
ವಯನಾಡು: ಪ್ರಕೃತಿ ಮಾತೆಯ ಅರ್ಧ ಸೆಕೆಂಡ್ ಮುನಿಸಿಗೆ ನೂರು ಜನರ ಬದುಕು ಮುಗಿದಿದ್ದು ನೂರಾರು ಮನೆಗಳಲ್ಲಿ ರಕ್ತ ಕಣ್ಣೀರು ಹರಿದಿದೆ.ಹೆಣಗಳ ರಾಶಿಗೆ ಜಾಗವಿಲ್ಲದೆ ಮಲ್ಪಾಡಿಯಲ್ಲಿ ಇರುವ ಸರ್ಕಾರಿ ಆಸ್ಪತ್ರೆಯ ಶವಾಗಾರವನ್ನು ತಾತ್ಕಾಲಿಕವಾಗಿ ಸಭಾಂಗಣಕ್ಕೆ ಶಿಫ್ಟ್ ಮಾಡಲಾಗಿದೆ. ಇದೆಲ್ಲದರ ನಡುವೆ ದೇಹವೇ ಇರದ ಆರು ಬರೀ ಕೈಗಳು ಇದುವರೆಗೆ ಸಿಕ್ಕಿದೆ.
ಇನ್ನೂ ಮೂರು ತಲೆ ಸಿಕ್ಕಿವೆ. ಆದರೆ ಮುಖದ ಗುರುತೇ ಸಿಗದ ಮಟ್ಟಕ್ಕೆ ಮುಖ ಜಜ್ಜಿವೆ. ಎಂಟು ಪ್ರತ್ಯೇಕವಾದ ಕಾಲು ಸಿಕ್ಕಿವೆ. ಐದು ತಲೆ ಇರದ ಅರ್ಧ ದೇಹ ಸಿಕ್ಕಿವೆ. ಇದು ಯಾರ ಯಾರ ಕೈ? ಯಾರ ತಲೆ ಎಂದು ಪತ್ತೆ ಮಾಡುವುದು ಹೇಗೆ? ಹೀಗೆ ಎಲ್ಲವನ್ನೂ ತಂದು ಎನ್ಡಿಆರ್ಎಫ್ನವರು ಶವಗಾರ ಸೇರಿಸಿದ್ದಾರೆ. ಅದೆಷ್ಟೋ ಮನೆಯವರು ತಮ್ಮ ಕುಟುಂಬಸ್ಥರ ಹೆಣ ಸಿಗುವುದೋ? ಇಲ್ಲವೋ ಎಂಬ ಚಿಂತೆಯಲ್ಲಿ ಗೋಳಾಡುತ್ತಿದ್ದಾರೆ.













