ಆರ್ಕಿಟೆಕ್ಚರ್ ಕೋರ್ಸ್ ಅರ್ಹತಾ ಅಂಕ ಶೇ.45ಕ್ಕೆ ಇಳಿಕೆ:ಕೆಇಎ

ಬೆಂಗಳೂರು: ಆರ್ಕಿಟೆಕ್ಚರ್ ಕೋರ್ಸ್‌ಗೆ ಎರಡನೇ ಪಿಯುಸಿಯ ಅರ್ಹತಾ ಅಂಕಗಳನ್ನು ಶೇ.50 ರಿಂದ ಶೇ.45 ರಷ್ಟು ಅಂಕಗಳಿಗೆ ಇಳಿಸಿದೆ, ಆ ಕೋರ್ಸ್‌ಗೆ ಅರ್ಹವಿರುವವರಿಗೆ ಯುಜಿಸಿಇಟಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಜು.13 ರವರೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅವಕಾಶ ಕಲ್ಪಿಸಿದೆ.
ಹೊಸದಾಗಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಜು.15 ರೊಳಗೆ ನಾಟಾ ಅಂಕಗಳ ವಿವರ ಮತ್ತು ಅರ್ಜಿ ಪ್ರತಿಯನ್ನು ಕೆಇಎಗೆ ಸಲ್ಲಿಸಬೇಕು ಹಾಗೂ ಜು.8 ರೊಳಗೆ ನಾಟಾ ಅರ್ಹತೆ ಪಡೆದವರು ಕೂಡ ಈ ದಿನಾಂಕದೊಳಗೆ ಅಂಕಗಳ ಮಾಹಿತಿಯನ್ನು ನೀಡಬೇಕು ಎಂದು ಕೆ. ಇ. ಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್ ಪ್ರಸನ್ನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ





