹೆಚ್ಚಳವಾಗಿದ್ದಕ್ಕೆ ವಿನೇಶ್ ಪೋಗಟ್ ಅನರ್ಹ: 24 ಪುಟಗಳ ವಿಸ್ತೃತ ಆದೇಶದಲ್ಲಿ ಅನರ್ಹ ಮಾಡಿದ...

100 ಗ್ರಾಂ ಹೆಚ್ಚಳವಾಗಿದ್ದಕ್ಕೆ ವಿನೇಶ್ ಪೋಗಟ್ ಅನರ್ಹ: 24 ಪುಟಗಳ ವಿಸ್ತೃತ ಆದೇಶದಲ್ಲಿ ಅನರ್ಹ ಮಾಡಿದ ನಿರ್ಧಾರ ಸರಿಯಾಗಿದೆ ಎಂದು ಹೇಳಿದ CAS

ಪ್ಯಾರಿಸ್‌: ಕ್ರೀಡಾ ಮಧ್ಯಸ್ಥಿಕೆ ನ್ಯಾಯ ಮಂಡಳಿಯು 100 ಗ್ರಾಂ ಹೆಚ್ಚಳವಾಗಿದ್ದಕ್ಕೆ ಫೈನಲ್ ಗೆ ವಿನೇಶ್ ಪೋಗಟ್ ಅನರ್ಹವಾಗಿರುವ ಕುರಿತು ಪ್ರತಿಕ್ರಿಯಿಸಿ ಮುಟ್ಟಾಗಿದ್ದರೂ ನಿಗದಿತ ತೂಕ ಹೊಂದಿರಬೇಕು. ನಿಗದಿತ ಮಿತಿಗಿಂತ 100 ಗ್ರಾಂ ತೂಕ ಹೆಚ್ಚಳವಾಗಿದ್ದಕ್ಕೆ ಕುಸ್ತಿಪಟು ವಿನೇಶ್ ಫೋಗಟ್ ಅವರನ್ನು ಫೈನಲ್‌ ಪಂದ್ಯದಿಂದ ಅನರ್ಹ ಮಾಡಿದ ನಿರ್ಧಾರ ಸರಿಯಾಗಿದೆ ಎಂದು ತಿಳಿಸಿದೆ.

ಆಗಸ್ಟ್‌ 14 ರಂದು ವಿನೇಶ್‌ ಫೋಗಟ್‌ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಕ್ರೀಡಾ ಮಧ್ಯಸ್ಥಿಕೆ ನ್ಯಾಯ ಮಂಡಳಿ ವಜಾ ಮಾಡಿದ್ದು ಈಗ ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಲು ಕಾರಣ ಏನು ಎನ್ನುವುದನ್ನು 24 ಪುಟಗಳ ವಿಸ್ತೃತ ಆದೇಶದಲ್ಲಿ ಉಲ್ಲೇಖಿಸಿದೆ.

ವಿಸ್ಕೃತ ಆದೇಶದಲ್ಲಿ ಉಲ್ಲೇಖಿಸಿದ ಅಂಶ:

ಫೋಗಟ್‌ ಅವರು ತಾನು ಯಾವ ಕೆಜಿ ವಿಭಾಗದಲ್ಲಿ ಸ್ಪರ್ಧಿಸಬೇಕು ಎಂಬುದನ್ನುದಲ್ಲಿ ಸ್ವಯಂಪ್ರೇರಿತವಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಅವರು ನಿಯಮಗಳ ಬಗ್ಗೆ ಪರಿಚಿತರಾಗಿರುವ ಅನುಭವಿ ಕುಸ್ತಿಪಟುವಾಗಿದ್ದು ತೂಕದ ಮಿತಿಗಳನ್ನು ಅರ್ಥಮಾಡಿಕೊಂಡಿದ್ದಾರೆ.

ಫೋಗಟ್‌ ಅವರ ಅಸಮರ್ಥತೆ ಅವರ ತೂಕ ನಿರ್ವಹಣೆಯ ತಂತ್ರದಿಂದ ಉದ್ಭವಿಸಿದೆಯೇ ಹೊರತು ಯಾವುದೇ ಬಾಹ್ಯ ಅಂಶಗಳು ಅಥವಾ ಹಸ್ತಕ್ಷೇಪದಿಂದಲ್ಲ. ಆದ್ದರಿಂದ ಫೋಗಟ್ ಮಾಡಿದ ಮನವಿಯನ್ನು ತಿರಸ್ಕರಿಸಲಾಗಿದೆ. ತೂಕದ ನಿಯಮ ಎಲ್ಲಾ ಕ್ರೀಡಾಪಟುಗಳಿಗೆ ಒಂದೇ ಆಗಿದ್ದು ಇದರಲ್ಲಿ ಯಾವುದೇ ತಾರತಮ್ಯ ಇಲ್ಲ. ನಿಯಮಗಳ ಅನುಸರವಾಗಿ ತೂಕ ಪರೀಕ್ಷೆ ಮಾಡಲಾಗಿದೆ. ಫೈನಲ್ ಸುತ್ತಿಗೆ ಆಯ್ಕೆಯಾಗಿರುವ ಸ್ಪರ್ಧಿಗಳ ತೂಕ ಪರೀಕ್ಷೆಯನ್ನು ನಡೆಸುವುದು ನಿಯಮ. ಇದರಂತೆ ಮೊದಲ ಪರೀಕ್ಷೆಯಲ್ಲಿ ವಿನೇಶ್ ಫೋಗಟ್ ನಿಗದಿತ ತೂಕ 50 ಕೆಜಿ 150 ಗ್ರಾಂ. ಹೆಚ್ಚಾಗಿತ್ತು.

