ಯೋಗೀಶ್ ಆಚಾರ್ಯ ಇನ್ನಾ ಅಧ್ಯಕ್ಷರು ಯುವ ಕಾಂಗ್ರೆಸ್ ಕಾರ್ಕಳ
ಕಾರ್ಕಳ: ಜುಲೈ 12 ರಂದು ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಕಾರ್ಕಳ ಶಾಸಕರ ಕುಮ್ಮಕ್ಕಿನಿಂದ ನಡೆದ ಪೋಲೀಸ್ ದೌರ್ಜನ್ಯ ಹಾಗೂ ಅನ್ಯಾಯದ ವಿರುದ್ದ ಪ್ರತಿಭಟಿಸಿದ ಶುಭದ ರಾವ್ ವಿರುದ್ದ ಇಂದು ಬಿಜೆಪಿ ಯುವ ಮೋರ್ಚ ನೀಡಿದ ದೂರು ಸಂಪೂರ್ಣವಾಗಿ ದುರುದ್ದೇಶದಿಂದ ಕೂಡಿದ್ದು ಸ್ಥಳದಲ್ಲಿ ಜಿಲ್ಲಾದಿಕಾರಿಯವರಿಗೆ ಮತ್ತು ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಕಾಣದ ಕಾನೂನು ಮಿರಿದ ಚಟುವಟಿಕೆಗಳು ಯುವ ಮೋರ್ಚಾದವರಿಗೆ ಕಂಡದ್ದು ವಿಸ್ಮಯವೇ ಸರಿ ಎಂದು ಯುವ ಕಾಂಗ್ರೇಸ್ ಅದ್ಯಕ್ಷ ಯೋಗೀಶ್ ಇನ್ನಾ ಹೇಳಿದ್ದಾರೆ.
ಪರಶುರಾಮ ಥೀಂ ಪಾರ್ಕಿನ ಅಕ್ರಮ ಸದನದಲ್ಲಿ ಶಾಸಕರನ್ನು ಪೇಚಿಗೀಡುಮಾಡಿದ್ದು ಹಾಗಾಗಿ ಕಾರ್ಯಕರ್ತರನ್ನು ಬಳಸಿ ಸುಳ್ಳು ದೂರನ್ನು ದಾಖಲಿಸುತ್ತಿದ್ದಾರೆ
ಶುಭದ ರಾವ್ ಅವರ ಮೇಲೆ ದೂರು ದಾಖಲಿಸಿ ನಿಮ್ಮ ಅಕ್ರಮಗಳಿಂದ ಬಚಾವ್ ಆಗುತ್ತೇವೆ ಎಂದು ಅಂದುಕೊಂಡರೆ ಅದು ನಿಮ್ಮ ಮೂರ್ಖತನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂದು ಪರಶುರಾಮನ ಪ್ರತಿಮೆಗೆ ಸುತ್ತಿಗೆಯಿಂದ ಹೊಡೆದು ಮಾಡಿದ ಪಾಪದ ಫಲ ಅನುಭವಿಸಲೇ ಬೇಕು, ದಾರ್ಮಿಕ ನಂಬಿಕೆಗೆ ಘಾಸಿ ಮಾಡಿದ ಪಾಪಕ್ಕೆ ಕೇಸು ಹಾಕಿಸಿಕೊಂಡ ಮೋರ್ಚದ ಸದಸ್ಯರು ಪ್ರತಿಮೆಯ ಮೇಲಿನ ಭಾಗ ಎಲ್ಲಿದೆ ಮತ್ತು ಈಗಿರುವ ಅರ್ಧ ಪ್ರತಿಮೆ ಯಾವುದರಿಂದ ಮಾಡಲಾಗಿದೆ ಎಂದು ಮೊದಲು ತಿಳಿಸಲಿ ಎಂದು ಸವಾಲು ಹಾಕಿದ್ದಾರೆ.ನಮ್ಮ ನಾಯಕರ ವಿರುದ್ದ ಕಾನೂನು ಕೈಗೆತ್ತಿಕೊಳ್ಳುವ ಬೆದರಿಕೆ ಹಾಕಿದ ಯುವಮೋರ್ಚವನ್ನು ಎದುರಿಸಿ ತಕ್ಕ ಪಾಠ ಕಲಿಸುವ ಶಕ್ತಿ ಯುವ ಕಾಂಗ್ರೇಸ್ಸಿಗೆ ಇದೆ ಎಂದು ಯುವ ಕಾಂಗ್ರೆಸ್ ಕಾರ್ಕಳದ ಅಧ್ಯಕ್ಷ ಯೋಗೀಶ್ ಇನ್ನಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.