28.5 C
Udupi
Tuesday, April 21, 2026
spot_img
spot_img
HomeBlogಡಾ. ಟಿ.ಎಂ.ಎ.ಪೈ ರೋಟರಿ ಆಸ್ಪತ್ರೆ ಕಾರ್ಕಳದಲ್ಲಿ ,ಉಚಿತ ಪಾಶ್ವ ವಾಯು ಪುನಃಶ್ಚೇತನಾ ಶಿಬಿರ

ಡಾ. ಟಿ.ಎಂ.ಎ.ಪೈ ರೋಟರಿ ಆಸ್ಪತ್ರೆ ಕಾರ್ಕಳದಲ್ಲಿ ,ಉಚಿತ ಪಾಶ್ವ ವಾಯು ಪುನಃಶ್ಚೇತನಾ ಶಿಬಿರ

ಕಾರ್ಕಳ 10 ಅಗಸ್ಟ್ 2024: ಡಾ ಟಿ ಎಂ ಎ ಪೈ ರೋಟರಿ ಆಸ್ಪತ್ರೆ ಕಾರ್ಕಳ ಮತ್ತು ಮಣಿಪಾಲದ ಸೆಂಟರ್ ಫಾರ್ ಕಾಂಪ್ರಹೆಂನ್ಸಿವ್ ಸ್ಟ್ರೋಕ್ ರೆಹಬೀಲಿಟೇಷನ್ ಮತ್ತು ರಿಕವರಿ (CCSRR) ಇವರ ಸಹಯೋಗದೊಂದಿಗೆ ಉಚಿತ ಪಾಶ್ವ ವಾಯು ಪುನಶ್ವೇತನ ಶಿಬಿರ ಮತ್ತು ಜಾಗೃತಿ ಶಿಕ್ಷಣ ಕಾರ್ಯಕ್ರಮ ಡಾ ಟಿ ಎಂ ಎ ಪೈ ರೋಟರಿ ಆಸ್ಪತ್ರೆ ಕಾರ್ಕಳದಲ್ಲಿ ಹಮ್ಮಿಕೊಳ್ಳಲಾಗಿತ್ತು . ಶಿಬಿರಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀಮತಿ ಅಕಿಲ, ಫಿಸಿಯೋಥೆರಪಿ ವಿಭಾಗ ಮಣಿಪಾಲ ಇವರು ಪಾಶ್ವವಾಯು ಅಥವಾ ಸ್ಟ್ರೋಕ್ ಕುರಿತು ಮಾಹಿತಿ ನೀಡುವುದರ ಜೊತೆಗೆ ಪಾಶ್ವವಾಯು ಸಂಭವಿಸಿದ ರೋಗಿಗಳ ಆರೈಕೆ ಮತ್ತು ಪುನಶ್ವೇತನದ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು. ಕಾರ್ಯಕ್ರಮದಲ್ಲಿ ಹಿರಿಯ ಮಕ್ಕಳ ತಜ್ಞೆಯಾದ
ಡಾ ಆಶಾ ಹೆಗ್ಡೆ, ಫಿಜಿಯೋಥೆರಪಿ ವಿಭಾಗದ ಪ್ರಾಧ್ಯಾಪಕರಾದ
ಡಾ ಪ್ರೀತಾ ಆರ್ ಹಾಜರಿದ್ದರು.


ಪಾಶ್ವವಾಯು ಪೀಡಿತ ರೋಗಿಗಳಿಗೆ ರೋಗಕ್ಕೆ ಸಂಬಂಧಪಟ್ಟ ಸಮಸ್ಯೆಗಳ ಉಚಿತ ತಪಾಸಣೆ, ಫಿಸಿಯೋಥೆರಪಿ, ಸಲಹೆ, ಸಮಾಲೋಚನೆ ಮತ್ತು ಜೀವನ ಕ್ರಮದ ಕುರಿತು ಮಾಹಿತಿ ನೀಡಲಾಯಿತು.
ಶ್ರೀಮತಿ ಸಂಧ್ಯಾ ಇವರು ಕಾರ್ಯಕ್ರಮವನ್ನು ನೆರವೇರಿಸಿದರು. ಸುಮಾರು 30 ಮಂದಿ ಸ್ಟ್ರೋಕ್ ಪನಶ್ವೇತನದಲ್ಲಿರುವವರು ಈ ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.
ಈ ಕಾರ್ಯಕ್ರಮದ ಮೂಲಕ ಪಾಶ್ವವಾಯು ರೋಗಿಗಳಿಗೆ ವೈಯಕ್ತಿಕರಿಸಿದ ಸಲಹೆ, ಸೂಚನೆ ನೀಡಲಾಯಿತು. ಇಂತಹ ಸೇವೆಗಳಿಗೆ ಡಾ ಟಿ ಎಂ ಎ ಪೈ ರೋಟರಿ ಆಸ್ಪತ್ರೆ ಕಾರ್ಕಳವು ಯಾವಾಗಲು ಬದ್ದವಾಗಿದೆ ಎಂದು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ ಕೀರ್ತಿನಾಥ ಬಲ್ಲಾಳ ಅವರು ತಿಳಿಸಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page