ನಾವು ಮಕ್ಕಳಿಗೆ ಕಲಿಸುವ ಸಂಸ್ಕಾರದ ಬಗ್ಗೆ ವಿಶೇಷ ಒತ್ತು ನೀಡಬೇಕು. ಮಕ್ಕಳನ್ನು ಬೆಳೆಸುವ ರೀತಿ , ಆಹಾರ ಕ್ರಮದ ವಿಧಾನವನ್ನು ತಿಳಿಸಿದರು. ಹಾಗೂ ಪೋಷಕರು ಅರೋಗ್ಯವನ್ನು ಧ್ಯಾನ , ಯೋಗ , ವ್ಯಾಯಮದ ಮೂಲಕ ಉತ್ತಮವಾಗಿಸಿಕೊಳ್ಳ ಬೇಕು ಎಂದು ಶ್ರೀಮತಿ ಸುಶ್ಮಿತಾ ರಾವ್ ಮಾತನಾಡಿದರು.
ಕಾರ್ಕಳದ ಪ್ರತಿಷ್ಟಿತ ಸಂಸ್ಥೆಯಾದ ಜೆ. ಸಿ. ಐ. ಕೋ ಆರ್ಡಿನೇಟರ್ ಹಾಗೂ ದುರ್ಗಾಪರಮೇಶ್ವರಿ ಸ್ವ ಸಹಾಯ ಸಹಕಾರಿ ಸೊಸೈಟಿನ ಡೈರೆಕ್ಟರ್ ಶ್ರೀಮತಿ ಸುಶ್ಮಿತಾ ರಾವ್ ನಚಿಕೇತ ವಿದ್ಯಾಲಯದ ಮಾತೃಭಾರತಿ ಮೊದಲ ಸಭೆಯನ್ನು ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿ ಮಾತನಾಡಿದರು.
ಶ್ರೀಮತಿ ಶಶಿರೇಖಾ ರವರು ಪ್ರಾಥನೆ ಮಾಡಿದರು. ಮಾತೃಭಾರತಿ ಅಧ್ಯಕ್ಷೆ ಯಾದ ಶ್ರೀಮತಿ ದೀಕ್ಷಿತ ರಾವ್ ಸ್ವಾಗತಿಸಿದರು. ರಜನಿ ಪ್ರಭು ಅತಿಥಿಗಳ ಪರಿಚಯ ಪತ್ರ ವಾಚಿಸಿದರು.ಶ್ರೀಮತಿ ಶಾಲಿನಿ , ಶ್ರೀಮತಿ ಮಾಲಿನಿ, ಶ್ರೀಮತಿ ಸುಷ್ಮಾ ಇವರು ಹೂಗುಚ್ಚ ನೀಡಿದರು. ಹೊಸ ಉಪಾಧ್ಯಕ್ಷರಾಗಿ ಶ್ರೀಮತಿ ಚೇತನಾ ನಾಯಕ್ ಆಯ್ಕೆಯಾದರು. ಶ್ರೀಮತಿ ಸ್ನೇಹಲತಾ ಧನ್ಯವಾದ ಮಾಡಿದರು. ವೇದಿಕೆಯಲ್ಲಿ ಅಧ್ಯಕ್ಷರಾದ ದೀಕ್ಷಿತ ರಾವ್ ಉಪಾಧ್ಯಕ್ಷರಾದ ಚೇತನಾ ನಾಯಕ್ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷರು ಮಚ್ಚೇಂದ್ರನಾಥ , ಸರೋಜಿನಿ ಮಾತಾಜಿ ಹಾಗೂ ಸವಿತಾ ಮಾತಾಜಿ ಮಾತೃಭಾರತಿ ಸದಸ್ಯರು ಉಪಸ್ಥಿತರಿದ್ದರು.