ನಿಯಮದ ಪ್ರಕಾರ ವಿನೇಶ್ ಫೋಗಟ್ ತೂಕ 50 ಕೆಜಿ ಒಳಗಿರಬೇಕಿತ್ತು. ಇದಾದ ಬಳಿಕ 15 ನಿಮಿಷದ ಸಮಯದಲ್ಲಿ ಎರಡನೇ ಬಾರಿಗೆ ಪರೀಕ್ಷೆ ನಡೆಸಲಾಗಿದೆ. ಈ ವೇಳೆ ನಿಗದಿತ ಮಿತಿಗಿಂತ 100 ಗ್ರಾಂ ತೂಕ ಹೆಚ್ಚಳ ಇತ್ತು. ತೂಕ ಹೆಚ್ಚಳವಾಗಿರುವ ಕುರಿತು ಯಾವುದೇ ತಕರಾರು ಇಲ್ಲ. ಆದರೆ ಇಲ್ಲೇ ನಿಯಮ ಉಲ್ಲಂಘನೆಯಾಗಿದೆ.

ತೂಕದ ಮಿತಿಯನ್ನು ಕಾಪಾಡುವುದು ಕ್ರೀಡಾಪಟು ಜವಾಬ್ದಾರಿಯಾಗಿದೆ. ಕ್ರೀಡಾಪಟು ಫೈನಲ್ ಸುತ್ತು ಆಡಿದ ಬಳಿಕ ಸಲ್ಲಿಸಿರುವ ಮನವಿ ಇದಲ್ಲ. ಈ ಕಾರಣದಿಂದ ಕ್ರೀಡಾಪಟು ಫೈನಲ್ ಸುತ್ತಿಗೆ ಅರ್ಹತೆ ಪಡೆದಿಲ್ಲ. ಹೀಗಾಗಿ ಪದಕ ಹಂಚುವಿಕೆ ಮನವಿ ಅಪ್ರಸ್ತುತ. ಈ ಕುರಿತು ಅಂತಾರಾಷ್ಟ್ರೀಯ ಸಮಿತಿ ಪ್ರಕಟಿಸಿದ ನಿರ್ಧಾರ ಸರಿಯಾಗಿದೆ. ತೂಕದ ಅವಶ್ಯಕತೆಗಳನ್ನು ಪೂರೈಸುವುದು ಕ್ರೀಡಾಪಟುವಿನ ಜವಾಬ್ದಾರಿಯಾಗಿದೆ.

ಭಾರತದ ಒಲಿಂಪಿಕ್ಸ್‌ ಸಂಸ್ಥೆ (IOA) ವಿನೇಶ್‌ ಫೋಗಟ್‌ ಮುಟ್ಟಾಗಿದ್ದರು. ಇದು ಸಾಮಾನ್ಯ ಜೈವಿಕ ಪ್ರಕ್ರಿಯೆಯಾಗಿರುವ ಕಾರಣ ದ್ರವವನ್ನು ಹಿಡಿದಿಟ್ಟುಕೊಳ್ಳುವುದರಿಂದ ತೂಕ ಹೆಚ್ಚಾಗಿದೆ ಎಂದು ವಾದಿಸಿತ್ತು. ವಿನೇಶ್ ಫೋಗಟ್ ಸ್ವತಃ ಈ ವಿಷಯವನ್ನು ಪ್ರಸ್ತಾಪಿಸದಿದ್ದರೂ ಐಒಎ ಪ್ರಸ್ತಾಪಿಸಿತ್ತು. ಹೀಗಿದ್ದರೂ ನ್ಯಾಯಾಲಯ ಋತುಚಕ್ರದ ಪರಿಣಾಮಗಳಿಗೆ ಸಂಬಂಧಿಸಿದ ಪುರಾವೆಗಳು ಫೋಗಟ್‌ ಅವರು ಮೊದಲ ಆಡುವಾಗ ಇದ್ದ ತೂಕದಲ್ಲಿ ಯಾವುದೇ ವ್ಯತ್ಯಾಸ ತೋರಿಸಿರಲಿಲ್ಲ. ಋತುಚಕ್ರ ಸಾಮಾನ್ಯ ಜೈವಿಕ ಪ್ರಕ್ರಿಯೆಗಳಾಗಿದ್ದು, ಇದರಲ್ಲಿ ಆಹಾರ, ಪಾನೀಯ ಸೇವಿಸುವುದು ಒಳಗೊಂಡಿರುತ್ತದೆ. ಅನುಭವಿ ಕ್ರೀಡಾಪಟುಗಳು ಸಹಜವಾಗಿ ಈ ವಿಚಾರವನ್ನು ಗಣನೆಗೆ ತೆಗೆದುಕೊಳ್ಳಬೇಕು. ತೂಕದ ಮಾಪಕಗಳು ದೋಷಯುಕ್ತವಾಗಿವೆ ಎಂದು IOA ಹೇಳಿದರೂ ಸಾಕ್ಷ್ಯಾಧಾರಗಳ ಕೊರತೆಯಿಂದ ಆ ಆರೋಪಗಳನ್ನು ತಳ್ಳಿಹಾಕಲಾಗಿದೆ ಎಂದು ತನ್ನ ಆದೇಶದಲ್ಲಿ ತಿಳಿಸಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page