“ಡೆಂಗ್ಯೂ ತಡೆಗಟ್ಟುವಿಕೆ ಮತ್ತು ಮುಂಜಾಗ್ರತಾ ಕ್ರಮ” ಕಾರ್ಯಕ್ರಮ

ಕಾರ್ಕಳ: ವರ್ಧಮಾನ ಪ್ರಾಥಮಿಕ ಶಾಲೆ ಸಾಣೂರು ಇವರ ಪ್ರಾಯೋಜಿತದೊಂದಿಗೆ ರೋಟರಿ ಕ್ಲಬ್ ಕಾರ್ಕಳ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಇರುವತ್ತೂರು ಇವರ ಜಂಟಿ ಆಶ್ರಯದಲ್ಲಿ ಶಾಲಾ ಮಕ್ಕಳಿಗೆ ಡೆಂಗ್ಯೂ ಕಾಯಿಲೆ ಬಗ್ಗೆ ಮಾಹಿತಿ ಮತ್ತು ಮುಂಜಾಗ್ರತಾ ಕ್ರಮ ವರ್ಧಮಾನ ಪ್ರಾಥಮಿಕ ಶಾಲೆಯ ಪ್ರಾಯೋಜಕತ್ವದಲ್ಲಿ ರೋಟರಿ ಕ್ಲಬ್ ಕಾರ್ಕಳ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಇರುವತ್ತೂರು ಇವರ ಜಂಟಿ ಆಶ್ರಯದಲ್ಲಿ ಡೆಂಗ್ಯೂ ತಡೆಕಟ್ಟುವಿಕೆ ಹಾಗೂ ಮುಂಜಾಗ್ರತಾ ಕ್ರಮ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಇರುವತ್ತೂರು ಇದರ ವೈದ್ಯಾಧಿಕಾರಿಗಳಾದ ಡಾಕ್ಟರ್ ರೋ| ಯಶೋಧರ ಎಂ ಇವರು ಬಯಲಿನಲ್ಲಿರುವ ತ್ಯಾಜ್ಯ ವಸ್ತುಗಳನ್ನು ಮಳೆ ನೀರು ಸಂಗ್ರಹವಾಗದಂತೆ ಎಚ್ಚರವಹಿಸುವುದು ಅಥವಾ ಸೂಕ್ತ ವಿಲೇವಾರಿ ಮಾಡುವುದು ಇದರಿಂದ ಸೊಳ್ಳೆ ನಿಯಂತ್ರಣ ಮಾಡಬಹುದು . “ನೀರು ನಿಲ್ಲದಂತೆ ಎಚ್ಚರವಹಿಸಿ-ಡೆಂಗ್ಯೂ ಜ್ವರದಿಂದ ಪಾರಾಗಿ”ಎಂದುಸವಿಸ್ತಾರವಾಗಿ ಮಕ್ಕಳಿಗೆ ಮಾಹಿತಿ ನೀಡಿದರು. ಕಾರ್ಕಳ ರೋಟರಿ ಸಂಸ್ಥೆಯ ಅಧ್ಯಕ್ಷರಾದ ರೋ| ಇಕ್ಬಾಲ್ ಅಹಮದ್ ಇವರು ಮಕ್ಕಳ ಆರೋಗ್ಯದ ಬಗ್ಗೆ ಜಾಗೃತೆಯನ್ನು ವಹಿಸಿ ಎಂದು ಶುಭವನ್ನು ಕೋರಿದರು ವೇದಿಕೆಯಲ್ಲಿ ಶಿಕ್ಷಕರಾದ ರೋ|ವಸಂತ ಎಂ “ಆರೋಗ್ಯವೇ ಭಾಗ್ಯ” ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಿ ಎಂದು ಮಕ್ಕಳಿಗೆ ಮನವರಿಕೆ ಮಾಡಿದರು. ರೋಟರಿ ಉಪಾಧ್ಯಕ್ಷರಾದ ರೋ| ಬಾಲಕೃಷ್ಣ ದೇವಾಡಿಗ ಮತ್ತು ರೋ| ರೇಖಾ ಉಪಾಧ್ಯಾಯ, ಶಾಲಾ ಸಂಚಾಲಕರಾದ ಕುಮಾರಯ್ಯ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ “ಡೆಂಗ್ಯೂ ಮತ್ತು ಚಿಕನ್ ಗುನ್ಯಾ ತಡೆಗಟ್ಟೀರಿ, ಮುಂಜಾಗ್ರತಾ ಕ್ರಮ” ಕರಪತ್ರವನ್ನು ಬಿಡುಗಡೆಗೊಳಿಸಲಾಯಿತು.ಶಾಲಾ ಸಂಚಾಲಕಿ ರೋ| ಶಶಿಕಲಾ. ಕೆ. ಹೆಗ್ಡೆ ಪ್ರಸ್ತಾವಿಕ ನುಡಿಗಳೊಂದಿಗೆ ಅತಿಥಿ ಗಣ್ಯರನ್ನು ಸ್ವಾಗತಿಸಿದರು. ಕಾರ್ಯದರ್ಶಿ ರೋ| ಗಣೇಶ್ ಸಾಲಿಯಾನ್ ವಂದನಾರ್ಪಣೆ ಗೈದರು.





