
ಕಾರ್ಕಳ ಪುರಸಭಾ ವ್ಯಾಪ್ತಿಯ ಕಾಳಿಕಾಂಬ ದೇವಸ್ಥಾನದ ಸ್ಥಳದಲ್ಲಿ, ನೆಕ್ಲಾಜೆ ಶ್ರೀ ಕಾಳಿಕಾಂಬ ದೇವಸ್ಥಾನ ಹಾಗೂ ಸಾರ್ವಜನಿಕ ಹಿಂದೂ ರುದ್ರಭೂಮಿ ವ್ಯವಸ್ಥಾಪನ ಸಮಿತಿ ಕರಿಯಕಲ್ಲು, ಇದರ ಜಂಟಿ ಆಶ್ರಯದಲ್ಲಿ
ಜೈನ ಧರ್ಮ ಜೀರ್ಣೋದಾರಕ ಸಂಘದ ಕಾರ್ಯದರ್ಶಿ ಹಿರಿಯ ನ್ಯಾಯವಾದಿ ಎಂ. ಕೆ. ವಿಜಯಕುಮಾರ್ ರವರು ವಿವಿಧ ಬಗೆಯ ಫಲ ನೀಡುವ ಗಿಡಗಳನ್ನು ನೆಡುವುದರ ಮೂಲಕ ಚಾಲನೆಯನ್ನು ನೀಡಿದರು. ಈ ಸಂದರ್ಭದಲ್ಲಿ ಉದ್ಯಮಿ ದಿನೇಶ್ ನಾಯಕ್, ಹಿಂದೂ ರುದ್ರ ಭೂಮಿಯ ವ್ಯವಸ್ಥಾಪನ ಸಮಿತಿಯ ಸಂಚಾಲಕ ಪ್ರಕಾಶ್ ರಾವ್, ಜಗದೀಶ್ ಆಚಾರ್ಯ, ಹಿರಿಯರಾದ ಕುರುಂಬಿಲ ಪೂಜಾರಿ, ಮೀರಾ ಪೂಜಾರ್ತಿ, ರಾಜೇಶ್ ಶೆಟ್ಟಿ, ಸುರೇಶ್ ಕೋಟ್ಯಾನ್, ಸತೀಶ್, ನಾಗೇಶ್, ಸುರೇಶ್ ಕುಲಾಲ್, ಸಂತೋಷ್ ರಾವ್, ರವೀಂದ್ರ ರಾವ್, ಹರೀಶ್ ರಾವ್, ಅಬ್ದುಲ್ ಹಮೀದ್, ಫಯಾಜ್ ಅಹಮದ್ ಮೊದಲಾದವರು ಉಪಸ್ಥಿತರಿದ್ದರು.





