28.5 C
Udupi
Monday, April 13, 2026
spot_img
spot_img
HomeBlog🔴ನಿರ್ಮಿತಿ ಕೇಂದ್ರದ ನಿರ್ದೇಶಕರ ಅಮಾನತು ಸ್ವಾಗತರ್ಹ

🔴ನಿರ್ಮಿತಿ ಕೇಂದ್ರದ ನಿರ್ದೇಶಕರ ಅಮಾನತು ಸ್ವಾಗತರ್ಹ

🔴ನಕಲಿ ಪ್ರತಿಮೆ ವಿರುದ್ಧ ಹೋರಾಟಕ್ಕೆ ಮೊದಲ ಜಯ

🔴ಸತ್ಯಾಸತ್ಯತೆ ಬಯಲ್ಲಿಗೆ ಬಂದು, ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆಯಾಗಲಿದೆ ಎಂಬ ವಿಶ್ವಾಸ

ಕಾಂಗ್ರೆಸ್ ವಕ್ತಾರ ಶುಭದ್ ರಾವ್ ಹೇಳಿಕೆ

ಶಾಸಕ ಸುನಿಲ್ ಕುಮಾರ್ ಅವರ ಜೊತೆ ಸೇರಿಕೊಂಡು ಭ್ರಷ್ಟಾಚಾರ ನಡೆಸಿ ಬೈಲೂರು ಉಮಿಕಲ್ಲು ಬೆಟ್ಟದಲ್ಲಿ ಪರಶುರಾಮನ ನಕಲಿ ಪ್ರತಿಮೆ ಸ್ಥಾಪಿಸಿ ಜನತೆಗೆ ಮೋಸ ಎಸಗಿದ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್ ಅವರನ್ನು ಸರಕಾರ ಅಮಾನತುಗೊಳಿಸಿ ಆದೇಶಿಸಿರುವುದು ಸ್ವಾಗತಾರ್ಹ, ಇದು ಸತ್ಯದ ಹೋರಾಟಕ್ಕೆ ಸಂದ ಮೊದಲ ಜಯ ಎಂದು ಕಾಂಗ್ರೆಸ್ ವಕ್ತಾರ ಶುಭದ್ ರಾವ್ ಹೇಳಿದ್ದಾರೆ.2022ರ ನವೆಂಬರ್ ತಿಂಗಳಿನಲ್ಲಿ ಮೂರ್ತಿ ರಚನೆಗೆ ಬೆಂಗಳೂರಿನ ಕ್ರಿಸ್ ಆರ್ಟ್ ವರ್ಲ್ಡ್ ನ ಕೃಷ್ಣ ನಾಯಕ್ ಎಂಬವರಿಗೆ 1 ಕೋಟಿ ರೂ. ಮುಂಗಡ ಮೊತ್ತ ಪಾವತಿಸಿ, ಬಳಿಕ ಡಿಸೆಂಬರ್ ತಿಂಗಳಿನಲ್ಲಿ ಟೆಂಡರ್ ನಡೆಸಿ, 2023ರ ಜನವರಿ ತಿಂಗಳಿನಲ್ಲಿ ಪ್ರತಿಮೆ ಸ್ಥಾಪಿಸಿ ಎಲ್ಲರಿಂದಲೂ ಮೆಚ್ಚುಗೆ ಗಿಟ್ಟಿಸಿಕೊಂಡ ಅಧಿಕಾರಿಯ ನಿಜ ಬಣ್ಣ ಬಯಲಾಗಿದೆ.

ಕಳೆದ ಒಂದು ವರ್ಷದಿಂದ ಈ ಪ್ರತಿಮೆ ನಕಲಿ ಎಂದು ಹೋರಾಟ ನಡೆಸಿದರೂ ಇದು ಅಸಲಿ ಪ್ರತಿಮೆ ಎಂದು ಪತ್ರಿಕೆಗಳಲ್ಲಿ ಜಾಹೀರಾತು ಮೂಲಕ ಸುಳ್ಳು ಪ್ರಕಟಣೆ ನೀಡಿ, ಪ್ರವಾಸೋದ್ಯಮ ಸಚಿವರಿಗೂ ಸುಳ್ಳು ಮಾಹಿತಿ ನೀಡಿ, ಪ್ರತಿಮೆ ಸಾಗಾಟಕ್ಕೆ ಸಂಭಂದಿಸಿದಂತೆ ಯಾವುದೇ ದಾಖಲೆಗಳನ್ನು ಇಟ್ಟುಕೊಳ್ಳದೆ ಎಲ್ಲರ ದಾರಿ ತಪ್ಪಿಸಿದರ ಪರಿಣಾಮ ಈ ಶಿಕ್ಷೆಯಾಗಿದೆ.ದೇವರ ಹೆಸರಿನಲ್ಲಿ ಲೂಟಿ ಹೊಡೆದು, ಪರಶುರಾಮನ ನಕಲಿ ಪ್ರತಿಮೆ ಸ್ಥಾಪಿಸಿ ಜನತೆಯ ಭಾವನೆಗೆ ದಕ್ಕೆ ತಂದವರ ಪೈಕಿ ಮೊದನೆಯದಾಗಿ ಅರುಣ್ ಕುಮಾರ್ ಅಮಾನತುಗೊಂಡಿರುವುದು ಹೋರಾಟಕ್ಕೆ ಸಿಕ್ಕಿದ ಆರಂಭಿಕ ಜಯ, ಶಾಸಕ ಸುನೀಲ್ ಕುಮಾರ್ ತಾಳಕ್ಕೆ ಕುಣಿದು ಕಾನೂನು‌ ಮೀರಿದ ಕೆಲಸ ಮಾಡುವ ಎಲ್ಲಾ ಅಧಿಕಾರಿಗಳಿಗೆ ಇದು ಎಚ್ಚರಿಕೆ ಘಂಟೆ, ಮುಂದಿನ ದಿನಗಳಲ್ಲಿ ಎಲ್ಲಾ ಸತ್ಯಾಸತ್ಯತೆಗಳು ಬಯಲಿಗೆ ಬರಲಿದ್ದು, ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆಯಾಗಲಿದೆ. ಎಂಬ ವಿಶ್ವಾಸ ನಮ್ಮದಾಗಿದೆ ಎಂದು ಕಾಂಗ್ರೆಸ್ ವಾಕ್ತರ ಶುಭದ ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page