
ಪ್ಯಾರಿಸ್ ಒಲಿಂಪಿಕ್ನಲ್ಲಿ ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಅವರು ಮಹಿಳೆಯರ 50 ಕೆಜಿ ವಿಭಾಗದಿಂದ ಅನರ್ಹಗೊಂಡಿದ್ದು ಇದರ ಬೆನ್ನಲ್ಲೇ ಇದೀಗ ಮತ್ತೊಬ್ಬ ಕುಸ್ತಿಪಟು ಒಲಿಂಪಿಕ್ ನಿಂದ ಹೊರಗೆ ಕಳಿಸಿರುವುದು ಭಾರತಕ್ಕೆ ಮತ್ತೊಂದು ಆಘಾತದ ವಿಷಯವಾಗಿದೆ.
ಭಾರತದ ಪ್ರಮುಖ ಕುಸ್ತಿಪಟು ಅಂತಿಮ್ ಫಂಘಾಲ್ ಅವರನ್ನು ಅಶಿಸ್ತಿನ ಕಾರಣದಿಂದ ಪಂದ್ಯದಿಂದ ದೂರ ಇಡಲಾಗಿದೆ.
ಈಗಾಗಲೇ ಪ್ಯಾರಿಸ್ ಒಲಿಂಪಿಕ್ ಅಸೋಸಿಯೇಷನ್ ಪ್ಯಾರಿಸ್‌ನಿಂದ ಗಡೀಪಾರು ಮಾಡಲು ನಿರ್ಧರಿಸಲಾಗಿದೆ. ಪ್ರಿ ಕ್ವಾರ್ಟರ್ ಫೈನಲ್ನಲ್ಲಿ ಆಂಟಿಮ್ ಪಂಘಲ್ ಟರ್ಕಿಯ ಯೆಟ್ಗಿಲ್ ಝೆನೆಪ್ ವಿರುದ್ಧ 0-10 ಅಂತರದಲ್ಲಿ ಸೋತಿದ್ದರು. ಒಲಿಂಪಿಕ್ ಗೇಮ್ಸ್ ವಿಲೇಜ್‌ಗೆ ಪ್ರವೇಶಿಸಲು ಅಂತಿಮ್ ಫಂಘಾಲ್ ಅವರ ಅಧಿಕೃತ ಕಾರ್ಡ್ ಅನ್ನು ಸಹೋದರಿ ನಿಶಾ ಬಳಸಿ ಸಿಕ್ಕಿಬಿದ್ದಿದ್ದು ಇದು ಒಲಿಂಪಿಕ್ ಆಟಗಾರರಿಗೆ ಮಾತ್ರ ನೀಡಲಾಗುವುದು, ಇದನ್ನು ಆಟಗಾರರಲ್ಲದವರು ಬಳಸುವಂತಿಲ್ಲ, ಆದರೆ ಅಂತಿಮ್ ಫಂಘಾಲ್ ಸಹೋದರಿ ಇದನ್ನು ಬಳಸಿರುವುದಕ್ಕೆ ಅವರು ಒಲಿಂಪಿಕ್ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ಆಟದಿಂದ ಹೊರ ಹಾಕಲಾಗಿದೆ ಎಂದು ಪ್ಯಾರಿಸ್ ಒಲಿಂಪಿಕ್ ಅಸೋಸಿಯೇಷನ್ ತಿಳಿಸಿದೆ.
ಅಂತಿಮ್ ಫಂಘಾಲ್ ಪ್ರಿ ಕ್ವಾರ್ಟರ್ ಫೈನಲ್ನಲ್ಲಿ ಸೋತ ನಂತರ ತನ್ನ ತರಬೇತುದಾರ ಹಾಗೂ ಸಹೋದರಿಯೊಂದಿಗೆ ತಾವು ಉಳಿದಿದ್ದ ಹೋಟೆಲ್ಗೆ ಹೋಗಿದ್ದಾರೆ. ಆದರೆ ಅಂತಿಮ್ ಫಂಘಾಲ್ ಗೇಮ್ಸ್ ವಿಲೇಜ್‌ನಲ್ಲಿ ತಮ್ಮ ಬ್ಯಾಗ್ ಬಿಟ್ಟ ಕಾರಣ, ತನ್ನ ಸಹೋದರಿ ನಿಶಾ ಅವರಿಗೆ ತಮ್ಮ ಅಧಿಕೃತ ಕಾರ್ಡ್ ನೀಡಿ ಬ್ಯಾಗ್ ತರಲು ಹೇಳಿದ್ದಾರೆ. ಆದರೆ ಇದೀಗ ಇದು ಒಲಿಂಪಿಕ್ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ಹೇಳಲಾಗಿದೆ.
ಈ ಬಗ್ಗೆ ಭಾರತೀಯ ಒಲಿಂಪಿಕ್ ಸಂಸ್ಥೆ ಮಾಹಿತಿ ನೀಡಿದ್ದು, ಶಿಸ್ತಿನ ಉಲ್ಲಂಘನೆಯನ್ನು ಫ್ರೆಂಚ್ ಅಧಿಕಾರಿಗಳ ಗಮನಕ್ಕೆ ತಂದ ಕಾರಣ ಅಂತಿಮ್ ಫಂಘಾಲ್ ಹಾಗೂ ಅವರ ಸಿಬ್ಬಂದಿಯನ್ನು ವಾಪಸ್ಸು ಭಾರತಕ್ಕೆ ಕಳುಹಿಸಲಾಗಿದೆ ಎಂದು ತಿಳಿಸಿದೆ.













