
ನವದೆಹಲಿ: ಕಳೆದ ತಿಂಗಳು ಜಿಯೋ, ಏರ್ಟೆಲ್ ಮತ್ತು ವೊಡಾಫೋನ್, ಐಡಿಯಾ ಕಂಪನಿಗಳು ತಮ್ಮ ಎಲ್ಲಾ ರೀಚಾರ್ಜ್ ದರಗಳನ್ನು ಏರಿಕೆ ಮಾಡಿದ್ದು ಈ ಪೈಕಿ ರಿಲಾಯನ್ಸ್ ಜಿಯೋ ಬಹಳ ಜನಪ್ರಿಯವಾಗಿದ್ದ ಮತ್ತು ಅನ್ಲಿಮಿಟೆಡ್ 5ಜಿ ಡಾಟಾ ಕೊಡುತ್ತಿದ್ದ 395 ರೂ ಮತ್ತು 1,559 ರೂ ಪ್ರೀಪೇಯ್ಡ್ ರೀಚಾರ್ಜ್ ಪ್ಲಾನ್ಗಳನ್ನು ಇನ್ಮುಂದೆ ಕೈಬಿಡುವ ಸಾಧ್ಯತೆಗಳಿವೆ.
ತನ್ನ ಸರಾಸರಿ ಆದಾಯ (ಎಆರ್ಪಿಯು) ಹೆಚ್ಚಿಸಲು ರಿಲಾಯನ್ಸ್ ಜಿಯೋ ಮಾಡಿರುವ ದೊಡ್ಡ ಪ್ಲಾನ್ನ ಒಂದು ಭಾಗ ಇದು ಎನ್ನಲಾಗುತ್ತಿದೆ. ಮುಂದಿನ ದಿನಗಳಲ್ಲಿ ರಿಲಾಯನ್ಸ್ ಜಿಯೋದ ಪ್ರಮುಖ ಪ್ಲಾನ್ಗಳಲ್ಲಿ ಸಾಕಷ್ಟು ವ್ಯತ್ಯಯಗಳಾಗುವ ಸಾಧ್ಯತೆಯಿದೆ.
ರಿಲಾಯನ್ಸ್ ಜಿಯೋ ಕೈಬಿಟ್ಟಿರುವ 395 ರೂ ಪ್ಲಾನ್ 84 ದಿನಗಳ ವ್ಯಾಲಿಡಿಟಿ ಹೊಂದಿತ್ತು. 1,559 ರೂ ಪ್ಲಾನ್ 336 ದಿನದ ವ್ಯಾಲಿಡಿಟಿ ಹೊದಿತ್ತು. ಈ ಎರಡೂ ಪ್ಲಾನ್ಗಳು ಅನ್ಲಿಮಿಟೆಡ್ 5ಜಿ ಡಾಟಾ ಆಫರ್ ಮಾಡುತ್ತಿದ್ದು ಬಹಳಷ್ಟು ಗ್ರಾಹಕರು ಈ ಪ್ಲಾನ್ಗಳನ್ನು ಸಬ್ಸ್ಕ್ರೈಬ್ ಮಾಡಿದ್ದರು.
2ಜಿಬಿ ಡಾಟಾ ಮತ್ತು 28 ದಿನ ವ್ಯಾಲಿಡಿಟಿಯ ಪ್ಲಾನ್ ದರ 155 ರೂನಿಂದ 189 ರೂಗೆ ಹೆಚ್ಚಳ
ದಿನಕ್ಕೆ 1ಜಿಬಿ ಡಾಟಾ, 28 ದಿನ ವ್ಯಾಲಿಡಿಯ ಪ್ಲಾನ್ ದರ: 209ರೂನಿಂದ 249 ರೂಗೆ ಏರಿಕೆ.
ದಿನಕ್ಕೆ 1.5ಜಿಬಿ ಡಾಟಾ, 28 ದಿನ ವ್ಯಾಲಿಡಿಟಿಯ ಪ್ಲಾನ್ ದರ: 239 ರೂನಿಂದ 299 ರೂಗೆ ಏರಿಕೆ.
ದಿನಕ್ಕೆ 2ಜಿಬಿ ಡಾಟಾ, 28 ದಿನ ವ್ಯಾಲಿಡಿಟಿಯ ಪ್ಲಾನ್ನ ದರ 299 ರೂನಿಂದ 349 ರೂಗೆ ಹೆಚ್ಚಳ.













