25.7 C
Udupi
Thursday, November 26, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 710

ಭರತೇಶ ಶೆಟ್ಟಿ ,ಎಕ್ಕಾರು

ಆತಂಕದ ದಿನಗಳು ಸಾಗುತ್ತಿವೆ. ಯಾದವ ಸಾಮ್ರಾಜ್ಯದಲ್ಲಿ ಎಲ್ಲರಿಗೂ ಕ್ಷಣ ಕ್ಷಣಗಳು ಯುಗಗಳಂತೆ ಭಾಸವಾಗತೊಡಗಿದೆ. ಎಲ್ಲೆಡೆಯೂ ಮೌನ ಆವರಿಸಿದೆ. ಸರ್ವತ್ರ ದೇವತಾ ಪ್ರಾರ್ಥನೆ, ಕಷ್ಟ ನೀಗಿಸು ಎಂದು ಪರಮಾತ್ಮನಿಗೆ ಮೊರೆ ಹೋಗುವುದು ಸಾಮಾನ್ಯವಾಗಿದೆ. ಕೆಟ್ಟ ಮೇಲೆ ಬುದ್ದಿ ಬಂದೇನು ಪ್ರಯೋಜನ ಎಂಬಂತಾಗಿದೆ ಪರಿಸ್ಥಿತಿ. ಹೀಗೆ ಕೆಲದಿನಗಳು ಸಾಗಿ ಹೋದಾಗ ಒಂದು ದಿನ ಸಾಂಬನ ಹೊಟ್ಟೆ ಸೀಳಲ್ಪಟ್ಟು ಒನಕೆ ಹೊರ ಬಂದು ಬಿಟ್ಟಿತು. ಕೃಷ್ಣ ಪುತ್ರನ ಇಹಲೋಕ ಯಾತ್ರೆ ಮುಕ್ತಾಯವಾಯಿತು. ಯಾದವರಿಗೆ ಸ್ವಯಂಕೃತ ಅಪರಾಧಕ್ಕೆ ಕಣ್ಮುಂದೆ ಕಲ್ಲು ಬಂಡೆಯಂತೆ ಇದ್ದ ಸಾಂಬನ ಸಾವು ಅಪರಾಧಿ ಭಾವ ಮಿಳಿತ ದುಃಖ ತಂದರೆ, ಹುಚ್ಚು ಬುದ್ದಿಯ ಪರಿಣಾಮ ಉದಿಸಿದ ಒನಕೆಯನ್ನು ನೋಡುವಾಗ ಮತ್ತಷ್ಟು ಭೀಕರ ಭಯ ಆವರಿಸತೊಡಗಿತು. ಕಟ್ಟೆಚ್ಚರದ ಕಣ್ಗಾವಲಿನಲ್ಲಿ ಒನಕೆಯನ್ನು ಕಾಪಿಟ್ಟು ಶ್ರೀಕೃಷ್ಣ ಹೇಳಿರುವಂತೆ ಅದನ್ನು ಬಲಾಢ್ಯರಾದ ಯಾದವರ ಒಂದು ತಂಡ ಪ್ರಭಾಸ ತೀರಕ್ಕೆ ಕೊಂಡೊಯ್ದರು. ಕ್ರಮವಾಗಿ ಅಲ್ಲಿರುವ ಬಂಡೆಗಳಲ್ಲಿ ಒಬ್ಬೊಬ್ಬರು ಸರತಿಯಂತೆ ಶಕ್ತಿಮೀರಿ ತೇದು ನುಣ್ಣನೆ ಗಂಧದಂತೆ ಅರೆದು ಪ್ರಭಾಸ ತೀರ್ಥದಲ್ಲಿ ಕದಡಿ ಬಿಟ್ಟರು. ಆದರೆ ಕೊನೆಗೆ ಒಂದು ಮೊನಚಾದ ತುಂಡು ಎಷ್ಟು ತೇದರೂ ಹಿಡಿತಕ್ಕೆ ಸಿಗದೆ ಉಳಿದು ಹೋಯಿತು. ಎಲ್ಲರೂ ಸರತಿಯಲ್ಲಿ ಪ್ರಯತ್ನಿಸಿ ಏನೂ ಮಾಡಲಾಗದೆ ಕೈಸೋತು ಅದನ್ನೂ ಪ್ರಭಾಸ ತೀರ್ಥದ ನೀರಿಗೆಸೆದು ಬಂದರು. ಕಿರಿದಾದ ತುಂಡಲ್ಲವೆ, ಇದರಿಂದೇನೂ ತೊಂದರೆಯಾಗದು ಎಂಬ ಒಮ್ಮತದ ನಿರ್ಧಾರ ಅವರನ್ನು ಹಾಗೆ ಮಾಡಿಸಿತ್ತು. ಎಲ್ಲರೂ ಕೈಕಾಲು ಮುಖ ತೊಳೆದು ದಣಿವಾರಿಸಿದರು. ಪೀಡೆ ತೊಲಗಿತು ಎಂದು ನಿಟ್ಟುಸಿರು ಬಿಡುತ್ತಾ ದ್ವಾರಕೆಗೆ ಹಿಂದಿರುಗಿದರು.

