27.7 C
Udupi
Tuesday, April 21, 2026
spot_img
spot_img
HomeBlogಜನಜೀವನ ಪರಿವರ್ತಿಸಲು, ದೇಶವನ್ನು ಬಲಪಡಿಸಲು ದೊಡ್ಡ ಸುಧಾರಣೆಗಳಿಗೆ ಬದ್ಧ: ಪ್ರಧಾನಿ ನರೇಂದ್ರ ಮೋದಿ

ಜನಜೀವನ ಪರಿವರ್ತಿಸಲು, ದೇಶವನ್ನು ಬಲಪಡಿಸಲು ದೊಡ್ಡ ಸುಧಾರಣೆಗಳಿಗೆ ಬದ್ಧ: ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು 78ನೇ ಸ್ವಾತಂತ್ರ ದಿನಾಚರಣೆ ಹಿನ್ನೆಲೆಯಲ್ಲಿ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ಬಳಿಕ ದೇಶವನ್ನುದ್ದೇಶಿ ಮಾತನಾಡಿದ್ದು ಈ ವೇಳೆ ಜನಜೀವನ ಪರಿವರ್ತಿಸಲು, ದೇಶವನ್ನು ಬಲಪಡಿಸಲು ದೊಡ್ಡ ಸುಧಾರಣೆಗಳಿಗೆ ಬದ್ಧ. ನಮಗೆ ರಾಷ್ಟ್ರ ಮೊದಲು ಎಂದು ಪ್ರತಿಜ್ಞೆ ಮಾಡಿದರು.

ದೇಶದ ಸ್ವಾತಂತ್ರ್ಯಕ್ಕಾಗಿ ಜೀವನ ಸಮರ್ಪಣೆ ಮಾಡಿದ, ಸಂಘರ್ಷ ಮಾಡಿದ ಅಗಣಿತ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ ಮಾಡುವ ಶುಭ ದಿನ. ಸುಧಾರಣೆಗಳಿಗೆ ನಮ್ಮ ಬದ್ಧತೆ ಗುಲಾಬಿ ಪತ್ರಿಕೆಯ ಸಂಪಾದಕೀಯಕ್ಕಾಗಿ ಅಲ್ಲ. ದೇಶವನ್ನು ಬಲಿಷ್ಠಗೊಳಿಸುವುದು ಎಂದು ನಾನು ದೇಶವಾಸಿಗಳಿಗೆ ಭರವಸೆ ನೀಡಲು ಬಯಸುತ್ತೇನೆ. ತಜ್ಞರು ಅಥವಾ ಬೌದ್ಧಿಕ ಚರ್ಚಾ ಕ್ಲಬ್‌ಗಳನ್ನು ತೃಪ್ತಿಪಡಿಸಲು ಸರ್ಕಾರವು ವ್ಯಾಪಕವಾದ ಸುಧಾರಣೆಗಳನ್ನು ಜಾರಿಗೆ ತಂದಿಲ್ಲ. ದೇಶವನ್ನು ಪ್ರಗತಿಯತ್ತ ಕೊಂಡೊಯ್ಯುವ ‘ನೇಷನ್ ಫಸ್ಟ್’ ಪ್ರತಿಜ್ಞೆಯೇ ನಮ್ಮ ಆದ್ಯತೆ ಎಂದು ತಿಳಿಸಿದರು.

ಅಂದು ದೇಶಕ್ಕೆ ಸಾಯಲು ಜನರು ಪ್ರತಿಬದ್ಧವಾಗಿದ್ದರು. ನಾವು ಅಭಿವೃದ್ಧಿ ಭಾರತಕ್ಕೆ ಪ್ರತಿಬದ್ಧರವಾಗಿರಬೇಕು. ವಿಕಸಿತ ಭಾರತಕ್ಕಾಗಿ ದೇಶದ ಜನರು ಸಾಕಷ್ಟು ಸಲಹೆ ನೀಡಿದ್ದಾರೆ. ದೇಶದ ಪ್ರತಿಯೊಬ್ಬ ಜನರ ಕನಸು, ಸಂಕಲ್ಪ ಅದರೊಳಗಿದೆ. 2047 ಸ್ವಾತಂತ್ರ್ಯ ದಿನಾಚರಣೆ 100 ವರ್ಷಕ್ಕಾಗಿ ಸಾಕಷ್ಟು ಸಲಹೆ ನೀಡಿದ್ದಾರೆ. ಕೆಲವು ಜನರು ಉತ್ಪಾದನೆ ಹಬ್, ಸ್ಕಿಲ್ ಸಿಟಿ, ಆತ್ಮ ನಿರ್ಭರ್, ಸಿರಿ ಧಾನ್ಯಗಳನ್ನು ಜನಪ್ರಿಯ ಮಾಡಲು ಸೇರಿ ಅನೇಕ ಸಲಹೆ ನೀಡಿದ್ದಾರೆ. ನ್ಯಾಯ ವಿಳಂಬದ ಹಿನ್ನಲೆ ನ್ಯಾಯ ವಲಯದಲ್ಲಿ ವೇಗಬೇಕು. ಭಾರತದ ಸ್ಪೇಸ್ ಸ್ಟೇಷನ್ ನಿರ್ಮಾಣ, ಗ್ರೀನ್ ಸಿಟಿ ನಿರ್ಮಾಣ, ಪಾರಂಪರಿಕ ಔಷಧಿ ಅಭಿವೃದ್ಧಿ ಹೀಗೆ ಸಾಕಷ್ಟು ಸಲಹೆಗಳಿವೆ. ನನ್ನ ದೇಶದ ಸಾಮಾನ್ಯ ನಾಗರಿಕರು ಈ ಸಲಹೆ ನೀಡಿದ್ದಾರೆ. ದೇಶದ ಜನರಲ್ಲಿ ಇಷ್ಟು ದೊಡ್ಡ ಕನಸ್ಸುಗಳಿವೆ. ಇದರಿಂದ ನನ್ನ ಮನಸ್ಸಿನಲ್ಲಿ ಆತ್ಮ ವಿಶ್ವಾಸ ಇನ್ನಷ್ಟು ಹೆಚ್ಚುತ್ತದೆ ಎಂದು ಹೇಳಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page