22.4 C
Udupi
Monday, November 23, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ -707

ಭರತೇಶ ಶೆಟ್ಟಿ, ಎಕ್ಕಾರು

ಅನತಿ ದೂರದಲ್ಲಿ ದೇವ ಋಷಿಗಳಾದ ನಾರದರು, ಮಹಾತ್ಮರಾದ ಕಣ್ವರು, ಬ್ರಹ್ಮರ್ಷಿ ವಿಶ್ವಾಮಿತ್ರರು ಬರುವುದನ್ನು ಅಲ್ಲಿಯೆ ಕುಣಿದು ಕುಚೋದ್ಯಗಳನ್ನು ಮಾಡುತ್ತಿದ್ದ ಯಾದವ ಪ್ರಮುಖರು ನೋಡಿದರು. ನಿಜವಾಗಿಯಾದರೆ ಇಂತಹ ಮಹಿಮಾನ್ವಿತ ಋಷಿವರರು ಆಗಮಿಸಿದರೆ ಗೌರವಾದರಗಳಿಂದ ಸತ್ಕರಿಸಿ ಪೂಜ್ಯ ಭಾವದಿಂದ ಸ್ವಾಗತಿಸಬೇಕಿತ್ತು‌. ಆದರೆ ಇಂದೇಕೊ ವ್ಯತಿರಿಕ್ತ ವರ್ತನೆ ತೋರುತ್ತಿದ್ದಾರೆ. ಯಾದವರ ಮನಸ್ಸಿನಲ್ಲಿ ನಾವು ಉತ್ಕೃಷ್ಠರು. ದೇವತೆಗಳಿಗೆ ಸರಿ ಮಿಗಿಲಾದವರು. ಯಾದವರನ್ನು ಮೀರಿಸುವವರು ಈ ಜಗತ್ತಿನಲ್ಲಿ ಯಾರೂ ಇಲ್ಲ! ಎಂಬಿತ್ಯಾದಿ ಅಹಂಕಾರ ಮದ ತಲೆಗಡರಿ ಹೋಗಿತ್ತು. ಈಗಲೂ ಇವರ ಆಗಮನವನ್ನು ಕಂಡು ಋಷಿಗಳು ಬಂದರೆ ಬರಲಿ, ಅವರಿಂದ ನಮಗೇನಾಗಬೇಕಿದೆ? ಎಂಬಂತಹ ಅನಾದರಣೆ ವ್ಯಕ್ತವಾಗುತ್ತಿದೆ.

ಯಾದವರ ಈ ರೀತಿಯ ನಡತೆಯನ್ನು ಕಂಡು ಬ್ರಹ್ಮರ್ಷಿ ವಿಶ್ವಾಮಿತ್ರರಿಗೆ ಆಶ್ಚರ್ಯವಾಗತೊಡಗಿತು. ನಾರದರನ್ನು ಉದ್ದೇಶಿಸಿ “ಯಾದವರು ಅಭ್ಯುದಯದ ತುತ್ತ ತುದಿಯನ್ನೇರಿದ್ದೇವೆ ಎಂಬ ಭ್ರಮೆಗೊಳಗಾಗಿದ್ದಾರೊ? ಎಂದು ಪ್ರಶ್ನಿಸಿದರು. ಆಗ ನಾರದರು ನಗುನಗುತ್ತಾ ” ಮಹರ್ಷಿಗಳೇ! ಈ ಯಾದವರು ದೇವರ ಕುಲದವರಲ್ಲವೆ” ಎಂದಷ್ಟು ಮಾತ್ರ ಕೇಳಿ ಉಳಿದ ವಿಚಾರವನ್ನು ನೀವು ಯೋಚಿಸಿಕೊಳ್ಳಿ ಎಂಬ ಮುಖಭಾವ ಪ್ರಕಟಿಸಿದರು. ನಾರದರ ಈ ಉತ್ತರ ಕೇಳಿದ ಮಹರ್ಷಿ ಕಣ್ವರಿಗೆ ಏನು ಅನಿಸಿತೊ ಏನೋ! “ದೇವರಿಗೂ ಇವರ ಈ ವರ್ತನೆ ನೋಡಿ ಇನ್ನು ಸಾಕು ಎಂದೆಣಿಸಿರಬಹುದು. ಆತನ ಸಂಕಲ್ಪ ಹಾಗೆ ಆಗಿದ್ದರೂ ಇರಬಹುದು. ಪರಿಣಾಮ ಈ ಅತಿರೇಕದ ವರ್ತನೆ” ಎಂದು ನುಡಿದರು. ಆಗ ನಾರದರು ತನ್ನ ಜೊತೆಗಾರರಾಗಿ ಬಂದವರನ್ನು ನಾವು ತುಸು ಹೊತ್ತು ಇಲ್ಲಿ ದೂರದಲ್ಲಿ ಕುಳಿತು ವಿಶ್ರಾಂತಿ ಪಡೆಯೋಣ. ಮುಂದೆ ಏನೆಂದು ಆ ಬಳಿಕ ಯೋಚಿಸೋಣ” ಎಂದು ಹೇಳುತ್ತಾ ತುಸು ದೂರದ ವಿಶಾಲ ವೃಕ್ಷದ ಕಟ್ಟೆಯಲ್ಲಿ ಕುಳಿತರು.

