
ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ಪುಲ್ಕೇರಿ, ಇಂದಿರಾನಗರ, ಕರಿಯಕಲ್ಲು ಇಲ್ಲಿನ ಸಾರ್ವಜನಿಕ ಶ್ರೀ ಸತ್ಯಸಾರಮಣಿ ಹಲೇರಾ ಪಂಜುರ್ಲಿ ಮತ್ತು ಪರಿವಾರ ದೈವಗಳ ಕ್ಷೇತ್ರದಲ್ಲಿ ಶ್ರೀ ನಾಗದೇವರ ಎಂಟನೇ ಪ್ರತಿಷ್ಠಾ ವರ್ಧಂತಿ ಪ್ರಯುಕ್ತ ನವೆಂಬರ್ 28ರ ಶನಿವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರಗಲಿವೆ.
ಅಂದು ಬೆಳಿಗ್ಗೆ 8.05ರಿಂದ ಶ್ರೀ ನಾಗದೇವರಿಗೆ ತನು ಪಂಚಾಮೃತ ಅಭಿಷೇಕ ನಡೆಯಲಿದ್ದು, ಬೆಳಿಗ್ಗೆ 10.05ರಿಂದ ಶ್ರೀ ಕೃಷ್ಣ ಕ್ಷೇತ್ರದ ಪ್ರಧಾನ ಅರ್ಚಕರಾದ ಶ್ರೀ ಸದಾನಂದ ಶಾಂತಿಯವರ ನೇತೃತ್ವದಲ್ಲಿ ಸಾಮೂಹಿಕ ಆಶ್ಲೇಷಾ ಬಲಿ ಹಾಗೂ ಪವಮಾನ ಸೂಕ್ತ ಹೋಮ ನೆರವೇರಲಿದೆ.ಬೆಳಿಗ್ಗೆ 11.30ಕ್ಕೆ ಮಹಾಪೂಜೆ, ಮಧ್ಯಾಹ್ನ 12.05ಕ್ಕೆ ನಾಗ ಸಂದರ್ಶನ ನಡೆಯಲಿದ್ದು, ಶ್ರೀ ಆದಿಮಾಯೆ ದೇವಸ್ಥಾನ, ತಂದೋಳಿಗೆ ಜಪ್ಪಿನ ಮೊಗರು, ಮಂಗಳೂರಿನ ಪ್ರಧಾನ ಅರ್ಚಕರಾದ ಶ್ರೀ ನಾಗಪಾತ್ರಿ ದಯಾನಂದ ಅವರು ನಾಗ ಸಂದರ್ಶನ ನಡೆಸಿಕೊಡಲಿದ್ದಾರೆ.
ಮಧ್ಯಾಹ್ನ 12.30ಕ್ಕೆ ಪ್ರಸಾದ ವಿತರಣೆ ಹಾಗೂ 1 ಗಂಟೆಯಿಂದ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.ಅದೇ ದಿನ ಮಧ್ಯಾಹ್ನ 2 ಗಂಟೆಗೆ ಲಕ್ಕಿಡಿಪ್ ಡ್ರಾ ಕಾರ್ಯಕ್ರಮ ಜರಗಲಿದೆ. ಆಶ್ಲೇಷಾ ಬಲಿ ಸೇವೆಯ ಒಂದು ಬಾಬ್ತು ರೂ.350 ನಿಗದಿಪಡಿಸಲಾಗಿದೆ.ಈ ಪುಣ್ಯ ಕಾರ್ಯದಲ್ಲಿ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ನಾಗದೇವರ ಸಿರಿಮುಡಿ ಗಂಧ-ಪ್ರಸಾದ ಸ್ವೀಕರಿಸಿ ದೇವರ ಕೃಪೆಗೆ ಪಾತ್ರರಾಗುವಂತೆ ಗುತ್ತು ಬರ್ಕೆಗಳ ಗುರಿಕಾರರು, ಊರ-ಪರವೂರ ಹತ್ತು ಸಮಸ್ತರು, ಕ್ಷೇತ್ರ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು, ಮಹಿಳಾ ಘಟಕದ ಅಧ್ಯಕ್ಷರು ಹಾಗೂ ಸರ್ವಸದಸ್ಯರು ವಿನಂತಿಸಿದ್ದಾರೆ.

























































































