
ಕಾರ್ಕಳ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢಶಾಲೆ ಪೆರ್ವಾಜೆ ಇಲ್ಲಿ ದಿನಾಂಕ 8-6-2024ರ ಶನಿವಾರದಂದು 2024-25 ನೇ ಶೈಕ್ಷಣಿಕ ಸಾಲಿನ ಶಾಲಾ ಸಂಸತ್ತು ಚುನಾವಣೆಯನ್ನು ನಡೆಸಲಾಯಿತು. ಸಂಸ್ಥೆಯ ಕಲಾ ಶಿಕ್ಷಕರಾದ ಶ್ರೀಮತಿ ಪ್ರತಿಮಾ ನಾಯಕ್ ಹಾಗೂ ಕುಮಾರಿ ಪ್ರತಿಭಾ ಇವರ ನೇತೃತ್ವದಲ್ಲಿ ಉಳಿದ ಶಿಕ್ಷಕರ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗೆ ಮೊಬೈಲ್ ಇ.ವಿ.ಯಂ. ಆಪ್ ಮೂಲಕ ಚುನಾವಣೆಯನ್ನು ನಡೆಸಲಾಯಿತು. ಚುನಾವಣೆಯ ಕಣದಲ್ಲಿ 10ನೇ ತರಗತಿಯ 4 ವಿದ್ಯಾರ್ಥಿಗಳಿದ್ದು, ವಿದ್ಯಾರ್ಥಿ ನೂತನ್ ಕುಮಾರ್ ಅಧಿಕ ಮತಗಳಿಂದ ಶಾಲಾ ಸಂಸತ್ತಿನ ನಾಯಕನಾಗಿ ಆಯ್ಕೆಯಾದನು. ತದನಂತರ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ದಿವಾಕರ್ ಇವರ ನೇತೃತ್ವದಲ್ಲಿ ಶಾಲಾ ಮಂತ್ರಿ ಮಂಡಲದ ರಚನೆಯಾಯಿತು.
