ನೂತನ ಪ್ರಾಚಾರ್ಯರಾಗಿ ನೇಮಿರಾಜ್ ಶೆಟ್ಟಿ ಅಧಿಕಾರ ಸ್ವೀಕಾರ

ಕಾರ್ಕಳದ ಪ್ರತಿಷ್ಠಿತ ಎಸ್.ವಿ.ಟಿ ವನಿತಾ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾಗಿ ರಾಜ್ಯನೀತಿ ಶಾಸ್ತ್ರ ಉಪನ್ಯಾಸಕರಾದ ನೇಮಿರಾಜ್ ಶೆಟ್ಟಿ ಅಧಿಕಾರ ಸ್ವೀಕರಿಸಿದ್ದು, ಹಿಂದಿನ ಪ್ರಾಂಶುಪಾಲರಾದ ರಾಮದಾಸ ಪ್ರಭು ಇವರಿಗೆ ಬೀಳ್ಕೊಡುಗೆ ಕಾರ್ಯಕ್ರಮವು ವಿದ್ಯಾಸಂಸ್ಥೆಯ ಆಡಳಿತ ವರ್ಗ, ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಉಪಸ್ಥಿತಿಯಲ್ಲಿ ಅದ್ದೂರಿಯಾಗಿ ನೆರವೇರಿತು.














