ವರಮಹಾಲಕ್ಷ್ಮಿ ಪೂಜೆ,ಸಂಕ್ರಾಂತಿ,ಏಕಾದಶಿ ಒಟ್ಟಿಗೆ ಬಂದಿರುವುದು ಇಂದಿನ ವಿಶೇಷ

ಕಾರ್ಕಳ:ಶ್ರಾವಣ ಮಾಸವು ಭಗವಂತನಿಗೆ ಅತ್ಯಂತ ಪ್ರಿಯವಾದ ತಿಂಗಳುಗಳಲ್ಲಿ ಒಂದಾಗಿದೆ. ಮಹಿಳೆಯರೇ ಹೆಚ್ಚಾಗಿ ಮಾಡುವ ಪೂಜೆ, ವ್ರತ, ದೇವರ ನಾಮ ಸ್ಮರಣೆಯನ್ನು ಈ ಮಾಸದಲ್ಲಿ ಮಾಡಲಾಗುತ್ತದೆ. ಸಂಪತ್ತಿನ ಅಧಿದೇವತೆ ಲಕ್ಷ್ಮೀದೇವಿಯ ಕೃಪಾ ಕಟಾಕ್ಷಕ್ಕೆ ಪಾತ್ರರಾಗಲು ವರಮಹಾಲಕ್ಷ್ಮಿ ವ್ರತ ಆಚರಣೆ ಮಾಡಲಾಗುತ್ತದೆ. ಸುಮಂಗಲಿಯರು ವಿಶೇಷವಾಗಿ ಈ ವ್ರತಾಚರಣೆ ಮಾಡುತ್ತಾರೆ. ಈ ವ್ರತಾಚರಣೆಯಿಂದ ಲಕ್ಷ್ಮೀ ದೇವಿಯ ಕೃಪೆಗೆ ಪಾತ್ರರಾಗಬಹುದು.

ಇಂದು ವಿಶೇಷ ಶುಕ್ರವಾರ
ಸಂಕ್ರಾಂತಿ,ಏಕಾದಶಿ,ವರಮಹಾಲಕ್ಷ್ಮಿಪೂಜೆ ಒಟ್ಟಿಗೆ ಆಚರಿಸುವ ಯೋಗ ಭಾಗ್ಯ ಕೂಡಿ ಬಂದಿದೆ.ಅರೋಗ್ಯ,ಸಿರಿ, ಸಂಪತ್ತು ವೃದ್ಧಿ, ಸಂತಾನ ಪ್ರಾಪ್ತಿ, ಕುಟುಂಬದಲ್ಲಿ ಸುಖ, ಶಾಂತಿ, ನೆಮ್ಮದಿಗಾಗಿ ಕಾರ್ಕಳ ಬಸ್ ಸ್ಟ್ಯಾಂಡ್ ಸಮೀಪದ ಶ್ರೀ ಮನ್ನಾರ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ಪೂಜೆಯು ಭಕ್ತರ ಸಮ್ಮುಖದಲ್ಲಿ ನಡೆಯಿತು.