ಋಷಿವರೇಣ್ಯರಿಗೆ ಶ್ರೀಕೃಷ್ಣನ ಬಗ್ಗೆ ಅಪಾರ ಗೌರವ ಮತ್ತು ಭಕ್ತಿ. ಆದರೂ ಪರಮಾತ್ಮನ ಲೀಲೆ, ಸಂಕಲ್ಪ, ಕಪಟ ನಾಟಕ, ಆದರ್ಶ ಇತ್ಯಾದಿಗಳೆಲ್ಲವನ್ನು ಸ್ಪಷ್ಟವಾಗಿ ತಿಳಿದವರು. ಆ ಕುರಿತಾಗಿ ಚರ್ಚಿಸುತ್ತಾ, ಅಂತಹ ಲೀಲೆಯ ಘಟನೆಗಳನ್ನು ಸ್ಮರಿಸಿ ಪರಸ್ಪರ ಹಂಚಿಕೊಳ್ಳುತ್ತಾ ಕುಳಿತಿದ್ದರು. ದೇವನಾದ ಶ್ರೀಕೃಷ್ಣನು ಉಪಸ್ಥಿತನಿರುವ ಈ ಪುರದಲ್ಲಿ ಆತನ ವಂಶಜರಾಗಿರುವ ಯಾದವರ ಪರಿಸ್ಥಿತಿ ತುಸು ಕೈಮೀರಿ ಸಾಗುತ್ತಿದೆ ಎಂಬಂತೆ ಕಾಣುತ್ತಿದೆ. ಇವರ ಗುಣಗಳು, ಆಚಾರ , ವಿಚಾರ ಎಲ್ಲವೂ ಅಪಭ್ರಂಶವಾಗಿರುವಂತೆ, ಈ ಎಲ್ಲರ ನಡೆ ಅತಿಯೆನಿಸುವಷ್ಟು ಹದಗೆಟ್ಟಿರುವಂತೆ ಕಾಣಿಸುತ್ತಿದೆ. ಎಂದು ಮಾತನಾಡಿಕೊಳ್ಳುತ್ತಿದ್ದರು.

ಹೀಗೆ ತಮ್ಮ ಪಾಡಿಗೆ ಒಂದು ಮರದಡಿಯಲ್ಲಿ ಕುಳಿತು ಸಂವಾದ ನಿರತರಾಗಿದ್ದ ಋಷಿಗಳಿಗೆ ಏನಾದರು ಒಂದು ಕೀಟಲೆ ಮಾಡಬೇಕು ಎಂದು ಈ ಯಾದವರು ನಿರ್ಧರಿಸಿದರು. ಶ್ರೀಕೃಷ್ಣ ಮತ್ತು ಜಾಂಬವತಿಯರ ಪುತ್ರ, ಸುರ ಸುಂದರ ಯುವಕನಾದ ಸಾಂಬನನ್ನು ಹೆಣ್ಣಿನಂತೆ ಅಲಂಕರಿಸಿದರು. ಯಾರಾದರು ನೋಡಿದರೆ ಸಾಂಬಾ ಸಾಕ್ಷಾತ್ ಹೆಣ್ಣು ಎಂಬಷ್ಟು ಪರಿಪೂರ್ಣತೆಯಿಂದ ಸಿಂಗಾರಗೊಂಡಿದ್ದಾನೆ. ಅಲ್ಲಿ ಪಕ್ಕದಲ್ಲಿ ಬಿದ್ದಿದ್ದ ಒನಕೆ ತುಂಡುಗಳನ್ನು ಒಂದು ಬಟ್ಟೆಯಲ್ಲಿ ಕಟ್ಟಿ ಸಾಂಬನ ಹೊಟ್ಟೆಯನ್ನು ಗರ್ಭಿಣಿಯಂತೆ ಹಿರಿದುಗೊಳಿಸಿದರು. ನಂತರ ಗುಂಪಾಗಿ ಗರ್ಭಿಣಿ ಹೆಂಗಸನ್ನು ಕರೆತರುವಂತೆ ನಟಿಸುತ್ತಾ ಜಾಗ್ರತೆಯಿಂದ ಋಷಿಗಳು ಇರುವಲ್ಲಿಗೆ ಕರೆತಂದರು. ಕುಹಕ ಕುಚೋದ್ಯ ಮಾಡುವುದು ಅವರ ಉದ್ದೇಶವಾಗಿತ್ತು.

ಹಾಗೆ ಬಳಿ ಬಂದವರು ವಂದಿಸಿ ಗೌರವ ತೋರಿ ಮಾತನಾಡಬೇಕಿತ್ತು. ಆದರೆ ಹಾಗೇನೂ ಶಿಷ್ಟಾಚಾರ ಪಾಲಿಸದೆ, ಕಿಂಚಿತ್ ಗೌರವವನ್ನೂ ತೋರದೆ, ಋಷಿಗಳಾದ ಇವರೇನೂ ವಿಶೇಷರಲ್ಲ – ಸಾಮಾನ್ಯರು ಎಂಬಂತೆ ನಗಣ್ಯ ಭಾವದಿಂದ ಅತಿ ಸಲುಗೆ ತೋರುತ್ತಾ ಮಾತನಾಡಿಸಿದರು. ತೀರಾ ಮೂರ್ಖತೆಯ ಬುದ್ಧಿಯನ್ನು ಬಳಸುತ್ತಾ, ಕಪಟದ ವಿನಯ ಭಾವದ ನಟನೆ, ಅದೂ ವ್ಯಂಗ್ಯವಾಗಿ ಅಪಹಾಸ್ಯ ಮಾಡುವ ರೀತಿಯಲ್ಲಿ, ಗಂಭೀರತೆ, ಭಯ ಭಕ್ತಿಗಳ ಲವಲೇಶವನ್ನೂ ತೋರದೆ ವರ್ತಿಸತೊಡಗಿದರು. ಅವಿಧೇಯರಾಗಿ ಹೇಗೆ ಬೇಕು ಹಾಗೆ ನಿಂತು ಕೊಂಡು, ಮನ ಬಂದಂತೆ ಮಾತನಾಡುತ್ತಾ, ಜೋರಾಗಿ ನಗುತ್ತಾ, ಬೊಬ್ಬೆ ಹಾಕುತ್ತಾ, ಚೇಷ್ಟೆ ಮಾಡುತ್ತಾ ಋಷಿವರ್ಯರನ್ನು ಅಪಮಾನಿಸುವಂತೆ ವರ್ತಿಸುತ್ತಿದ್ದರು.