ಇದಾಗಿ ಎಲ್ಲರೂ ತಕ್ಕಮಟ್ಟಿಗೆ ಧೈರ್ಯಸ್ಥರಾಗಿದ್ದರು. ಈ ನಿರಾಳತೆಗೆ ಎರಡು ಕಾರಣ – ಶಾಪಕ್ಕೆ ಆಯುಧವಾಗಿ ಯಾದವರ ನಾಶ ಮಾಡಬೇಕಿದ್ದ ಒನಕೆ ಜೀರ್ಣವಾಗಿದೆ. ಅದಕ್ಕೂ ಮಿಗಿಲಾದ ಸ್ಥೈರ್ಯ ತುಂಬಿದ್ದು ಅಂತಹ ಪರಿಹಾರ ಉಪಾಯ ನಿರೂಪಿಸಲ್ಪಟ್ಟದ್ದು ಶ್ರೀಕೃಷ್ಣ ಪರಮಾತ್ಮನಿಂದ. ಹಾಗಾಗಿ ಯಾರಿಗೂ ಹೆಚ್ಚಿನದ್ದಾದ ಭಯವಿರಲಿಲ್ಲ. ಆದರೂ ಪ್ರಾಜ್ಞರಾದ ಹಿರಿಯರು ಮುನಿಗಳು ಇತ್ತ ಶಾಪ ಹುಸಿಯಾಗದು. ಯಾರೂ ಮೈಮರೆತು ಮತ್ತೆ ಹೊಸ ಅನಾಹುತ ಮಾಡಿಕೊಳ್ಳದಿರಿ ಎಂದು ಎಚ್ಚರಿಸುತ್ತ ಕಿಂಚಿತ್ ಭಯವನ್ನು ಜಾಗೃತಗೊಳಿಸುತ್ತಿದ್ದರು.

