
ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪೆರ್ವಾಜೆಗೆ ತನ್ನ ತಂದೆ ದಿ. ಶ್ರೀಯುತ ಕಾರ್ಕಳ ವಾಸುದೇವಕಾಮತ್ ವಕೀಲರು ಇವರ ಸ್ಮರಣಾರ್ಥ ಅವರ ಮಗ ಶ್ರೀಯುತ ಕೆ ಕೆ ಕಾಮತ್‌ರವರು ಶಾಲಾ ಅಂಗಣಕ್ಕೆ ಕೊಡುಗೆಯಾಗಿ ನೀಡಿದ ಇಂಟರ್ ಲಾಕ್ ಉದ್ಘಾಟನಾ ಕಾರ್ಯಕ್ರಮ ಜುಲೈ 24ರಂದು ನಡೆಯಿತು.
ಸಭಾಕಾರ್ಯಕ್ರಮವನ್ನು ಉದ್ಘಾಟಿಸಿ ದಾನಿ ಕಾರ್ಕಳ ಕಮಲಾಕ್ಷ ಕಾಮತ್‌ರವರು ಮಾತನಾಡುತ್ತಾ ಯಾರು ತಮ್ಮ ತಂದೆ ತಾಯಿ ಗುರುಗಳನ್ನು ಪೂಜ್ಯಭಾವನೆಯಿಂದ ಕಾಣುತ್ತಾರೋ ಅವರು ಜೀವನದಲ್ಲಿ ಎತ್ತರದ ಸ್ಥಾನಕ್ಕೆ ಏರುತ್ತಾರೆ ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀಯುತ ಮುನಿರಾಜ ರೆಂಜಾಳ ಇವರು ಕಾರ್ಕಳದ ಕೊಡುಗೈದಾನಿ ಶ್ರೀಯುತ ಕೆ ಕೆ ಕಾಮತ್‌ರವರ ಗುಣಗಾನ ಮಾಡುತ್ತಾ ದಾನದ ಮಹತ್ವವನ್ನು ವಿವಿಧ ನಿದರ್ಶನಗಳೊಂದಿಗೆ ತಿಳಿಸಿದರು. ಇನ್ನೋರ್ವ ಮುಖ್ಯ ಅತಿಥಿಯಾಗಿ ಕಾರ್ಕಳ ಲಯನ್ಸ್ ಸಿಟಿಯ ಸ್ಥಾಪಕ ಅಧ್ಯಕ್ಷೆಯಾಗಿರುವ ಶ್ರೀಮತಿ ಜ್ಯೋತಿರಮೇಶ್ ಆಚಾರ್ಯರವರು ಭಾಗವಹಿಸಿದ್ದರು. ಶಾಲಾದಾನಿಗಳಾದ ಶ್ರೀಯುತ
ರಘುರಾಮ ಕಾಮತ್, ಶ್ರೀಯುತ ರಮೇಶ್ ಕರಣಿಕ, ಶ್ರೀಯುತ ಇಡ್ಯ ಜನಾರ್ಧನ್ ರಾವ್ ಅತಿಥಿಗಳಾಗಿ ಆಗಮಿಸಿದ್ದರು.
ಕಾರ್ಯಕ್ರಮದಲ್ಲಿ ಶ್ರೀ ಬಾಲಕೃಷ್ಣ ನಾಯಕ್ ಶಿಕ್ಷಣ ಸಂಯೋಜಕರು ಕಾರ್ಕಳ ವಲಯ, ಶ್ರೀಮತಿ ಜ್ಯೋತಿ ಸಿ ಆರ್ ಪಿ ಸಾಣೂರು ಕ್ಲಸ್ಟರ್, ದಿವಾಕರ್ ಪೆರ್ವಾಜೆ ಪ್ರೌಢಶಾಲಾ ಮುಖ್ಯೋಪಾಧ್ಯಾಯರು, ಪೆರ್ವಾಜೆ ಪ್ರೌಢಶಾಲಾ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಆನಂದ್ ನಾಯಕ್ ಇವರು ಉಪಸ್ಥಿತರಿದ್ದರು. ಶ್ರೀಮತಿ ವನಿತಾ ವಿ ಆಚಾರ್ಯ ಎಸ್ ಡಿ ಎಮ್ ಸಿ ಅಧ್ಯಕ್ಷರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಪ್ರಭಾರ ಮುಖ್ಯೋಪಾಧ್ಯಾಯಿನಿ ಶ್ರೀಮತಿ
ಪ್ರಮೀಳಾ ಸ್ವಾಗತಿಸಿ ಶ್ರೀಮತಿ ಸುಮಂಗಲ ವಂದಿಸಿದರು. ಶ್ರೀಮತಿ ಪ್ರಸಾದಿನಿಕಾರ್ಯಕ್ರಮ ನಿರೂಪಿಸಿದರು.











