31.4 C
Udupi
Wednesday, April 22, 2026
spot_img
spot_img
HomeBlog"ವಿಜೇತ ವಸತಿಯುತ ವಿಶೇಷ ಶಾಲೆ ಮತ್ತು ಶಿಕ್ಷಣ ತರಬೇತಿ ಸಂಸ್ಥೆ ಮಕ್ಕಳೊಂದಿಗೆ ಸ್ವಾತಂತ್ರೋತ್ಸವ ಆಚರಣೆ"

“ವಿಜೇತ ವಸತಿಯುತ ವಿಶೇಷ ಶಾಲೆ ಮತ್ತು ಶಿಕ್ಷಣ ತರಬೇತಿ ಸಂಸ್ಥೆ ಮಕ್ಕಳೊಂದಿಗೆ ಸ್ವಾತಂತ್ರೋತ್ಸವ ಆಚರಣೆ”

ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಕೋ – ಆಪರೇಟಿವ್ ಸಂಸ್ಥೆ ಸಮಾಜಕ್ಕೆ ಮಾದರಿ -” ರೆ.ಫಾ.ಲ್ಯಾರಿ ಪಿಂಟೋ”

ಸೈಂಟ್ ಮಿಲಾಗ್ರಿಸ್  ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ಕಾರ್ಕಳ ಶಾಖೆ ವತಿಯಿಂದ 78 ನೇ ಸ್ವಾತಂತ್ರೋತ್ಸವದ ಪ್ರಯುಕ್ತ ವಿಜೇತ ವಿಶೇಷ ಶಾಲಾ ಮಕ್ಕಳಿಗೆ ಬೆಡ್ ಶೀಟ್ & ತಿಂಡಿ ತಿನಸು ವಸ್ತುಗಳನ್ನು  ಹಸ್ತಾಂತರಿಸಿದರು.ಸೈಂಟ್  ಮಿಲಾಗ್ರಿಸ್  ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ಕಾರ್ಕಳ ಶಾಖೆ ವತಿಯಿಂದ ವಿಜೇತ ವಿಶೇಷ ಶಾಲಾ ಮಕ್ಕಳಿಗೆ ಬೆಡ್ ಶೀಟ್ & ತಿನಸು ವಸ್ತುಗಳನ್ನು  ಸಂತ ಲಾರೆನ್ಸ್ ಮೈನರ್ ಬಸಿಲಿಕಾ ಅತ್ತೂರು ಕಾರ್ಕಳ  ಇಲ್ಲಿಯ ಸಹಾಯಕ ಧರ್ಮಗುರುಗಳಾದ ರೆವರೆಂಟ್ ಫಾದರ್ ಲ್ಯಾರಿ ಪಿಂಟೋ ಹಸ್ತಾಂತರಿಸಿದರು.
ಟ್ರಸ್ಟಿ  ಶ್ರೀ  ಹರೀಶ್ ಮಾತನಾಡಿ ಸುಮರು 4 ವರ್ಷಗಳಿಂದ ಬೆಡ್ ಶೀಟ್ ಗಳನ್ನು ನೀಡುತ ಬಂದಿದ್ದು , ಕಳೆದ ತಿಂಗಳಿನಿಂದ ಮಳೆ, ಚಳಿ . ಸೊಳ್ಳೆ ಯಿಂದ ತೊಂಡರೆ ಉಂಟಾಗಿದ್ದು , ಸಂಸ್ಥೆ ನೀಡಿದಂತಹ ಬೆಡ್ ಶೀಟ್ ಗಳು ತುಂಬಾ ಉಪಯೋಗವಾಗಳಿವೆ ಮತ್ತು ಮುಂದೆಯು ಸಂಸ್ಥೆ ಯು ನಮ್ಮ ಮಕ್ಕಳಿಗೆ ಸಹಕಾರ ನೀಡಬೇಕಾಗಿ ವಿನಂತಿಮಾಡಿಕೊಂಡರು.

