
ಕಾರ್ಕಳ : ಪ್ರಸ್ತುತ ದೇಶದಲ್ಲಿ ಲೆಕ್ಕ ಪರಿಶೋಧಕರ ಹಾಗೂ ಕಂಪೆನಿ ಸೆಕ್ರೇಟರಿಗಳ ಬೇಡಿಕೆಗೆ ಅನುಗುಣವಾಗಿ ಪೂರೈಕೆ ಇಲ್ಲದೇ ಇರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿ, ವಾಣಿಜ್ಯ ಕ್ಷೇತ್ರದಲ್ಲಿರುವ ವಿಪುಲ ಅವಕಾಶದ ಪ್ರಸ್ತುತ
ಸನ್ನಿವೇಶಗಳನ್ನು ದಾಖಲೆಗಳ ಮೂಲಕ ಛತ್ತಿಸ್‌ಘಡ್ ಮೂಲದ ಸಿ.ಎ. ಮತ್ತು ಸಿ.ಎಸ್ ಆಗಿರುವ ಸಾಹಿಲ್ ಶರ್ಮಾ ಪ್ರಸ್ತುತ ಪಡಿಸಿದರು.
ಅವರು ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವೃತ್ತಿಶಿಕ್ಷಣ ತರಬೇತಿ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣದ ಬಗೆಗಿನ ಸಂದೇಹಗಳಿಗೆ ಸೂಕ್ತ ಮಾಹಿತಿಯನ್ನ ನೀಡಿದರು.
ಕಾರ್ಯಗಾರದಲ್ಲಿ ಉಡುಪಿಯ ಪ್ರೊ.ಚಂದನ್ ರಾವ್, ಸಂಸ್ಥೆಯ ಉಪಪ್ರಾಂಶುಪಾಲರಾದ ಶ್ರೀ ಸಾಹಿತ್ಯ, ಉಪನ್ಯಾಸಕರಾದ ಶ್ರೀ ಶೈಲೇಶ್ ಶೆಟ್ಟಿ, ಶ್ರೀ ಮಂಜುನಾಥ್ ಮುದೂರು ಉಪಸ್ಥಿತರಿದ್ದರು. ವಿಭಾಗ ಮುಖ್ಯಸ್ಥೆ ಶ್ರೀಮತಿ ಸುಮಿತ್ರಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.






















































