
ಬೆಂಗಳೂರು: ರಾಜ್ಯದಲ್ಲಿ ಇದೀಗ ಮಳೆ ಆರಂಭಗೊಂಡಿದ್ದು, ರೈತರು ಕೃಷಿ ಚಟುವಟಿಗಳನ್ನು ಆರಂಭಿಸಲು ಸಜ್ಜಾಗುತ್ತಿದ್ದಾರೆ. ಆದರೆ ಇದೀಗ ಬಿತ್ತನೆ ದರ ಕಳೆದ ಬಾರಿಗಿಂತ ಶೇ. 48.50 ರಷ್ಟು ಏರಿಕೆಯಾಗಿದ್ದು ರೈತರು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನೆರೆ ರಾಜ್ಯಗಳ ದರವನ್ನು ಹೋಲಿಕೆ ಮಾಡಿದ್ದಲ್ಲಿ ನಮ್ಮ ರಾಜ್ಯದಲ್ಲಿ ಬಿತ್ತನೆ ಬೀಜಗಳ ದರ ಕಡಿಮೆ ಇದೆ ಎಂದು ಸಿಎಂ ಪ್ರಕಟಣೆಯಲ್ಲಿ ತಿಳಿಸಿದ್ದು, ಆಹಾರ ಧಾನ್ಯಗಳ ಅಥವಾ ಬಿತ್ತನೆ ಬೀಜಗಳ ಬೆಲೆ ನಿಗದಿ ರಾಜ್ಯಕ್ಕೆ ಸಂಬಂಧಪಟ್ಟದ್ದಲ್ಲ, ಕೇಂದ್ರ ಸರಕಾರದ ವ್ಯಾಪ್ತಿಗೆ ಒಳಪಟ್ಟಿದೆ ಎಂದು ಕೃಷಿ ಸಚಿವರು ತಿಳಿಸಿದ್ದಾರೆ.
ಇನ್ನು ರಾಜ್ಯದಲ್ಲಿ ಈ ಬಾರಿ ಬರಗಾಲ ಎದುರಾದ ಕಾರಣ ಬೀಜೋತ್ಪಾದನೆಗೆ ತೊಂದರೆಯಾಗಿದ್ದು, ಬೆಲೆ ಏರಿಕೆಗೆ ಕಾರಣ ಎನ್ನಲಾಗುತ್ತಿದೆ. ಆದರೆ ಕಳೆದ ವರ್ಷದ ಬರಗಾಲದಿಂದ ತತ್ತರಿಸಿದ ರೈತರಿಗೆ ಇದೀಗ ಬಿತ್ತನೆ ಬೀಜದ ಬೆಲೆ ಹೆಚ್ಚಳ ನುಂಗಲಾರದ ತುತ್ತಾಗಿದ್ದು, ರೈತರ ಬೆನ್ನೆಲುಬು ಎನ್ನುವ ಸರಕಾರ ಯಾಕೆ ಬೆಲೆ ಹೆಚ್ಚಳಕ್ಕೆ ಮುಂದಾಗಿದೆ ಎಂದು ರೈತರು ಪ್ರಶ್ನಿಸುವಂತಾಗಿದೆ.