ಸಂತ ಲಾರೆನ್ಸ್ ಮೈನರ್ ಬಸಿಲಿಕಾ ಅತ್ತೂರು ಕಾರ್ಕಳ  ಇಲ್ಲಿಯ ಸಹಾಯಕ ಧರ್ಮಗುರುಗಳಾದ ರೆವರೆಂಟ್ ಫಾದರ್ ಲ್ಯಾರಿ ಪಿಂಟೋ ನಾನು ಮೊದಲ ಬಾರಿಗೆ ಸಂಸ್ಥೆ ಯ ಕಾರ್ಯಕ್ರಮಕ್ಕೆ ಆಗಮಿಸಿದ್ದು , ಈ ಸಂಸ್ಥೆಯು ನೀಡುವ ವಸ್ತುಗಳು ಮಕ್ಕಳಿಗೆ ತುಂಬಾನೇ ಉಪಯೋಗಕ್ಕೆ ಬರುತ್ತದೆ ಹಾಗೂ ಈ ಟ್ರಸ್ಟನ್ನು ನಡೆಸುತ್ತಿರುವ ಟ್ರಸ್ಟಿ ಗಳಾದ ಶ್ರೀ ಹರೀಶ್, ನೀವು ನಮ್ಮ ಸಮಾಜಕ್ಕೆ ಮಾದರಿಯಾಗಿರುತ್ತೀರಿಯೆಂದು ಮತ್ತು ಇದೇ ತರ ಇನ್ನೂ ಮುಂದೆಯು ಸಮಾಜಮುಖಿ ಕೆಲಸಗಳನ್ನು ಮಾಡಲು ನಿಮಗೆ ದೇವರು ಆಶೀರ್ವದಿಸಲಿ ಎಂದು ಶುಭ ಹಾರೈಸಿದರು.

ಶ್ರೀ ಕೃಷ್ಣ ಬ್ಯಾಗ್ಸ್ ಮತ್ತು ವಿಲ್ಬರ್ ಫ್ಯಾಕ್ಟರಿ ಔಟ್ಲೆಟ್ ಮಾಲಕರು ಶ್ರೀ ರಾಜೇಶ್ ಪೂಜಾರಿ ಮಾತನಾಡಿ ತನ್ನ ಉದ್ಯಮದಿಂದ ಬರುವ ಸ್ವಲ್ಪ ಲಾಭಾಂಶವನ್ನು ದಾನವಾಗಿ ನೀಡಿ ನಿಮ್ಮಲ್ಲಿ ಒಬ್ಬನಾಗುತ್ತೇನೆಂದು ಮತ್ತು ಸಂಸ್ಥೆಯು ಮಾಡುವ ಸಮಾಜ ಸೇವೆ ಬಗ್ಗೇ, ಶಾಖೆ ಮಾಡುವ ಇನ್ನಿತರ ಕಾರ್ಯಗಳನ್ನು ಪ್ರಶಂಸಿದರು.

ಈ ಸಂದರ್ಭದಲ್ಲಿ  ಸಂತ ಲಾರೆನ್ಸ್ ಮೈನರ್ ಬಸಿಲಿಕಾ ಅತ್ತೂರು ಕಾರ್ಕಳ  ಇಲ್ಲಿಯ ಸಹಾಯಕ ಧರ್ಮಗುರುಗಳಾದ ರೆವರೆಂಟ್ ಫಾದರ್ ಲ್ಯಾರಿ ಪಿಂಟೋ,ಶ್ರೀ ಕೃಷ್ಣ ಬ್ಯಾಗ್ಸ್ ಮತ್ತು ವಿಲ್ಬರ್ ಫ್ಯಾಕ್ಟರಿ ಔಟ್ಲೆಟ್ ಮಾಲಕರು ಶ್ರೀ ರಾಜೇಶ್ ಪೂಜಾರಿ,  ಸೇಂಟ್ ಮಿಲಾಗ್ರಿಸ್ ಸೌಹಾರ್ದ ಕೋಪರೇಟಿವ್  ಸೊಸೈಟಿ ಲಿ.  ಬ್ರಾಂಚ್ ಮ್ಯಾನೇಜರ್ ಕಿಶೋರ್ ದೇವಾಡಿಗ, ಅಸಿಸ್ಟೆಂಟ್ ಬ್ರಾಂಚ್ ಮ್ಯಾನೇಜರ್ ಶ್ವೇತಾ ಶೆಟ್ಟಿ , ಹಾಗೂ ಸಿಬ್ಬಂದಿ ಸುಹಾಸ್ , ಸುರೇಶ್, ಪ್ರೀತೇಶ್, ಮರಿಯಾ, ಮೆಲಿಟಾ  ಮತ್ತು ಟ್ರಸ್ಟಿ  ಹರೀಶ್ ಉಪಸ್ಥಿತರಿದ್ದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page