ಹೀಗಿರಲು ಒಂದು ದಿನ ಶ್ರೀಕೃಷ್ಣ ದರ್ಶನಕ್ಕಾಗಿ ದೂರ್ವಾಸ ಮಹರ್ಷಿಗಳು ದ್ವಾರಕೆಗೆ ಆಗಮಿಸಿದರು. ಒಮ್ಮೆ ಬಿಸಿ ಹಾಲಿಗೆ ಅವಸರದಿಂದ ಬಾಯಿ ಹಾಕಿ ನಾಲಗೆ, ಮೂತಿ ಸುಟ್ಟು ಕೊಂಡ ಬೆಕ್ಕು ತಣ್ಣಗೆ ಹಾಲು ಕಂಡರೂ ಭಯಗೊಳ್ಳುತ್ತದೆ. ತದ್ರೀತಿಯಲ್ಲಿ ಋಷಿಗಳನ್ನು ಕಂಡ ಮಾತ್ರದಿಂದ ಯಾದವರು ಹೆದರಿ ನಡುಗಿ ದೂರದಿಂದ ಸಾಷ್ಟಾಂಗ ನಮಸ್ಕಾರ ಮಾಡುತ್ತಾ ಆಶೀರ್ವಾದ ಬೇಡುವ ಸ್ಥಿತಿಗೆ ಮನೋಬಲ ಕುಸಿದು ಕೊಂಡವರಾಗಿದ್ದಾರೆ. ಪರಮ ಋಷಿವರೇಣ್ಯ ದೂರ್ವಾಸರು ಬಂದು ಶ್ರೀಕೃಷ್ಣ ರುಕ್ಮಿಣಿಯರನ್ನು ಭೇಟಿಯಾದರು. ಸತಿ ಪತಿಗಳಾದ ರುಕ್ಮಿಣಿ ಹಾಗೂ ಕೃಷ್ಣ ತಪೋಧನರಾದ ದೂರ್ವಾಸರನ್ನು ಪ್ರೀತ್ಯಾದರಗಳಿಂದ ಸತ್ಕರಿಸಿ ಉಪಚರಿಸಿದರು. ವಂದಿಸಿ ಪೂಜಿಸಿ ಕುಶಲೋಪಚರಿ ವಿಚಾರಿಸಿದರು. ಅವರೊಡನೆ ಮಾತನಾಡುತ್ತಾ ಹೊತ್ತು ಮಧ್ಯಾಹ್ನವಾಯಿತು. ಆಗ ಶ್ರೀಕೃಷ್ಣ ದೂರ್ವಾಸರಲ್ಲಿ “ನಮ್ಮಲ್ಲಿಗೆ ತಾವು ಬಂದಿರುವುದು ಮಹಾಭಾಗ್ಯ. ಭೋಜನ ಸ್ವೀಕರಿಸಿ ನಮ್ಮನ್ನು ಅನುಗ್ರಹಿಸಬೇಕು” ಎಂದು ಪ್ರಾರ್ಥಿಸಿ ನಿವೇದಿಸಿಕೊಂಡನು. ಆಗ ದೂರ್ವಾಸರು “ಬೇಡ ಬೇಡ… ನಿಮ್ಮ ಭೋಜನ ಒಮ್ಮೆ ಉಂಡು ಜೀರ್ಣಿಸಿಕೊಳ್ಳಲು ಬಹಳಷ್ಟು ಕಷ್ಟ ಪಟ್ಟಿದ್ದೇನೆ. ಅಂದು ಪಾಂಡವರು ವನವಾಸದಲ್ಲಿರುವಾಗ ಧರ್ಮರಾಯನ ಆಶ್ರಮಕ್ಕೆ ಶಿಷ್ಯ ಸಮೂಹದ ಜೊತೆ ಬಂದಿದ್ದೆ. ಆ ಸಮಯ ನಿನ್ನ ಅದೇನು ಮಾಯೆಯ ಮೋಡಿಯೋ! ಮಿಂದು ಬರುವಾಗಲೇ ನಮ್ಮ ಕಂಠದವರೆಗೂ ಹೊಟ್ಟೆ ತುಂಬಿ ಹೋಗಿತ್ತು. ಹಾಗೆ ತುಂಬಿದ ಹೊಟ್ಟೆ ಅದೆಷ್ಟೋ ದಿನಗಳ ಹಸಿವೆ ಆಗಗೊಡದೆ ಜೀರ್ಣವಾಗದೆ ಉಳಿದು ಹೋಗಿತ್ತು. ಈಗ ಮತ್ತೆ ಉಣ್ಣುವ ಸಾಹಸಕ್ಕೆ ಮನ ಮಾಡಲಾರೆ” ಎಂದರು. ಶ್ರೀಕೃಷ್ಣ ಪರಮಾತ್ಮ ಮುಗುಳ್ನಗುತ್ತಾ “ಪೂಜ್ಯರೇ! ಅಂದು