
ಕಾರ್ಕಳ : ನವೆಂಬರ್ 21ರಂದು ಶ್ರೀ ಲಕ್ಷ್ಮೀ ಜನಾರ್ಧನ ಇಂಟರ್ನ್ಯಾಷನಲ್ ಶಾಲೆ, ನಂದಳಿಕೆ, ಬೆಲ್ಮನ್ ಇಲ್ಲಿ ಆಯೋಜಿಸಲಾದ ಸೈಕ್ವೆಸ್ಟ್_ 2026 ವಿಜ್ಞಾನ ಸ್ಪರ್ಧೆಯಲ್ಲಿ ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರದ 9ನೇ ತರಗತಿ ವಿದ್ಯಾರ್ಥಿಗಳಾದ ಭೂಷಯ್ ಪೈ,ಈಶಾನ್ ಹೆಗ್ಡೆ, ಬೋಳ ಶ್ರೇಯಾoಶ್ ಹೆಗ್ಡೆ, ಅಂಶುಲ್ ಆಚಾರ್ಯ ಇವರು ಭಾಗವಹಿಸಿ “ನಾರಾಯಣ ಅಸ್ತ್ರ ರಕ್ಷಕ್ ” ಎಂಬ ವಿನೂತನ ವಿಜ್ಞಾನ ಪ್ರಾಜೆಕ್ಟ್ ಪ್ರದರ್ಶಿಸಿ ಪ್ರಥಮ ಬಹುಮಾನವನ್ನು ತಮ್ಮದಾಗಿಸಿಕೊಂಡರು.
ವಿದ್ಯಾರ್ಥಿಗಳ ಈ ಅದ್ಭುತ ಸಾಧನೆಯು ಅವರ ಸೃಜನಶೀಲತೆ, ವೈಜ್ಞಾನಿಕ ಜ್ಞಾನ, ತಂಡದ ಮನೋಭಾವ ಮತ್ತು ಪರಿಶ್ರಮಕ್ಕೆ ಸಾಕ್ಷಿಯಾಗಿದೆ. ಈ ಸಾಧನೆಯಿಂದ ಶಾಲೆಗೆ ಹೆಮ್ಮೆ ಮತ್ತು ಗೌರವವನ್ನು ತಂದಿದ್ದಾರೆ.
ವಿಜೇತ ವಿದ್ಯಾರ್ಥಿಗಳಿಗೆ ಹಾಗೂ ಅವರಿಗೆ ಮಾರ್ಗದರ್ಶನ ನೀಡಿದ ವಿಜ್ಞಾನ ಶಿಕ್ಷಕಿಯಾದ ಶ್ರೀಮತಿ ಕಾವ್ಯ ಭಟ್ ಇವರಿಗೆ ಶಾಲಾ ಪ್ರಾಂಶುಪಾಲರಾದ ಶ್ರೀಮತಿ ಸೋನಲ್ ಆರ್.ಕಾಮತ್, ಶಾಲಾ ಆಡಳಿತ ಮಂಡಳಿ ಸದಸ್ಯರು ಹಾಗೂ ಶಿಕ್ಷಕ- ಶಿಕ್ಷಕೇತರ ವ್ರಂದದವರು ಹೃತ್ಪೂರ್ವಕ ಅಭಿನಂದನೆಯನ್ನು ಸಲ್ಲಿಸಿರುತ್ತಾರೆ.

























































