ಆಗ ಆ ಯಾದವ ಪ್ರಮುಖರ ಮಧ್ಯದಿಂದ ಓರ್ವ ಮುಂದೆ ಬಂದು ವ್ಯಂಗ್ಯ ಭಾವದಿಂದ ವಿನಯದ ನಟನೆ ಮಾಡುತ್ತಾ “ಸ್ವಾಮಿಗಳೆ! ನೀವು ಜ್ಞಾನಿಗಳಲ್ಲವೆ! ನಿಮ್ಮಿಂದ ಒಂದು ಸತ್ಯವನ್ನು ತಿಳಿಯಬೇಕಿತ್ತು. ನನ್ನ ಜೊತೆಗಿರುವ ಗರ್ಭಿಣಿ ಹೆಂಗಸು ನಮ್ಮ ಯಾದವರಲ್ಲಿ ಒಬ್ಬನಾದ ಬಭ್ರು ಎಂಬವನ ಹೆಂಡತಿ. ಈಗ ಆಕೆ ಗರ್ಭಿಣಿ. ಪತ್ನಿ ಗರ್ಭ ಧರಿಸಿದ ಬಳಿಕ ಆಕೆಯ ಗಂಡನಿಗೆ ಗಂಡು ಮಗು ಬೇಕೆಂಬ ಆಸೆ. ಈಕೆಗೆ ಹೆಣ್ಣು ಮಗು ಆದರೆ ಉತ್ತಮ ಎಂಬ ಬಯಕೆ. ನಮಗೀಗ ಕುತೂಹಲ ಮಗು ಗಂಡೋ ಹೆಣ್ಣೋ! ಯಾರ ಆಸೆ ಈಡೇರಬಹುದು. ಹೇಗೂ ನೀವು ಇಲ್ಲಿ ಮರದ ಬುಡದಲ್ಲಿ ಕುಳಿತಿದ್ದೀರಲ್ಲ. ನಿಮಗೆ ದಿವ್ಯ ಶಕ್ತಿ ಇರುವುದು ಹೌದಾದರೆ ನಮ್ಮ ಸಂದೇಹ ಪರಿಹರಿಸಬಲ್ಲಿರಾ?” ಎಂದು ಕೇಳಿದರು.

ಈ ಯಾದವರ ಉದ್ದೇಶ ಏನಿತ್ತು ಎಂದರೆ ಋಷಿಗಳು ಒಂದೋ ಗಂಡು ಅಥವಾ ಹೆಣ್ಣು ಎರಡರಲ್ಲಿ ಒಂದು ಉತ್ತರ ಕೊಡಬಹುದು. ನಿಜವಾಗಿ ಗರ್ಭಿಣಿಯಂತೆ ಕಾಣುವ ಹೆಣ್ಣು ಕೃಷ್ಣನ ಮಗ ಸಾಂಬ. ಹೊಟ್ಟೆ ಗರ್ಭವಲ್ಲ ಒನಕೆಯ ತುಂಡುಗಳು! ಋಷಿಗಳು ಹೆಣ್ಣು / ಗಂಡು ಏನಾದರೊಂದು ಉತ್ತರ ನೀಡಿದರೆ ಆಗ ಬಿಚ್ಚಿ ತೋರಿಸಿ ಅವರೆದುರು ಕುಣಿದು ಕುಪ್ಪಳಿಸಿ, ಕುಚೋದ್ಯ, ಅಪಹಾಸ್ಯ ಮಾಡಲು ಒಂದು ಉತ್ತಮ ಅವಕಾಶ ಒದಗುತ್ತದೆ. ಈ ಋಷಿಗಳಿಗೆ ತಮಾಷೆ ಮಾಡಿ ನಿಂದಿಸಲು ಸಿದ್ಧರಾಗಿ ಏನು ಉತ್ತರಕೊಡುತ್ತಾರೆ ಎಂದು ಕಾತರದಿಂದ ಕಾಯುತ್ತಿದ್ದಾರೆ.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page