ನೀವು ದುರ್ಯೋಧನನ ಪಕ್ಷಪಾತಿಯಾಗಿ ಧರ್ಮಾತ್ಮರಾದ ಪಾಂಡವರಿಗೆ ಕೇಡು ಬಯಸಲು ಬಂದವರಾಗಿದ್ದಿರಿ. ಹಾಗಾಗಿ ಅಲ್ಲಿ ಧರ್ಮ ಪಾಂಡವರ ರಕ್ಷಣೆ ಮಾಡಿದೆ. ಅಂದು ನಿಮಗೆ ನಮ್ಮಿಂದ ಅಪಚಾರ ಆಗಿದೆ ಎಂಬ ಭಾವನೆ ಇದೆಯೆಂದಾದರೆ ಅದಕ್ಕೆ ಇಂದಿನ ಊಟ ಪರಿಮಾರ್ಜನೆಯಾಗಲಿ. ಮೃಷ್ಟಾನ್ನ ಭೋಜನವನ್ನು ಸವಿದು ಉಂಡು ಸಂತುಷ್ಟರಾಗಿ ತಾವು ಹೋಗಬೇಕು ಎಂಬುವುದು ನಮ್ಮ ಅಪೇಕ್ಷೆ” ಎಂದು ಕೇಳಿ ಕೊಂಡನು. ದೂರ್ವಾಸರು ಕಾರ್ಯ ಕಾರಣವಿಲ್ಲದೆ ಬರುವವರಲ್ಲ! ಏನೊ ಮಹತ್ತರ ಉದ್ದೇಶದಿಂದ ಬಂದಿದ್ದಾರೆ. ಒಪ್ಪಿ ಊಟಕ್ಕೆ ಕುಳಿತ ದೂರ್ವಾಸರು ವಿಪರೀತ ನಡತೆಗಳಿಂದ ತೀರಾ ಅತಿರೇಕದ ವರ್ತನೆ ತೋರತೊಡಗಿದರು. ನೋಡುವವರಿಗೂ ಅವರ ಮೇಲೆ ಸಿಟ್ಟು ಬರುತ್ತಿತ್ತು. ಆದರೆ ಶ್ರೀಕೃಷ್ಣ ರುಕ್ಮಿಣಿಯರು ಎಳೆ ಮಗುವನ್ನು ಉಣಿಸುವಂತೆ ಅವರ ಸೇವೆ ಮಾಡುತ್ತಾ ಸಮಾಧಾನದಿಂದ ಇದ್ದರು. ದೂರ್ವಾಸರ ಉದ್ದೇಶ ಹೇಗಾದರೂ ಮಾಡಿ ಕೃಷ್ಣನಿಗೆ ಅಥವಾ ರುಕ್ಮಿಣಿಗೆ ಕೋಪ ಬರುವಂತೆ ಮಾಡುವುದಾಗಿತ್ತು. ಆದರೆ ಏನೇನೆಲ್ಲಾ ಮಾಡಿದರೂ ನಗು ಒಂದನ್ನು ಬಿಟ್ಟು ಮುನಿಸನ್ನು ಬಳಿ ಬರಗೊಡದೆ ಶಾಂತಚಿತ್ತರಾಗಿದ್ದ ಈ ದಂಪತಿಗಳ ತಾಳ್ಮೆಯನ್ನು ಕಂಡು ದೂರ್ವಾಸರು ಸುಸ್ತಾದರು. ಅದೇ ಸಮಯ ಅವರಿಗೆ ಪಾಯಸವನ್ನು ಬಡಿಸಿದಾಗ ತಾನು ಉಣ್ಣುತ್ತಿದ್ದ ಬಂಗಾರದ ತಟ್ಟೆ ತುಂಬಿದ ಪಾಯಸವನ್ನು ಎತ್ತಿ, ಆ ಎಂಜಲನ್ನು ಕೃಷ್ಣ ರುಕ್ಮಿಯರ ಮೈ ಮೇಲೆಲ್ಲಾ ಬೀಸಿ ಎರಚಿ ಬಿಟ್ಟರು. ಕೃಷ್ಣ ರುಕ್ಮಿಣಿಯರಿಗೆ ದೂರ್ವಾಸರ ಉಚ್ಚಿಷ್ಠದ ಅಭಿಷೇಕವಾದಂತಾಗಿದೆ. ಮುಖ, ಎದೆ ತೋಳುಗಳಲ್ಲೆಲ್ಲ ಪಾಯಸ ಮೆತ್ತಿಕೊಂಡಿದೆ.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page