
ಕಲ್ಯಾ ಗ್ರಾಮದ ಪಡುಮನೆ, ದಿ | ಮೀನಾಕ್ಷಿ ಶೇಖರ ಕರ್ಕೇರ ಮತ್ತು ಸಂಸಾರಸ್ಥರು ಹಾಗೂ ಪಡುಮನೆ ಕರೆಯ ಭಗವದ್ಭಕ್ತರು ಆರಾಧನೆ ಮಾಡಿಕೊಂಡು ಬಂದಿರುವ ಮೂಲ ಮೈಸಂದಾಯ,ಭೂಮಿ ಭಾರಗ ದೈವ ಕನ್ಯಾವು ಲೆಕ್ಕೆಸಿರಿ ಹಾಗೂ ಗಡ್ಯೊಟ್ಟು ಗುಳಿಗ ಧರ್ಮ ದೈವಗಳ ನೇಮೋತ್ಸವ ನಡೆಯಲಿದೆ.
ಅ ಪ್ರಯುಕ್ತ ಸಂಜೆ 5 ಗಂಟೆಗೆ ಧರ್ಮ ದೈವಗಳ ಭಂಡಾರ ಇಳಿಯುವ ಕಾರ್ಯಕ್ರಮ ನಡೆಯಲಿದ್ದು, ರಾತ್ರಿ 7:30ಕ್ಕೆ ಮೂಲ ಮೈಸಂದಾಯ ನೇಮ ರಾತ್ರಿ 8 ಗಂಟೆಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಬಳಿಕ ರಾತ್ರಿ 9 ಗಂಟೆಗೆ ಲೆಕ್ಕೆಸಿರಿ ಮತ್ತು ಗಡ್ಯೊಟ್ಟು ಗುಳಿಗ ದೈವಗಳ ನೇಮೋತ್ಸವ ನಡೆಯಲಿದೆ.
ದೈವಗಳ ಆರಾಧನೆ, ಸಂಪ್ರದಾಯ ಮತ್ತು ಭಕ್ತಿಭಾವದೊಂದಿಗೆ ನಡೆಯಲಿರುವ ಈ ನೇಮೋತ್ಸವದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೈವಗಳ ಕೃಪೆಗೆ ಪಾತ್ರರಾಗುವಂತೆ ಪಡುಮನೆ ಕರೆಯ ಹತ್ತು ಸಮಸ್ತರು ವಿನಂತಿಸಿಕೊಂಡಿದ್ದಾರೆ.

























































































